ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

By Praveen
Recommended Video - Watch Now!
Fire Accident In Chengicherla, Telangana | Petrol Tanker Blast

ಭಾರತೀಯ ಈ ಉದ್ಯಮಿ ಸದ್ಯ ಯುನೈಟೆಡ್ ಕಿಂಗ್‍ಡಮ್‌ನಲ್ಲಿ ಬಿಲಿಯನೇರ್. ಆದರೂ ಭಾರತೀಯ ಸಂಸ್ಕೃತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಇವರು ಹಲವು ಕಾರಣಗಳಿಂದ ಲಂಡನ್‌ನಲ್ಲಿ ಅಷ್ಟೇ ಅಲ್ಲದೇ ಇಡೀ ವಿಶ್ವವನ್ನೇ ತಮ್ಮತ್ತ ನೋಡುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಾರಣ ಅವರ ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುವ ಐಷಾರಾಮಿ ಕಾರುಗಳ ಸಂಗ್ರಹ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಐಷಾರಾಮಿ ಕಾರುಗಳನ್ನು ಸಂಗ್ರಹಿಸುವುದು ಉದ್ಯಮಿಗಳಿಗೆ ಹೊಸತು ಅಲ್ಲವೇ ಅಲ್ಲ. ಆದ್ರೆ ಕೆಲವು ಉದ್ಯಮಿಗಳು ಲಗ್ಷುರಿ ಕಾರುಗಳ ಸಂಗ್ರಹದಲ್ಲೂ ಸ್ಪೆಷಾಲಿಟಿ ಹೊಂದಿದ್ದಾರೆ. ಇದಕ್ಕೆ ಯುಕೆಯಲ್ಲಿರುವ ಭಾರತೀಯ ಮೂಲದ ಉದ್ಯಮಿ ರುಬೇನ್ ಸಿಂಗ್ ಅವರೇ ಬೆಸ್ಟ್ ಎಕ್ಸಾಪಲ್.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ನಾವು ಇಷ್ಟೇಲ್ಲಾ ಹೇಳುವುದಕ್ಕೂ ಹಲವಾರು ಕಾರಣಗಳಿವೆ. ಯಾಕಂದ್ರೆ ಉದ್ಯಮಿ ರುಬೇನ್ ಸಿಂಗ್ ಅವರು ವಾರದಲ್ಲಿ 7 ದಿನಗಳ ಕಾಲ ಬಳಸುವ ವಿವಿಧ ಬಣ್ಣದ ಟರ್ಬನ್‌ಗಳಿಗೆ ತಕ್ಕಂತೆ ಅದೇ ಬಣ್ಣದ ರೋಲ್ಸ್ ರಾಯ್ಸ್ ಕಾರನ್ನು ಬಳಕೆ ಮಾಡುತ್ತಾರೆ ಎನ್ನುವುದೇ ಮತ್ತೊಂದು ಸ್ಪೆಷಲ್.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಹಾಗಾದ್ರೆ ಉದ್ಯಮಿ ರುಬೇನ್ ಸಿಂಗ್ ಬಳಿ ಎಷ್ಟು ಕಾರುಗಳಿವೆ? ಅಷ್ಟಕ್ಕೂ ರುಬೇನ್ ಸಿಂಗ್ ಯಾವ ಉದ್ಯಮ ನಡೆಸುತ್ತಿದ್ದಾರೆ? ಎನ್ನುವ ಹತ್ತು ಹಲವು ಪ್ರಶ್ನೆಗಳನ್ನು ನಮ್ಮನ್ನ ಕಾಡದೇ ಇರಲಾರದು. ಹೀಗಾಗಿಯೇ ನಾವು ಕೂಡಾ ರುಬೇನ್ ಸಿಂಗ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತದಕಾಡಿದಾಗ ಲಗ್ಷುರಿ ಕಾರುಗಳ ಹೊಸ ಲೋಕವೇ ಪರಿಚಯವಾಯ್ತು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಟರ್ಬನ್ ಬಣ್ಣಕ್ಕೆ ತಕ್ಕಂತೆ ಅದೇ ಬಣ್ಣದ ರೋಲ್ಸ್ ರಾಯ್ಸ್ ಕಾರುಗಳನ್ನು ಬಳಕೆ ಮಾಡುವ ಉದ್ಯಮಿ ರುಬೇನ್ ಸಿಂಗ್ ಬರೋಬ್ಬರಿ 7 ರೋಲ್ಸ್ ರಾಯ್ಸ್ ಕಾರುಗಳನ್ನು ಖರೀದಿಸಿದ್ದು, ವಾರಪೂರ್ತಿ ಟರ್ಬನ್ ಬಣ್ಣಕ್ಕೆ ಹೋಲುವ ಅದೇ ಬಣ್ಣದ ಕಾರಗಳನ್ನು ಬಳಕೆ ಮಾಡುತ್ತಿದ್ದಾರೆ.

Trending On DriveSpark Kannada:

ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?

ಅವರದು ವೃತ್ತಿಯಲ್ಲಿ ಕ್ಷೌರಿಕ ಕಾಯಕ- ಆದ್ರೆ ಅವರ ಐಷಾರಾಮಿ ಕಾರುಗಳ ಸಂಗ್ರಹ ಕೇಳಿದ್ರೆ ನಿಮಗೂ ಶಾಕ್..!!

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಕಾರು ಸಂಗ್ರಹ ಹಿಂದಿದೆ ಸ್ವೀಟ್ ರಿವೆಂಜ್..!!

ಹೌದು, ಉದ್ಯಮಿ ರುಬೇನ್ ಸಿಂಗ್ ಐಷಾರಾಮಿ ಕಾರುಗಳ ಸಂಗ್ರಹದ ಹಿಂದೆ ಒಂದು ರೋಚಕ ಕಥೆಯಿದೆ. ಒಂದು ದಿನ ಬ್ರಿಟನ್ ಮೂಲದ ಉದ್ಯಮಿ ಒಬ್ಬರು ರುಬೇನ್ ಸಿಂಗ್ ಟರ್ಬನ್ ಕುರಿತು ಮಾಡಿದ ಅಪಮಾನವೇ ಇಂತದೊಂದು ಕಾರು ಸಂಗ್ರಹಕ್ಕೆ ಕಾರಣ ಅಂದ್ರೆ ನಾವು ನಂಬಲೇಬೇಕು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಟರ್ಬನ್ ಬಗ್ಗೆ ಅಪಹಾಸ್ಯ ಮಾಡಿದ್ದ ಬ್ರಿಟನ್ ಮೂಲದ ಉದ್ಯಮಿಯೊಬ್ಬನು ರುಬೇನ್ ಸಿಂಗ್ ಟರ್ಬನ್ ಅನ್ನು ಬ್ಯಾಂಡೆಜ್‌ಗೆ ಹೋಲಿಕೆ ಮಾಡಿ ನಗಾಡಿದ್ದನಂತೆ. ನಂತರ ನೀನು ವಾರಪೂರ್ತಿ ಹೊಸ ಹೊಸ ಬಣ್ಣದ ಕಾರುಗಳಲ್ಲಿ ಬರುವ ಸಾಮರ್ಥ್ಯ ಇದೆಯೇ ಎಂದು ಸವಾಲು ಹಾಕಿದ್ದನಂತೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಇದನ್ನೇ ಸವಾಲಾಗಿ ಸ್ವಿಕರಿಸಿದ ರುಬೇನ್ ಸಿಂಗ್ ಅವರು ಕೆಲವೇ ದಿನಗಳಲ್ಲಿ ಯುಕೆನಲ್ಲೇ ಜನಪ್ರಿಯ 'ಆಲ್ ದ ಡೇ ಪಿಎ' ಕಂಪನಿಯನ್ನು ಹುಟ್ಟುಹಾಕಿದ್ದಲ್ಲದೇ ಬಿಲಿಯನೇರ್ ಪಟ್ಟವನ್ನು ತನ್ನದಾಗಿಸಿಕೊಂಡಿದ್ದು, ಸದ್ಯ ಬ್ರಿಟಿಷ್ ಬಿಲ್‌ ಗೇಟ್ಸ್ ಎಂದೇ ಜನಪ್ರಿಯತೆ ಹೊಂದಿದ್ದಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಈ ಮೂಲಕ ನೂರಾರು ಕೋಟಿ ಮೌಲ್ಯದ ವಿವಿಧ ಬಣ್ಣದ ರೋಲ್ಸ್ ರಾಯ್ಸ್ ಕಾರುಗಳ ಸಂಗ್ರಹವನ್ನು ಹೊಂದಿರುವ ಉದ್ಯಮಿ ರುಬೇನ್ ಸಿಂಗ್, ತಮ್ಮಿಂದು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತುಕೊಳ್ಳುವ ಅದೆಷ್ಟೇ ಜನಕ್ಕೆ ಸ್ಪೂರ್ತಿದಾಯಕ ಮನುಷ್ಯ ಆಗಿದ್ದಾರೆ ಅಂದರೇ ತಪ್ಪಾಗಲಾರದು.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಇನ್ನು ರುಬೇನ್ ಸಿಂಗ್ ಹೊಂದಿರುವ ಐಷಾರಾಮಿ ಕಾರುಗಳ ಪಟ್ಟಿಯಲ್ಲಿ ಕೇವಲ ರೋಲ್ಸ್ ರಾಯ್ಸ್ ಕಾರುಗಳು ಮಾತ್ರವಲ್ಲದೇ ಇನ್ನು ಹಲವು ಐಷಾರಾಮಿ ಕಾರುಗಳಿದ್ದು, ಸಂದರ್ಭಕ್ಕೆ ತಕ್ಕಂತೆ ಮತ್ತು ಟರ್ಬನ್ ಬಣ್ಣಕ್ಕೆ ಮ್ಯಾಚ್ ಆಗುವಂತೆ ವಿವಿಧ ಕಾರುಗಳಲ್ಲಿ ಕಚೇರಿಗೆ ತೆರಳುತ್ತಾರೆ.

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಇನ್ನೊಂದು ವಿಶೇಷ ಅಂದರೇ ರುಬೇನ್ ಸಿಂಗ್‌ಗೆ ಸವಾಲು ಹಾಕಿದ್ದ ಬ್ರಿಟಿಷ್ ಉದ್ಯಮಿಯು ನನ್ನ ಸವಾಲಿನಲ್ಲಿ ವಿಜಯ ಸಾಧಿಸಿದರೇ ಇಂತಿಷ್ಟು ಹಣ ನೀಡುವುದಾಗಿ ಹೇಳಿದ್ದನಂತೆ. ಹೀಗಾಗಿ ಸವಾಲಿನಿಂದ ಬಂದ ಹಣವನ್ನು ತನ್ನ ಸ್ವಂತಕ್ಕೆ ಬಳಸದ ರುಬೇನ್ ಸಿಂಗ್ ಅವರು ಬಡ ಮಕ್ಕಳ ಶಿಕ್ಷಣಕ್ಕಾಗಿ ದಾನ ಮಾಡಿದ್ದಾರೆ.

Trending On DriveSpark Kannada:

ಟಾಪ್ 10: ಇವು ವಿಶ್ವದಲ್ಲೇ ಅತಿ ಉದ್ದವಾದ ಗೂಡ್ಸ್ ರೈಲುಗಳು- ಭಾರತದಲ್ಲಿರುವ ಉದ್ದದ ರೈಲು ಯಾವುದು ಗೊತ್ತಾ..!!

ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...

ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್

ಟರ್ಬನ್ ಬಣ್ಣಕ್ಕೆ ತಕ್ಕಂತೆ ಬದಲಾಗುತ್ತೆ ಈ ಉದ್ಯಮಿಯ ರೋಲ್ಸ್ ರಾಯ್ಸ್ ಕಾರುಗಳ ಗಮ್ಮತ್ತು....

ಹೀಗಾಗಿ ಜಗತ್ತಿನಲ್ಲಿರುವ ಲಕ್ಷಾಂತರ ಉದ್ಯಮಿಗಳ ವೈಭವಕ್ಕೆ ಭಿನ್ನವಾಗಿ ಕಾಣುವ ರುಬೇನ್ ಸಿಂಗ್, ಸವಾಲಿನ ಜೊತೆ ಜೊತೆಗೆ ಬ್ರಿಟಿಷ್ ಉದ್ಯಮಿಗೆ ಪರೋಕ್ಷ ಮುಖಭಂಗ ಮಾಡಿದಲ್ಲದೇ ವಿದೇಶಿ ನೆಲದಲ್ಲಿ ಭಾರತೀಯ ಸಂಸ್ಕೃತಿಯನ್ನು ಎತ್ತಿಹಿಡಿದ್ದು ಸಾಮಾನ್ಯವಲ್ಲ.

Trending DriveSpark YouTube Videos

Subscribe To DriveSpark Kannada YouTube Channel - Click Here

Kannada
English summary
Sardar Style Brilliance Sees Sikh Billionaire Colour Match His Turbans With His Rolls Royces.
Story first published: Thursday, January 25, 2018, 15:58 [IST]
X

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more