ಕಿಯಾ ಮೋಟಾರ್ಸ್ ಮೊದಲ ಎಸ್‌ಯುವಿ ಕಾರು ಕುರಿತಾದ ಟೀಸರ್ ಬಿಡುಗಡೆ
ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.
Recommended Video

ದಕ್ಷಿಣ ಕೊರಿಯಾ ಪ್ರತಿಷ್ಠಿತ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಇದಕ್ಕೂ ಮುನ್ನ ಭಾರತದಲ್ಲಿ ಬಿಡುಗಡೆಗೊಳಿಸಲು ನಿರ್ಧರಿಸಲಾಗಿರುವ ಮೊದಲ ಎಸ್‌ಯುವಿ ಕಾರು ಮಾದರಿಯ ಟೀಸರ್ ಅನ್ನು ಬಿಡುಗಡೆ ಮಾಡಲಾಗಿದೆ.

ಮುಂದಿನ ತಿಂಗಳು ಫೆಬ್ರುವರಿ 7ರಿಂದ ಆರಂಭವಾಗಲಿರುವ 2018ರ ಆಟೋ ಎಕ್ಸ್ ಪೋಗೆ ದಿನಗಣನೆ ಆರಂಭವಾಗಿದ್ದು, ಈ ವೇಳೆ ತನ್ನ ಹೊಸ ಕಾರು ಉತ್ಪನ್ನಗಳನ್ನು ಪ್ರದರ್ಶನಗೊಳಿಸಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಇದೀಗ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಕಾರಿನ ವಿನ್ಯಾಸಗಳ ಬಗೆಗೆ ಟೀಸರ್ ಒಂದನ್ನು ಬಿಡುಗಡೆ ಮಾಡಿ ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಭಾರತದಲ್ಲಿ ಮೊದಲ ಹಂತವಾಗಿ ಎಸ್‌ಯುವಿ ಕಾರು ಮಾದರಿಯನ್ನೇ ಬಿಡುಗಡೆ ಮಾಡಲು ಉದ್ದೇಶಿಸಿರುವ ಕಿಯಾ ಮೋಟಾರ್ಸ್, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯುಂಡೈ ಕ್ರೇಟಾ ಮತ್ತು ರೆನಾಲ್ಟ್ ಡಸ್ಟರ್ ಮಾದರಿಗಳಿಗೆ ಸಮನಾಗಿ ಹೊಸ ಕಾರು ಅಭಿವೃದ್ಧಿ ಮಾಡಿದೆ.

ಟೀಸರ್‌ನಲ್ಲಿ ಕಂಡುಬಂದಂತೆ ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಫೆ.7ರಂದು ಆರಂಭವಾಗುವ ಆಟೋ ಮೇಳದಲ್ಲಿ ಹೊಸ ಕಾರಿನ ಕುರಿತಾದ ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸಲಿದೆ.

ರೇಂಜ್ ರೋವರ್ ಇವೋಕ್ ಮಾದರಿಯಲ್ಲೇ ಬಾಡಿ ವಿನ್ಯಾಸ ಹೊಂದಿರುವ ಎಸ್‌ಪಿ ಕಾನ್ಸೆಪ್ಟ್ ಮಾದರಿಗಳು ಅಲಾಯ್ ಚಕ್ರ, ಎಲ್‌ಇಡಿ ಟೈಲ್ ಲೈಟ್ ಹೊಂದಿರುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ತಾಂತ್ರಿಕ ಮಾಹಿತಿಗಳು ಲಭ್ಯವಾಗಿಲ್ಲ.

ಇನ್ನು 2018ರ ಆಟೋ ಎಕ್ಸ್ ಪೋ ವೇಳೆ ಎಸ್‌ಪಿ ಕಾನ್ಸೆಪ್ಟ್ ಎಸ್‌ಯುವಿ ಕಾರುಗಳನ್ನು ಪ್ರದರ್ಶನ ಮಾಡಲಿರುವ ಕಿಯಾ ಮೋಟಾರ್ಸ್, ಭಾರತದಲ್ಲಿ ಬಿಡುಗಡೆಯಾಗುವ ಕಾರು ಮಾದರಿಗಳಲ್ಲೇ ಹೊರ ರಾಷ್ಟ್ರಗಳಲ್ಲಿ ಮಾರಾಟಗೊಳ್ಳುತ್ತಿರುವ ಒಟ್ಟು 19 ಕಾರು ಮಾದರಿಗಳನ್ನು ಪ್ರದರ್ಶನ ಮಾಡಲಿದೆ.

ಹೀಗಾಗಿ ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಕಾರು ಮಾದರಿಗಳ ಮೇಲೆ ಸಾಕಷ್ಟು ನೀರಿಕ್ಷೆಗಳಿದ್ದು, ಹೊಸ ನಮೂನೆಯ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿವೆ.

ಈ ಮೂಲಕ ಭಾರತದಲ್ಲಿ ಹ್ಯುಂಡೈ ಕ್ರೇಟಾ ಮತ್ತು ರೆನಾಲ್ಟ್ ಡಸ್ಟರ್ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ದಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ದೇಶಿಯ ಗ್ರಾಹಕರಿಗಾಗಿ ವಿವಿಧ ಕಾರುಗಳನ್ನು ಉತ್ಪಾದನೆ ಮಾಡಲು ಬರೋಬ್ಬರಿ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.
Trending On DriveSpark Kannada:
ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!
ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ..


Click it and Unblock the Notifications








