ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಜಮ್ಮು ಕಾಶ್ಮೀರ ರಾಜ ಸಂಸ್ಥಾನದ ಕೊನೆಯ ಡೋಗ್ರಾ ದೊರೆ ಮಹಾರಾಜ ಹರಿ ಸಿಂಗ್‌ ಅವರು ಆಡಳಿತ್ಮಾಕ ವಿಚಾರಗಳಲ್ಲಿ ಅಷ್ಟೇ ಅಲ್ಲದೇ ಸ್ಪೋರ್ಟ್ ಕಾರ್ ಬಳಕೆಯಲ್ಲೂ ಭಾರೀ ಜನಪ್ರಿಯತೆ ಹೊಂದಿದ್ದರು. 1924ರ ಅವಧಿಯಲ್ಲಿ ಅವರ ಬಳಿಯಿದ್ದ ವಾಕ್ಸ್‌ಹಾಲ್ ಕಾರು ಇದೀಗ ಲಂಡನ್‌ನಲ್ಲಿ ಹರಾಜಿಗೆ ಇಡಲಾಗಿದ್ದು, ಭಾರೀ ಮೊತ್ತಕ್ಕೆ ಹರಾಜಾಗುವ ಸುಳಿವು ನೀಡಿದೆ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಮಹಾರಾಜ ಹರಿ ಸಿಂಗ್‌ ಅವರು ಅಂದಿನ ಕಾಲದಲ್ಲೇ ಹಲವು ಜನಪ್ರಿಯ ಬ್ರಾಂಡ್ ಸ್ಪೋರ್ಟ್ ಕಾರುಗಳನ್ನು ಹೊಂದಿದ್ದ ಏಕೈಕ ರಾಜ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದಲ್ಲದೆ ಬ್ರಿಟಿಷ್ ಸರ್ಕಾರದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ಇದೇ ಕಾರಣಕ್ಕೆ ವಿವಿಧ ಮಾದರಿಯ ಐಷಾರಾಮಿ ಕಾರುಗಳ ಕಲೆಕ್ಷನ್ ಹೊಂದಿದ್ದ ಮಹಾರಾಜ ಹರಿ ಸಿಂಗ್ ಅವರಿಗೆ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಸ್ಪೋರ್ಟ್ ಕಾರಿನ ಬಗ್ಗೆ ಎಲ್ಲಿಲ್ಲದ ಕ್ರೇಜ್ ಇತ್ತು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇದೀಗ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಸ್ಪೋರ್ಟ್ ಕಾರನ್ನು ಲಂಡನ್‌ನಲ್ಲಿ ಹರಾಜಿಗೆ ಇಡಲಾಗಿದ್ದು, 1920-1930ರ ಅವಧಿಯಲ್ಲಿ ಭಾರೀ ಜನಪ್ರಿಯತೆ ಹೊಂದಿದ್ದ ಈ ಕಾರಿನ ಬೆಲೆ ಇದೀಗ ಮೂಲ ಬೆಲೆಗಿಂತ ಸಾವಿರ ಪಟ್ಟು ಹೆಚ್ಚಾಗಿದೆ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಹರಾಜಿನಲ್ಲಿ ಈ ಕಾರು 3.5 ಕೋಟಿಯಿಂದ 5 ಕೋಟಿಗೂ ಅಧಿಕ ಮೊತ್ತಕ್ಕೆ ಹರಾಜಾಗಲಿದೆ ಎಂದು ಅಂದಾಜಿಸಲಾಗಿದ್ದು, ಈ ತಿಂಗಳ ಅಂತ್ಯದಲ್ಲಿ ಬಾಂಡ್ ಸ್ಟ್ರೀಟ್ ಸ್ಟೋರ್ ರೂಂ ನಲ್ಲಿ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಕಾರನ್ನು ಪ್ರದರ್ಶನಕ್ಕೆ ಇಡಲಾಗುವುದು ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಸಂಪೂರ್ಣ ಅಲ್ಯುಮಿನಿಯಂ ಬಾಡಿ ಕಿಟ್ ಹೊಂದಿರುವ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಸ್ಪೋರ್ಟ್ ಕಾರು ಅತ್ಯುತ್ತಮ ಎಂಜಿನ್ ಕಾರ್ಯಕ್ಷಮತೆಯೊಂದಿಗೆ ಇಂದಿಗೂ ಕೂಡಾ ಪರ್ಫಾಮೆನ್ಸ್ ಮಾದರಿಗಳೊಂದಿಗೆ ಸ್ಪರ್ಧಿಸುವ ಎಲ್ಲಾ ಗುಣಲಕ್ಷಣಗಳನ್ನು ಹೊಂದಿದೆಯೆಂತೆ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಸ್ವಾತಂತ್ರ್ಯ ನಂತರ ವಿಶ್ವದ ಹಲವು ಶ್ರೀಮಂತರ ಕಾರ್ ಕಲೆಕ್ಷನ್‌ನಲ್ಲಿ ಸ್ಥಾನ ಪಡೆದಿದ್ದ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಕಾರು ಇದೀಗ ಇಂಗ್ಲೆಂಡ್ ಮೂಲದ ಬೊನಾಮಸ್ ಎನ್ನುವ ವಿಂಟೇಜ್ ಕಾರು ಸಂಗ್ರಹ ಸಂಸ್ಥೆಯ ಬಳಿ ಸ್ಥಾನ ಪಡೆದಿದ್ದು, ವಿಶೇಷ ಮೋಟಾರ್ ವ್ಯವಸ್ಥೆಯೇ ಈ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇದೇ ಕಾರಣಕ್ಕೆ ಪ್ರಸಿದ್ಧ ಕಾರು ಸಂಗ್ರಹಕಾರ ಮತ್ತು ಮಾಸ್ಟರ್ ವಾಚ್ ಉತ್ಪಾದನಾ ಮಾಲೀಕ ಜಾರ್ಜ್ ಡೇನಿಯಲ್ಸ್ ಮತ್ತು ಎಡ್ ರಾಯ್, ಮೋಟಾರ್ ಜಗತ್ತಿನ ಪ್ರಭಾವಶಾಲಿ ವ್ಯಕ್ತಿಯಾಗಿರುವ ಸ್ಪೋರ್ಟ್ಸ್ ಕಾರ್ ಕ್ಲಬ್ ಆಫ್ ಅಮೆರಿಕಾ ಅಧ್ಯಕ್ಷ ಬೊಸ್ಟೋನಿಯನ್ ಅವರ ಬಳಿಯು ಈ ಕಾರು ಸ್ಥಾನ ಪಡೆದಿತ್ತು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ತದನಂತರ ಈ ಕಾರನ್ನು ಬೊನಾಮಸ್ ಸಂಸ್ಥೆಯು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಮೂಲಕ ಕಾರಿನ ಹೊರ ವಿನ್ಯಾಸದಲ್ಲಿ ಕೆಲವು ಮಹತ್ವದ ಬದಲಾವಣೆಗಳೊಂದಿಗೆ ಹರಾಜು ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಮುಂದಿನ ವಾರ ವಾಕ್ಸ್‌ಹಾಲ್ 30-90 OE ವಿಯೊಲೊಕ್ಸ್ ಕಾರು ಯಾರ ಪಾಲಾಗುತ್ತೆ ಎನ್ನುವುದೇ ಸದ್ಯದ ಕುತೂಹಲ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹಲವು ಮಹತ್ತರ ಬದಲಾವಣೆಗಳನ್ನ ತರುವ ಮೂಲಕ ಜನಪ್ರಿಯ ರಾಜನಾಗಿ ಗುರುತಿಸಿಕೊಂಡಿದ್ದ ಹರಿ ಸಿಂಗ್, 1925ರಲ್ಲೇ ಖಡ್ಡಾಯ ಶಿಕ್ಷಣ ಪದ್ದತಿ, ಬಾಲ್ಯ ವಿವಾಹ ತಡೆ ಸೇರಿದಂತೆ ಹಲವು ಸಾಮಾಜಿಕ ಸುಧಾರಣೆ ಕಾಯ್ದೆಗಳನ್ನು ಜಾರಿಗೆ ತಂದಿದ್ದರು.

MOST READ: ದೀಪಾವಳಿ ಹಬ್ಬಕ್ಕಾಗಿ ಉದ್ಯೋಗಿಗಳಿಗೆ 1600 ಕಾರುಗಳನ್ನು ಗಿಫ್ಟ್ ನೀಡಿದ ಉದ್ಯಮಿ..!

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕೇವಲ ಮಹಾರಾಜ ಹರಿ ಸಿಂಗ್‌ ಅಷ್ಟೇ ಅಲ್ಲದೇ ಭಾರತದ ಮತ್ತೊಬ್ಬ ರಾಜಾ ಜೈ ಸಿಂಗ್ ಅವರ ಕಥೆ ಕೂಡಾ ಇದಕ್ಕಿಂತ ಭಿನ್ನವಾಗಿದೆ. ತಮಗೆ ಅನಮಾನ ಮಾಡಿದ ಐಷಾರಾಮಿ ಕಾರು ಸಂಸ್ಥೆಯೊಂದಕ್ಕೆ ಸರಿಯಾಗಿ ಬುದ್ದಿಕಲಿಸಿದ್ದ ರಾಜಾ ಜೈ ಸಿಂಗ್ ರೋಲ್ಸ್ ರಾಯ್ಸ್ ಕಾರುಗಳನ್ನೇ ಕಸದ ವಾಹನಗಳನ್ನಾಗಿ ಬಳಕೆ ಮಾಡಿದ್ದು ಇದೀಗ ಇತಿಹಾಸ.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

1920 ರಲ್ಲಿ ರಾಜಾ ಜೈ ಸಿಂಗ್ ಲಂಡನ್ ಭೇಟಿ ವೇಳೆ ಬ್ರಾಂಡ್ ಸ್ಟ್ರೀಟ್‌ನಲ್ಲಿ ಸಾಮಾನ್ಯ ಉಡುಗೆಯೊಂದಿಗೆ ವಾಕಿಂಗ್‌ಗೆ ಹೋಗಿದ್ದರು. ಈ ವೇಳೆ ಬ್ರಾಂಡ್ ಸ್ಟ್ರೀಟ್‌ನಲ್ಲಿ ರೋಲ್ಸ್ ರಾಯ್ಸ್ ಶೋರೂಂಗೆ ಬಂದ ಅವರು ರೋಲ್ಸ್ ರಾಯ್ಸ್ ಕಾರಿನ ವಿಶೇಷತೆಗಳು ಹಾಗು ಬೆಲೆ ಬಗ್ಗೆ ಪ್ರಶ್ನಿಸಿದ್ದರು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಇವರನ್ನು ಭಾರತೀಯ ನಾಗರಿಕನೆಂದು ತಿಳಿದ ಬ್ರಿಟಿಷ್ ಕಾರು ಮಾರಾಟಗಾರರು ಅವರಿಗೆ ಸರಿಯಾಗಿ ಸ್ಪಂದಿಸದೇ ಕೇವಲವಾಗಿ ನೋಡಿ ಹೊರ ಹಾಕಿದರು. ಇದರಿಂದ ಕುಪಿತಗೊಂಡ ರಾಜಾ ಜೈ ಸಿಂಗ್ ತಾನು ತಂಗಿದ್ದ ಹೋಟೆಲ್ ಗೆ ಹಿಂದಿರುಗಿ ತಾನು ಆ ಶೋರೂಂಗೆ ಹೋಗಬೇಕೆಂದು ತನ್ನ ಸೇವಕರಿಗೆ ತಿಳಿಸಿದರು.

MOST READ: ಭಾರತದಲ್ಲಿ ಓಮ್ನಿ ಮಾರಾಟಕ್ಕೆ ಬ್ರೇಕ್ ಹಾಕಲು ನಿರ್ಧರಿಸಿದ ಮಾರುತಿ..!

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಕೆಲವೇ ಸಮಯದಲ್ಲಿ ಹೋಟೆಲ್‌ನಿಂದ ಶೋರೂಂ ವರೆಗೂ ರೆಡ್ ಕಾರ್ಪೆಟ್ ಹಾಕಲಾಯ್ತು. ರಾಜಾ ಜೈಸಿಂಗ್ ತನ್ನ ಸೇವಕರೊಡನೆ ಮತ್ತೆ ರೋಲ್ಸ್ ರಾಯ್ಸ್ ಶೋ ರೂಮ್‌ಗೆ ಬಂದು ಅವಮಾನ ಮಾಡಿದ್ದ ಬ್ರಿಟಿಷ್ ಮಾರಾಟಗಾರನಿಗೆ ಆಶ್ಚರ್ಯವಾಗುವಂತೆ ಮಾಡಿದ್ದಲ್ಲದೇ ಬರೋಬ್ಬರಿ 6 ಕಾರುಗಳನ್ನ ವಿತರಣಾ ವೆಚ್ಚ ಸೇರಿದಂತೆ ಪೂರ್ಣ ಹಣ ಪಾವತಿಸಿ ಕೊಂಡುಕೊಂಡರು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಎಲ್ಲಾ ಆರು ರೋಲ್ಸ್ ರಾಯ್ಸ್ ಕಾರು ಭಾರತ ತಲುಪಿದ ನಂತರ, ರಾಜ ಸಾಗಿಸುವ ಮತ್ತು ನಗರದಲ್ಲಿ ಕಸ ಸಂಗ್ರಹಿಸುವ ಉದ್ದೇಶಕ್ಕೆ ಈ ಎಲ್ಲಾ ಆರು ಕಾರುಗಳು ಬಳಸಲು ಆದೇಶ ನೀಡಿದ . ಕಸದ ವ್ಯಾನ್ ಗೆ ತಮ್ಮ ಕಾರನ್ನು ಬಳಸಿದ ಭಾರತೀಯ ರಾಜನ ಸುದ್ದಿ ಜಗತ್ತಿನಾದ್ಯಂತ ಹರಡಿತು. ಆದ್ದರಿಂದ ರೋಲ್ಸ್ ರಾಯ್ಸ್ ಖ್ಯಾತಿ ಪ್ರಪಂಚದಾದ್ಯಂತ ತ್ವರಿತವಾಗಿ ಇಳಿಯಿತು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಈ ಸುದ್ದಿ ಒಂದು ರೋಲ್ಸ್ ರಾಯ್ಸ್ ಕಾರು ಹೊಂದುವ ಬಗ್ಗೆ ಹೆಮ್ಮೆ ಪಡುತ್ತಿದ್ದ ಜನರು ಅವಮಾನ ಪಡುವಂತೆ ಮಾಡಿತು, "ಓಹ್, ಅದೇ ಕಾರ್ ಕಸ ಸಂಗ್ರಹಕ್ಕಾಗಿ ಭಾರತದಲ್ಲಿ ಬಳಸಲಾಗುತ್ತದೆ?" ಎಂದು ಟೀಕಿಸಲು ಆರಂಭಿಸಿದರು. ಈ ಘಟನೆ ರೋಲ್ಸ್ ರಾಯ್ಸ್ ಗೆ ಬೃಹತ್ ಅವಮಾನ ಮಾಡಿದ್ದಲ್ಲದೆ ಆದಾಯ ವೇಗವಾಗಿ ಕುಸಿಯಲಾರಂಭಿಸಿತು.

ಹರಾಜಿಗಿಡಲಾಗಿರುವ ಕಾಶ್ಮೀರ ಮಹಾರಾಜ ಹರಿ ಸಿಂಗ್ ಕಾರಿನ ಬೆಲೆ ಎಷ್ಟು ಗೊತ್ತಾ?

ಅಂತಿಮವಾಗಿ, ಲಂಡನ್ ನಲ್ಲಿರುವ ಶೋರೂಂ ಭೇಟಿ ಸಮಯದಲ್ಲಿ ತಮ್ಮ ವರ್ತನೆಗೆ ಕ್ಷಮೆಯಾಚಿಸಿ ಭಾರತದ ಜೈ ಸಿಂಗ್ ಮಹಾರಾಜರಿಗೆ ಟೆಲಿಗ್ರಾಮ್ ಕಳುಹಿಸಿದ ರೋಲ್ಸ್ ರಾಯ್ಸ್ ಉಚಿತವಾಗಿ ಆರು ರೋಲ್ಸ್ ರಾಯ್ಸ್ ಕಾರುಗಳನ್ನ ನೀಡಿತು. ರಾಜ ತಮ್ಮ ಕ್ಷಮೆಯನ್ನು ಒಪ್ಪಿಕೊಂಡು ಮತ್ತು ಕಸ ಸಂಗ್ರಹಕ್ಕೆ ಆ ಕಾರುಗಳನ್ನು ಬಳಸಲು ನಿಲ್ಲಿಸಲಾಯಿತು.

Most Read Articles

Kannada
Read more on off beat
English summary
Last Maharaja Of Kashmir Hari Singh's Rare Vintage Car On Auction In London.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more