ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

Written By:
Recommended Video - Watch Now!
Ducati 959 Panigale Crashes Into Buffalo - DriveSpark

ಫೆ. 1ರಿಂದ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಐಎಸ್‌ಐ ಗುರುತು ಇಲ್ಲದ ಹಾಗೂ ಕಳಪೆ ಹೆಲ್ಮೆಟ್‌ ನಿಷೇಧಿಸುವುದಾಗಿ ಹೇಳಿದ್ದ ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ತಮ್ಮ ತೀರ್ಮಾನವನ್ನು ಹಿಂಪಡೆದಿದ್ದು, ಸದ್ಯಕ್ಕೆ ಹೆಲ್ಮೆಟ್‌ ಕಳಪೆಯದ್ದೆಂಬ ಕಾರಣಕ್ಕೆ ದಂಡ ವಿಧಿಸುವುದಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಕಳೆದ ಕೆಲ ದಿನಗಳ ಹಿಂದಷ್ಟೇ 'ಆಪರೇಷನ್ ಸೇಫ್‌ ರೈಡ್‌' ಮಾದರಿಯ ಕಾರ್ಯಾಚರಣೆಯನ್ನು ಗೃಹ ಸಚಿವರ ಸೂಚನೆಯಂತೆ ನಗರದಲ್ಲಿ ಜಾರಿಗೆ ತರಲು ಮುಂದಾಗಿದ್ದ ಸಂಚಾರಿ ಪೊಲೀಸರು, ಇದೀಗ ಹೆಲ್ಮೆಟ್‌ ಪರೀಕ್ಷೆ ಮಾಡುವುದು ಕಠಿಣವಾಗಿರುವುದರಿಂದ ಮಹತ್ವದ ಕಾರ್ಯಯೋಜನೆಗೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಹೆಲ್ಮೆಟ್‌ ಗುಣಮಟ್ಟ ಸರಿ ಇಲ್ಲವೆಂದು ಯಾವುದೇ ಪೊಲೀಸರು ಸವಾರರನ್ನು ಪ್ರಶ್ನಿಸುವುದಿಲ್ಲ. ನಿಮ್ಮ ಸುರಕ್ಷತೆ ದೃಷ್ಟಿಯಿಂದ ಐಎಸ್‌ಐ ಗುರುತು ಇರುವ ಹೆಲ್ಮೆಟ್‌ ಧರಿಸುವುದು ಒಳ್ಳೆಯದು. ಆ ಬಗ್ಗೆ ಜಾಗೃತಿ ಮೂಡಿಸುತ್ತೇವೆ ಎಂದು ಹೆಚ್ಚುವರಿ ಪೊಲೀಸ್‌ ಕಮಿಷನರ್‌ (ಸಂಚಾರ) ಆರ್‌. ಹಿತೇಂದ್ರ ಸ್ಪಷ್ಟನೆ ನೀಡಿದ್ದಾರೆ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಪೊಲೀಸರ ಈ ದಿಢೀರ್ ನಿರ್ಧಾರಕ್ಕೆ ಕಾರಣ?

ಹೆಲ್ಮೆಟ್‌ ಗುಣಮಟ್ಟದ ಪರೀಕ್ಷೆ ಹಾಗೂ ಕಳಪೆ ಗುಣಮಟ್ಟದ ಹೆಲ್ಮೆಟ್‌ ನಿಷೇಧಿಸುವ ಬಗ್ಗೆ ಮಾಹಿತಿ ಕೋರಿ ಬ್ಯೂರೊ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (ಬಿಐಎಸ್‌) ಅಧಿಕಾರಿಗಳಿಗೆ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಪತ್ರ ಬರೆದಿದ್ದರು.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಅದಕ್ಕೆ ಪ್ರತಿಯಾಗಿ ಪತ್ರ ಬರೆದಿರುವ ಬಿಐಎಸ್‌ ಅಧಿಕಾರಿಗಳು ಐಎಸ್ಐ ಹೆಲ್ಮೆಟ್‌ ಪರೀಕ್ಷೆಯ ವಿಧಾನವನ್ನು ವಿವರಿಸಿದ್ದು, ಹೆಲ್ಮೆಟ್‌ಗಳನ್ನು ಸ್ಪರ್ಶಿಸಿ, ಕಣ್ಣಿನಿಂದ ನೋಡಿ ಗುಣಮಟ್ಟದ ಬಗ್ಗೆ ತೀರ್ಮಾನಿಸುವುದು ಅಸಾಧ್ಯ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಪರೀಕ್ಷೆಗೆಂದೇ ಪ್ರತ್ಯೇಕ ವಿಧಾನಗಳಿವೆ. ರಸ್ತೆಯಲ್ಲಿ ಸವಾರರನ್ನು ಏಕಾಏಕಿ ತಡೆದು ಅವರ ಹೆಲ್ಮೆಟ್‌ ಕಳಪೆಯದ್ದು ಎಂದು ನಿಖರವಾಗಿ ಹೇಳಲು ಬರುವುದಿಲ್ಲ ಎಂದಿದ್ದಾರೆ.

Trending On DriveSpark Kannada:

ಕಾನೂನು ಬಾಹಿರವಾಗಿ ಹ್ಯಾಂಡ್‌ಲಿಂಗ್ ಚಾರ್ಜ್- ಟಾಟಾ ಡೀಲರ್ಸ್‌ಗೆ ಕಾದಿತ್ತು ಶಾಕ್..!!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಜೊತೆಗೆ ಗುಣಮಟ್ಟದ ಹೆಲ್ಮೆಟ್‌ ತಯಾರಿಕೆಗಾಗಿ ಕೆಲ ಕಂಪನಿಗಳಿಗೆ ಪರವಾನಗಿ ನೀಡಿದ್ದೇವೆ. ಆ ಕಂಪನಿಗಳ ಹೆಲ್ಮೆಟ್‌ ಮಾದರಿಗಳನ್ನು ಪರೀಕ್ಷೆ ಮಾಡಿ ಐಎಸ್‌ಐ ಗುರುತಿನ ಸ್ಟಿಕ್ಕರ್‌ ಸಮೇತ ಮಾರಾಟ ಮಾಡಲು ಒಪ್ಪಿಗೆ ನೀಡುತ್ತೇವೆ. ಕೆಲವು ಬಾರಿ ಸ್ಟಿಕ್ಕರ್‌ ಕಳಚಿ ಬೀಳುತ್ತದೆ. ಐಎಸ್‌ಐ ಗುರುತು ಇಲ್ಲವೆಂದು ಅಂಥ ಹೆಲ್ಮೆಟ್‌ ಕಳಪೆಯದ್ದು ಎಂದು ಹೇಳಲು ಬರುವುದಿಲ್ಲ ಎಂದಿದ್ದಾರೆ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಇದಲ್ಲದೇ ಕಳಪೆ ಹೆಲ್ಮೆಟ್‌ ಎಂಬ ಕಾರಣಕ್ಕೆ ದಂಡ ವಿಧಿಸಿದರೆ, ಅದನ್ನು ಪೊಲೀಸರು ಸಾಬೀತು ಪಡಿಸಬೇಕಾಗುತ್ತದೆ. ಅದಕ್ಕಾಗಿ ಪ್ರಯೋಗಾಲಯಕ್ಕೆ ಹೆಲ್ಮೆಟ್‌ ಕಳುಹಿಸಬೇಕು. ಅಲ್ಲಿಂದ ವರದಿ ಬರುವವರೆಗೂ ಕಾಯಬೇಕು. ಅದರ ಬದಲು, ದಂಡ ವಿಧಿಸದೆ ಸುಮ್ಮನಿರುವುದೇ ಲೇಸು ಎಂಬ ತೀರ್ಮಾನಕ್ಕೆ ಬರಲಾಗಿದೆ.

ISI ಗುರುತು ಇಲ್ಲದ ಹೆಲ್ಮೆಟ್ ನಿಷೇಧ ಸದ್ಯಕ್ಕಿಲ್ಲ- ಹಾಗಾದ್ರೆ ಬೆಂಗಳೂರು ಪೊಲೀಸರ ಮುಂದಿನ ಕ್ರಮ ಏನು?

ಇದರಿಂದಾಗಿ ನಿಮ್ಮ ಸುರಕ್ಷತೆ ದೃಷ್ಟಿಯಿಂದ ಐಎಸ್‌ಐ ಗುರುತು ಇರುವ ಹೆಲ್ಮೆಟ್‌ ಧರಿಸುವುದು ಒಳ್ಳೆಯದು ಎಂದಿರುವ ಹೆಚ್ಚುವರಿ ಸಂಚಾರಿ ಪೊಲೀಸ್ ಮಾಹಾನಿರ್ದೇಶಕರು, ಸದ್ಯಕ್ಕೆ ಈ ಬಗ್ಗೆ ವಾಹನ ಸವಾರರಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಿದ್ದೇವೆ ಎಂದಿದ್ದಾರೆ.

Trending On DriveSpark Kannada:

ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಬಿಡುಗಡೆಗೆ ಸಜ್ಜುಗೊಂಡ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಹೀಗಿದೆ ನೋಡಿ...

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

Trending DriveSpark YouTube Videos

Subscribe To DriveSpark Kannada YouTube Channel - Click Here

English summary
Bangalore Police Withdraws Ban On Non-ISI Helmets.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark