ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಮೊನ್ನೆಯಷ್ಟೇ ದೆಹಲಿಯಲ್ಲಿ ನಡೆದ 2018ರ ಆಟೋ ಮೇಳದಲ್ಲಿ ತನ್ನ ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿತ್ತು.

By Praveen

ಜಗತ್ತಿನ 8ನೇ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾಗಿರುವ ದಕ್ಷಿಣ ಕೊರಿಯಾದ ಕಿಯಾ ಮೋಟಾರ್ಸ್ ಭಾರತದಲ್ಲಿ ಪ್ರಥಮ ಬಾರಿಗೆ ತನ್ನ ವಾಣಿಜ್ಯ ಚಟುವಟಿಕೆಗಳನ್ನು ಆರಂಭಗೊಳಿಸುತ್ತಿದ್ದು, ಮೊನ್ನೆಯಷ್ಟೇ ದೆಹಲಿಯಲ್ಲಿ ನಡೆದ 2018ರ ಆಟೋ ಮೇಳದಲ್ಲಿ ತನ್ನ ಹೊಸ ಕಾರು ಮಾದರಿಗಳನ್ನು ಪ್ರದರ್ಶನಗೊಳಿಸಿತ್ತು.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಹೀಗಾಗಿ ಭವಿಷ್ಯದಲ್ಲಿ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಅಧಿಪತ್ಯ ಸಾಧಿಸುವ ಎಲ್ಲಾ ಭರವಸೆಗಳನ್ನು ಹುಟ್ಟುಹಾಕಿರುವ ಕಿಯಾ ಮೋಟಾರ್ಸ್ ಸಂಸ್ಥೆಯು 2018ರ ಅಂತ್ಯಕ್ಕೆ ಇಲ್ಲವೇ 2019ರ ಆರಂಭದಲ್ಲಿ ಹೊಸ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಪ್ರಮುಖವಾಗಿ ಭಾರತೀಯ ವಾಹನ ಪ್ರೇಮಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಮಿಸಲಾಗಿರುವ ನೂತನ ಕಿಯಾ ಮೋಟಾರ್ಸ್ ಎಸ್‌ಯುವಿ ಎಸ್‌ಪಿ ಕಾನ್ಸೆಪ್ಟ್ ಆವೃತ್ತಿಯು ಹೊಸ ಭರವಸೆ ಹುಟ್ಟುಹಾಕಿದ್ದು, ಬೆಲೆಗಳ ವಿಚಾರವಾಗಿ ಗಮನ ಸೆಳೆಯಲಿದೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಮೊದಲ ಹಂತವಾಗಿ ಎಸ್‌ಯುವಿ ಕಾರು ಮಾದರಿಯನ್ನೇ ಬಿಡುಗಡೆ ಮಾಡಲು ಉದ್ದೇಶಿಸಿರುವ ಕಿಯಾ ಮೋಟಾರ್ಸ್, ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯತೆ ಸಾಧಿಸುತ್ತಿರುವ ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ವಿಟಾರಾ ಬ್ರೇಝಾ ಮತ್ತು ರೆನಾಲ್ಟ್ ಡಸ್ಟರ್ ಮಾದರಿಗಳಿಗೆ ಸಮನಾಗಿ ಹೊಸ ಕಾರು ಅಭಿವೃದ್ಧಿ ಮಾಡಿದೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಕಿಯಾ ಹೊಸ ಎಸ್‌ಯುವಿ ಕಾರು ಮಾದರಿಯು ಸುಧಾರಿತ ತಂತ್ರಜ್ಞಾನಗಳೊಂದಿಗೆ ಅಭಿವೃದ್ಧಿ ಹೊಂದಿದ್ದು, ಡೀಸೆಲ್ ಆವೃತ್ತಿಯು 1.6-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್‌ನೊಂದಿಗೆ ಹೊಸ ಕಾರುಗಳು ಮಾರುಕಟ್ಟೆಗೆ ಪ್ರವೇಶ ಪಡೆಯಲಿವೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಹ್ಯುಂಡೈ ಕಾರುಗಳ ತಳಹದಿಯಲ್ಲಿ ಚಾಸೀ, ಎಂಜಿನ್ ಮತ್ತು ಗೇರ್ ಬಾಕ್ಸ್ ಗಳನ್ನು ಹಂಚಿಕೊಂಡರೂ ಕಿಯಾ ಕಾರುಗಳು ವಿಭಿನ್ನವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಜೊತೆಗೆ ರೇಂಜ್ ರೋವರ್ ಇವೋಕ್ ಮಾದರಿಯಲ್ಲೇ ಬಾಡಿ ವಿನ್ಯಾಸ ಹೊಂದಿರುವ ಎಸ್‌ಪಿ ಕಾನ್ಸೆಪ್ಟ್ ಮಾದರಿಗಳು ಅಲಾಯ್ ಚಕ್ರ, ಎಲ್‌ಇಡಿ ಟೈಲ್ ಲೈಟ್ ಹೊಂದಿರುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಹೆಚ್ಚುವರಿ ತಾಂತ್ರಿಕ ಮಾಹಿತಿಗಳು ಲಭ್ಯವಾಗಿಲ್ಲ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಆದ್ರೆ ಕಿಯಾ ಮೋಟಾರ್ಸ್ ಸಂಸ್ಥೆಯು ಬಿಡುಗಡೆ ಮಾಡುತ್ತಿರುವ ಎಸ್‌ಪಿ ಕಾನ್ಸೆಪ್ಟ್ ಕಾರು ಮಾದರಿಗಳ ಮೇಲೆ ಸಾಕಷ್ಟು ನೀರಿಕ್ಷೆಗಳಿದ್ದು, ಹೊಸ ನಮೂನೆಯ ಹ್ಯಾಚ್‌ಬ್ಯಾಕ್, ಸೆಡಾನ್ ಮತ್ತು ಎಲೆಕ್ಟ್ರಿಕ್ ಕಾರುಗಳು ಸಹ ಮುಂಬರುವ ದಿನಗಳಲ್ಲಿ ಬಿಡುಗಡೆಗಾಗಿ ಸಿದ್ಧಗೊಂಡಿವೆ.

ಭಾರತದಲ್ಲಿ ಕಿಯಾ ಹೊಸ ಕಾರುಗಳ ಬಿಡುಗಡೆಗೆ ದಿನಗಣನೆ

ಈ ಮೂಲಕ ಭಾರತದಲ್ಲಿ ಕ್ರೇಟಾ, ವಿಟಾರಾ ಬ್ರೇಝಾ ಮತ್ತು ಡಸ್ಟರ್ ಎಸ್‌ಯುವಿ ಆವೃತ್ತಿಗಳಿಗೆ ತೀವ್ರ ಸ್ಪರ್ಧೆ ಒಡ್ದಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು, ದೇಶಿಯ ಗ್ರಾಹಕರಿಗಾಗಿ ವಿವಿಧ ಕಾರುಗಳನ್ನು ಉತ್ಪಾದನೆ ಮಾಡಲು ಬರೋಬ್ಬರಿ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದೆ.

Trending On DriveSpark Kannada:

ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು

ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?

ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿರುವ ಟೊಯೊಟಾ ರಷ್ ಸ್ಪೆಷಲ್ ಏನು?

Article Published On: Sunday, February 18, 2018, 8:30 [IST]
English summary
Kia SP Concept SUV India Launch Sooner Than Expected.
Read more on kia motors ಕಿಯಾ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+