ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

By Praveen Sannamani

ಮಹೀಂದ್ರಾ ಸಂಸ್ಥೆಯು ಪ್ರತಿ ಬಾರಿಯು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದಾಗಲೂ ಎನಾದ್ರೂ ಒಂದು ವಿಶೇಷತೆಯನ್ನು ಇಟ್ಟುಕೊಂಡೇ ಹೊಸ ವಾಹನಗಳನ್ನು ಮಾರುಕಟ್ಟೆಗೆ ಪರಿಚಯಿಸುವುದರಲ್ಲಿ ಎತ್ತಿದ ಕೈ. ಇದೀಗ ಬಿಡುಗಡೆ ಮಾಡಲಾಗಿರುವ ಮರಾಜೊ ವಿನೂತನ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕೂಡಾ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಈ ಹೊಸ ಕಾರಿನ ಅಭಿವೃದ್ಧಿ ಹಿಂದಿನ ವಿಶೇಷತೆಗಳನ್ನು ನೀವು ತಿಳಿಯಲೇಬೇಕು.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಶಾರ್ಕ್ ಡಿಸೈನ್ ಆಧಾರಿತ ಮರಾಜೊ ಕಾರುಗಳು ಹೆಸರಿನ ಹಿಂದೆ ಒಂದು ವಿಶೇಷತೆಯಿದೆ. 'ಮರಾಜೊ' ಅಂದ್ರೆ ಸ್ಪಾನಿಷ್ ಭಾಷೆಯಲ್ಲಿ ತಿಮಿಂಗಿಲ ಎಂದರ್ಥ. ಇದೇ ಆಕಾರವನ್ನು ಹೊಂದಿರುವ ಈ ಕಾರು ಸಹ ಸದ್ದುಗದ್ದಲವಿಲ್ಲದೇ ಸರಾಗವಾಗಿ ನೂಗ್ಗಬಲ್ಲ ಗುಣಹೊಂದಿದ್ದು, ಎಂಟ್ರಿ ಲೆವಲ್ ಎಂಪಿವಿ ಮಾರುತಿ ಸುಜುಕಿ ಎರ್ಟಿಗಾ ಹಾಗೂ ದುಬಾರಿ ಬೆಲೆ ಇನೋವಾ ಕ್ರಿಸ್ಟಾ ಕಾರುಗಳ ನಡುವಿನ ಅಂತರವನ್ನು ತುಂಬಲು ಈ ಹೊಸ ಉತ್ಪನ್ನವನ್ನ ಸಿದ್ದಗೊಳಿಸಲಾಗಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಹೌದು, ಶಾರ್ಕ್ ಡಿಸೈನ್ ಆಧಾರಿತ ಈ ಕಾರು ನೇರವಾಗಿ ಇನೋವಾ ಕ್ರಿಸ್ಟಾ ಕಾರಿಗೆ ಪೈಪೋಟಿ ನೀಡಬಲ್ಲ ವಿನ್ಯಾಸ ಹೊಂದಿದ್ದು, ಕಾರಿನ ಬೆಲೆ , ಬಣ್ಣ, ಎಂಜಿನ್ ಮತ್ತು ವೆರಿಯೆಂಟ್ ಕುರಿತಾಗಿ ಮುಂದಿನ ಸ್ಲೈಡರ್‌ಗಳನ್ನು ನೋಡಿ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಮಹೀಂದ್ರಾ ಸಂಸ್ಥೆಯು ಎಸ್‌ಯುವಿ ಕಾರು ಮಾರಾಟದಲ್ಲಿ ಈಗಾಗಲೇ ಹಲವು ಪ್ರಯೋಗಗಳ ಮೂಲಕ ಯಶಸ್ವಿ ಕಂಡುಕೊಂಡಿದ್ದು, ಹತ್ತು ಹಲವು ವಿಶೇಷತೆಗಳನ್ನು ಹೊತ್ತು ಬಂದಿರುವ ಮರಾಜೊ ಎಂಪಿವಿ ಮಾದರಿಯು ಇದೀಗ ಮತ್ತಷ್ಟು ಆಕರ್ಷಣೆಗೆ ಕಾರಣವಾಗಿದೆ. ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ ನಾಲ್ಕು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯಲಿರುವ ಮರಾಜೊ ಕಾರುಗಳ ಬೆಲೆ ಪಟ್ಟಿಯು ಸಹ ಗ್ರಾಹಕರ ಪರವಾಗಿದೆ ಎನ್ನಬಹುದು.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಮಾರಾಜೊ ಕಾರುಗಳು ಬೆಲೆ ಪಟ್ಟಿ(ಎಕ್ಸ್‌ಶೋರೂಂ ಪ್ರಕಾರ)

ವೆರಿಯೆಂಟ್‌ಗಳು - ಬೆಲೆಗಳು

ಮರಾಜೊ ಎಂ2 -ರೂ. 9,99,000

ಮರಾಜೊ ಎಂ4 -ರೂ. 10,95,000

ಮರಾಜೊ ಎಂ6 -ರೂ. 12,40,000

ಮರಾಜೊ ಎಂ8 -ರೂ. 13,90,000

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಪ್ರೀಮಿಯಂ ವೈಶಿಷ್ಟ್ಯತೆಗಳನ್ನು ಹೊಂದಿರುವ ಮರಾಜೊ ಕಾರುಗಳು ಗುಣಮಟ್ಟದಲ್ಲಿ ಇತರೆ ಎಂಪಿವಿ ಕಾರುಗಳಿಂತಲೂ ಭಿನ್ನವಾಗಿದ್ದು, ಶಾರ್ಕ್ ಡಿಸೈನ್ ಡಿಸೈನ್ ಪ್ರೇರಿತ ಈ ಕಾರಿನ ಮುಂಭಾಗದ ಗ್ರಿಲ್ ಕೂಡಾ ಶಾರ್ಕ್ ಹಲ್ಲುಗಳ ಆಕಾರವನ್ನೇ ಹೊಂದಿರುವುದನ್ನು ನೀವು ಗಮನಿಸಬಹುದು.

Most Read: ಕ್ಲಾಸಿಕ್ 500 ಪೆಗಾಸಸ್ ಖರೀದಿಸಿದವರಿಗೆ ಪಂಗನಾಮ ಹಾಕ್ತಾ ರಾಯಲ್ ಎನ್‌ಫೀಲ್ಡ್?

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಜೊತೆಗೆ ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಫಾಗ್ ಲ್ಯಾಂಪ್ಸ್, ಆಕರ್ಷಕ ಬಂಪರ್, 17-ಇಂಚಿನ ಅಲಾಯ್ ಚಕ್ರಗಳು, ಒಆರ್‌ವಿಎಂಗಳಲ್ಲಿ ಟರ್ನ್ ಇಂಡಿಕೇಟರ್ ಮತ್ತು ಕಾರಿನ ಹಿಂಭಾಗದ ಪ್ರೋಫೈಲ್‌ನಲ್ಲಿ ಶಾರ್ಕ್ ಎಲ್‌ಇಡಿ ಟೈಲ್ ಲೈಟ್ಸ್ , ಹೈ ಸ್ಟಾಪ್ ಲ್ಯಾಂಪ್ ಸೇರಿದಂತೆ ಸ್ಪೋರ್ಟಿ ರಿಯರ್ ಬಂಪರ್ ಪಡೆದಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ಒಳಾಂಗಣ ವಿನ್ಯಾಸ

ಮಹೀಂದ್ರಾ ಮರಾಜೊ ಕಾರುಗಳಲ್ಲಿ ಡ್ಯುಯಲ್ ಟೋನ್ ಥೀಮ್ ಇಂಟಿರಿಯರ್ ಮತ್ತು ಕ್ಲಟರ್ ಫ್ರಿ ಡ್ಯಾಶ್‌ಬೋರ್ಡ್ ನೀಡಲಾಗಿದ್ದು, 7-ಇಂಚಿನ ಇನ್ಪೋಟೈನ್‌ಮೆಂಟ್ ಸಿಸ್ಟಂ, ಟಾಪ್ ರೂಫ್‌ನಲ್ಲಿ ಸರೌಂಡ್‌ ಎಸಿ ವೆಂಟ್ಸ್, ಡ್ಯುಯಲ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಾಯ್ಸ್‌ ಕಮಾಂಡ್‌ ಮತ್ತು ಏರ್‌ಕ್ರಾಫ್ಟ್ ಸ್ಟೈಲ್ ಹ್ಯಾಂಡಲ್‌ಬ್ರೇಕ್ ವಿನ್ಯಾಸ ಪಡೆದುಕೊಂಡಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಇದಲ್ಲದೇ ಕೆಲವು ಸುಧಾರಿತ ಸೌಲಭ್ಯಗಳನ್ನು ಆಯ್ಕೆ ರೂಪದಲ್ಲಿದ್ದು, ಇವುಗಳಲ್ಲಿ ವೀಲ್ಹ್ ಮೌಟೆಂಡ್ ಆಡಿಯೋ ಕಂಟ್ರೋಲರ್, ತುರ್ತುನಿರ್ವಹಣಾ ಕರೆ ಸೌಲಭ್ಯ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲರ್ ಮತ್ತು ಕ್ರೂಸ್ ಕಂಟ್ರೋಲ್ ಆಯ್ಕೆಯಾಗಿ ಪಡೆಯಬಹುದುದಾಗಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಎಂಜಿನ್ ಸಾಮರ್ಥ್ಯ

ಮಹೀಂದ್ರಾ ಮರಾಜೊ ಕಾರುಗಳು 1.5-ಲೀಟರ್(1500 ಸಿಸಿ) ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿದ್ದು, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 120-ಬಿಎಚ್‌ಪಿ ಮತ್ತು 300-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಆದ್ರೆ ಮರಾಜೊ ಕಾರುಗಳಲ್ಲಿ ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಒದಗಿಸಿಲ್ಲವಾದರೂ ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಹೊಸ ಕಾರನ್ನು 7- ಸೀಟರ್ ಮತ್ತು 8-ಸೀಟರ್ ಮಾದರಿಯಾಗಿ ಪರಿಚಯಿಸಿದೆ.

Most Read: ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಕಾರಿನ ನಿರ್ವಹಣೆ

ಹೊಸ ಕಾರಿನ ಮೇಲೆ 3 ವರ್ಷ ಅಥವಾ 1 ಲಕ್ಷ ಕಿ.ಮೀ ವರೆಗೆ ವಾರಂಟಿ ದೊರೆಯಲಿದ್ದು, ಹೊಸ ಕಾರುಗಳು ಪ್ರತಿ ಲೀಟರ್ ಡೀಸೆಲ್‌ಗೆ 17.6 ಕಿ.ಮೀ ಮೈಲೇಜ್ ನೀಡುವ ಮೂಲಕ ಅತಿ ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿರಲಿವೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಇದಲ್ಲದೇ 7-ಸೀಟರ್ ಮರಾಜೊ ಕಾರಿಗೂ ಮತ್ತು 8-ಸೀಟರ್ ಮರಾಜೊ ಮಾದರಿಗಳಿಗೂ ಕೇವಲ ರೂ.5 ಸಾವಿರ ಬೆಲೆ ವ್ಯತ್ಯಾಸಗಳಿದ್ದು, ಮೇಲೆ ನೀಡಲಾಗಿರುವ ಬೆಲೆ ಪಟ್ಟಿಯು 7-ಸೀಟರ್ ಕಾರುಗಳಿಗೆ ಮಾತ್ರವೇ ಅನ್ವಯವಾಗುತ್ತೆ. ಹೀಗಾಗಿ 8-ಸೀಟರ್ ಖರೀದಿಸುವ ಗ್ರಾಹಕರು ಹೆಚ್ಚುವರಿ ದರ ಪಾವತಿಸಬೇಕಾಗುತ್ತೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಸುರಕ್ಷಾ ಸೌಲಭ್ಯಗಳು

ಹೊಸ ಮರಾಜೊ ಕಾರುಗಳಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಪ್ರತಿ ಚಕ್ರಕ್ಕೂ ಡಿಸ್ಕ್‌ಬ್ರೇಕ್, ISOFIX ಚೈಲ್ಡ್ ಮೌಂಟ್ಸ್ ಸೀಟಿನ ಸೌಲಭ್ಯದೊಂದಿಗೆ ಎಂ6 ಹಾಗೂ ಎಂ8 ವೆರಿಯೆಂಟ್‌ಗಳಲ್ಲಿ ಹೆಚ್ಚುವರಿಯಾಗಿ ರಿಯರ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಲ್ಯಾಂಪ್ಸ್ ಸೌಲಭ್ಯವನ್ನು ಇರಿಸಲಾಗಿದೆ.

ಇನೋವಾ ಕ್ರಿಸ್ಟಾ ಕಾರುಗಳಿಂತ ಮಹೀಂದ್ರಾ ಮರಾಜೊ ಹೇಗೆ ಭಿನ್ನವಾಗಿದೆ ಗೊತ್ತಾ?

ಈ ಮೂಲಕ ಟೊಯೊಟಾ ಇನೋವಾ ಕ್ರಿಸ್ಟಾ, ಮಾರುತಿ ಸುಜುಕಿ ಎರ್ಟಿಗಾ, ಟಾಟಾ ಹೆಕ್ಸಾ, ರೆನಾಲ್ಟ್ ಲೋಡ್ಜಿ ಸೇರಿದಂತೆ ವಿವಿಧ ಎಂಪಿವಿ ಕಾರುಗಳಿಗೆ ನೇರ ಪೈಪೋಟಿ ನೀಡಬಹುದಾದ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದ್ದು, ಸ್ವಂತ ಬಳಕೆ ಹಾಗೂ ಟೂರಿಸ್ಟ್ ವಿಭಾಗದಲ್ಲಿ ಈ ಹೊಸ ಕಾರು ಭಾರೀ ಬೇಡಿಕೆ ದಾಖಲಿಸುವ ನೀರಿಕ್ಷೆಗಳಿವೆ.

More from DriveSpark

Article Published On: Tuesday, September 4, 2018, 17:35 [IST]
English summary
Mahindra Marazzo Top Features To Know: Shark Design, Surround-Cool, EcoSense, Emergency Call & More.
Read more on mahindra mpv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+