ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ದೇಶಿಯ ವಾಹನ ತಯಾರಕ ಸಂಸ್ಥೆ ಟಾಟಾ ಮೋಟರ್ಸ್ ತಮ್ಮ ಟೊಯಾಗೊ ಹ್ಯಾಚ್‍‍ಬ್ಯಾಕ್ ಕಾರಿನ ಆಧಾರದ ಮೇಲೆ ಕ್ರಾಸ್ ಹ್ಯಾಚ್‍‍ಬ್ಯಾಕ್ ಕಾರನ್ನು ತಯಾರಿಸಲು ಮುಂದಾಗಿದೆ. ಇದೇ ತಿಂಗಳ 12 ರಂದು ಅಥವಾ ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಈ ಕಾರಿನ ಕುರಿತಾ

By Rahul Ts

ದೇಶಿಯ ವಾಹನ ತಯಾರಕ ಸಂಸ್ಥೆ ಟಾಟಾ ಮೋಟರ್ಸ್ ತಮ್ಮ ಟೊಯಾಗೊ ಹ್ಯಾಚ್‍‍ಬ್ಯಾಕ್ ಕಾರಿನ ಆಧಾರದ ಮೇಲೆ ಕ್ರಾಸ್ ಹ್ಯಾಚ್‍‍ಬ್ಯಾಕ್ ಕಾರನ್ನು ತಯಾರಿಸಲು ಮುಂದಾಗಿದೆ. ಇದೇ ತಿಂಗಳ 12 ರಂದು ಅಥವಾ ಮುಂದಿನ ತಿಂಗಳು ಬಿಡುಗಡೆಗೊಳ್ಳಲಿರುವ ಈ ಕಾರಿನ ಕುರಿತಾದ ಚಿತ್ರಗಳು ಮತ್ತು ಮಾಹಿತಿಯು ಬಹಿರಂಗಗೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಸಧ್ಯ ಮಾರುಕಟ್ಟೆಯಲ್ಲಿ ಮಾರುತಿ ಸೆಲೆರಿಯೊ ಎಕ್ಸ್ ಫೋರ್ಡ್ ಮತ್ತು ಹ್ಯುಂಡೈ ಐ20 ಅಕ್ಟೀವ್ ಕ್ರಾಸ್‍ ಹ್ಯಾಚ್‍‍ಬ್ಯಾಕ್ ಕಾರುಗಳು ಮಾರಾಟಕ್ಕಿದ್ದು, ಇದೀಗ ಇದೇ ಸರಣಿಯಲ್ಲಿ ಟಾಟಾ ಟಿಯಾಗೊ ಎನ್‍‍ಆರ್‍‍‍ಜಿ ಕಾರು ಕೂಡಾ ಕಾಲಿಡಲಿದೆ. ಈ ಸರಣಿಯ ಕಾರುಗಳಲ್ಲಿ ಮಾರುತಿ ಸೆಲೆರಿಯೊ ಎಕ್ಸ್ ರೂ.4.63 ಲಕ್ಷದಲ್ಲಿ ಮಾರಾಟಗೊಳ್ಳುತ್ತಿದ್ದು, ಟಿಯಾಗೊ ಎನ್‍‍ಆರ್‍‍‍ಜಿ ಕಾರು ಅತೀ ಕಡಿಮೆ ಬೆಲೆಯಲ್ಲಿ ಸುಮಾರು ರೂ.4.2 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಕಾರಿನ ವಿನ್ಯಾಸ

ಸಾಧಾರಣ ಟಿಯಾಗೊ ಕಾರಿಗಿಂತ ಎನ್‍ಆರ್‍‍ಜಿ ಕಾರಿನಲ್ಲಿ ಹೊಸ ಬ್ಲಾಕ್ ಬಾಡಿ ಕಿಟ್, ಡ್ಯುಯಲ್-ಟೋನ್ ಬಂಪರ್‍‍ಗಳು, ಫೌಕ್ಸ್ ಸ್ಕಫ್ ಪ್ಲೇಟ್‍‍ಗಳು, ಸೈಡ್ ಸ್ಕರ್ಟ್ಸ್ ಮತ್ತು ವ್ಹೀಲ್ ಆರ್ಚ್‍‍ನ ಸುತ್ತ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದೆ. ಇದಲ್ಲದೆ ಫ್ರಂಟ್ ಗ್ರಿಲ್ಸ್, ವಿಂಗ್ ಮಿರರ್ಸ್, ರೂಫ್, ರೂಫ್ ರೈಲ್ಸ್ ಮತ್ತು ಬಿ-ಪಿಲ್ಲರ್ ಅನ್ನು ಒದಗಿಸಲಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಜೊತೆಗೆ ಟಾಟಾ ಟಿಗೊರ್ ಎನ್‍‍ಆರ್‍‍‍ಜಿ ಕಾರಿನಲ್ಲಿ ಕಪ್ಪು ಬಣ್ಣದಿಂದ ಸಜ್ಜುಗೊಂಡ ಟೈಲ್ ಗೇಟ್, ಸ್ಕೋಕ್ಡ್ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್ ಮತ್ತು ಡ್ಯುಯಲ್ ಟೋನ್ (ಸಿಲ್ವರ್ ಮತ್ತು ಕಪ್ಪು) ಬಣ್ಣ, 4 ಸ್ಪೋಕ್ ಅಲಾಯ್ ಚಕ್ರಗಳ ನ್ನು ನೀಡಲಾಗಿದ್ದು, ಸಾಧಾರಣ ವೇರಿಯಂಟ್‍‍ಗಿಂತ 10ಎಮ್ಎಮ್ ಅಧಿಕ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಹೊಂದಿರಲಿದೆ.

Most Read: ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಎಂಜಿನ್ ಸಾಮರ್ಥ್ಯ

ಟಾಟಾ ಟಿಯಾಗೊ ಎನ್‍‍ಆರ್‍‍‍ಜಿ ಕಾರು ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಬರಲಿದೆ. ಪೆಟ್ರೋಲ್ ಆಧಾರಿತ ಕಾರುಗಳು 1.4 ಲೀಟರ್ ಎಂಜಿನ್ ಸಹಾಯದಿಂದ 84ಬಿಹೆಚ್‍ಪಿ ಮತ್ತು 115ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಇನ್ನು ಡೀಸೆಲ್ ಆಧಾರಿತ ಟಾಟಾ ಟಿಗೊರ್ ಎನ್‍‍ಆರ್‍‍ಜಿ ಕಾರುಗಳು 1.1 ಲೀಟರ್ ಟರ್ಬೋಚಾರ್ಜ್ಡ್ ಯೂನಿಟ್ ಎಂಜಿನ್ ಸಹಾಯದಿಂದ 69ಬಿಹೆಚ್‍ಪಿ ಮತ್ತು 140ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಟಾಟಾ ಟಿಗೊರ್ ಎನ್‍‍ಆರ್‍‍‍ಜಿ ಒಳ ವಿನ್ಯಾಸದಲ್ಲಿ ಟಿಯಾಗೊ ಕಾರಿನಂತೆಯೆ ವಿನ್ಯಾಸಗೊಳಿಸಲಾಗಿದ್ದು, ಆರೆಂಜ್ ಮತ್ತು ಸಿಲ್ವರ್ ಪಟ್ಟಿಗಳನ್ನು ನೀಡಲಾಗಿದೆ. ಹ್ಯಾಚ್‍‍ಬ್ಯಾಕ್ ವೇರಿಯಂಟ್‍‍ನಿಂದ ಪಡೆದ ಹರ್ಮಾನ್ ಸ್ಟೀರಿಯೊ 8 ಸ್ಪೀಕರ್ ಅನ್ನು ಒದಗಿಸಲಾಗಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಹಾಗೆಯೆ ಈ ಕಾರಿನಲ್ಲಿ 3 ಸ್ಪೋಕ್ ಮಲ್ಟಿ ಫಂಕ್ಷನ್ ಸ್ಟೀರಿಂಗ್ ವ್ಹೀಲ್, ಟ್ವಿನ್ ಪಾಡ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಮತ್ತು ಮಧ್ಯಭಾಗದಲ್ಲಿ ಮಲ್ಟಿ ಇನ್ಫರ್ಮೇಷನ್ ಡಿಸ್ಪ್ಲೇ ಅನ್ನು ಒದಗಿಸಲಾಗಿದೆ. 6 ವಿಧದಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್‍‍ಗಳು, 3ಡಿ ನ್ಯಾವಿಗೇಷನ್ ಸಿಸ್ಟಮ್ ಆಯ್ಕೆ ಇರುವ 5 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದುಕೊಂಡಿರಲಿದೆ ಎನ್ನಲಾಗಿದೆ.

Most Read: ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಟಾಟಾ ಟಿಗೊರ್ ಎನ್‍‍ಆರ್‍‍‍ಜಿ ಕ್ರಾಸ್ ಹ್ಯಾಚ್‍‍ಬ್ಯಾಕ್ ಕಾರು 3793ಎಂಎಂ ಉದ್ದ, 1665 ಅಗಲ, 1587ಎಮ್ಎಮ್ ಎತ್ತರ ಮತ್ತು 2400ಎಮ್ಎಮ್‍‍ನ ಗೌಂಡ್ ಕ್ಲಿಯರೆನ್ಸ್ ಹಾಗು 180ಎಮ್ಎಮ್‍‍ನ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದುಕೊಂಡಿದೆ.

ಕಡಿಮೆ ಬೆಲೆಯಲ್ಲಿ ಬಿಡುಗಡೆಗೊಳ್ಳಲಿರುವ ಟಾಟಾ ಟಿಯಾಗೊ ಎನ್‍ಆರ್‍‍ಜಿ ಕಾರಿನ ವಿಶೇಷತೆ ಏನು..?

ಮಲಬಾರ್ ಸಿಲ್ವರ್, ಕನ್ಯಾನ್ ಆರೆಂಜ್ ಮತ್ತು ಫುಜಿ ವೈಟ್ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರಲಿರುವ ಟಾಟಾ ಟಿಯಾಗೊ ಎನ್‍‍ಆರ್‍‍ಜಿ ಕ್ರಾಸ್ ಹ್ಯಾಚ್‍‍ಬ್ಯಾಕ್ ಕಾರು ಒಮ್ಮೆ ಬಿಡುಗಡೆಗೊಂಡಲ್ಲಿ ಫೋರ್ಡ್ ಫ್ರೀಸ್ಟೈಲ್ ಮತ್ತು ಮಾರುತಿ ಸೆಲೆರಿಯೊ ಎಕ್ಸ್ ಕಾರುಗಳಿಗೆ ಪೈಪೋಟಿ ನೀಡಲಿದೆ ಎನ್ನಲಾಗಿದೆ.

Source : TeamBHP

Most Read Articles

Kannada
Read more on tata motors hatchback price
English summary
Tata Tiago NRG: India’s CHEAPEST cross hatchback & Maruti Celerio X rival.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X