5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಪ್ರತಿ ವಾರ ಮಾರುಕಟ್ಟೆಗೆ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್, ಕಾಂಪ್ಯಾಕ್ಟ್ ಸೆಡಾನ್ ಮತ್ತು ಮಿನಿ ಎಸ್‍‍ಯುವಿ ಬಿಡುಗಡೆಗೊಳ್ಳುತ್ತಿದೆ.

By Rahul Ts

ಪ್ರತಿ ವಾರ ಮಾರುಕಟ್ಟೆಗೆ ಎಂಟ್ರಿ ಲೆವೆಲ್ ಹ್ಯಾಚ್‍ಬ್ಯಾಕ್, ಕಾಂಪ್ಯಾಕ್ಟ್ ಸೆಡಾನ್ ಮತ್ತು ಮಿನಿ ಎಸ್‍‍ಯುವಿ ಬಿಡುಗಡೆಗೊಳ್ಳುತ್ತಿದ್ದು, ಗ್ರಾಹಕರಲ್ಲಿ ಖರೀದಿಗೆ ಯಾವುದು ಉತ್ತಮ ಮತ್ತು ಯಾವ ಕಾರನ್ನು ಕೊಂಡರೆ ಹೆಚ್ಚು ಸೌಲಭ್ಯವನ್ನು ನೀಡುತ್ತವೆ ಎಂಬ ಗೊಂದಲಕ್ಕೆ ಸಿಲುಕಿದ್ದಾರೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಈ ನಿಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರುವ 5 ಲಕ್ಷದೊಳಗೆ ಖರೀದಿ ಮಾಡಬಹುದಾದ ಟಾಪ್ 10 ಕಾರುಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಇಗ್ನಿಸ್

ದೇಶಿಯಾ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ತಮ್ಮ ಜನಪ್ರಿಯ ಇಗ್ನಿಸ್ ಕಾರುಗಳನ್ನು ಪರಿಚಯಿಸಿತ್ತು. ಬಿಡುಗಡೆಗೊಂಡ ಹೊಸತರಲ್ಲಿ ಈ ಕಾರು ಯುವ ಸಮುದಾಯವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇನ್ನು ಈ ಕಾರು ಸಿಫ್ಟ್ ಮತ್ತು ಡಿಜೈರ್ ಕಾರುಗಳಲ್ಲಿ ಬಳಸಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದ್ದು, 81ಬಿಹೆಚ್‍‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಪ್ರತೀ ಲೀಟರ್‍‍ಗೆ 20.89 ಕಿಲೋಮೀಟರ್ ಮೈಲೇಜ್ ನೀಡಿವ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಏಸಿ, ಸೆಂಟ್ರಲ್ ಲಾಕಿಂಗ್, ಆಂಟಿ ಥೆಫ್ಟ್ ಸಿಸ್ಟಂ ಮತ್ತು ಫ್ರಂಟ್ ಪವರ್ ವಿಂಡೌಸ್, ಅನ್ನು ಪಡೆದಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‍‍ಬ್ಯಾಗ್ಸ್, ಎಬಿಎಸ್ ಮತ್ತು ಇಬಿಡಿಯನ್ನು ಅಳವಡಿಸಲಾಗಿದೆ.

ಪ್ರಾರಂಭಿಕ ಬೆಲೆ : ರೂ 4.66 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಟಾಟಾ ಟಿಗೊರ್/ಟಿಯಾಗೊ

ಹೆಚ್ಚು ಬಾಳಿಕೆ ಮತ್ತು ಉತ್ತಮ ವಿನ್ಯಾಸದಿಂದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಟಾಟಾ ಮೋಟಾರ್ಸ್‍‍ನ ಟಿಯಾಗೊ ಕಾರುಗಳು 5 ಲಕ್ಷದೊಳಗೆ 13 ವೇರಿಯಂಟ್‍‍ಗಳನ್ನು ಮಾರಾಟಮಾಡುತ್ತಿವೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳು ರೂ 3.26 ಲಕ್ಷದೊಂದಿಗೆ ಪ್ರಾರಂಭಿಕ ಬೆಲಯನ್ನು ಪಡೆದುಕೊಂಡಿದ್ದು, ಸೆಡಾನ್ ಆವೃತ್ತಿಯ ಟಿಗೋರ್ ಕಾರುಗಳು ರೂ 4.84 ಲಕ್ಷದೊಂದಿಗೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಟಿಗೋರ್ ಕಾರಿನಲ್ಲಿರುವ 1.5 ಲೀಟರ್ ಡೀಸೆಲ್ ಎಂಜಿನ್‍‍ಗಳು 1,199ಸಿಸಿ, 84ಬಿಹೆಚ್‍‍ಪಿ ಮತ್ತು 69ಬಿಹೆಚ್‍‍ಪಿ ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎರಡು ಎಂಜಿನ್‍‍ಗಳನ್ನು 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಇನ್ನು ಕಾರುಗಳ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಟಾಟಾ ಸಂಸ್ಥೆಯ ಕನೆಕ್ಟ್ ನೆಕ್ಸ್ಟ್ ಇನ್ಫೋಟೈನ್ಮೆಂಟ್ ಸಿಸ್ಟಂ, ಮ್ಯಾನುವರ್ ಏರ್ ಕಂಡೀಶನರ್, ಸ್ಟೀರಿಂಗ್ ಮೌಂಟೆಡ್ ಆಡಿಯೊ ಕಂಟ್ರೋಲ್, ಡ್ರೈವರ್ ಮತ್ತು ಪ್ಯಾಸೆಂಜರ್ ಏರ್‍‍ಬ್ಯಾಗ್ಸ್, ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಇಎಸ್‍‍ಪಿ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಟಾಟಾ ಟಿಯಾಗೊ (ಪ್ರಾರಂಭಿಕ ಬೆಲೆ) : ರೂ 3.26 ಲಕ್ಷ

ಟಾಟಾ ಟೊಗೊರ್ (ಪ್ರಾರಂಭಿಕ ಬೆಲೆ) : ರೂ 4.71 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ರೆನಾಲ್ಟ್ ಕ್ವಿಡ್

ಎಂಟ್ರಿ ಲೆವೆಲ್ ಕಾರುಗಳ ಸರಣಿಯಲ್ಲಿ ಬಿಡುಗಡೆಗೊಂಡು ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯುತ್ತಿರುವ ರೆನಾಲ್ಟ್ ಕ್ವಿಡ್ ಕಾರು, ಈಗಲು ಕೂಡಾ ಹಲವಾರು ಮಧ್ಯಮ ವರ್ಗದವರ ಮನಗೆದ್ದಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.66 ಲಕ್ಷಕ್ಕೆ ಆರಂಭಿಕ ಬೆಲೆ ಪಡೆದುಕೊಂಡಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಇನ್ನು ರೆನಾಲ್ಟ್ ಕ್ವಿಡ್ ಕಾರಿನ ಎಂಜಿನ್ ಬಗ್ಗೆ ಹೇಳುವುದಾದರೆ 799ಸಿಸಿ 4 ವೇಲ್ವ್ ಡಿಒಹೆಚ್‍ಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 53ಬಿಹೆಚ್‍ಪಿ ಮತ್ತು 72ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ರೆನಾಲ್ಟ್ ಕ್ವಿಡ್ (ಪ್ರಾರಂಭಿಕ ಬೆಲೆ) : ರೂ 2.66 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಆಲ್ಟೊ 800

ಮಾರುತಿ ಸುಜುಕಿ ಆಲ್ಟೊ 800 ತನ್ನ ಸುಪೀರಿಯರ್ ಬಿಲ್ಡ್ ಕ್ವಾಲಿಟಿಯಿಂದ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆದು ಹೆಚ್ಚು ಮಾರಾಟಗೊಂಡ ಕಾರು ಎಂಬ ಹೆಸರಿಗೆ ಈ ಕಾರು ಪಾತ್ರವಾಗಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.5 ಲಕ್ಷಕ್ಕೆ ಆರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಇನ್ನು ಮಾರುತಿ ಸುಜುಕಿ ಆಲ್ಟೊ 800 ಕಾರಿನ ಎಂಜಿನ್ ವಿಚಾರದ ಬಗ್ಗೆ ಹೇಳುವುದಾದರೇ 799ಸಿಸಿ ಪೆಟ್ರೋಲ್ ಎಂಜಿನ್ ಸಹಾಯದಿಂದ 48 ಬಿಹೆಚ್‍ಪಿ ಮತ್ತು 69ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸುಜುಕಿ ಆಲ್ಟೊ 800 (ಪ್ರಾರಂಭಿಕ ಬೆಲೆ) : ರೂ 2.51 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಾರುತಿ ಸೆಲೆರಿಯೊ/ಸೆಲೆರಿಯೊ ಎಕ್ಸ್

ಕೈಗಟ್ಟುವ ಧರದಲ್ಲಿ ಮಾರುತಿ ಸುಜುಕಿಂ ಸಂಸ್ಥೆಯು ಬಿಡುಗಡೆಗೊಳಿಸಿದ್ದ ಕಾರುಗಳಲಿ ಸೆಲೆರಿಯೊ ಕೂಡ ಇದ್ದು, ಇದೀಗ ಸೆಲೆರಿಯೊ ಕಾರು ಎಎಮ್‍‍ಟಿ ಮಾದರಿಗಳಾಲ್ಲಿಯೂ ಕೂಡ ಖರೀದಿಗೆ ಲಭ್ಯವಿದೆ. ಸೆಲೆರೊಯೊ ಕಾರುಗಳು 12 ವೇರಿಯಂಟ್‍‍ಗಳಲ್ಲಿ ಲಭ್ಯವಿದ್ದು ಇದರಲ್ಲಿ ಅರ್ಧಭಾಗದ ವೇರಿಯಂಟ್‍‍ಗಳು ರೂ 5 ಲಕ್ಷದೊಳಗೆ ದೊರೆಯುತ್ತವೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಸೆಲೆರಿಯೊ ಸ್ಪೋರ್ಟ್ಸ್ ಕಾರುಗಳು ಒಆರ್‍‍ವಿಎಮ್, ಬ್ಲೂಟೂತ್‍‍ನೊಂದಿಗೆ ಆಡಿಯೊ ಸಿಸ್ಟಂ, ಆಕ್ಸ್-ಇನ್, ಯುಎಸ್‍ಬಿ ಕನೆಕ್ಟಿವಿಟಿ, ಡ್ರೈವರ್ ಸೈಡ್ ಫ್ರಂಟ್ ಏರ್‍‍ಬ್ಯಾಗ್ ಮತ್ತು 165ಎಮ್ಎಮ್ ಗ್ರೌಂಡ್ ಕ್ಲಿಯರೆನ್ಸ್ ಅನ್ನು ಪಡೆದಿದ್ದು, ಕೆ10ಬಿ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡಿದಿದೆ.

ಮಾರುತಿ ಸೆಲೆರಿಯೊ/ಸೆಲೆರಿಯೊ ಎಕ್ಸ್ (ಪ್ರಾರಂಭಿಕ ಬೆಲೆ) : ರೂ 4.20 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಗ್ರ್ಯಾಂಡ್ ಐ10

ಕೊರಿಯನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಗ್ರ್ಯಾಂಡ್ ಐ10 ಕಾರನ್ನು ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 4.70 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ. ಇನ್ನು ಕಾರಿನಲ್ಲಿ ಪವರ್ ಸ್ಟೀರಿಂಗ್, ಫ್ರಂಟ್ ಪವರ್ ವಿಂಡೊಸ್, ಡ್ರವಿರ್ ಸೈಡ್ ಫ್ರಂಟ್ ಏರ್‍‍ಬ್ಯಾಗ್, ಆಂಟಿ ಥೆಫ್ಟ್ ಸಿಸ್ಟಂ ಡ್ಯುಯಲ್ ಟೋನ್ ಬೈಗ್ ಮತ್ತು ಒಳಭಾಗವನ್ನು ಕಪ್ಪು ಬಣ್ಣದಿಂದ ಸಜ್ಜುಗೊಂಡಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹ್ಯುಂಡೈ ಗ್ರ್ಯಾಂಡ್ ಐ10 ಕಾರುಗಳು 1.2 ಲೀಟರ್ ಕಪ್ಪ ವಿಟಿವಿಟಿ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ ಮತ್ತು ಪ್ರತೀ ಲೀಟರ್‍‍ಗೆ 18.9 ಕಿಲೋಮೀಟರ್ ಮೈಲೇ‍ಜ್ ನೀಡಲಿದೆ.

ಹ್ಯುಂಡೈ ಗ್ರ್ಯಾಂಡ್ ಐ10 (ಪ್ರಾರಂಭಿಕ ಬೆಲೆ) : ರೂ 4.70 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ವ್ಯಾಗನಾರ್

ಮಾರುತಿ ಸುಜುಕಿ ವ್ಯಾಗನಾರ್ ಕಾರುಗಳು 1999ರಲ್ಲಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದು, ಹೆಚ್ಚು ಜನಪ್ರಿಯತೆಯನ್ನು ಕಂಡಿದೆ. 5 ಲಕ್ಷದೊಳಗೆ ಕಾರಿನ ಸಿಎಸ್‍‍ಜಿ ಪೆಟ್ರೋಲ್ ಎಂಜಿನ್ ಮಾದರಿಯ ಕಾರುಗಳು ಲಭ್ಯವಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 67ಬಿಹೆಚ್‍‍ಪಿ ಮತ್ತು 90ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸುಜುಕಿ ವ್ಯಾಗನಾರ್ (ಪ್ರಾರಂಭಿಕ ಬೆಲೆ) : ರೂ 4.15 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಾರುತಿ ಸುಜುಕಿ ಸ್ವಿಫ್ಟ್

ಮರುತಿ ಸುಜುಕಿ ಸಂಸ್ಥೆಯ ಮತ್ತೊಂದು ಹೆಸರಾಂತ ಕಾರಾದ ಸ್ವಿಫ್ಟ್ ಕಾರು ಕೆಲದಿನಗಳ ಹಿಂದೆಯೆ ತಮ್ಮ ನಾಲ್ಕನೆಯ ತಲೆಮಾರಿನ ವೈಶಿಷ್ಟ್ಯತೆಗಳನ್ನು ಹೊತ್ತು ಬಿಡಗಡೆಗೊಂಡಿದ್ದು, ಕಾರಿನ ಬೇಸ್ ವೇರಿಯಂಟ್ ಕಾರುಗಳು ಮಾತ್ರ ರೂ 5 ಲಕ್ಷದಲ್ಲಿ ಖರೀದಿಗೆ ಲಭ್ಯವಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಹೊಸ ಮಾರುತಿ ಸ್ವಿಫ್ಟ್ ಕಾರು ಎಬಿಎಸ್‍‍ನೊಂದಿಗೆ ಇಬಿಡಿ, ಡ್ರೈವರ್ ಹಾಗು ಪ್ಯಾಸೆಂಜರ್ ಏರ್‍‍‍ಬ್ಯಾಗ್ಸ್, ಅಂತಿ ಥೆಫ್ಟ್ ಸಿಸ್ಟಂ, ಮತ್ತು ಇಲ್ಲ್ಯುಮಿನೇಟೆಡ್ ಇನ್ಫೊರ್ಮೇಷನ್ ಡಿಸ್ಪ್ಲೇಯನ್ನು ಪಡೆದುಕೊಂಡಿವೆ. ಇನ್ನು ಕಾರಿನ 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍‍ಪಿ ಮತ್ತು 113ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಮಾರುತಿ ಸುಜುಕಿ ಸ್ವಿಫ್ಟ್ (ಪ್ರಾರಂಭಿಕ ಬೆಲೆ) : ರೂ 4.99 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಮಹೀಂದ್ರಾ ಕೆಯುವಿ100 ನೆಕ್ಸ್ಟ್

ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಂಪ್ಯಾಕ್ಟ್ ಎಸ್‍‍ಯುವಿ ಕಾರಾಗಿದ್ದು, ಡ್ಯುಯಲ್ ಟೋನ್ ಎಕ್ಸ್ಟೀರಿಯರ್, ಫೌಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ಸ್ ಮತ್ತು ರಿಯರ್ ಕ್ಲಿಯರ್ ಲೆನ್ಸ್ ಟೈಲ್‍‍ಲ್ಯಾಂಪ್ಸ್ ಅನ್ನು ಪಡೆದಿದೆ. ಜೊತೆಗೆ ಪ್ರಯಾಣಿಕರ ಸುರಕ್ಷಿತೆಗಾಗಿ ಎಬಿ‍ಎಸ್‍‍ನೊಂದಿಗೆ ಎಬಿಡಿ ಅನ್ನು ಅಳವಡಿಸಲಗಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಇನ್ನು ಮಹೀಂದ್ರಾ ಕೆಯುವಿ100 ನೆಕ್ಸ್ಟ್ ಕಾರಿನ ಬೇಸ್ ವೆರಿಯಂಟ್‍‍‍ಗಳು 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82ಬಿಹೆಚ್‍‍ಪಿ ಮತ್ತು 115ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಮತ್ತು ಪ್ರತೀ ಲೀಟರ್‍‍ಗೆ 18 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತಿವೆ.

ಮಹೀಂದ್ರಾ ಕೆಯುವಿ100 ನೆಕ್ಸ್ಟ್ (ಪ್ರಾರಂಭಿಕ ಬೆಲೆ) : ರೂ 4.50 ಲಕ್ಷ

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಡಟ್ಸನ್ ರೆಡಿ ಗೊ

2016ರಲ್ಲಿ ಬಿಡುಗಡೆಗೊಂಡ ಡಟ್ಸನ್ ರೆಡಿ ಗೋ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 2.50 ಲಕ್ಷಕ್ಕೆ ಮಾರಾಟಗೊಳ್ಳುತಿದ್ದು, ಎಂಟ್ರೊ ಲೆವೆಲ್ ಕಾರುಗಳಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ. ಇನ್ನು ಈ ಕಾರು ಪವರ್ ಸ್ಟೀರಿಂಗ್, ಡಿಆರ್‍ಎಲ್, ಹ್ಯಾಂಡ್ಸ್ ಫ್ರೀ ಕಾಲಿಂಗ್‍‍ನೊಂದಿಗೆ ಆಡಿಯೊ ಸಿಸ್ಟಂ, ಏಸಿ, ಫ್ರಂಟ್ ಪವರ್ ವಿಂಡೊಸ್, ಟಾಚೊಮೀಟರ್, ಡ್ಯುಯಲ್ ಟ್ರಿಪ್ ಮೀಟರ್, ಎಂಜಿನ್ ಇಮ್ಮೊಬಿಲೈಜರ್ ಮತ್ತು ಡ್ರೈವರ್ ಏರ್‍‍ಬ್ಯಾಗ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದಿದೆ.

5 ಲಕ್ಷದೊಳಗೆ ಖರೀದಿಸಬಹುದಾದ ಟಾಪ್ 10 ಕಾರುಗಳಿವು..

ಕಾರು ನೋಡಲು ಬಗಳ ಸರಳವಾಗಿದ್ದು, 1.1 ಲೀಟರ್ 799ಸಿಸಿ ಪೆಟ್ರೋಲ್ ಏಂಜಿನ್ ಅನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಅಥವ ಆಟೋಮ್ಯಾಟಿಕ್ ಗೇರ್‍‍ಬಕ್ಸ್ ನೊಂದಿಗೆ ಜೋಡಿಸಲಾಗಿದೆ. ಜೊತೆಗೆ ಪ್ರತೀ ಲೀಟರ್‍‍ಗೆ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡುತ್ತವೆ.

ಡಟ್ಸನ್ ರೆಡಿ ಗೋ (ಪ್ರಾರಂಭಿಕ ಬೆಲೆ) : ರೂ 2.50 ಲಕ್ಷ

Most Read Articles

Kannada
English summary
10 cars you can buy under Rs 5 lakh.
Story first published: Monday, May 21, 2018, 15:14 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X