ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

By Rahul Ts

ಟ್ರಾಫಿಕ್ ನಿಯಮಗಳನ್ನು ಒಲ್ಲಂಘಿಸಿ ಟ್ರಾಫಿಕ್ ಪೊಲೀಸರಿಂದ ಬಚಾವ್ ಆಗಿದ್ದೀರಾ? ಹಾಗಿದ್ದರೆ ನಿಮ್ಮ ಪಾಸ್‍ಪೋರ್ಟ್ ಅರ್ಜಿ ಕ್ಯಾನ್ಸೆಲ್ ಆಗಲಿದೆ. ಹೌದು, ಪುಣೆಯಲ್ಲಿನ ಪೊಲೀಸರು ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ ದಂಡವನ್ನು ಪಾವತಿ ಮಾಡದ ಚಾಲಕರಿಗೆ ಸರಿಯಾದ ಪಾಠವನ್ನು ಕಲಿಸಲು ಮುಂದಾಗಿದ್ದಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಪುಣೆ ಪೊಲೀಸರು ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿರುವವರ ಡೇಟಾಬೇಸ್ ಅನ್ನು ಸಂಗ್ರಹಿಸಿ ಅದನ್ನು ಪಾಸ್‍‍ಪೋರ್ಟ್ ಪರಿಶೀಲನೆ ಪ್ರಕ್ರಿಯೆಗೆ ಲಿಂಕ್ ಮಾಡಲಾಗಿದೆ. ಹೀಗೆ ಮಾಡಿದ ಕೇವಲ ನಾಲ್ಕು ದಿನಗಳ ಅನುಷ್ಠಾನದೊಳಗೆ, ಒಟ್ಟು 92 ಮಂದಿಯ ಟ್ರಾಫಿಕ್ ದಂಡವನ್ನು ಕಟ್ಟದೆ ಪಾಸ್‍‍ಪೋರ್ಟ್ ಅರ್ಜಿ ಸಲ್ಲಿಸಿದವರ ದಾಕಲೆಯನ್ನು ಗುರುತಿಸಲಾಗಿದೆ. ಹೀಗೆ ಮುಂದಿನ ದಿನಗಳಲ್ಲಿ ಸಂಚಾರಿ ದಂಡವನ್ನು ಪಾವತಿಸದ ಪಾಸ್‍‍ಪೋರ್ಟ್ ಪರಿಶೀಲನೆ ಪ್ರಕ್ರಿಯೆಯಲ್ಲಿ ಇನ್ನು ಹೆಚ್ಚು ಮಂದಿಗಳನ್ನು ಗುರುತಿಸಲಾಗುತ್ತದೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಪಾಸ್‍ಪೋರ್ಟ್‍‍ಗಾಗಿ ಪೊಲೀಸ್ ಪರಿಶೀಲನೆಯ ಪ್ರಕ್ರಿಯೆಯಲ್ಲಿ ಈ 92 ಪಾಸ್‍‍ಪೋರ್ಟ್ ಅರ್ಜಿಗಳನ್ನು ತಡೆಹಿಡಿಯಲಾಗುತ್ತದೆ. ಮೊದಲಿಗೆ ಪುಣೆಯ ಡೆಪ್ಯುಟಿ ಕಮಿಷನರ್ (ಸ್ಪೆಷಲ್ ಬ್ರ್ಯಾಂಚ್) ಅಶೋಕ್ ಮೊರೆಲ್ ಅವರು ಈ ಅನ್ವಯಗಳ ಬಗ್ಗೆ ಋಣಾತ್ಮಕ ವರದಿಯನ್ನು ಪಾಸ್‍‍ಪೋರ್ಟ್ ಕಛೇರಿಗೆ ಕಳುಹಿಸಿ, ನಂತರ ಅಂತಿಮ ಕರೆಯನ್ನು ತೆಗೆದುಕೊಳ್ಳಲಾಗುತ್ತದೆ ಎನ್ನಲಾಗಿದೆ.

Most Read:ಕೇರಳದಲ್ಲಿನ ಪ್ರವಾಹದಿಂದ ಕಾರು ಡೀಲರ್‍‍ಗಳಿಗೆ ಬರೊಬ್ಬರಿ 1,000 ಸಾವಿರ ಕೋಟಿ ನಷ್ಟ..!!

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಈ ನಿಯಮವನ್ನು ಪುಣೆ ಸಿಟಿ ಕಮಿಷನರ್ ಕೆ.ವೆಂಕಟಾಚಲಂ ಅವರು ಪ್ರಕಟಿಸಿದ್ದು, ಆಗಸ್ಟ್ 26 ರಂದು ಪುಣೆ ಪೊಲೀಸರು ನೀಡಿದ ಈ ಹೇಳಿಕೆ, ಪಾಸ್‍‍ಪೋರ್ಟ್ ಇಲಾಖೆ ಮತ್ತು ಪಾತ್ರ ಪ್ರಮಾಣೀಕರಣ (ಕ್ಯಾರೆಕ್ಟರ್ ಸರ್ಟಿಫಿಕೇಟ್) ಇಲಾಖೆಯೊಂದಿಗೆ ಡೇಟಾಬೇಸ್ ಸಂಪರ್ಕ ಸಂಚಾರ ಉಲ್ಲಂಘನೆದಾರರನ್ನು ಸಂಪರ್ಕಿಸಿದೆ ಎಂದು ಬಹಿರಂಗಪಡಿಸಿದೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಬಹಳಷ್ಟು ಮಂದಿ ಚಾಲಕರಿಗೆ ಪೊಲೀಸರು ಇ-ಚಲನ್, ಪುನರಾವರ್ತಕ ಬೇಡಿಕೆಗಳ ಮೂಲಕ ನೀಡಿದ ನಂತರವೂ ರೂ.200 ರಿಂದ 1,200 ಟ್ರಾಫಿಕ್ ದಂಡವನ್ನು ಪಾವತಿಸದೇ ತಿರಸ್ಕರಿಸುತ್ತಿದ್ದಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಆದರೆ ಇದೀಗ ಬಂದ ಹೊಸ ಡೇಟಾಬೇಸ್ ನಿಯಮವು ಸ್ಥಳೀಯ ಪೋಲಿಸ್ ಇಲಾಖೆಗೆ ಸಕಾರಾತ್ಮಕ ಪರಿಶೀಲನೆ ವರದಿಯನ್ನು ಕಳುಹಿಸಿ ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದವರ ಪಾಸ್‍‍ಪೋರ್ಟ್ ಅಪ್ಲಿಕೇಶನ್‍‍ಗಳನ್ನು ಹಿಡಿದಿಡಲಾಗುತ್ತದೆ. ಹಾಗಾಗಿ, ಬಾಕಿ ಇರುವ ದಂಡವನ್ನು ಪಾವತಿಸದ ಅಂತಹ ಅಭ್ಯರ್ಥಿಯು ತನ್ನ ಪಾಸ್‍‍ಪೋರ್ಟ್ ಸ್ವೀಕರಿಸುವುದಿಲ್ಲ. ಎಂದು ಪತ್ರಿಕೆಯೊಂದರ ಜೊತೆಗೆ ಪೊಲೀಸ್ ಅಧಿಕಾರಿಗಳನು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಅಭ್ಯರ್ತಿಯು ಟ್ರಾಫಿಕ್ ದಂಡವನ್ನು ಪಾವತಿಸಿದ ನಂತರ, ಫಾರಿನರ್ಸ್ ರಿಜಿಸ್ಟ್ರೇಷನ್ ಆಫಿಸ್ (ಎಫ್‍ಆರ್‍ಒ) ಕಚೇರಿಗೆ ಪೊಲೀಸರು ಮೋಟರ್ ವೆಹಿಕಲ್ ಖಾಯ್ದೆಯ ಪ್ರಕಾರ ಈ ಅಭ್ಯರ್ತಿಯು ದಂಡವನ್ನು ಪಾವತಿಸಿರುವುದರಾಗಿ ಇನ್ನು ನೀವು ಈ ಅಭ್ಯರ್ತಿಗೆ ಪಾಸ್‍‍ಪೋರ್ಟ್ ನೀಡಲು ನಮೆಗೆ ಯಾವುದೇ ಅಭ್ಯರ್ಥವಿಲ್ಲ ಎಂಬ ಲೇಖನವನ್ನು ಕಳುಹಿಸಲಾಗುತ್ತದೆ. ಆ ಅನಂತರ ಎಫ್‍ಆರ್‍ಒ ಇದನ್ನು ಪಾಸ್‍‍ಪೋರ್ಟ್ ಆಫಿಸ್‍‍ಗೆ ಕಳುಹಿಸಲಾಗುತ್ತದೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ನಗರದ ಪೋಲೀಸರು ಕಳುಹಿಸಿದ ಪರಿಶೀಲನಾ ವರದಿಯನ್ನು ಅಧ್ಯಯನ ಮಾಡಿದ ನಂತರ ಮಾತ್ರ ಅವು ಅನ್ವಯವಾಗುತ್ತವೆ. ಎಂದು ಪುಣೆಯ ಪ್ರಾದೇಶಿಕ ಪಾಸ್ಪಾರ್ಟ್ ಆಫೀಸ್‍‍ನಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಈ ಉಪಕ್ರಮವು ಕೆಲವು ಕಡೆಗೆ ಕಠಿಣವಾದ ಬದಲಾವಣೆಗಳಂತೆ ತೋರುತ್ತದೆಯಾದರೂ, ಉಲ್ಲಂಘನೆದಾರರು ಬಾಕಿ ಮೊತ್ತವನ್ನು ಪಾವತಿಸಲು ಮತ್ತು ಸಂಚಾರ ನಿಯಮಗಳನ್ನು ಪಾಲಿಸಲು ವಾಹನ ಚಾಲಕರನ್ನು ಹೆಚ್ಚರಿಸಲು ಮತ್ತು ಸ್ಥಳದಲ್ಲಿಯೆ ದಂಡವನ್ನು ಪಾವತಿ ಮಾಡಲು ಸಹಕರಿಸುತ್ತದೆ.

Most Read:ಅಪಘಾತದಲ್ಲಿ ಗಾಯಾಳುಗಳನ್ನು ರಕ್ಷಣೆ ಮಾಡಿದ್ರೆ ಸಿಗಲಿದೆ ಭಾರೀ ಬಹುಮಾನ..

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಚಾಲಕರು ಟ್ರಾಫಿಕ್ ನಿಯಮವನ್ನು ಖಡ್ಡಾಯವಾಗಿ ಪಾಲಿಸಲು, ಹಲಾವಾರು ಯೋಜನೆಗಳನ್ನು ಜಾರಿ ಮಾಡಿದರು ಹಲವು ಮಂದಿ ಇನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಈ ನಿಟ್ಟಿನಲ್ಲಿ ಪುಣೆ ಪೊಲೀಸರು ಇಂತಹ ಕಾರವನ್ನು ಮಾಡಿದ್ದು, ಮುಂಬರುವ ದಿನಗಳಲ್ಲಿ ಇನ್ನಿತರೆ ಪ್ರಮುಖ ನಗರಗಳಲ್ಲಿ ಇಂತ ನಿಯಮ ಬರಲಿದೆ ಎಂಬ ಭರವಸೆ ಇದೆ.

Source : Times Of India

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

ಟ್ರಾಫಿಕ್ ಪೋಲಿಸ್‍ ಕಣ್ಣು ತಪ್ಪಿಸಲು ಮಾಡುವ 10 ಪ್ರವೃತ್ತಿಗಳು!

01. ಪೊಲೀಸ್ ಕಂಡರೆ ಸೀಟು ಬೆಲ್ಟ್ ಧರಿಸುವುದು

ನಮ್ಮಲ್ಲಿ ಹಲವರಿಗೂ ಈಗಲೂ ಸೀಟು ಬೆಲ್ಟ್ ಮಹತ್ವದ ಬಗ್ಗೆ ಅರಿವಿಲ್ಲ. ವಾಹನ ಚಾಲಕರು ಪೊಲೀಸರು ಎದುರು ಕಂಡಾಗ ಮಾತ್ರ ತರಾತುರಿಯಲ್ಲಿ ಸೀಟು ಬೆಲ್ಟ್ ಧರಿಸುವುದು ಎಷ್ಟು ಸರಿ? ನೆನಪಿಡಿ ಸೀಟು ಬೆಲ್ಟ್ ಇರುವುದು ನಿಮ್ಮ ಸುರಕ್ಷತೆಗಾಗಿ. ಬದಲಾಗಿ ಸರಕಾರದ ಬೊಕ್ಕಸ ತುಂಬಿಸಲು ಅಲ್ಲ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

02. ಚಾಲಕ ಮಾತ್ರ ಸೀಟು ಬೆಲ್ಟ್ ಧರಿಸಿದರೆ ಸಾಕೇ?

ಅಪಘಾತವಾದಾಗ ಕೇವಲ ಚಾಲಕ ಮಾತ್ರ ಗಾಯಗೊಳ್ಳುತ್ತಾನೆ ಎಂಬುದು ಶುದ್ಧ ಮೂಢತನ. ಇದೇ ಕಾರಣಕ್ಕಾಗಿ ವಾಹನ ತಯಾರಕರು ಎಲ್ಲ ಸೀಟುಗಳಿಗೂ ಸೀಲ್ಟ್ ಬೆಲ್ಟ್ ಸೌಲಭ್ಯಗಳನ್ನು ಒದಗಿಸಿರುವುದು. ದಯವಿಟ್ಟು ಇದರ ಗರಿಷ್ಠ ಪ್ರಯೋಜನ ಪಡೆಯಲು ಮರೆಯದಿರಿ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

03. ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು

ಅನೇಕ ಅಪಘಾತ ಪ್ರಕರಣಗಳಲ್ಲಿ ಹೆಲ್ಮೆಟ್ ಧರಿಸಿದ್ದರೂ ಬೈಕ್ ಸವಾರನಿಗೆ ಗಂಭೀರ ಪೆಟ್ಟಾಗಿರುವ ಘಟನೆಗಳು ವರದಿಯಾಗಿವೆ. ಇದಕ್ಕಿರುವ ಪ್ರಮುಖ ಕಾರಣ ಅಸುರಕ್ಷಿತವಾಗಿ ಹೆಲ್ಮೆಟ್ ಧರಿಸುವುದು. ಇಂತಹ ಬಹುತೇಕ ಪ್ರಕರಣಗಳಲ್ಲಿ ಹೆಲ್ಮೆಟ್ ಬಿಗಿಗೊಳಿಸುವುದನ್ನು ಸವಾರರು ಮರೆತಿರುತ್ತಾರೆ. ಇದರಿಂದಾಗಿ ಅಪಘಾತ ವೇಳೆ ಹೆಲ್ಮೆಟ್ ಜಾರಿ ಹೋಗುವ ಸಂಭವವಿದ್ದು, ತಲೆಗೆ ಗಂಭೀರ ಗಾಯಗಾಳಾಗುತ್ತವೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

04. ಕಳಪೆ ಮಟ್ಟದ ಹೆಲ್ಮೆಟ್ ಧರಿಸುವುದು

ರಸ್ತೆ ಬದಿಯಲ್ಲಿ ಕಡಿಮೆ ಬೆಲೆಗೆ ಸಿಗುವ ಹೆಲ್ಮೆಟ್ ಗಳಿಗೆ ನಾವು ಮೊರೆ ಹೋಗುತ್ತೇವೆ. ಇನ್ನು ಕೆಲವು ಫುಲ್ ಫೇಸ್ ಬದಲು ಓಪನ್ ಫೇಸ್ ಮುಂತಾದ ಹೆಲ್ಮೆಟ್ ಗಳನ್ನು ಧರಿಸುತ್ತಾರೆ. ಇವೆಲ್ಲವೂ ಅಪಾಯವನ್ನು ಆಹ್ವಾನಿಸಿದಂತೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

05. 1.2.3.4.5...... ಸವಾರಿ

ಕಾಲೇಜಿನಿಂದ ಹೊರಟ ವಿದ್ಯಾರ್ಥಿ ಹೆಲ್ಮೆಟ್ ಧರಿಸದೇ ಇಬ್ಬರು ಮೂವರನ್ನು ತನ್ನ ಹಿಂಬದಿಯಲ್ಲಿ ಕೂರಿಸಿಕೊಂಡು ನಡು ರಸ್ತೆಯಲ್ಲಿ ವೀಲಿಂಗ್ ಹೊಡೆಯುತ್ತಾನೆ. ಇನ್ನು ಮಧ್ಯಮ ವರ್ಗದ ಕುಟುಂಬದಲ್ಲಿ ಅಪ್ಪ, ಅಮ್ಮ, ಮಕ್ಕಳು ಎಲ್ಲರೂ ಬೈಕ್ ಅನ್ನು ಆಶ್ರಯಿಸಿಕೊಂಡಿರುತ್ತಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

06. ಸಿಗ್ನಲ್ ಜಂಪ್

ಸಿಗ್ನಲ್ ಜಂಪ್ ಸಾಮಾನ್ಯವಾಗಿ ಕಂಡುಬರುವ ಪ್ರವೃತ್ತಿ. ಸಿಗ್ನಲ್ ಗಳಲ್ಲಿ ಎಲ್ಲಿಯಾದರೂ ಹಳದಿ ಬೆಳಕು ಉರಿಯುತ್ತಿರುವುದ ಕಂಡುಬಂದ್ದಲ್ಲಿ ಇನ್ನು ವೇಗವಾಗಿ ಚಲಿಸುತ್ತಾರೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

07. ಸವಾರಿ ವೇಳೆ ಮೊಬೈಲ್ ಫೋನ್ ಬಳಕೆ

ನಮ್ಮ ದ್ವಿಚಕ್ರ ವಾಹನ ಸವಾರರು ಎಷ್ಟು ಬುದ್ಧಿವಂತರು ನೋಡಿ. ಸವಾರಿಯ ವೇಳೆಯಲ್ಲಿ ಮೊಬೈಲ್ ಫೋನ್ ಗಳನ್ನು ಹೆಲ್ಮೆಟ್ ನೊಳಗೆ ತುರುಕಿಸಿಕೊಂಡು ಮಾತನಾಡುತ್ತಿರುತ್ತಾರೆ. ಇಲ್ಲಿ ಮಹಿಳೆಯರೇನು ಕಮ್ಮಿಯೇನಲ್ಲ ಎಂಬುದು ಅಷ್ಟೇ ಮುಖ್ಯ ವಹಿಸುತ್ತದೆ. ಇನ್ನು ಹಲವರು ಹಿಯರ್ ಫೋನ್ ಲಗತ್ತಿಸಿಕೊಂಡು ಹಾಡು ಕೇಳುತ್ತಾ ಸಾಗುತ್ತಾರೆ. ಹಾಗಾಗಿ ನಿಮ್ಮ ಜೀವನವನ್ನೇ ಮೊಬೈಲ್ ಫೋನ್ ಡಿಸ್ಕನೆಕ್ಟ್ ಮಾಡುವ ಮೊದಲು ಇಂತಹ ಹವ್ಯಾಸ ಬಿಟ್ಟುಬಿಡುವುದು ಒಳಿತು.

Most Read:ಬೈಕ್ ತಪಾಸಣೆ ವೇಳೆ ಟ್ರಾಫಿಕ್ ಪೊಲೀಸರು ಮಾಡಿದ್ದೇನು ಗೊತ್ತಾ?

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

08. ಓವರ್ ಸ್ಪೀಡಿಂಗ್

ಉಳಿದ ವಾಹನಗಳಿಗೆ ಬಗ್ಗೆ ನಾವು ಗೌರವನೇ ಕೊಡಲ್ಲ. ಅಲ್ಲದೆ ಓವರ್ ಸ್ಪೀಡಿಂಗ್ ನಗರ ಸೇರಿದಂತೆ ಹಳ್ಳಿಗಳಲ್ಲೂ ಹೆಚ್ಚಾಗಿ ಕಂಡುಬರುತ್ತಿದೆ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

09. ವೀಲಿಂಗ್ ಚಾಲನಾ

ಪರವಾನಗಿ ಗಿಟ್ಟಿಸಿಕೊಳ್ಳದ ಮಕ್ಕಳು ನಡು ರಸ್ತೆಯಲ್ಲಿ ವೀಲಿಂಗ್ ಅಭ್ಯಾಸಿಸುತ್ತಾರೆ. ಮುಂದೆ ಏನೇ ದುರ್ಘಟನೆ ನಡೆದರೂ ಮಕ್ಕಳ ಪೋಷಕರು ಸಂಪೂರ್ಣ ಹೊಣೆಗಾರರಾಗಲಿ.

ಪಾಸ್‍‍ಪೋರ್ಟ್‍ಗೆ ಅರ್ಜಿ ಸಲ್ಲಿಸುತ್ತಿದ್ದೀರಾ ಹಾಗಿದ್ರೆ ಈ ಸ್ಟೋರಿ ಓದಿ..

10. ಅಕ್ರಮ ಬಿಡಿಭಾಗಗಳು

ತಮ್ಮ ವಾಹನ ಇತರರಿಗಿಂತ ವಿಭಿನ್ನವಾಗಿ ಗುರುತಿಸಬೇಕೆಂಬ ನಿಟ್ಟಿನಲ್ಲಿ ಕರ್ಕಷ ಶಬ್ದದ ಅಥವಾ ಅತಿ ಹೆಚ್ಚು ಶಬ್ದ ಮಾಲಿನ್ಯವನ್ನುಂಟು ಮಾಡುವ ಹಾರ್ನ್ ಗಳನ್ನು, ಎಕ್ಸಾಸ್ಟ್ ಗಳನ್ನು ಹಾಗೂ ಲೌಡ್ ಸ್ಪೀಕರುಗಳನ್ನು ಲಗತ್ತಿಸುತ್ತೇವೆ. ಇವೆಲ್ಲವೂ ಮತ್ತೊಬ್ಬರಿಗೆ ಕಿರಿಕಿರಿಯನ್ನುಂಟು ಮಾಡುತ್ತಿದೆ ಎಂಬುದನ್ನು ಮರೆಯದಿರಿ.

Most Read Articles

Kannada
English summary
92 passport applications put on hold over pending traffic fine..

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more