ಅತ್ಯಧಿಕ ಮೈಲೇಜ್ ಪ್ರೇರಿತ ಮಹೀಂದ್ರಾ ಹೊಸ ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಬಿಡುಗಡೆ
ದೇಶಿಯ ಮಾರುಕಟ್ಟೆಯಲ್ಲಿ ವಾಣಿಜ್ಯ ವಾಹನಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಗರಿಷ್ಠ ಪ್ರಮಾಣದ ಪಾಲು ಹೊಂದಿರುವ ಮಹೀಂದ್ರಾ ಸಂಸ್ಥೆಯು ತನ್ನ ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಮಾದರಿಗಳನ್ನು ಬಿಡುಗಡೆಗೊಳಿಸಿದ್ದು, ಈ ಹಿಂದಿನ ಬ್ಲೆಜೊ ಆವೃತ್ತಿಗಿಂತಲೂ ಹೊಸ ಟ್ರಕ್ ಅತಿವಿನೂತನ ಸೌಲಭ್ಯಗಳನ್ನು ಹೊತ್ತುಬಂದಿದೆ.

ಮಹೀಂದ್ರಾ ಸಂಸ್ಥೆಯ ಟ್ರಕ್ ಅಂಡ್ ಬಸ್(ಎಂಟಿಬಿ) ನಿರ್ಮಾಣದ ವಿಭಾಗವು ಹೊಸ ಬ್ಲೆಜೊ ಎಕ್ಸ್ ರೇಂಜ್ ಟ್ರಕ್‌ಗಳನ್ನು ಸುಧಾರಿತ ತಂತ್ರಜ್ಞಾನ ಸಹಾಯದೊಂದಿಗೆ ಅಭಿವೃದ್ದಿಗೊಳಿಸಿದ್ದು, ಟ್ರಕ್ ಮ್ಯಾನೆಜ್‌ಮೆಂಟ್ ವಿಭಾಗದಲ್ಲಿ ಭಾರೀ ಬದಲಾವಣೆ ತಂದಿರುವುದಾಗಿ ಮಹೀಂದ್ರಾ ಸಂಸ್ಥೆ ಹೇಳಿಕೊಂಡಿದೆ.

ಈ ಹಿನ್ನೆಲೆಯಲ್ಲಿ ಟ್ರಕ್ ಬೀಡಿಭಾಗಗಳು ಮತ್ತು ಎಂಜಿನ್ ವಿಭಾಗದಲ್ಲಿ ಕೆಲವು ಬದಲಾವಣೆಗಳಾಗಿದ್ದು, ಈ ಹಿಂದಿನ ಸಾಮಾನ್ಯ ಬ್ಲೆಜೊ ಟ್ರಕ್‌ಗಳಿಂತ ಹೊಸ ಬ್ಲೆಜೊ ಎಕ್ಸ್ ರೇಂಜ್ ಟ್ರಕ್‌ಗಳು ಅತ್ಯಧಿಕ ಮೈಲೇಜ್ ಸಾಮರ್ಥ್ಯ ಪಡೆದುಕೊಂಡಿವೆಯೆಂತೆ.

ಹೊಸದಾಗಿ ಬಿಡುಗಡೆಯಾಗಿರುವ ಬ್ಲೆಜೊ ಎಕ್ಸ್ ರೇಂಜ್ ಟ್ರಕ್‌ಗಳು ಪ್ರಮುಖ ಮೂರು ಮಾದರಿಯಲ್ಲಿ ಖರೀದಿಗೆ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಹಾಲೇಜ್, ಟ್ರ್ಯಾಕ್ಟರ್-ಟ್ರೈಲರ್ ಮತ್ತು ಟಿಪ್ಲರ್ ಮಾದರಿಯಲ್ಲಿ ಹೊಸ ಬ್ಲೆಜೊ ಎಕ್ಸ್ ಖರೀದಿ ಮಾಡಬಹುದಾಗಿದೆ.

ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಮಾದರಿಗಳು ವಿಶೇಷವಾಗಿ ಭಾರೀ ಗಾತ್ರದ ಸರಕು ಸಾಗಿಸಲು ಅನುಕೂಲಕರವಾಗುವಂತೆ ಸಿದ್ದಗೊಂಡಿದ್ದು, 12 ಚಕ್ರಗಳೊಂದಿಗೆ ಭಾರೀ ಪ್ರಮಾಣದ ಸರಕು ಸಾಗಾಟ ಸಾಮರ್ಥ್ಯದೊಂದಿಗೆ ಅಧಿಕ ಮೈಲೇಜ್ ಹೊಂದಿರುವುದು ಸಾಗಾಣಿಕೆ ವೆಚ್ಚವನ್ನು ತಗ್ಗಿಸಲಿದೆ ಎನ್ನಬಹುದು.

ಪ್ರತಿ 100ಕಿ.ಮಿ ಗೆ ಒಂದು ಸರ್ವೀಸ್ ಪಾಯಿಂಟ್..!
ಮಹೀಂದ್ರಾ ಸಂಸ್ಥೆಯು ಇದೇ ಮೊದಲ ಬಾರಿಗೆ ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಖರೀದಿದಾರರಿಗೆ ವಿಶೇಷ ಸೌಲಭ್ಯವೊಂದನ್ನು ಘೋಷಣೆ ಮಾಡಿದ್ದು, ಸರಕು ಸಾಗಾಣಿಕೆ ವೇಳೆ ಆಗುವ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಪ್ರಮುಖ ಹೆದ್ದಾರಿಗಳಲ್ಲಿ ಬರೋಬ್ಬರಿ 41 ಸರ್ವೀಸ್ ಟಚ್ ಪಾಯಿಂಟ್‌ಗಳನ್ನು ತೆರೆದಿದೆ.

ಇದರಿಂದ ಟ್ರಕ್ ಮಾಲೀಕರಿಗೆ ಹೊಸ ಬ್ಲೆಜೊ ಎಕ್ಸ್ ರೇಂಜ್ ಟ್ರಕ್‌ಗಳ ನಿರ್ವಹಣೆ ಮತ್ತಷ್ಟು ಸುಲಭವಾಗಲಿದ್ದು, ಒಂದು ವೇಳೆ ನಿಗದಿತ ಸಮಯಕ್ಕೆ ಸರ್ವೀಸ್ ಲಭ್ಯವಾಗದೇ ಇದ್ದಲ್ಲಿ ಟ್ರಕ್ ಮಾಲೀಕರಿಗೆ ಪ್ರತಿ ಗಂಟೆಗೆ ರೂ.500 ದಂಡ ಪಾವತಿ ಮಾಡುವುದಾಗಿ ಭರವಸೆ ನೀಡಿದೆ.

ಹೀಗಾಗಿ ಹೊಸ ಟ್ರಕ್ ತಾಂತ್ರಿಕ ದೋಷಗಳು ಕಂಡು ಬಂದಲ್ಲಿ ಮೂರು ಗಂಟೆಯ ಒಳಗಾಗಿ ಟಚ್ ಪಾಯಿಂಟ್ ಮೂಲಕ ಸರ್ವೀಸ್ ಲಭ್ಯವಾಗಲಿದ್ದು, ತದನಂತರದ ಕಾಯುವಿಕೆಗೆ ಮಹೀಂದ್ರಾ ಸಂಸ್ಥೆಯೇ ಪ್ರತಿ ಗಂಟೆಗೆ ರೂ. 500 ಪರಿಹಾರ ಭರಿಸಲಿದೆ.
MOST READ: ಪ್ರವಾಹ ಸಂತ್ರಸ್ತರ ಪಾಲಿನ ಹೀರೋ ಆಗಿದ್ದ ಮೀನುಗಾರನಿಗೆ ಮಹೀಂದ್ರಾ ಕಡೆಯಿಂದ ಭರ್ಜರಿ ಉಡುಗೊರೆ

ಈ ಬಗ್ಗೆ ಮಹೀಂದ್ರಾ ಸಂಸ್ಥೆಯ ವಾಣಿಜ್ಯ ವಾಹನಗಳ ಉತ್ಪಾದನಾ ವಿಭಾಗದ ಅಧ್ಯಕ್ಷ ರಾಜನ್ ವದೆೇರಾ ಅವರೇ ಮಾಹಿತಿ ನೀಡಿದ್ದು, ಬ್ಲೆಜೊ ಎಕ್ಸ್ ರೇಂಜ್ ಟ್ರಕ್ ಬಿಡುಗಡೆಯೊಂದಿಗೆ ಗ್ರಾಹಕರಿಗೆ ಸೇವೆಗಳ ವಿಭಾಗದಲ್ಲಿ ಮಹತ್ವದ ಬದಲಾವಣೆ ತಂದಿರುವುದು ನಮಗೆ ಹೆಮ್ಮೆ ಎನ್ನಿಸುತ್ತೆ ಎಂದಿದ್ದಾರೆ.

ಹೊಸ ಯೋಜನೆಯು ವಾಹನ ಮಾಲೀಕರಿಗೆ ಹೆಚ್ಚಿನ ಮಟ್ಟದ ಲಾಭಾಂಶ ತಂದುಕೊಡುವಲ್ಲಿ ನೆರವಾಗಲಿದೆ ಎನ್ನುವ ಭರವಸೆ ವ್ಯಕ್ತಪಡಿಸಿರುವ ರಾಜನ್ ಅವರು, ಭಾರೀ ಗಾತ್ರದ ವಾಣಿಜ್ಯ ವಾಹನಗಳ ವಿಭಾಗದಲ್ಲಿ ಬ್ಲೆಜೊ ವಾಹನವು ಹೊಸ ಸಂಚಲನಕ್ಕೆ ಕಾರಣವಾಗಲಿದೆ ಎಂದಿದ್ದಾರೆ.
MOST READ: ವಿಮಾನವನ್ನೇ ನಿರ್ಮಿಸಲು ಮುಂದಾಗಿದ್ದ ರೈತನೊಬ್ಬ ಕೊನೆಗೆ ಮಾಡಿದ್ದೇನು ಗೊತ್ತಾ?

ಇನ್ನು ಬ್ಲೆಜೊ ಎಕ್ಸ್ ರೇಂಜ್ ಟ್ರಕ್‌ಗಳ ಬೆಲೆ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲವಾದರೂ ಟ್ರಕ್‌ನಲ್ಲಿ ಒದಗಿಸಲಾಗುವ ಬಿಡಿಭಾಗಗಳು ಮತ್ತು ಸೇವೆಗಳ ಆಧಾರ ಮೇಲೆ ಬೆಲೆ ನಿಗದಿಗೊಳಿಸಲಿದ್ದು, ಆನ್‌ರೋಡ್ ಬೆಲೆಗಳ ಪ್ರಕಾರ ರೂ. 30 ಲಕ್ಷದಿಂದ ರೂ. 35 ಲಕ್ಷ ಬೆಲೆ ಹೊಂದಿರಬಹುದು ಎನ್ನುವುದು ನಮ್ಮ ಅಂದಾಜು.
ಮಹೀಂದ್ರಾ ಹೊಚ್ಚ ಹೊಸ ಮರಾಜೊ ಎಂಪಿವಿ ಕಾರಿನ ಫೋಟೋ ಗ್ಯಾಲರಿ..!


Click it and Unblock the Notifications