9 ಸೀಟರ್ ಟಿಯುವಿ300 ಪ್ಲಸ್ ಕಾರಿನ ಬೆಲೆ ಮಾಹಿತಿ ಬಹಿರಂಗ ಮಾಡಿದ ಮಹೀಂದ್ರಾ
ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ ಹಾಗೂ ತಾಂತ್ರಿಕ ಅಂಶಗಳ ಬಗೆಗೆ ಅಧಿಕೃತ ಮಾಹಿತಿಯನ್ನ ಬಹಿರಂಗಗೊಳಿಸಿದೆ.
ಎಸ್‌ಯುವಿ ಕಾರು ವಿಭಾಗದಲ್ಲಿ ಮುನ್ನಡೆ ಸಾಧಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸದ್ಯ ಟಿಯುವಿ300 ಪ್ಲಸ್ ಬಿಡುಗಡೆಗಾಗಿ ಎದುರು ನೋಡುತ್ತಿದ್ದು, ಈ ಮಧ್ಯೆ ಹೊಸ ಕಾರಿನ ಬೆಲೆ ಹಾಗೂ ತಾಂತ್ರಿಕ ಅಂಶಗಳ ಬಗೆಗೆ ಅಧಿಕೃತ ಮಾಹಿತಿಯನ್ನು ಬಹಿರಂಗಗೊಳಿಸಿದೆ.

ಎಸ್ಯುವಿ ಪ್ರಿಯರಿಗಾಗಿ ಐದು ಹೊಸ ಕಾರು ಮಾದರಿಗಳನ್ನು ಪರಿಚಯಿಸುವ ಬಗ್ಗೆ ಸುಳಿವು ನೀಡಿರುವ ಮಹೀಂದ್ರಾ ಸಂಸ್ಥೆಯು ಫೇಸ್‌ಲಿಫ್ಟ್ ಎಕ್ಸ್‌ಯುವಿ500 ಬಿಡುಗಡೆಯ ನಂತರ ಟಿಯುವಿ300 ಸರಣಿಯ ಮುಂದುವರಿದ ಭಾಗವನ್ನು ಬಿಡುಗಡೆ ಮಾಡುತ್ತಿದ್ದು, ವರದಿಗಳ ಪ್ರಕಾರ ಹೊಸ ಕಾರುಗಳು ಮುಂದಿನ ತಿಂಗಳು ಬಿಡುಗಡೆಯಾಗುವ ಸಾಧ್ಯತೆಗಳಿವೆ.

ಹೀಗಾಗಿ ಹೊಸ ಕಾರುಗಳನ್ನು ಅಧಿಕೃತ ಡೀಲರ್ಸ್ ಯಾರ್ಡ್‌ಗಳಲ್ಲಿ ಸ್ಟಾಕ್ ಕೂಡಾ ಮಾಡಲಾಗುತ್ತಿದ್ದು, ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಹೊಸ ಕಾರುಗಳ ವಿನ್ಯಾಸದಲ್ಲಿ ಈ ಹಿಂದಿನ ಟಿಯುವಿ300 ವೈಶಿಷ್ಟ್ಯತೆಗಳನ್ನೇ ಮುಂದುವರಿಸಲಾಗಿದೆ.

ಜೊತೆಗೆ ಪ್ರಸ್ತುತ ಮಾರುಕಟ್ಟೆಯಲ್ಲಿ ಟಿಯುವಿ300 ಮಾದರಿಗಿಂತ ಪ್ಲಸ್ ಆವೃತ್ತಿಯು ಅತಿ ಹೆಚ್ಚು ಆಕರ್ಷಣೆ ಪಡೆದುಕೊಂಡಿದ್ದು, ಕ್ಯಾಬಿನ್ ಭಾಗ ಮತ್ತು ಕಾರಿನ ಎಡ್ಜ್‌ಗಳಲ್ಲಿ ವಿಶೇಷ ವಿನ್ಯಾಸವನ್ನು ಕೈಗೊಂಡಿರುವುದು ಹೊಸ ಕಾರಿನ ಹೊರ ನೋಟಕ್ಕೆ ಮೆರಗು ತಂದಿದೆ.

ಇನ್ನು ಹೆಚ್ಚುವರಿಯಾಗಿ ಟಿಯುವಿ300 ಪ್ಲಸ್ ಮಾದರಿಯಲ್ಲಿ ಆಟೋಮೆಟಿಕ್ ಕ್ಲೈಮೆಟ್ ಕಂಟ್ರೊಲರ್, ಹಿಂಭಾಗದ ಕ್ಯಾಬಿನ್‌ನಲ್ಲೂ ಎಸಿ ವ್ಯವಸ್ಥೆ ಸೇರಿದಂತೆ ಸುಧಾರಿತ ಸುರಕ್ಷಾ ವೈಶಿಷ್ಟ್ಯತೆಗಳನ್ನು ಒದಗಿಸಲಾಗಿದ್ದು, ಚಾಲಕ ಸೇರಿ ಒಟ್ಟು 9 ಜನ ಆರಾಮವಾಗಿ ಪ್ರಯಾಣ ಮಾಡಬಹುದಾಗಿದೆ.

ಎಂಜಿನ್ ಸಾಮರ್ಥ್ಯ
ಈ ಹಿಂದಿನ ಮಾದರಿಯಂತೆ ಟಿಯುವಿ300 ಪ್ಲಸ್ ಮಾದರಿಯು 1.99-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 2.2-ಲೀಟರ್ ಡೀಸೆಲ್ ಎಂಜಿನ್‌ನೊಂದಿಗೆ 119-ಬಿಎಚ್‌ಪಿ ಉತ್ಪಾದಿಸಬಲ್ಲ ಗುಣಹೊಂದಿದೆ.

ಕಾರಿನ ಬೆಲೆಗಳು
ಹೊಸ ಕಾರಿನ ಬೆಲೆಗಳ ಕುರಿತಾದ ಕೈಪಿಡಿಯೊಂದು ದೊರೆತಿದ್ದು, ಟಿಯುವಿ300 ಪ್ಲಸ್ ಬೆಲೆಯನ್ನು ರೂ.9.69 ಲಕ್ಷಕ್ಕೆ ನಿಗದಿ ಮಾಡುವ ಮೂಲಕ ಇನ್ಸುರೆನ್ಸ್ ಮತ್ತು ಲೈಫ್ ಟ್ಯಾಕ್ಸ್, ರಿಜಿಸ್ಟೇಷನ್ ಸೇರಿ ಆನ್ ರೋಡ್ ಬೆಲೆಯನ್ನು ರೂ.11.15 ಲಕ್ಷಕ್ಕೆ ಮಾರಾಟ ಮಾಡಲಿದೆ ಎಂಬ ಮಾಹಿತಿ ದೊರೆತಿದೆ.

ಇದರಿಂದಾಗಿ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರಮುಖ ಎಸ್‌ಯುವಿಗಳಿಗೆ ಪೈಪೋಟಿ ನೀಡಲಿರುವ ಟಿಯುವಿ300 ಪ್ಲಸ್ ಆವೃತ್ತಿಯು 2018ರ 2ನೇ ತ್ರೈಮಾಸಿಕ ಅಂತ್ಯಕ್ಕೆ ಖರೀದಿಗೆ ಲಭ್ಯವಾಗುವ ನೀರಿಕ್ಷೆಯಿದೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ಎಕ್ಸ್‌ಯುವಿ500 ಫೇಸ್‌ಲಿಫ್ಟ್ ಬಿಡುಗಡೆ ನಂತರ ಹೊಸ ಎಂಪಿವಿ ಒಂದನ್ನು ಬಿಡುಗಡೆ ಮಾಡುವ ತವಕದಲ್ಲಿರುವ ಮಹೀಂದ್ರಾ ಸಂಸ್ಥೆಯು ಟಿಯುವಿ300 ಪ್ಲಸ್ ಪರಿಚಯಿಸುತ್ತಿದ್ದು, ಹೊಸ ಕಾರಿನ ಬಿಡುಗಡೆಯ ಮತ್ತಷ್ಟು ಮಾಹಿತಿಯು ನಿಮ್ಮ ಡ್ರೈವ್ ಸ್ಪಾರ್ಕ್ ಒದಗಿಸಲಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್
ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?
5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..
ಸಿಗ್ನಲ್ ಜಂಪ್ ವೇಳೆ ಎಡವಟ್ಟು- ಲಾರಿ ಗುದ್ದಿದ ರಭಸಕ್ಕೆ ಜಖಂಗೊಂಡ ರೇಂಜ್ ರೋವರ್...
ಡ್ರೈವಿಂಗ್ ಲೈಸೆನ್ಸ್ ವಿಚಾರದಲ್ಲಿ ಯುವ ಸಮುದಾಯಕ್ಕೊಂದು ಸಿಹಿ ಸುದ್ದಿ...


Click it and Unblock the Notifications








