ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ದೇಶಿಯ ವಾಹನ ತಯಾಕರ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆಯು ನಾಲ್ಕನೇ ತಲೆಮಾರಿನ ರೆಕ್ಸಟಾನ್ ಎಸ್‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ.

By Rahul Ts

ಇತ್ತೀಚೆಗೆ ಮಾರುಕಟ್ಟೆಯಲ್ಲಿ ಎಸ್‍ಯುವಿ ಕಾರುಗಳ ಬೇಡಿಕೆಯು ಹೆಚ್ಚುತ್ತಿದ್ದು, ಈ ನಿಟ್ಟಿನಲ್ಲಿ ದೇಶಿಯ ವಾಹನ ತಯಾಕರ ಸಂಸ್ಥೆಯಾದ ಮಹಿಂದ್ರಾ ಸಂಸ್ಥೆಯು ನಾಲ್ಕನೇ ತಲೆಮಾರಿನ ರೆಕ್ಸಟಾನ್ ಎಸ್‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಹೀಗಾಗಿ ಹೊಸ ಕಾರು ಇದೇ ವರ್ಷದ ನಾಲ್ಕನೆ ತ್ರೈಮಾಸಿಕ ಅವಧಿಯಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಮೊದಲ ಬಾರಿಗೆ ಮಹಿಂದ್ರಾ ರೆಕ್ಸಟಾನ್ ಕಾರುಗಳು ದೆಹಲಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಪ್ರದರ್ಶನಗೊಳ್ಳುವ ಮೂಲಕ ಗ್ರಾಹಕರಲ್ಲಿ ಕುತೂಹಲವನ್ನು ಹುಟ್ಟುಹಾಕಿದ್ದು, ಮಹಿಂದ್ರಾ ಸಂಸ್ಥೆಯು ತನ್ನ ಯು321 ಹಾಗೂ ಹೊಸ ಎಕ್ಸ್‌ಯುವಿ500 ಕಾರುಗಳನ್ನು ಕೂಡಾ ಶೀಘ್ರದಲ್ಲೆ ಬಿಡುಗಡೆಗೊಳಿಸುವ ತವಕದಲ್ಲಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ನಾಲ್ಕನೇ ತಲೆಮಾರಿನ ರೆಕ್ಸಟಾನ್ ಕಾರುಗಳು ತಮ್ಮ ಹಿಂದಿನ ತಲೆಮಾರಿನ ಕಾರುಗಳಿಗಿಂತಲೂ ವಿನೂತನ ಮಹಿಂದ್ರಾ ಬ್ಯಾಡ್ಜಿಂಗ್, ಗ್ರಿಲ್ ಡಿಸೈನ್ ಮತ್ತು ಇನ್ನಿತರೆ ಗುರುತರ ಬದಲಾವಣೆಗಳನ್ನು ಹೊತ್ತು ಭಾರತದ ರಸ್ತೆಗಳಿಗೆ ತಕ್ಕಂತೆ ತಯಾರಿ ಮಾಡಲಾಗಿದೆಯಂತೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಮಹಿಂದ್ರಾ ರೆಕ್ಸಟಾನ್ ಕಾರುಗಳು 2.2 ಲೀಟರ್ ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 178-ಬಿಹೆಚ್‍ಪಿ ಹಾಗು 400-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 7-ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಇದಲ್ಲದೇ ಹೊಸ ರೆಕ್ಸಟಾನ್ ಕಾರುಗಳು ಟೂ ವೀಲ್ ಡ್ರೈವ್ ಮತ್ತು ಆಲ್ ವೀಲ್ ಡ್ರೈವ್ ಆಯ್ಕೆಗಳನ್ನು ಪಡೆದಿದ್ದು, ಏಳು ಸೀಟ್‍‍ಗಳನ್ನು ಮೂರು ಸಾಲುಗಳಲ್ಲಿ ಅಳವಡಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ರೆಕ್ಸಟಾನ್ ಎಸ್‍ಯುವಿ ಕಾರುಗಳು ಒಳಭಾಗದಲ್ಲಿ 8 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ರೆಕ್ಲೈನಿಂಗ್ ಸೀಟ್ಸ್, ಆಟೋಮ್ಯಾಟಿಕ್ ಕ್ಲೈಮೇಟ್ ಕಂಟ್ರೋಲ್, ಮತ್ತು ವಿದ್ಯುತ್ ಸನ್‍‍ರೂಫ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಪ್ರಯಾಣಿಕರ ಸುರಕ್ಷತೆಗಾಗಿ ಒಂಬತ್ತು ಏರ್‍‍ಬ್ಯಾಗ್‍‍ಗಳು, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್, ಬ್ಲೈಂಡ್ ಸ್ಪಾಟ್ ಡಿಟೆಕ್ಷನ್, ಲೇನ್ ಡಿಪಾರ್ಚರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಹೈ ಬೀಮ್ ಅಸ್ಸಿಸ್ಟ್ ಹಾಗೂ ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್ ಆಯ್ಕೆಗಳನ್ನು ಪಡೆದುಕೊಂಡಿರಲಿವೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಮಹೀಂದ್ರಾ ರೆಕ್ಸಟಾನ್ ಕಾರುಗಳು ಭಾರತಕ್ಕೆ CKD (ಸಂಪೂರ್ಣ ನಾಕ್ ಡೌನ್) ಘಟಕದ ಮೂಲಕ ಬರಲಿದ್ದು, ಕಾರಿನ ಭಾಗಗಳನ್ನು ಮಹೀಂದ್ರಾ ಸಂಸ್ಥೆಯ ಚಾಕನ್ ಕಾರು ಉತ್ಪಾದನಾ ಘಟಕದಲ್ಲಿ ಜೋಡಿಸಲಾಗುವುದು ಎನ್ನಲಾಗಿದೆ. ಹೀಗಾಗಿ ರೆಕ್ಸಟಾನ್ ಕಾರುಗಳು ಮಹಿಂದ್ರಾ ಸಂಸ್ಥೆಯ ಪ್ರೀಮಿಯಂ ಎಸ್‍ಯುವಿ ಕಾರಾಗಲಿದ್ದು, ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ಎಸ್‍ಯುವಿ ಕಾರುಗಳಲ್ಲಿ ಒಂದಾಗಲಿದೆ.

ಬಿಡುಗಡೆಗೆ ಸಿದ್ದವಾದ ಮಹೀಂದ್ರಾ ರೆಕ್ಸಟಾನ್‌ ಸ್ಪೆಷಲ್ ಏನು?

ಮಹಿಂದ್ರಾ ಸಂಸ್ಥೆಯು ಹೊಸ ರೆಕ್ಸಟಾನ್ ಕಾರುಗಳನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 22 ರಿಂದ 28 ಲಕ್ಷದ ವರೆಗು ಬೆಲೆಯನ್ನು ನಿಗದಿಪಡಿಸಬಹುದು ಎಂದು ಅಂದಾಜಿಸಲಾಗಿದ್ದು, ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್, ಮತ್ತು ಇಸುಜು ಎಮ್‍ಯು-ಎಕ್ಸ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on mahindra suv
English summary
Mahindra Rexton Launch Details Revealed; Expected Price, Specs And Features.
Story first published: Friday, April 13, 2018, 19:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X