ರಸ್ತೆಗಿಳಿಯಲು ಸಿದ್ದವಾದ ಅಧಿಕ ಮೈಲೇಜ್ ಪ್ರೇರಿತ ಎಲೆಕ್ಟ್ರಿಕ್ ಆಲ್ಟೊ ಮತ್ತು ವ್ಯಾಗನ್ ಆರ್
ಮಾಲಿನ್ಯ ತಡೆಗಾಗಿ 2030ರ ವೇಳೆಗೆ ದೇಶದಲ್ಲಿ ಶೇ.100ರಷ್ಟು ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ವಾಹನಗಳನ್ನು ರಸ್ತೆಗಿಳಿಸುವ ಕೇಂದ್ರದ ಯೋಜನೆಗೆ ಪೂರಕವಾಗಿ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು ವಿವಿಧ ಮಾದರಿಯ ಎಲೆಕ್ಟ್ರಿಕ್ ವಾಹನಗಳನ್ನು ಸಿದ್ದಗೊಳಿಸುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯು ಸಹ ತನ್ನ ಜನಪ್ರಿಯ ಕಾರುಗಳನ್ನು ಎಲೆಕ್ಟ್ರಿಕ್ ವರ್ಷನ್‌ನಲ್ಲಿ ಬಿಡುಗಡೆಗೊಳಿಸುವ ತಯಾರಿಯಲ್ಲಿದೆ.

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಭಾರತದಲ್ಲಿ ಅತಿ ಹೆಚ್ಚು ಕಾರು ಮಾರಾಟ ಮಾಡುವ ನಂ.1 ಕಾರು ಉತ್ಪಾದನಾ ಸಂಸ್ಥೆಯಾಗಿ ಹೊರಹೊಮ್ಮಿದ್ದು, ಇದರಲ್ಲಿ ಆಲ್ಟೊ ಮತ್ತು ವ್ಯಾಗನ್ ಆರ್ ಕಾರುಗಳಿಗೆ ಭಾರೀ ಬೇಡಿಕೆಯಿರುವುದು ಬಹುತೇಕ ಕಾರು ಪ್ರಿಯರಿಗೆ ತಿಳಿದಿರುವ ವಿಚಾರ. ಹೀಗಾಗಿಯೇ ಎಲೆಕ್ಟ್ರಿಕ್ ವರ್ಷನ್‌ಗಳಲ್ಲಿ ಮೊದಲ ಹಂತವಾಗಿ ವ್ಯಾಗನ್ ಆರ್ ಕಾರು ರಸ್ತೆಗಿಳಿಯುತ್ತಿದ್ದು, ಇದಕ್ಕೂ ಮುನ್ನ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಮಾರುತಿ ಸುಜುಕಿ ಸಂಸ್ಥೆಗೂ ಮುನ್ನವೇ ಎಲೆಕ್ಟ್ರಿಕ್ ಎಂಜಿನ್ ಪ್ರೇರಿತ ಆಲ್ಟೊ ಮತ್ತು ವ್ಯಾಗನ್ ಆರ್ ಕಾರುಗಳನ್ನು ಸಿದ್ದಗೊಳಿಸಿರುವ ಸದ್ಯ ಭಾರೀ ಚರ್ಚೆಗೆ ಕಾರಣವಾಗಿದೆ.

ಹೌದು, ಮಾರುತಿ ಸುಜುಕಿ ಸಂಸ್ಥೆಯು 2020ರ ಆರಂಭದಲ್ಲಿ ತನ್ನ ಬಹುನೀರಿಕ್ಷಿತ ವ್ಯಾಗನ್ ಆರ್ ಎಲೆಕ್ಟ್ರಿಕ್ ವರ್ಷನ್ ಬಿಡುಗಡೆಗೊಳಿಸುವ ಬಗ್ಗೆ ಈಗಾಗಲೇ ಮಾಹಿತಿ ಬಹಿರಂಗಗೊಳಿಸಿದ್ದು, ಈ ಮಧ್ಯೆ ತೆಲಂಗಾಣ ಮೂಲದ ಸ್ಟಾರ್ಟ್ ಅಪ್ ಸಂಸ್ಥೆಯೊಂದು ಮಾರುತಿ ಸುಜುಕಿಗೂ ಮುನ್ನವೇ ಎಲೆಕ್ಟ್ರಿಕ್ ವರ್ಷನ್ ಆಲ್ಟೊ ಮತ್ತು ವ್ಯಾಗನ್ ಆರ್ ಕಾರುಗಳನ್ನು ಸಿದ್ದಗೊಳಿಸಿದೆ.

ತೆಲಂಗಾಣದ ಇ-ಟ್ರಿಯೊ ಆಟೋಮೊಬೈಲ್ಸ್ ಎನ್ನುವ ಸ್ಟಾರ್ಟ್ ಅಪ್ ಸಂಸ್ಥೆಯು ಮಾರುತಿ ಸುಜುಕಿ ಸಂಸ್ಥೆಗೂ ಮುನ್ನವೇ ಆಲ್ಟೊ ಮತ್ತು ವ್ಯಾಗನ್ ಆರ್ ಕಾರುಗಳನ್ನು ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಅಭಿವೃದ್ಧಿಪಡಿಸಿದ್ದು, ಮಾರುತಿ ಸುಜುಕಿಗೂ ಈ ಕಾರುಗಳು ಕುತೂಹಲ ಮೂಡಿಸಿವೆ.

ವಿಶೇಷ ಅಂದ್ರೆ, ಇ-ಟ್ರಿಯೊ ಆಟೋಮೊಬೈಲ್ಸ್ ಸಂಸ್ಥೆಯು ಅಭಿವೃದ್ದಿ ಪಡಿಸಿರುವ ಇ ವರ್ಷನ್ ಆಲ್ಟೊ ಮತ್ತು ವ್ಯಾಗನ್ ಆರ್ ಕಾರುಗಳಲ್ಲಿ ARAI ಸಂಸ್ಥೆಯ ಪ್ರಮಾಣಿಕೃತ ಮತ್ತು ಉತ್ತಮ ಗುಣಮಟ್ಟದ ಎಲೆಕ್ಟಿಕ್ ಬ್ಯಾಟರಿ ಬಳಕೆ ಮಾಡಲಾಗಿದ್ದು, ಹೊಸ ಮಾದರಿಯ ಬ್ಯಾಟರಿ ಸೌಲಭ್ಯವನ್ನು ಕೊರಿಯಾ ಮತ್ತು ಚೀನಿ ಮಾರುಕಟ್ಟೆಯಿಂದ ಆಮದು ಮಾಡಿಕೊಳ್ಳಲಾಗಿದೆ.

ಸದ್ಯ ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಬಹುತೇಕ ಎಲೆಕ್ಟ್ರಿಕ್ ಕಾರುಗಳಿಗಾಗಿ ಕೊರಿಯಾ, ಚೀನಿ ಮತ್ತು ತೈವಾನ್ ಮಾರುಕಟ್ಟೆಯಿಂದಲೇ ಬ್ಯಾಟರಿ ಸೌಲಭ್ಯವನ್ನು ಆಮದು ಮಾಡಿಕೊಳ್ಳಲಾಗುತ್ತಿದ್ದು, ಇದೇ ಕಾರಣಕ್ಕೆ ಎಲೆಕ್ಟ್ರಿಕ್ ಕಾರುಗಳ ಬೆಲೆಯು ಸಾಮಾನ್ಯ ಕಾರುಗಳಿಂತ ಎರಡು ಪಟ್ಟು ಹೆಚ್ಚಳವಾಗುತ್ತಿದೆ.

ಆದ್ರೆ 2020ರ ವೇಳೆಗೆ ಎಲೆಕ್ಟ್ರಿಕ್ ಕಾರು ಮಾರಾಟ ಮಾಡುವ ಯೋಜನೆ ಹೊಂದಿರುವ ಮಾರುತಿ ಸುಜುಕಿ ಸಂಸ್ಥೆಯು ಇವಿ ಕಾರುಗಳ ಬೆಲೆ ತಗ್ಗಿಸಲು ದೇಶಿಯವಾಗಿ ಬ್ಯಾಟರಿ ಉತ್ಪಾದನೆ ಮಾಡುವ ಗುರಿಹೊಂದಿದ್ದು, ಇದಕ್ಕಾಗಿಯೇ ಗುಜರಾತಿನಲ್ಲಿ ಬರೋಬ್ಬರಿ 1200 ಕೋಟಿ ವೆಚ್ಚದಲ್ಲಿ ಲೀಥಿಯಂ ಅಯಾನ್ ಬ್ಯಾಟರಿ ಉತ್ಪಾದನಾ ಘಟಕವನ್ನು ನಿರ್ಮಾಣ ಮಾಡುತ್ತಿದೆ.

ಹೀಗಿರುವಾಗ ಇ-ಟ್ರಿಯೊ ಆಟೋಮೊಬೈಲ್ಸ್ ಸಂಸ್ಥೆಯು ಜಾಗತಿಕ ಮಾರುಕಟ್ಟೆಗಳಿಂದ ಎಲೆಕ್ಟ್ರಿಕ್ ಬ್ಯಾಟರಿ ಆಮದು ಮಾಡಿಕೊಂಡು ಆಲ್ಟೊ ಮತ್ತು ವ್ಯಾಗನ್ ಆರ್ ಕಾರಿನ ಇ ವರ್ಷನ್ ಬಿಡುಗಡೆ ಮಾಡುತ್ತಿದ್ದು, ಸಾಮಾನ್ಯ ಕಾರುಗಳನ್ನು ಖರೀದಿ ಮಾಡಿ ಅವುಗಳಲ್ಲಿ ಎಲೆಕ್ಟಿಕ್ ಎಂಜಿನ್ ಜೋಡಣೆ ಮಾಡುವ ಯೋಜನೆ ಹೊಂದಿದೆ.

ಮೊದಲ ಹಂತವಾಗಿ ಪ್ರತಿ ತಿಂಗಳು 500 ರಿಂದ 1 ಸಾವಿರ ಕಾರುಗಳಿಗೆ ಎಲೆಕ್ಟ್ರಿಕ್ ಎಂಜಿನ್ ಜೋಡಣೆ ಮಾಡಿ ಮಾರಾಟ ಮಾಡುವ ಗುರಿಹೊಂದಿರುವ ಇ-ಟ್ರಿಯೊ ಸಂಸ್ಥೆಯು, ಆಕರ್ಷಕ ಬೆಲೆಗಳಲ್ಲಿ ಹೊಸ ಸೌಲಭ್ಯವನ್ನು ಒದಗಿಸುವ ಬಗ್ಗೆ ಭರವಸೆ ನೀಡಿದೆ.
MOST READ: ಬಿಡುಗಡೆಗೆ ಸಿದ್ಧಗೊಂಡಿರುವ ಜಾವಾ ಬೈಕ್‍ಗಳ ಬೆಲೆ ಮತ್ತು ಬುಕ್ಕಿಂಗ್ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ..!

ಕಾರಿನ ಮೈಲೇಜ್
ಇ-ಟ್ರಿಯೊ ಸಂಸ್ಥೆಯು ಎಲೆಕ್ಟ್ರಿಕ್ ವ್ಯಾಗನ್ ಆರ್ ಮತ್ತು ಆಲ್ಟೊ ಕಾರುಗಳಲ್ಲಿ 10ಕೆವಿ ಯಿಂದ 30 ಕೆ.ವಿ ಸಾಮರ್ಥ್ಯದ ಬ್ಯಾಟರಿಗಳನ್ನು ಬಳಕೆ ಮಾಡಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ 10ಕೆವಿ, 20ಕೆವಿ ಮತ್ತು 30ಕೆವಿ ಬ್ಯಾಟರಿ ಜೋಡಣೆ ಮಾಡಲಿದೆ.

ಹೀಗಾಗಿ ಬ್ಯಾಟರಿ ಸಾಮರ್ಥ್ಯದ ಮೇಲೆ ಬೆಲೆಗಳು ನಿರ್ಧಾರವಾಗಲಿದ್ದು, 30ಕೆವಿ ಸಾಮರ್ಥ್ಯದ ಬ್ಯಾಟರಿ ಮಾದರಿಯು ಪ್ರತಿ ಚಾರ್ಜ್‌ಗೆ ಕನಿಷ್ಠ 120 ಕಿ.ಮಿ ಮೈಲೇಜ್ ಹಿಂದಿರುಗಿಸಲಿದೆ ಎಂದು ಇ-ಟ್ರಿಯೊ ಸಂಸ್ಥೆಯೇ ಹೇಳಿಕೊಂಡಿದೆ.
MOST READ: ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

30ಕೆ.ವಿ ಸಾಮರ್ಥ್ಯದ ಬ್ಯಾಟರಿ ಮಾದರಿಯು ಪೂರ್ಣ ಪ್ರಮಾಣದ ಚಾರ್ಚಿಂಗ್‌ಗೆ ಗರಿಷ್ಠ 5 ಗಂಟೆ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಇ-ಟ್ರಿಯೊ ಸಂಸ್ಥೆಯು ಮಾರುತಿ ಸುಜುಕಿ ಸಂಸ್ಥೆಗೂ ಮುನ್ನವೇ ಎಲೆಕ್ಟಿಕ್ ವರ್ಷನ್ ಆಲ್ಟೊ ಮತ್ತು ವ್ಯಾಗನ್ ಆರ್ ಕಾರು ಪರಿಚಯಿಸಿರುವ ಮಾರುಕಟ್ಟೆಯಲ್ಲಿ ಎಷ್ಟರಮಟ್ಟಿಗೆ ಜನಪ್ರಿಯತೆ ಸಾಧಿಸಲಿವೆ ಎನ್ನುವುದು ಕಾಯ್ದುನೋಡಬೇಕಿದೆ.


Click it and Unblock the Notifications