2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡು ಬರುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ಕೂಡಾ ಪ್ರಮುಖ ಯೋಜನೆಗಳೊಂದಿಗೆ ಹೊಸ ನೀರಿಕ್ಷೆ ಹುಟ್ಟುಹಾಕಿದೆ.

By Praveen

ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನ ಕಾಯ್ದುಕೊಂಡು ಬರುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು ಈ ಬಾರಿ ಕೂಡಾ ಪ್ರಮುಖ ಯೋಜನೆಗಳೊಂದಿಗೆ ಹೊಸ ನೀರಿಕ್ಷೆ ಹುಟ್ಟುಹಾಕಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿನೂತನ ಕಾರು ಮಾದರಿಗಳನ್ನು ಪರಿಚಯಿಸುತ್ತಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಪ್ರಯಾಣಿಕ ಕಾರು ಮಾರಾಟ ವಿಭಾಗದಲ್ಲಿ ಸತತ ಮುನ್ನಡೆ ಸಾಧಿಸುತ್ತಿರುವ ಮಾರುತಿ ಸುಜುಕಿ ವರ್ಷದ ಆರಂಭದಲ್ಲೇ ತನ್ನ ನೆಚ್ಚಿನ ಗ್ರಾಹಕರಿಗೆ ಸಿಹಿಸುದ್ದಿ ನೀಡಿದೆ. ನಿಗದಿತ ಅವಧಿಯಲ್ಲೇ ಪ್ರಮುಖ ಮೂರು ಕಾರು ಮಾದರಿಗಳನ್ನು ಪರಿಚಯಿಸುತ್ತಿದ್ದು, ಹೊಸ ಕಾರುಗಳ ಮಾಹಿತಿಯನ್ನು ಕೂಡಾ ಬಿಡುಗಡೆ ಮಾಡಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಹೀಗಾಗಿ ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿರುವ ಬಹುನೀರಿಕ್ಷಿತ ಕಾರುಗಳ ಮಾದರಿಗಳ ತಾಂತ್ರಿಕ ಅಂಶಗಳು, ಬೆಲೆ ಮತ್ತು ಬಿಡುಗಡೆಯ ದಿನಾಂಕ ಕುರಿತು ಇಲ್ಲಿ ಚರ್ಚಿಸಲಾಗಿದೆ.

Recommended Video

Cars Discontinued In India 2017 - DriveSpark
2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಥರ್ಡ್ ಜನರೇಷನ್ ಸ್ವಿಫ್ಟ್

ನಾವು ಈ ಹಿಂದೆ ಸೇಕೆಂಡ್ ಜನರೇಷನ್ ಸ್ವಿಫ್ಟ್ ಕಾರುಗಳ ಉತ್ಪಾದನೆ ಸ್ಥಗಿತದ ಬಗ್ಗೆ ವರದಿ ಮಾಡಿದ್ದೇವು. ಇದಕ್ಕೆ ಕಾರಣ ಸುಧಾರಿತ ತಂತ್ರಜ್ಞಾನಗಳನ್ನ ಸೌಲಭ್ಯ ಹೊಂದಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಪರಿಚಯಿಸಲಾಗುತ್ತಿದ್ದು, ಫೆಬ್ರುವರಿಯಲ್ಲಿ ನಡೆಯಲಿರುವ ಇಂಡಿಯನ್ ಆಟೋ ಎಕ್ಸ್‌ಪೋ ಬಳಿಕ ಖರೀದಿಗೆ ಲಭ್ಯವಾಗಲಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಇದರಿಂದಾಗಿ ನೆಕ್ಸ್ಟ್ ಜನರೇಷನ್ ಸ್ವಿಫ್ಟ್ ಕಾರು ಭಾರತೀಯ ಆಟೋ ಉದ್ಯಮದಲ್ಲಿ ಹೊಸ ಸಂಚಲನ ಸೃಷ್ಠಿಸುವ ಸಾಧ್ಯತೆಗಳಿದ್ದು, ಡಿಸೇಲ್ ಮತ್ತು ಪೆಟ್ರೋಲ್ ಎರಡು ಆವೃತ್ತಿಯಲ್ಲೂ ಆಟೋಮ್ಯಾಟಿಕ್ ಗೆೇರ್‌ಬಾಕ್ಸ್ ಇಲ್ಲವೇ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಒದಗಿಸಲಾಗುತ್ತಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

ಬೆಲೆ (ಅಂದಾಜು)- ರೂ. 5.5 ಲಕ್ಷದಿಂದ ರೂ. 9 ಲಕ್ಷ

ತಪ್ಪದೇ ಓದಿ-ಮಾಡಿದ ತಪ್ಪಿಗೆ ರೂ.1.61 ಲಕ್ಷ ದಂಡ ಪಾವತಿ ಮಾಡಿದ ಮಾರುತಿ ಸುಜುಕಿ

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

2018ರ ವ್ಯಾಗನ್ ಆರ್

ಮಾರುತಿ ಸುಜುಕಿ ಈ ವರ್ಷ ಬಿಡುಗಡೆ ಮಾಡಲಿರುವ ಪ್ರಮುಖ ಕಾರುಗಳಲ್ಲಿ 2018ರ ವ್ಯಾಗನ್ ಆರ್ ಕೂಡಾ ಹೊಸ ಭರವಸೆ ಹುಟ್ಟುಹಾಕಿದ್ದು, ವಿಶೇಷ ಎಂಜಿನ್ ಆಯ್ಕೆ ನೀಡುವ ಮೂಲಕ ಸಿಎನ್‍ಜಿ ಮತ್ತು ಎಲ್‌ಪಿಜಿ ಎರಡನ್ನು ಬಳಕೆ ಮಾಡಬಹುದಾಗಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

2018ರ ಅಕ್ಟೋಬರ್ ಇಲ್ಲವೇ ನವೆಂಬರ್‌ನಲ್ಲಿ ಹೊಸ ವ್ಯಾಗನ್ ಆರ್ ಬಿಡುಗಡೆ ಮಾಡುವ ಬಗ್ಗೆ ವರದಿಗಳಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯಲಿರುವ ವ್ಯಾಗನ್ ಆರ್‌ 1-ಲೀಟರ್ ಪೆಟ್ರೋಲ್ ಮಾದರಿಗಿಂತಲೂ ಹೊಸ ಮಾದರಿ ಹೆಚ್ಚಿನ ಸುರಕ್ಷಾ ಸೌಲಭ್ಯ ಹೊಂದಿರಲಿದೆ.

ಬೆಲೆ (ಅಂದಾಜು)- ರೂ. 4.60 ಲಕ್ಷದಿಂದ ರೂ. 5 ಲಕ್ಷ

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಎರ್ಟಿಗಾ ಫೇಸ್‌ಲಿಫ್ಟ್

ಭಾರತೀಯ ಮಾರುಕಟ್ಟೆಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಎರ್ಟಿಗಾ ಎಂಪಿವಿ ಮುಂಬರುವ ದಿನಗಳಲ್ಲಿ ಫೇಸ್‌ಲಿಫ್ಟ್ ವೈಶಿಷ್ಟ್ಯತೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಸದ್ಯ ಲಭ್ಯವಿರುವ ಮಾದರಿಯಲ್ಲೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4-ಲೀಟರ್ ಟರ್ಬೋ ಚಾರ್ಜ್ಡ್ ಡೀಸೆಲ್ ಎಂಜಿನ್‌ನೊಂದಿಗೆ ಉತ್ಪಾದನೆ ಮಾಡಲಾಗುತ್ತಿದೆ.

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಹೀಗಾಗಿ ಮುಂಬರುವ ಏಪ್ರಿಲ್‌ಗೆ ಬರಲಿರುವ ಹೊಸ ಕಾರಿನ ಎಂಜಿನ್ ಹೊರತುಪಡಿಸಿ ಕಾರಿನ ವಿನ್ಯಾಸ ಮತ್ತು ಇಂಟಿರಿಯರ್ ವಿನ್ಯಾಸ ಮತ್ತು ಏರ್‌ಬ್ಯಾಗ್ ಸೌಲಭ್ಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಗ್ರಾಹಕರ ಆದ್ಯತೆ ಮೇರೆಗೆ ಆಟೋಮ್ಯಾಟಿಕ ಮತ್ತು ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆ ಸಿಗಲಿದೆ.

ಬೆಲೆ (ಅಂದಾಜು)- ರೂ. 8 ಲಕ್ಷದಿಂದ ರೂ. 10 ಲಕ್ಷ

2018ರಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡಲಿರುವ ಬಹುನೀರಿಕ್ಷಿತ ಕಾರುಗಳು ಯಾವವು?

ಒಟ್ಟಿನಲ್ಲಿ ಮಾರುತಿ ಸುಜುಕಿ ಬಿಡುಗಡೆ ಮಾಡುತ್ತಿರುವ ಹೊಸ ಕಾರುಗಳು ಗ್ರಾಹಕರ ಬೇಡಿಕೆಗೆ ತಕ್ಕಂತೆ ಉತ್ಪಾದನೆ ಕೈಗೊಳ್ಳಲಾಗುತ್ತಿದ್ದು, ಈ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿನ ಕಾರುಗಳ ಮಾರಾಟದಲ್ಲಿ ಮತ್ತೊಮ್ಮೆ ಪ್ರಾಬಲ್ಯ ಸಾಧಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.

ತಪ್ಪದೇ ಓದಿ-ಹ್ಯುಂಡೈ ಕ್ರೇಟಾ ಹಿಂದಿಕ್ಕಲು ಬರುತ್ತಿದೆ ಟೊಯೊಟಾ ಹೊಸ ಕಾರು ರಷ್..!!

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

Trending DriveSpark YouTube Videos

Subscribe To DriveSpark Kannada YouTube Channel - Click Here

More from DriveSpark

Article Published On: Monday, January 1, 2018, 14:45 [IST]
English summary
Read in Kannada about Maruti Suzuki To Launch Three New Cars In 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+