ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

Written By:
Recommended Video - Watch Now!
Ducati 959 Panigale Crashes Into Buffalo - DriveSpark

ಹೊಸ ಕಾರು ಖರೀದಿಸುವಾಗ ಗ್ರಾಹಕರು ಹತ್ತಾರು ಬಾರಿ ಎಚ್ಚರವಹಿಸುವುದು ಒಳಿತು. ಇಲ್ಲವಾದ್ರೆ ವಾಹನಗಳ ಮಾರಾಟಗಾರರು ನಿಮ್ಮನ್ನು ಮೋಸಗೊಳಿಸುವ ಸಾಧ್ಯತೆಗಳಿರುತ್ತವೆ. ಇದಕ್ಕೆ ಕಾರಣ ಕೆಲ ಕಾರ್ ಡೀಲರ್ಸ್‌ಗಳು ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್ ಮಾಡುತ್ತಿರುವುದು ವಿವಾದಕ್ಕೆ ಕಾರಣವಾಗುತ್ತಿದೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಕಾರ್ ಡೀಲರ್ಸ್‌ಗಳು ಕೆಲ ಬಾರಿ ಗ್ರಾಹಕರಿಗೆ ಹೊಸ ಕಾರುಗಳ ಮಾರಾಟ ಮಾಡುವಾಗ ಹ್ಯಾಂಡ್‌ಲಿಂಗ್ ಚಾರ್ಜ್‌ಗಳನ್ನು ಕಾನೂನು ಬಾಹಿರವಾಗಿ ಪಡೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಟಾಟಾ ನೆಕ್ಸಾನ್ ಖರೀದಿಸಿದ್ದ ಗ್ರಾಹಕರನೊಬ್ಬ ಟಾಟಾ ಮೋಟಾರ್ಸ್‌ನ ಅಧಿಕೃತ ಮಾರಾಟಗಾರನ ಅಕ್ರಮವನ್ನು ಬಹಿರಂಗ ಪಡಿಸಿದ್ದಾನೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಟಾಟಾ ನೆಕ್ಸನಾ ಕಾರನ್ನು ಗ್ರಾಹಕರಿಗೆ ಹಸ್ತಾಂತರಿಸಲು ಕಾನೂನು ಬಾಹಿರವಾಗಿ ರೂ. 8500 ಹ್ಯಾಂಡ್‌ಲಿಂಗ್ ಶುಲ್ಕವನ್ನು ಪಡೆದುಕೊಂಡಿದ್ದು, ಅಸ್ಸಾಂನ ಗುವಾಹಾಟಿಯಲ್ಲಿ ಇಂತದೊಂದು ಅಕ್ರಮ ವ್ಯವಹಾರ ಬೆಳಕಿಗೆ ಬಂದಿದೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಗುವಾಹಟಿಯ ಜನಪ್ರಿಯ ಕಾರು ಶೋರಂ ಕಾಮಾಕ್ಯಾ ಮೋಟಾರ್ಸ್‌ನಿಂದಲೇ ಈ ಅವ್ಯವಹಾರ ನಡೆದಿದ್ದು, ನೆಕ್ಸಾನ್ ಕಾರು ಮಾರಾಟ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ರೂ. 8500 ಹ್ಯಾಂಡ್‌ಲಿಂಗ್ ಚಾರ್ಜ್‌ಗಳನ್ನು ಪಡೆಯುತ್ತಿರುವುದು ಪತ್ತೆಯಾಗಿದೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಈ ಬಗ್ಗೆ ಟಾಟಾ ಮೋಟಾರ್ಸ್ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿರುವ ನೆಕ್ಸಾನ್ ಖರೀದಿಸಿದ್ದ ಗ್ರಾಹಕನು ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್‌ಗಳನ್ನು ಪಡೆಯುತ್ತಿರುವುದು ನ್ಯಾಯ ಸಮ್ಮತವೇ ಎಂದು ಪ್ರಶ್ನಿಸಿದ್ದಾನೆ.

Trending On DriveSpark Kannada:

ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ..

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಇದಕ್ಕೆ ಪ್ರತಿಕ್ರಿಯೆಸಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್ ಪಡೆಯುವುದರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ಹೆಚ್ಚುವರಿ ಶುಲ್ಕ ಪಡೆದಿರುವ ಕಾಮಾಕ್ಯಾ ಮೋಟಾರ್ಸ್ ವಿರುದ್ಧ ಕ್ರಮ ಜರಗಿಸುವ ಭರವಸೆ ನೀಡಿದೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಜೊತೆಗೆ ಹೆಚ್ಚುವರಿಯಾಗಿ ಪಡೆಯಲಾಗಿದ್ದ ರೂ. 8500 ಹ್ಯಾಂಡ್‌ಲಿಂಗ್ ಚಾರ್ಜ್ ಅನ್ನು ವಾಪಸ್ ನೀಡಲಾಗಿದ್ದು, ಕಾರು ಮಾರಾಟಗಾರರ ಅಕ್ರಮವನ್ನು ಬಯಲು ಮಾಡಿದ ನೆಕ್ಸಾನ್ ಗ್ರಾಹಕನಿಗೆ ಟಾಟಾ ಮೋಟಾರ್ಸ್ ಸಿಇಒ ಧನ್ಯವಾದ ತಿಳಿಸಿದ್ದಾರೆ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಒಂದು ವೇಳೆ ನೀವು ಕೂಡಾ ಹೊಸ ಕಾರು ಖರೀದಿಸುವಾಗ ಹ್ಯಾಂಡ್‌ಲಿಂಗ್ ಚಾರ್ಜ್‌ಗಳನ್ನು ಪಾವತಿಸಿದ್ದಲ್ಲಿ ಈಗಲೇ ಎಚ್ಚೆತ್ತುಕೊಂಡು ಅಕ್ರಮಗಳ ಎಚ್ಚರಿಕೆ ವಹಿಸಿ. ಇಲ್ಲವಾದ್ರೆ ಹಣದಾಸೆಗೆ ಬಿದ್ದಿರುವ ಡೀಲರ್ಸ್‌ಗಳು ನಿಮ್ಮ ಜೇಬಿಗೂ ಕತ್ತರಿ ಹಾಕುವುದರಲ್ಲಿ ಯಾವುದೇ ಅನುಮಾನವಿಲ್ಲ.

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಚ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕೆಲವು ಬಾರಿ ಹೊಸ ಕಾರುಗಳನ್ನು ಖರೀದಿಸುವಾಗ ಕಾರು ಉತ್ಪಾದನಾ ಕಂಪನಿಗಳೇ ಗ್ರಾಹಕರಿಂದ ಹ್ಯಾಂಡ್‌ಲಿಂಗ್ ಚಾರ್ಜ್‌ಗಳನ್ನು ಪಡೆಯುವ ಸಾಧ್ಯತೆಗಳಿದ್ದು, ಯಾವುದೇ ಕಾರಣಕ್ಕೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಪಾವತಿಸುವಾಗ ಯಾವುದಕ್ಕೆ ಎಷ್ಟು ಶುಲ್ಕ ಎಂದು ನಿಖರ ಮಾಹಿತಿ ಪಡಿದ ನಂತರವೇ ವ್ಯವಹಾರ ಮುಂದುವರಿಸಿ.

Trending On DriveSpark Kannada:

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬಾಲಕಿಗೆ ಗುದ್ದಿದ ಕೆಟಿಎಂ ಬೈಕ್- ಬೈಕ್‌ರ್‌ಗಳಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗ ಥಳಿತ..!!

Trending DriveSpark YouTube Videos

Subscribe To DriveSpark Kannada YouTube Channel - Click Here

Read more on off beat cars
English summary
Tata Nexon Handling Charges Dropped After A Mail To Tata Motors CEO.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark