ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಮಹೀಂದ್ರಾ ಸಂಸ್ಥೆಯು ತನ್ನ ಯಶಸ್ವಿ ಟಿಯುವಿ300 ಕಾರುಗಳನ್ನು ಮತ್ತಷ್ಟು ಹೊಸ ತಂತ್ರಜ್ಞಾನಗಳೊಂದಿಗೆ ಪರಿಚಯಿಸುತ್ತಿದ್ದು, ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕಲವಾಗುವಂತೆ ಲಗ್ಷುರಿ ಎಡಿಷನ್ ಕಿಟ್ ಬಳಕೆಮಾಡಲು ಮುಂದಾಗಿದೆ.

By Praveen Sannamani

ಎಸ್‌ಯುವಿ ಮಾದರಿಗಳಲ್ಲಿ ಉತ್ತಮ ಬೇಡಿಕೆ ಹೊಂದಿರುವ ಮಹೀಂದ್ರಾ ಸಂಸ್ಥೆಯು ತನ್ನ ಯಶಸ್ವಿ ಟಿಯುವಿ300 ಕಾರುಗಳನ್ನು ಮತ್ತಷ್ಟು ಹೊಸ ತಂತ್ರಜ್ಞಾನಗಳೊಂದಿಗೆ ಪರಿಚಯಿಸುತ್ತಿದ್ದು, ಆರಾಮದಾಯಕ ಪ್ರಯಾಣಕ್ಕೆ ಅನುಕೂಲಕಲವಾಗುವಂತೆ ಲಗ್ಷುರಿ ಎಡಿಷನ್ ಕಿಟ್ ಬಳಕೆಮಾಡಲು ಮುಂದಾಗಿದೆ.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಮಹೀಂದ್ರಾ ಸಂಸ್ಥೆಯು ಟಿಯುವಿ300 ಕಾರುಗಳಲ್ಲಿ ಲಗ್ಷುರಿ ಎಡಿಷನ್ ಕಿಟ್ ಒದಗಿಸುವ ಬಗ್ಗೆ ಅಧಿಕೃತ ವೆಬ್‌ಸೈಟ್‌ನಲ್ಲೇ ಮಾಹಿತಿ ನೀಡಿದ್ದು, ಟಿ8 ವೆರಿಯೆಂಟ್‌ಗಳಲ್ಲಿ ಮಾತ್ರ ಈ ವಿಶೇಷ ಸೌಲಭ್ಯಗಳು ದೊರೆಯಲಿವೆ. ಇದರಿಂದಾಗಿ ಎಸ್‌ಯುವಿ ಮಾದರಿಗಳಲ್ಲೇ ಅತ್ಯುತ್ತಮ ಆವೃತ್ತಿಯಾಗಲಿರುವ ಟಿಯುವಿ300 ಕಾರುಗಳು, ಮತ್ತಷ್ಟು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಮಹೀಂದ್ರಾ ನೀಡಿರುವ ಮಾಹಿತಿ ಪ್ರಕಾರ ಟಿಯುವಿ300 ಮಾದರಿಯಲ್ಲೇ ಟಿ8 ಸರಣಿ ಕಾರುಗಳಲ್ಲಿ ಮಾತ್ರ ಲಗ್ಷುರಿ ಕಿಟ್ ಬಳಕೆ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ ಫ್ಲಕ್ಸ್ ಲೆದರ್ ಸೀಟುಗಳು, ಲೆದರ್‌ನಿಂದ ಕವರ್ ಮಾಡಲಾದ ಸ್ಟ್ರೀರಿಂಗ್ ವೀಲ್ಹ್, 6.2-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ನೆವಿಗೆಷನ್ ಮತ್ತು ರಿವರ್ಸ್ ಕ್ಯಾಮೆರಾ ಸೌಲಭ್ಯವಿರಲಿದೆ.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಇದಲ್ಲದೇ ಟಿಯುವಿ300 ಟಿ8 ಕಾರುಗಳ ಓಆರ್‌ವಿಎಂ, ಲೋವರ್ ಫ್ರಂಟ್ ಗ್ರಿಲ್, ಡೋರ್ ಹ್ಯಾಂಡಲ್ ಮೇಲೆ ಕೋರ್ಮ್ ಗಾರ್ನಿಶ್ ಬಳಕೆ ಮಾಡಲಾಗಿದ್ದು, ಇದು ಕಾರಿನ ಖದರ್ ಬದಲಿಸಲಿದೆ. ಜೊತೆಗೆ ಕಡಿಮೆ ಬೆಲೆಗಳಲ್ಲಿ ಲಗ್ಷುರಿ ಫಿಚರ್ಸ್ ಕಾರುಗಳನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಇದೊಂದು ಉತ್ತಮ ಆಯ್ಕೆ ಎನ್ನಬಹುದು.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಇನ್ನು ಕಾರಿನಲ್ಲಿರುವ ಮಾಹಿತಿ ಅಂಶಗಳನ್ನು ಹೆಚ್ಚಿಸಲು ಜಿಪಿಎಸ್ ಬಳಕೆ ಮಾಡಿರುವ ಮಹೀಂದ್ರಾ ಸಂಸ್ಥೆಯು ಬ್ಯಾನೆಟ್ ಸ್ಟ್ರೀಪ್, ಟೈಲ್ ಲೈಟ್ ಕ್ಲಸ್ಟರ್, ಉತ್ಕೃಷ್ಟ ಗುಣಮಟ್ಟದ ಫ್ಲೋರ್ ಮ್ಯಾಟ್ ಒದಗಿಸಿರುವುದು ಕಾರಿನ ವೈಶಿಷ್ಟ್ಯತೆಯನ್ನೇ ಬದಲಿಸಿದೆ.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಎಂಜಿನ್ ವೈಶಿಷ್ಟ್ಯತೆ

ಲಗ್ಷುರಿ ಫೀಚರ್ಸ್ ಹೊರತು ಪಡಿಸಿ ಕಾರಿನ ಎಂಜಿನ್ ವಿಭಾಗದಲ್ಲಿ ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, 1.5-ಲೀಟರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಬಳಕೆ ಮಾಡಲಾಗಿದೆ. 5-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದಾಗಿದ್ದು, 100-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ಮೊಟ್ಟಮೊದಲ ಬಾರಿಗೆ ಡೀಸೆಲ್ ಕಾರು ಆವೃತ್ತಿಗಳಲ್ಲಿ ಎಟಿಎಂ ಸೌಲಭ್ಯ ಒದಗಿಸುವ ಆಟೋ ಉದ್ಯಮದಲ್ಲಿ ಹೊಸ ಸಂಚಲಕ್ಕೆ ಕಾರಣವಾಗಿದ್ದೆ ಮಹೀಂದ್ರಾ ಸಂಸ್ಥೆ. ಇದೀಗ ಟಾಟಾ ಮೋಟಾರ್ಸ್ ಕೂಡಾ ತನ್ನ ನೆಕ್ಸಾನ್ ಎಸ್‌ಯುವಿಗಳಲ್ಲೂ ಡೀಸೆಲ್ ಎಎಂಟಿಯನ್ನು ಪರಿಚಯಿಸಿರುವುದನ್ನು ನಾವು ಗಮನಿಸಬಹುದು.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಒಟ್ಟಿನಲ್ಲಿ ಎಸ್‌ಯುವಿ ಪ್ರಿಯರನ್ನು ತನ್ನತ್ತ ಸೆಳೆಯಲು ಟಿಯುವಿ300 ವೈಶಿಷ್ಟ್ಯತೆಯಲ್ಲಿ ಬದಲಾವಣೆ ತಂದಿರುವ ಮಹೀಂದ್ರಾ ಸಂಸ್ಥೆಯು ಮುಂಬರುವ ದಿನಗಳಲ್ಲಿ ಬೃಹತ್ ಪ್ರಮಾಣದ ಕಾರು ಮಾರಾಟ ದಾಖಲಿಸಲಿದ್ದು, ಆಸಕ್ತ ಗ್ರಾಹಕರು ಟಿಯುವಿ300 ಲಗ್ಷುರಿ ಎಡಿಷನ್ ಕಿಟ್ ಕುರಿತಾಗಿ ಮತ್ತಷ್ಟು ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಡೀಲರ್ಸ್‌ಗಳನ್ನು ಸಂಪರ್ಕಿಸಬಹುದಾಗಿದೆ.

ಲಗ್ಷುರಿ ವೈಶಿಷ್ಟ್ಯತೆಗಳನ್ನು ಹೊತ್ತು ಬರಲಿದೆ ಮಹೀಂದ್ರಾ ಟಿಯುವಿ300 ಎಸ್‌ಯುವಿ

ಆದ್ರೆ ಹೊಸ ಫೀಚರ್ಸ್ ಬಳಕೆ ಹಿನ್ನೆಲೆ ಕಾರಿನ ಬೆಲೆಯಲ್ಲಿ ಬದಲಾವಣೆ ಮಾಡುವ ಕುರಿತು ಮಾಹಿತಿ ಇಲ್ಲವಾದ್ರೂ ಲಗ್ಷುರಿ ವೈಶಿಷ್ಟ್ಯತೆ ಬಳಕೆಯಿಂದಾಗಿ ಕೊಂಚ ಮಟ್ಟಿಗೆ ಬೆಲೆ ಏರಿಕೆ ಕಂಡುಬರಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಬಿಡುಗಡೆಯಾಗಲಿರುವ ವಿನೂತನ 7 ಸೀಟರ್ ವ್ಯಾಗನರ್ ಬೆಲೆ ಎಷ್ಟು ಗೊತ್ತಾ?

ಟೈರ್ ಬಸ್ಟ್‌- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್

Article Published On: Saturday, May 5, 2018, 11:52 [IST]
English summary
Mahindra TUV300 Gets Luxury Edition Kits.
Read more on mahindra suv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+