ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಯಾವುದೇ ಒಂದು ಉದ್ಯಮವನ್ನು ನಡೆಸುವಾಗ ಅಲ್ಲಿ ಲಾಭಾಂಶವೇ ಪ್ರಮುಖವಾಗಿರುತ್ತೆ. ಹೀಗಿರುವಾಗ ದೇಶದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾದ ಬಜಾಜ್ ನಡೆ ಅಚ್ಚರಿ ತರಿಸದೇ ಇರಲಾರದು.

By Praveen Sannamani

ಯಾವುದೇ ಒಂದು ಉದ್ಯಮವನ್ನು ನಡೆಸುವಾಗ ಅಲ್ಲಿ ಲಾಭಾಂಶವೇ ಪ್ರಮುಖವಾಗಿರುತ್ತೆ. ಹೀಗಿರುವಾಗ ದೇಶದ ಪ್ರತಿಷ್ಠಿತ ಬೈಕ್ ಉತ್ಪಾದನಾ ಸಂಸ್ಥೆಯಾದ ಬಜಾಜ್ ನಡೆ ಅಚ್ಚರಿ ತರಿಸದೇ ಇರಲಾರದು. ಯಾಕೆಂದ್ರೆ ಅಗ್ಗ ಬೆಲೆಯ ಸಿಟಿ 100 ಬೈಕ್‌ ಮಾರಾಟದಲ್ಲಿ ನಷ್ಟ ಅನುಭವಿಸುತ್ತಿದ್ದರೂ ಕಡಿಮೆ ಬೆಲೆಗಳಲ್ಲಿ ಉತ್ತಮ ಬೈಕ್ ಮಾರಾಟ ಮಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆ ಲಭ್ಯವಿರುವ ಏಕೈಕ ಬೈಕ್ ಮಾದರಿ ಅಂದ್ರೆ ಅದು ಬಜಾಜ್ ಸಿಟಿ 100 ಅಂದ್ರೆ ತಪ್ಪಾಗುವುದಿಲ್ಲ. ಟಿವಿಎಸ್ ಎಕ್ಸ್ಎಲ್‌ಗಿಂತಲೂ ಕಡಿಮೆ ದರದಲ್ಲಿ ಮಾರಾಟವಾಗುತ್ತಿರುವ ಸಿಟಿ 100 ಹಲವು ವಿಶೇಷತೆಗಳಿಗೆ ಕಾರಣವಾಗಿದ್ದರೂ ಈ ಬೈಕಿನ ಮಾರಾಟದಲ್ಲಿ ಬಜಾಜ್ ಸಂಸ್ಥೆಗೆ ಒಂದೇ ಒಂದೂ ರೂಪಾಯಿ ಕೂಡಾ ಲಾಭ ಇಲ್ಲ ಅಂದ್ರೆ ನೀವು ನಂಬಲೇಬೇಕು.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಗ್ರಾಮೀಣ ಭಾಗದ ಗ್ರಾಹಕರನ್ನು ಸೆಳೆಯುವ ಒಂದೇ ಒಂದು ಉದ್ದೇಶದಿಂದ ಸಿಟಿ 100 ಬೈಕ್‌ಗಳನ್ನು ಆರಂಭಿಕವಾಗಿ ರೂ. 30 ಸಾವಿರಕ್ಕೆ ಮಾರಾಟ ಮಾಡುತ್ತಿದ್ದು, ಹೀರೋ ಜನಪ್ರಿಯ ಬೈಕ್‌ಗಳಾದ ಎಚ್ಎಫ್ ಡಾನ್ ಮತ್ತು ಸ್ಪ್ಲೆಂಡರ್ ಬೈಕ್‌ಗಳ ಮಾರಾಟಕ್ಕೆ ತೀವ್ರ ಪೈಪೋಟಿ ನೀಡುತ್ತಿದೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಸದ್ಯ ಗ್ರಾಮೀಣ ಪ್ರದೇಶಗಳಲ್ಲಿ ಶೇ.70 ರಷ್ಟು ಮಾರಾಟ ಪ್ರಮಾಣವನ್ನು ತನ್ನದಾಗಿಸಿಕೊಂಡಿರುವ0 ಹೀರೋ ಮೋಟಾರ್‌ಕಾರ್ಪ್ ಸಂಸ್ಥೆಗೆ ಪೈಪೋಟಿ ನೀಡಲು ಸಿಟಿ 100 ಬೈಕ್‌ಗಳನ್ನು ಬಳಸಿಕೊಳ್ಳುತ್ತಿರುವ ಬಜಾಜ್ ಸಂಸ್ಥೆಯು ಎಷ್ಟು ಸಾಧ್ಯವೋ ಅಷ್ಟು ಕಡಿಮೆ ದರಗಳಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಇದೇ ಕಾರಣಕ್ಕೆ ಸೇಕೆಂಡ್ ಹ್ಯಾಂಡ್ ಬೈಕ್ ಬೆಲೆಗಳಿಂತಲೂ ಕಡಿಮೆ ದರದಲ್ಲಿ ಸಿಟಿ 100 ಬೈಕ್‌ಗಳನ್ನು ಮಾರಾಟ ಮಾಡುತ್ತಿರುವ ಬಜಾಜ್ ಸಂಸ್ಥೆಯು ಸಿಟಿ 100 ಕಿಕ್ ಸ್ಟಾರ್ಟ್ ಆವೃತ್ತಿಯನ್ನು ರೂ.30,714ಕ್ಕೆ ಮತ್ತು ಸೆಲ್ಪ್ ಸ್ಟಾರ್ಟ್ ಮತ್ತು ಅಲಾಯ್ ಚಕ್ರಗಳ ಆವೃತ್ತಿಯನ್ನು ರೂ.39,885ಕ್ಕೆ ಮಾರಾಟ ಮಾಡುತ್ತಿದೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಆದ್ರೆ ಸಿಟಿ 100 ಮಾರಾಟದೊಂದಿಗೆ ಇತರೆ ಉನ್ನತ ಮಾದರಿಯ ಬೈಕ್‌ಗಳ ಮಾರಾಟವನ್ನು ಹೆಚ್ಚಿಸುತ್ತಿರುವ ಬಜಾಜ್ ಸಂಸ್ಥೆಯು ಪ್ಲಾಟಿನಾ ಕಾಮ್‌ಫಾರ್‌ಟೆಕ್, ಪಲ್ಸರ್ ಸರಣಿ ಬೈಕ್‌ಗಳು, ಡೋಮಿನಾರ್, ಅವೆಂಜರ್ ಬೈಕ್ ಮಾರಾಟದಲ್ಲಿ ಭಾರೀ ಪ್ರಮಾಣದ ಲಾಭಂಶ ಕಂಡುಕೊಳ್ಳುತ್ತಿದೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಇದರೊಂದಿಗೆ ಹೀರೋ ಮೋಟೋಕಾರ್ಪ್ ಬೈಕ್‌ಗಳ ಮಾರಾಟ ಸಂಖ್ಯೆಯನ್ನು ಸರಿಗಟ್ಟಲು ಸಿಟಿ 100 ಬೈಕ್‌ಗಳು ಬಜಾಜ್ ಸಂಸ್ಥೆಗೆ ಸಹಕಾರಿಯಾಗಿದ್ದು, ಇದೇ ಕಾರಣ ಸಿಟಿ 100 ಬೈಕ್ ಮಾರಾಟದಲ್ಲಿನ ಲಾಭಾಂಶಗಳ ಬಗೆಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಇನ್ನು ನೂತನ ತಂತ್ರಜ್ಞಾನಗಳನ್ನು ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳನ್ನು ಭಾರತದಲ್ಲಿ ಕಳೆದ ತಿಂಗಳ ಹಿಂದಷ್ಟೇ ಬಿಡುಗಡೆಗೊಂಡಿದ್ದು, ಆರಂಭಿಕ ಬೆಲೆಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.30,714ಕ್ಕೆ ಮತ್ತು ಟಾಪ್ ಮಾದರಿಯು ರೂ.39,885ಕ್ಕೆ ಖರೀದಿಗೆ ಲಭ್ಯವಿವೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಹೊಸ ನಮೂನೆಯ ಗುರುತರ ವಿನ್ಯಾಸಗಳೊಂದಿಗೆ ಸಿದ್ಧಗೊಂಡಿರುವ ಸಿಟಿ 100 ಬೈಕ್‌ಗಳು ಒಟ್ಟು 3 ವಿವಿಧ ನಮೂನೆಗಳಲ್ಲಿ ಬಿಡುಗಡೆಗೊಂಡಿದ್ದು, ಹೊಸ ಮಾದರಿಗಳಲ್ಲಿ ಬಿಎಸ್-4 ಸೇರಿದಂತೆ ಎಎಚ್‍‌ಎ ಸೌಲಭ್ಯಗಳನ್ನು ಒದಗಿಸಿರುವ ಗುರುತರ ಬದಲಾವಣೆ ಎನ್ನಬಹುದು.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಸಿಟಿ100 ಸರಣಿಗಳು 99.27 ಸಿಸಿ ಸಿಂಗಲ್ ಸಿಲಿಂಡರ್ ಸಾಮರ್ಥ್ಯ ಹೊಂದಿದ್ದು, 8.1-ಬಿಎಚ್‌ಪಿ ಮತ್ತು 8.05-ಎಂಎನ್ ಉತ್ಪಾದನಾ ಶಕ್ತಿ ಹೊಂದಿರಲಿವೆ. ಈ ಮೂಲಕ ಮೈಲೇಜ್ ವಿಚಾರದಲ್ಲೂ ಇತರೆ ಬೈಕುಗಳಿಗೆ ಪ್ರತಿಸ್ಪರ್ಧಿಯಾಗಿರಲಿವೆ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಜೊತೆಗೆ 10.5-ಲೀಟರ್ ಪ್ಯೂಲ್ ಟ್ಯಾಂಕ್ ಹಾಗೂ ಎಎಚ್‌ಒ (ಆಟೋಮೆಟಿಕ್ ಹೆಡ್‌ಲ್ಯಾಂಪ್ ಆನ್) ವ್ಯವಸ್ಥೆಯಿದೆ. ಜೊತೆಗೆ ಬೈಕಿನ ಟೈರುಗಳು 3-ಇಂಚಿನಷ್ಟು ಅಗಲ ಹೊಂದಿದ್ದು, ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿರುವುದು ಬೈಕ್ ಆಯ್ಕೆಗೆ ಪ್ಲಸ್ ಪಾಯಿಂಟ್.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಹೊಚ್ಚ ಹೊಸ ಮಾದರಿಗಳಲ್ಲಿ 4-ಸ್ಪೀಡ್ ಗೇರ್‌‌ಬಾಕ್ಸ್ ವ್ಯವಸ್ಥೆಯಿದ್ದು, ಗರಿಷ್ಠ ಪ್ರಮಾಣದಲ್ಲಿ ಪ್ರತಿಗಂಟೆಗೆ 90 ಕಿಮಿ ವೇಗ ಪಡೆದುಕೊಳ್ಳುವ ಶಕ್ತಿ ಪಡೆದುಕೊಂಡಿದ್ದು, 108-ಕೆ.ಜಿ ತೂಕ ಹೊಂದಿರುವ ಬಜಾಜ್ ಸಿಟಿ 100 ಮಾದರಿಗಳು, ಹೊಸ ವಿನ್ಯಾಸದಿಂದಾಗಿ ಗ್ರಾಹಕರನ್ನು ಸೆಳೆಯುದರಲ್ಲಿ ಯಾವುದೇ ಅನುಮಾನವಿಲ್ಲ.

ಲಾಭ ಇಲ್ಲದೇ ಇದ್ರು ಸಿಟಿ 100 ಬೈಕ್ ಅನ್ನು ಬಜಾಜ್ ಮಾರಾಟ ಮಾಡ್ತಾ ಇರೋದ್ಯಾಕೆ ಗೊತ್ತಾ?

ಹೊಸ ಬೈಕ್‌ಗಳಲ್ಲಿ ಟೆಲಿಸ್ಕೋಪಿಕ್ ಫ್ರೋಕ್ಸ್ ಹಾಗೂ ಎಸ್ಎನ್ಎಸ್ ಅಳವಡಿಕೆಯಿದ್ದು, 110-ಎಂಎಂ ಡ್ರಮ್ ಬ್ರೇಕ್ ವ್ಯವಸ್ಥೆಯಿದೆ. ಜೊತೆಗೆ ಬಜಾಜ್ ಸಿಟಿ ಉನ್ನತ ಮಟ್ಟದ ಮಾದರಿಯಲ್ಲಿ ಅಲಾಯ್ ವೀಲ್ಹ್ ಪಡೆದುಕೊಂಡಿದೆ.

More from DriveSpark

Article Published On: Wednesday, May 23, 2018, 19:49 [IST]
English summary
Bajaj CT100 Being Sold For A Loss.
Read more on ಬಜಾಜ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+