TRENDING ON ONEINDIA
-
ಸಾಕ್ಷ್ಯಾಧಾರ ಇಲ್ಲದೆ ಪಾಕಿಸ್ತಾನವನ್ನು ದೂಷಿಸಬೇಡಿ ಎಂದ ಚೀನಾ
-
7 ಸೀಟರ್ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಯಾಗಲಿದೆ ಕಿಯಾ ಕಾರ್ನಿವಾಲ್
-
ಯಾವುದೇ ಆಪ್ಗಳ ಕ್ಯಾಶೆ ಕ್ಲಿಯರ್ ಮಾಡುತ್ತಿರಬೇಕು ಏಕೆ ಮತ್ತು ಹೇಗೆ?
-
'ಬೆಲ್ ಬಾಟಮ್' ಪಾಸು, 'ಕೆಮಿಸ್ಟ್ರಿ ಆಫ್ ಕರಿಯಪ್ಪ'ನ ಫಾರ್ಮೂಲಾ ವರ್ಕೌಟ್
-
ಭಾರತ ಪಾಕ್ ನಡುವೆ ಯುದ್ದ ನಡೆದರೆ ಉಂಟಾಗುವ ಆರ್ಥಿಕ ದುಷ್ಪರಿಣಾಮಗಳೇನು?
-
ಮುಖಮೈಥುನ ನಡೆಸುವ ಪುರುಷರಿಗೆ 'ಬಾಯಿ-ಗಂಟಲ ಕ್ಯಾನ್ಸರ್' ಬರಬಹುದು!
-
ಅಭಿಮಾನಿಗಳಿಂದ ಕೊಹ್ಲಿ-ಎಬಿಡಿ ಪೋಸ್ಟರ್ಗೆ ಹಾಲಭಿಷೇಕ: ವಿಡಿಯೋ
-
ಐಟಿಐ ಲಿಮಿಟೆಡ್ ನಲ್ಲಿ ಕಾನೂನು ಪದವಿ ಅಭ್ಯರ್ಥಿಗೆ ಉದ್ಯೋಗಾವಕಾಶ
ಮೈಲೇಜ್ ವಿಚಾರದಲ್ಲಿ ಸುಳ್ಳು ಜಾಹೀರಾತು- ಹೀರೋ ಡೀಲರ್ಸ್‌ಗೆ ಸರಿಯಾಗಿಯೇ ಬುದ್ದಿ ಕಲಿಸಿದ ಬೆಂಗಳೂರು ಯುವಕ..!!

ಆ ಯುವಕ ಹಲವಾರು ವರ್ಷಗಳ ನಂತರ ಕಷ್ಟಪಟ್ಟು ತನ್ನ ಕನಸಿನ ಹೀರೋ ಬೈಕ್ ಖರೀದಿಸಿದ್ದ. ಆದ್ರೆ ಹೊಸ ಬೈಕ್ ಬಗೆಗೆ ಇದ್ದ ಯುವಕನ ಕುತೂಹಲ ಬೈಕ್ ಖರೀದಿ ಮಾಡಿದ ಕೆಲವೇ ದಿನಗಳಲ್ಲಿ ಕಮರಿ ಹೊಗಿತ್ತು. ಇದಕ್ಕೆ ಕಾರಣ ಹೊಸ ಬೈಕ್ ಬಗ್ಗೆ ಡೀಲರ್ಸ್ ಹೇಳಿದ್ದ ಹತ್ತಾರು ಸುಳ್ಳುಗಳ ಕಂತೆ.
ನಮ್ಮ ದೇಶದಲ್ಲಿ ಅತ್ಯುತ್ತಮ ಮೈಲೇಜ್ ನೀಡುವ ಬೈಕ್‌ಗಳನ್ನು ಖರೀದಿಸಲು ಜನ ಹಿಂದೆ ಮುಂದೆ ನೋಡೋದಿಲ್ಲ. ಇದೇ ಕಾರಣಕ್ಕೆ ಹೀರೋ, ಹೋಂಡಾ, ಬಜಾಜ್ ಬೈಕ್ ಅಂದ್ರೆ ಖರೀದಿಗೆ ಮುಗಿ ಬೀಳುವ ಗ್ರಾಹಕರು ಅಂತಹ ಜನಪ್ರಿಯ ಸಂಸ್ಥೆಗಳಿಂದಲೇ ಮೋಸ ಆದ್ರೆ ಹೆಂಗೆ ಹೇಳಿ.
ಇಲ್ಲೂ ಕೂಡಾ ಅಂತದ್ದೆ ಒಂದು ಪ್ರಕರಣ ಜನಪ್ರಿಯ ಹೀರೋ ಮೋಟಾರ್ಸ್ ಸಂಸ್ಥೆಯನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಮಾಡಿದ ತಪ್ಪಿಗೆ ಕ್ಷಮೆ ಕೋರಿದ್ದಲ್ಲದೇ ಬರೋಬ್ಬರಿ 85 ಸಾವಿರ ದಂಡ ಕಟ್ಟಿರುವ ಘಟನೆ ನಡೆದಿದೆ.
ಘಟನೆಯ ವಿವರ
ಬೆಂಗಳೂರಿನ ಕೆಂಪೇಗೌಡ ನಗರದ ಮಂಜುನಾಥ್ ನರಗುಂದ ಎನ್ನುವರು 2013ರಲ್ಲಿ ರೂ.74,794 ಪಾವತಿಸಿ 125ಸಿಸಿ ಸಾಮರ್ಥ್ಯದ ಹೀರೋ ಇಗ್ನಿಟರ್ ಖರೀದಿ ಮಾಡಿದ್ದರು. ಆದ್ರೆ ಮೈಲೇಜ್ ವಿಚಾರವಾಗಿ ಡೀಲರ್ಸ್ ಮಾಡಿದ ಮೋಸ ಮಂಜುನಾಥ್ ಕೋಪಕ್ಕೆ ಕಾರಣವಾಗಿತ್ತು.
ಜಾಹೀರಾತು ಒಂದನ್ನು ನೋಡಿ ಮೆಜೆಸ್ಟಿಕ್ ಹೀರೋ ಶೋರಂನಲ್ಲಿ ಹೊಸ ಬೈಕ್ ಖರೀದಿ ಮಾಡಿದ್ದ ಮಂಜುನಾಥ್‌ಗೆ ಕೆಲವೇ ದಿನಗಳಲ್ಲಿ ಹೊಸ ಬೈಕಿನ ಅಸಲಿಯತ್ತು ಪರಿಚಯವಾಗಿತ್ತು. ಇದಕ್ಕೆ ಕಾರಣ ಡೀಲರ್ಸ್ ನೀಡಿದ ಸುಳ್ಳು ಮಾಹಿತಿಯು ಎಂತರಿಗೂ ಕೋಪ ತರಿಸದೇ ಇರಲಾರದು.
Trending On DriveSpark Kannada:
ರೀ ಸೇಲ್ ಮೌಲ್ಯವಿಲ್ಲದ ಈ ಕಾರುಗಳನ್ನು ಖರೀದಿ ಮಾಡುವ ಮುನ್ನ 10 ಬಾರಿ ಯೋಚಿಸಿ...
ರಸ್ತೆ ನಿಯಮ ಉಲ್ಲಂಘಿಸುವರಿಗೆ ಕಾದಿದೆ ಮಾರಿಹಬ್ಬ- ಯಾವ ನಿಯಮ ಉಲ್ಲಂಘನೆಗೆ ಎಷ್ಟು ದಂಡ ಗೊತ್ತಾ?
ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?
ನಗರದ ಪ್ರಮುಖ ಕಡೆಗಳಲ್ಲಿ ದೊಡ್ಡ ದೊಡ್ಡ ಬ್ಯಾನರ್‌ಗಳನ್ನು ಹಾಕಿ ಗ್ರಾಹಕರನ್ನು ಸೆಳೆದಿದ್ದ ಮೆಜೆಸ್ಟಿಕ್ ಹೀರೋ ಶೋರಂ ಅಧಿಕಾರಿಗಳು, ಹೊಸ ಬೈಕ್ ಖರೀದಿಯ ತವಕದಲ್ಲಿದ್ದ ಮಂಜುನಾಥ್‌ಗೆ ಇಗ್ನಿಟರ್ ಬೈಕ್‌ಗಳು ಪ್ರತಿ ಲೀಟರ್‌ಗೆ 60 ಕಿಮಿ ಮೈಲೇಜ್ ಭರವಸೆ ನೀಡಿದ್ದರು.
ಆದ್ರೆ ಹೀರೋ ಮೋಟಾರ್ಸ್ ನೀಡಿದ ಭರವಸೆಗಳು ಮತ್ತು ವಾಸ್ತಾಂಶಕ್ಕೂ ಯಾವುದೇ ಸಂಬಂಧವೇ ಇರಲಿಲ್ಲ. ಪ್ರತಿ ಲೀಟರ್ ಪೆಟ್ರೋಲ್‌ಗೆ 60 ಕಿಮಿ ಮೈಲೇಜ್ ಅಂತಾ ಹೇಳಿದ್ದ ಡೀಲರ್ಸ್ ಮಾತಿಗೂ ಬೈಕ್ ಖರೀದಿ ಮಾಡಿದ ಮಂಜುನಾಥ್ ಇಗ್ನಿಟರ್ ಬೈಕ್ ನೀಡುವ ಮೈಲೇಜ್‌ಗೂ ತುಂಬಾ ವ್ಯತ್ಯಾಸವಿತ್ತು.
60 ಕಿಮಿ ಮೈಲೇಜ್‌ಗೆ ಬದಲಾಗಿ ಪ್ರತಿ ಲೀಟರ್‌ಗೆ ಕೇವಲ 35 ಕಿಮಿ ಮೈಲೇಜ್ ನೀಡಿದ್ದ ಇಗ್ನಿಟರ್ ಬೈಕ್ ಮಂಜುನಾಥ್‌ಗೆ ಬೇಸರ ತರಿಸಿತ್ತು. ಇದರಿಂದಾಗಿ ನ್ಯಾಯಕ್ಕಾಗಿ ಡೀಲರ್ಸ್ ಬಳಿ ಹೋಗಿದ್ದ ಮಂಜುನಾಥ್, ಸುಳ್ಳು ಜಾಹೀರಾತು ನೀಡಿದ ಡೀಲರ್ಸ್ ವಿರುದ್ಧ ತಿರುಗಿಬಿದ್ದಿದ್ದ.
ಮೊದಮೊದಲು ಮಂಜುನಾಥ್‌ಗೆ ಸರಿಯಾಗಿಯೇ ಸ್ಪಂದಿಸಿದ್ದ ಹೀರೋ ಡೀಲರ್ಸ್‌ಗಳು 2 ಬಾರಿ ಸುಳ್ಳು ಹೇಳಿ ಮೈಲೇಜ್ ಹೆಚ್ಚಿಸಿ ಕೋಡುವುದಾಗಿ ಮತ್ತದೇ ಕಥೆ ಹೇಳಿದ್ದರು. ಹೀಗೆಯೇ 2 ವರ್ಷಗಳ ಕಾಲ ಅಲೆದಾಡಿಸಿದ ಡೀಲರ್ಸ್‌ಗಳ ವಿರುದ್ಧ ಗ್ರಾಹಕರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಗಳೂರು ನಗರದ ಹೆಚ್ಚುವರಿ ಗ್ರಾಹಕರ ನ್ಯಾಯಾಲಯವು ಸುಳ್ಳು ಜಾಹೀರಾತು ಮೂಲಕ ಮೋಸ ಮಾಡಿದ ಹೀರೋ ಡೀಲರ್ಸ್ ಮೋಸಕ್ಕೆ ಒಳಗಾಗಿರುವ ಮಂಜುನಾಥ್‌ಗೆ ಬೈಕ್ ಮೌಲ್ಯವನ್ನು ಸಂಪೂರ್ಣವಾಗಿ ಹಿಂದಿರುಗಿಸುವುದಲ್ಲದೇ 10 ಸಾವಿರ ರೂಪಾಯಿ ಹೆಚ್ಚುವರಿಯಾಗಿ ಪರಿಹಾರ ನೀಡುವಂತೆ ಆದೇಶ ಮಾಡಿದೆ.
Trending On DriveSpark Kannada:
ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ.
ವೇಗದ ಚಾಲನೆಯಲ್ಲಿದ್ದಾಗ ಪಂಚರ್- ಮೂರು ಬಾರಿ ಪಲ್ಟಿ ಹೊಡೆದ ಟಾಟಾ ನೆಕ್ಸಾನ್
ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ
ಈ ಮೂಲಕ ಸತತ 3 ವರ್ಷ 10 ತಿಂಗಳ ಕಾಲ ಹೋರಾಟದ ಫಲವಾಗಿ ಮಂಜುನಾಥ್‌ಗೆ ಪರಿಹಾರ ದೊರಕಿದ್ದು, ಸುಳ್ಳು ಹೇಳಿ ಗ್ರಾಹಕರನ್ನು ಮೋಸಗೊಳಿಸುವ ಡೀಲರ್ಸ್‌ಗಳಿಗೆ ಇದೊಂದು ಎಚ್ಚರಿಕೆಯ ಗಂಟೆ ಎನ್ನಬಹುದು.
ಒಂದು ವೇಳೆ ನೀವು ಕೂಡಾ ಇದೇ ರೀತಿಯ ಮೋಸಕ್ಕೆ ಒಳಗಾಗಿದ್ದಲ್ಲಿ ಈ ಕೂಡಲೇ ಪ್ರಕರಣ ದಾಖಲಿಸಲು ಹಿಂಜರಿಯಬೇಡಿ. ಜೊತೆಗೆ ಈ ಕುರಿತು ಮುಕ್ತವಾಗಿ ಚರ್ಚಿಸಿ.
news source:timesofindia
Trending DriveSpark YouTube Videos
Subscribe To DriveSpark Kannada YouTube Channel - Click Here