ಟೈರ್ ಬಸ್ಟ್- ಲಾರಿಗೆ ಡಿಕ್ಕಿ ಹೊಡೆದ ಫೋರ್ಡ್ ಇಕೋ ಸ್ಪೋರ್ಟ್
ವೇಗವಾಗಿ ಚಲಿಸುತ್ತಿದ್ದ ಫೋರ್ಡ್ ಇಕೋ ಸ್ಪೋರ್ಟ್ ಕಾರೊಂದು ಟೈರ್ ಸ್ಪೋಟ ಆದ ಪರಿಣಾಮ ಲಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಸಾವಪ್ಪಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಬಳಿ ನಡೆದಿದೆ.
ವೇಗವಾಗಿ ಚಲಿಸುತ್ತಿದ್ದ ಫೋರ್ಡ್ ಇಕೋ ಸ್ಪೋರ್ಟ್ ಕಾರೊಂದು ಟೈರ್ ಸ್ಪೋಟ ಆದ ಪರಿಣಾಮ ಲಾರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿ ರಭಸಕ್ಕೆ ಕಾರಿನಲ್ಲಿ ನಾಲ್ವರು ಸ್ಥಳದಲ್ಲೇ ಸಾವಪ್ಪಿರುವ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ದಿಚ್ಚಪಲ್ಲಿಯಲ್ಲಿ ನಡೆದಿದೆ.

ಮದುವೆ ಸಂಭ್ರಮದಲ್ಲಿ ಭಾಗಿಯಾಗಿ ಹೈದ್ರಾಬಾದ್‌ನತ್ತ ವಾಪಸ್ ಆಗುತ್ತಿದ್ದಾಗ ಈ ಘಟನೆ ನಡಿದಿದ್ದು, ಇಕೋ ಸ್ಪೋರ್ಟ್ ಕಾರಿನಲ್ಲಿದ್ದ ಒಂದೇ ಕುಟುಂಬ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವೇಗದಲ್ಲಿದ್ದ ಇಕೋ ಸ್ಪೋರ್ಟ್ ಕಾರು ಟ್ರಕ್‌ಗೆ ಗುದ್ದಿದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿರುವುದಲ್ಲದೇ ಮೃತ ದೇಹಗಳು ಕೂಡಾ ಛಿದ್ರಗೊಂಡಿವೆ.

ಕಾರಿನಲ್ಲಿದ್ದ ಏರ್‌ಬ್ಯಾಗ್‌ಗಳು ಕಾರ್ಯನಿರ್ವಹಿಸಿದ್ದರೂ ಕೂಡಾ ಅಪಘಾತ ತೀವ್ರತೆ ಹೆಚ್ಚಿನ ಮಟ್ಟದಲ್ಲಿದ್ದ ಪರಿಣಾಮ ಎಂಜಿನ್ ಹೊರತು ಪಡಿಸಿದ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರು ಗುದ್ದಿದ ರಭಸಕ್ಕೆ ಲಾರಿ ಚಾಲಕನಿಗೂ ಕೂಡಾ ಗಂಭೀರ ಗಾಯಗಳಾಗಿವೆ.

ವರದಿಗಳ ಪ್ರಕಾರ, ಅತಿ ವೇಗದಲ್ಲಿದ್ದ ಇಕೋ ಸ್ಪೋರ್ಟ್ ಕಾರು ಟೈರ್ ಬಸ್ಟ್ ಆದ ನಂತರ ನಿಯಂತ್ರಣ ತಪ್ಪಿದ್ದು, ಅದೇ ರಸ್ತೆಯಲ್ಲಿ ಎದುರಿಗೆ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆಯಲಿದ್ದ ಇಕೋ ಸ್ಪೋರ್ಟ್ ಕಾರು ಕೂದಲು ಎಳೆಯಲ್ಲಿ ತಪ್ಪಿ ಅದರ ಹಿಂದೆಯೇ ಇದ್ದ ಲಾರಿ ಮುಂಭಾಗಕ್ಕೆ ವೇಗವಾಗಿ ಗುದ್ದಿದೆ.

ಕೂಡಲೇ ಸ್ಥಳದಲ್ಲಿದ್ದರು ಇಕೋ ಸ್ಪೋರ್ಟ್ ಕಾರಿನಲ್ಲಿ ಸಿಲುಕಿದವರನ್ನು ಹೊರ ಎಳೆಯಲು ಯತ್ನಸಿದರೂ ಕಾರು ಸಂಪೂರ್ಣ ಜಖಂ ಆಗಿದ್ದರಿಂದ ಮೃತದೇಹಗಳು ಛಿದ್ರಗೊಂಡಿದ್ದವು. ಸದ್ಯ ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿರುವ ನಿಜಾಮಾಬಾದ್ ಪೊಲೀಸರು ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳ ಪರಿಶೀಲನೆ ನಡೆಸಿದ್ದಾರೆ.
Source: Team BHP

ಹಾಗಾದ್ರೆ ಟೈರ್ ಬಸ್ಟ್ ತಡೆಯುವುದು ಹೇಗೆ?
ಇದೀಗ ಸುಡು ಬಿಸಿಲಿನ ಪ್ರಮಾಣ ಜೋರಾಗಿದೆ. ಈ ವೇಳೆ ಕಾರಿನ ತಾಂತ್ರಿಕ ಅಂಶಗಳ ಬಗ್ಗೆ ಎಚ್ಚರಿಕೆ ವಹಿಸದೇ ವಹಿಸದೇ ಹೊದ್ರೆ ಅಪಾಯ ತಪ್ಪಿದ್ದಲ್ಲ. ಇದರಲ್ಲಿ ಟೈರ್ ಬಸ್ಟ್ ಕೂಡಾ ಅಪಾಯಕಾರಿಯಾಗಿದ್ದು, ಭೀಕರ ಅನಾಹುತಕ್ಕೆ ಎಡೆಮಾಡಿಕೊಡುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಸಿಂಪಲ್ ಟಿಪ್ಸ್ ಅನುಸರಿಸಿ...

ಗುಣಮಟ್ಟದ ಟೈರ್‌ಗೆ ಆದ್ಯತೆ ನೀಡಿ
ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಟೈರ್‌ಗಳು ಖರೀದಿ ಲಭ್ಯವಿದ್ದು, ಉತ್ತಮ ಗುಣಮಟ್ಟದ ಟೈರ್ ಬಳಕೆಗೆ ಆದ್ಯತೆ ನೀಡಿ. ಕಡಿಮೆ ಬಜೆಟ್‌ನಲ್ಲಿ ಖರೀದಿಸಿದ ಟೈರ್‌ಗಳು ಕೆಲವೊಮ್ಮೆ ಒತ್ತಡದ ಪರಿಣಾಮ ಬಸ್ಟ್ ಆಗುವ ಸಾಧ್ಯತೆಗಳಿರುತ್ತವೆ.

ಧೀರ್ಘ ಕಾಲದ ಪ್ರಯಾಣ
ಬೇಸಿಗೆ ಅವಧಿಯಲ್ಲೇ ಹೆಚ್ಚಿನ ಮಟ್ಟದ ಟೈರ್ ಬಸ್ಟ್ ಅವಘಡ ಸಂಭವಿಸುತ್ತವೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಬೇಸಿಗೆ ಅವಧಿಯಲ್ಲಿ ದೂರದ ಪ್ರಯಾಣ ಮಾಡಲೇಬೇಕಾದ ಸಂದರ್ಭಗಳಲ್ಲಿ ಸುಡುಬಿಸಿಲಿನಲ್ಲಿ ಪ್ರಯಾಣಿಸುವ ಬದಲು ಬೆಳಗಿನ ಜಾವ ಮತ್ತು ಸಾಯಂಕಾಲದ ಇಳಿ ಬಿಸಿಲಿನಲ್ಲಿ ಸಂಚಾರ ಮಾಡಿ.

ಹೆಚ್ಚಿನ ವೇಗ ಬೇಡ
ಮೇಲೆ ಹೇಳಿದ ಹಾಗೆ, ಟೈರ್ ಬಸ್ಟ್‌ಗೆ ಸುಡು ಬಿಸಿಲು ಕೂಡಾ ಪ್ರಮುಖ ಕಾರಣವಾಗಿದ್ದು, ಬಿಸಿಲಿನ ಅವಧಿಯಲ್ಲಿ ಕಾರಿನ ವೇಗ ನಿಯಂತ್ರಣದಲ್ಲಿರಲಿ. ಯಾವುದೇ ಕಾರಣಕ್ಕೂ ಕಾರಿನ ವೇಗವನ್ನು 100ಕ್ಕಿಂತ ಹೆಚ್ಚು ದಾಟದಿರಲಿ.

ಟೈರ್ ಬದಲಾವಣೆ
ಎಲ್ಲದಕ್ಕೂ ಒಂದು ಮೀತಿ ಇದ್ದೇ ಇರುತ್ತೆ. ಹೀಗಾಗಿ ನಿಮ್ಮ ಕಾರಿನ ಟೈರ್‌ಗಳನ್ನು ನಿಯಮಿತವಾಗಿ ಬದಲಾಯಿಸುದು ಸೂಕ್ತ ಇಲ್ಲವಾದ್ರೆ ಸವಕಳಿ ಬಂದಿರುವ ಟೈರ್‌ಗಳು ಬಸ್ಟ್ ಆಗುವುದಲ್ಲದೇ ದುರಂತಕ್ಕೆ ಕಾರಣವಾಗುತ್ತವೆ.

ಕಾರಿನಲ್ಲಿ ಹೆಚ್ಚಿನ ಭಾರ ಬೇಡ
ಕೆಲವರು ಕಾರುಗಳನ್ನು ಕಾರುಗಳಂತೆ ಉಪಯೋಗಿಸದೇ ವಾಣಿಜ್ಯ ವಾಹನಗಳಂತೆ ಬಳಕೆ ಮಾಡುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಅದು ಟೈರ್ ಬಸ್ಟ್‌ಗೆ ಕಾರಣವಾಗುತ್ತದೆ ಎನ್ನುವುದನ್ನು ಮರೆಯಬಾರದು. ಅದಕ್ಕಾಗಿ ನಿಯಮಿತ ಪ್ರಮಾಣದಲ್ಲಿ ಲಗೇಜ್ ತುಂಬಿಕೊಳ್ಳಿ.

ಟೈರ್‌ಗಳಲ್ಲಿ ನೈಟ್ರೊಜೆನ್ ಬಳಕೆ
ಹೌದು, ಇದು ಕೂಡಾ ಟೈರ್ ಬಸ್ಟ್ ತಡೆಯಲು ಇದು ಮತ್ತೊಂದು ಸರಳ ಸೂತ್ರ. ಏರ್ ಬದಲಾಗಿ ನೈಟ್ರೊಜೆನ್ ಬಳಕೆ ಮಾಡಿದಲ್ಲಿ ಕಾರಿನ ವೇಗದ ಒತ್ತಡ ತಡೆಯುವಲ್ಲಿ ಸಹಕಾರಿಯಾಗುತ್ತವೆ ಎನ್ನುವುದು ಆಟೋ ತಂತ್ರಜ್ಞರ ಅಭಿಪ್ರಾಯವಾಗಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಮಗು ಮಾಡಿದ ಒಂದು ಸಣ್ಣ ತಪ್ಪಿನಿಂದಾಗಿ ಕಾರಿನಲ್ಲಿದ್ದ 7 ಮಂದಿ ದುರ್ಮರಣ....
ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು
ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....
ಒಂದು ಬಾರಿ ಚಾರ್ಜ್ ಮಾಡಿದ್ರೆ 1 ಸಾವಿರ ಕಿ.ಮೀ ಮೈಲೇಜ್ ನೀಡುತ್ತೆ ಈ ವಿನೂತನ ಎಲೆಕ್ಟ್ರಿಕ್ ಕಾರು...
ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?


Click it and Unblock the Notifications








