ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಮಹೀಂದ್ರಾ ಸಂಸ್ಥೆಯು ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪನ್ನಗಳನ್ನ ಪರಿಚಯಿಸುತ್ತಿದ್ದು, ತನ್ನ ಜನಪ್ರಿಯ ಸೆಡಾನ್ ಮಾದರಿಯಾಗಿರುವ ವೆರಿಟೋ ಮತ್ತು ವೆರಿಟೋ ವೈಬ್ ಕಾರುಗಳ ಮಾರಾಟ ಬ್ರೇಕ್ ಹಾಕಲು ಮುಂದಾಗಿದೆ.

By Praveen Sannamani

ಮಹೀಂದ್ರಾ ಸಂಸ್ಥೆಯು ಇಟಾಲಿಯನ್ ಕಾರು ವಿನ್ಯಾಸಕ ಸಂಸ್ಥೆಯಾದ ಪಿನಿನ್ ಫರಿನಾ ಸಂಸ್ಥೆಯೊಂದಿಗೆ ಜೊತೆಗೂಡಿ ವಿನೂತನ ಮಾದರಿಯ ಕಾರು ಉತ್ಪನ್ನಗಳನ್ನು ಅಭಿವೃದ್ಧಿಗೊಳಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬೇಡಿಕೆಯಲ್ಲಿ ಕುಸಿತ ಕಂಡಿರುವ ವೆರಿಟೊ ಮತ್ತು ವೆರಿಟೋ ವೈಬ್ ಕಾರುಗಳ ಉತ್ಪಾದನೆ ಸ್ಥಗಿತಗೊಳಿಸಿ ಹೊಸ ಕಾರುಗಳ ಮಾರಾಟದತ್ತ ಗಮನಹರಿಸುವ ನಿರ್ಧಾರಕ್ಕೆ ಬಂದಿದೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಈ ಬಗ್ಗೆ ಮಹೀಂದ್ರಾ ಸಂಸ್ಥೆಯು ಮಹತ್ವದ ಹೇಳಿಕೆಯೊಂದನ್ನ ನೀಡಿದ್ದು, 2020ರ ವೇಳೆಗೆ ಕಾರು ಉತ್ಪಾದನೆಯಲ್ಲಿ ಮಹೀಂದ್ರಾ ಸಂಸ್ಥೆಯು ಗುರುತರ ಬದಲಾವಣೆ ಹೊಂದಿರಲಿದ್ದು, ಬೇಡಿಕೆಯಲ್ಲಿ ಸ್ಥಿರತೆ ಇಲ್ಲದ ಕೆಲವು ಕಾರು ಉತ್ಪನ್ನಗಳನ್ನು ಕೈಬಿಡುವ ಯೋಜನೆಯಲ್ಲಿದ್ದೇವೆ ಎಂದು ಸಂದರ್ಶನವೊಂದರಲ್ಲಿ ಮಹೀಂದ್ರಾ ಎಂಡಿ ಪವನ್ ಗೋಯಾಂಕ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಇನ್ನೊಂದು ಪ್ರಮುಖ ವಿಚಾರ ಅಂದ್ರೆ 2019ರ ಕೊನೆಗೆಯಲ್ಲಿ ಬಿಎಸ್6 ವೈಶಿಷ್ಟ್ಯತೆಯ ವಾಹನ ಮಾದರಿಗಳ ಮಾರಾಟವು ಕಡ್ಡಾಯವಾಗಿರಲಿದ್ದು, ಬಿಎಸ್ 4 ವಾಹನಗಳು ಸಹ ನಿಷೇಧಗೊಳ್ಳಲಿವೆ. ಹೀಗಾಗಿಯೇ ಭವಿಷ್ಯ ಯೋಜನೆಗಳಿಗಾಗಿ ಮಹೀಂದ್ರಾ ಸಂಸ್ಥೆಯು ತನ್ನ ಕಳಪೆ ಗುಣಮಟ್ಟದ ವೆರಿಟೋ ಉತ್ಪಾದನೆಯನ್ನ ಕೈಬಿಡುವುದು ಅನಿವಾರ್ಯವಾಗಲಿದೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಒಂದು ವೇಳೆ ವೆರಿಟೋ ಮಾರಾಟ ಮುಂದುವರಿಸುವುದಾದರೇ ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯ ಮತ್ತು ಬಿಎಸ್ 6 ವಿನ್ಯಾಸಗಳನ್ನು ಸೇರಿಸಲೇಬೇಕಾಗಿದ್ದು, ಸದ್ಯದ ಪರಿಸ್ಥಿತಿಯಲ್ಲಿ ವೆರಿಟೋ ಉನ್ನತಿಕರಿಸುವ ಬದಲು ಹೊಸ ಉತ್ಪನ್ನಗಳತ್ತ ಗಮನಹರಿಸುವುದೇ ಉತ್ತಮ ನಿರ್ಧಾರ ಎನ್ನಬಹುದು.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಮಾರಾಟದಲ್ಲಿ ಸೊನ್ನೆ ಸುತ್ತಿದ ವೆರಿಟೋ ವೈಬ್

ಹೌದು, ಈ ಹಿಂದೆ ರೆನಾಲ್ಟ್ ಸಂಸ್ಥೆಯೊಂದಿಗೆ ಜೊತೆಗೂಡಿ ಲೊಗಾನ್ ಸೆಡಾನ್ ಪರಿಚಯಿಸಿದ್ದ ಮಹೀಂದ್ರಾ ಸಂಸ್ಥೆಯು ನಂತರ ದಿನಗಳಲ್ಲಿ ಬೃಹತ್ ಯೋಜನೆಯಿಂದ ಹಿಂದೆ ಸರಿಯಿತು. ಆದಾದ ಬಳಿಕ ವೆರಿಟೋ ಮತ್ತು ವೆರಿಟೋ ವೈಬ್ ಆವೃತ್ತಿಗಳನ್ನು ಪರಿಚಿಸಿದ್ದಲ್ಲದೇ ಬಿಡುಗಡೆಯಾದ ಹೊಸತರದಲ್ಲಿ ಉತ್ತಮ ಬೇಡಿಕೆ ಪಡೆದುಕೊಂಡಿತ್ತು.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಆದ್ರೆ ಕಳದೆ 2 ವರ್ಷಗಳಿಂದ ವೆರಿಟೋ ಮತ್ತು ವೆರಿಟೋ ವೈಬ್ ಕಾರುಗಳ ಮಾರಾಟದಲ್ಲಿ ಭಾರೀ ನಷ್ಟ ಅನುಭವಿಸುತ್ತಿರುವ ಮಹೀಂದ್ರಾ ಸಂಸ್ಥೆಯು ನಷ್ಟದ ನಡುವೆಯೂ ವೆರಿಟೋ ಮಾರಾಟ ಮುಂದುವರಿಸಿತ್ತು. ಇದೀಗ ಹೊಸ ಉತ್ಪನ್ನಗಳ ಪರಿಚಯಿಸುತ್ತಿರುವ ಹಿನ್ನೆಲೆ ದೃಡ ನಿರ್ಧಾರದೊಂದಿಗೆ ವೆರಿಟೋ ಕಾರುಗಳಿಗೆ ಗುಡ್ ಬೈ ಹೇಳುತ್ತಿದೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

2017ರ ಆರ್ಥಿಕ ವರ್ಷದಲ್ಲಿ 3,316 ವೆರಿಟೊ ಕಾರುಗಳನ್ನ ಮಾರಾಟ ಮಾಡಿದ್ದ ಮಹೀಂದ್ರಾ ಸಂಸ್ಥೆಯು 2018ರ ಆರ್ಥಿಕ ವರ್ಷದಲ್ಲಿ ಕೇವಲ 721 ಕಾರುಗಳನ್ನು ಮಾತ್ರವೇ ಮಾರಾಟ ಮಾಡಿತ್ತು. ಆದ್ರೆ ಪ್ರಸಕ್ತ ವರ್ಷದಲ್ಲಿ 207 ವೆರಿಟೋ ಕಾರುಗಳು ಮಾತ್ರವೇ ಮಾರಾಟವಾಗಿದ್ದು, ಇದರಲ್ಲಿ ವೆರಿಟೋ ವೈಬ್ ಮಾರಾಟವಂತೂ ಸಂಪೂರ್ಣ ನೆಲಕಚ್ಚಿದೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಕಳೆದ ವರ್ಷ ಕೇವಲ 4 ಕಾರುಗಳು ಮಾತ್ರವೇ ಮಾರಾಟಗೊಂಡಿದ್ದು, ಪ್ರಸಕ್ತ ವರ್ಷದ ಮಾರುಕಟ್ಟೆಯಲ್ಲಿ ವೆರಿಟೋ ವೈಬ್ ಯಾರೋಬ್ಬರು ಖರೀದಿ ಮಾಡಿಲ್ಲ. ಇದರಿಂದ ಬೇಡಿಕೆಯಿಲ್ಲ ಕಾರುಗಳ ಮಾರಾಟಕ್ಕೆ ಯೋಜನೆ ರೂಪಿಸುವ ಬದಲು ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿದ್ದವಾಗುತ್ತಿರುವ ವಾಹನಗಳ ಅಭಿವೃದ್ಧಿಗೆ ಒತ್ತು ನೀಡುವುದೇ ಉತ್ತಮ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಇದರಲ್ಲಿ ವೆರಿಟೋ ಎಲೆಕ್ಟ್ರಿಕ್ ಕಾರುಗಳ ಮಾರಾಟ ಮತ್ತು ಉತ್ಪಾದನೆಯಲ್ಲಿ ಯಾವುದೇ ಬದಲಾವಣೆ ತರಲು ನಿರ್ಧರಿಸಿದ್ದು, ಸರ್ಕಾರಿ ಸಂಸ್ಥೆಗಳಿಗೆ ಎಲೆಕ್ಟ್ರಿಕ್ ಕಾರುಗಳನ್ನ ಪೂರೈಕೆ ಮಾಡಲು ಇ-ವೆರಿಟೋ ಕಾರುಗಳ ಅಭಿವೃದ್ಧಿ ಪ್ರಕ್ರಿಯೆಯನ್ನ ಮುಂದುವರಿಸಿದೆ.

ಮಹೀಂದ್ರಾ ವೆರಿಟೋ ಮತ್ತು ವೆರಿಟೋ ವೈಬ್ ಇನ್ಮುಂದೆ ಖರೀದಿಗೆ ಸಿಗೋದಿಲ್ವಂತೆ..!

ಇನ್ನು ಮಹೀಂದ್ರಾ ಸಂಸ್ಥೆಯು ಪಿನಿನ್ ಫರಿನಾ ಡಿಸೈನ್‌ ಬಳಕೆಯೊಂದಿಗೆ ಹೊಸ ಉತ್ಪನ್ನಗಳನ್ನು ವಿಶ್ವದರ್ಜೆಗೆ ಉನ್ನತಿಕರಿಸುತ್ತಿದ್ದು, ಇದರೊಂದಿಗೆ ಉತ್ತರ ಕೊರಿಯಾ ಕಾರು ಉತ್ಪಾದನೆ ಸಂಸ್ಥೆಯಾದ ಸ್ಯಾಂಗ್‌ಯಾಂಗ್ ಜೊತೆಗೆ ಎರಡು ಪ್ರಮುಖ ಎಸ್‌ಯುವಿ ಮಾದರಿಗಳನ್ನು ಭಾರತದಲ್ಲಿ ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿರುವ ಎಕ್ಸ್‌ಯುವಿ700 ಮತ್ತು ಟಿವೊಲಿ ಮಾದರಿಯ ಹೊಸ ಕಂಪ್ಯಾಕ್ಟ್ ಎಸ್‌ಯುವಿ ಮುಂಬರುವ ದಿನಗಳಲ್ಲಿ ಭಾರೀ ಜನಪ್ರಿಯತೆ ಗಳಿಸುವ ತವಕದಲ್ಲಿವೆ ಎನ್ನಬಹುದು.

Most Read Articles

Kannada
English summary
Mahindra Could Discontinue Sales Of The Verito And The Verito Vibe.
Story first published: Friday, August 3, 2018, 18:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X