ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಎಸ್‌ಯುವಿ ಕಾರುಗಳ ಮುನ್ನೋಟವನ್ನು ಹೆಚ್ಚಿಸುವ ಬುಲ್ ಬಾರ್ ಹಾಗೂ ಕ್ರ್ಯಾಶ್ ಗಾರ್ಡ್‌ಗಳನ್ನು ಕೇಂದ್ರ ಸರ್ಕಾರವು ಬ್ಯಾನ್ ಮಾಡಿದ್ದು, ಹೊಸ ಆದೇಶವನ್ನು ಈ ಕೂಡಲೇ ಜಾರಿಗೆ ತರುವಂತೆ ಎಲ್ಲಾ ರಾಜ್ಯಗಳ ಸಾರಿಗೆ ಸಂಸ್ಥೆಗಳಿಗೆ ಸುತ್ತೋಲೆ ಹೊರಡಿಸಿದೆ.

By Praveen

ಮೋಟಾರು ವಾಹನಗಳಿಗೆ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಅಳವಡಿಸುವುದನ್ನು ನಿಷೇಧಿಸಿ ಕೇಂದ್ರ ಸಾರಿಗೆ ಸಚಿವಾಲಯವು ಡಿ.7ರಂದು ಸುತ್ತೋಲೆ ಹೊರಡಿಸಿದ್ದು, ಇದರ ಪ್ರತಿಯು ಸಾಮಾಜಿಕ ಜಾಲತಾಣಗಳಲ್ಲಿ ಕೂಡಾ ಹರಿದಾಡುತ್ತಿದೆ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಎಸ್‌ಯುವಿ ಕಾರುಗಳು ಅಂದವಾಗಿ ಕಾಣಬೇಕು ಮತ್ತು ಅವಘಡಗಳು ಸಂಭವಿಸಿದಾಗ ವಾಹನದ ಮುಂಭಾಗಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಕಾರು ಮಾಲೀಕರು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಅಳವಡಿಸುತ್ತಿರುವುದನ್ನು ನಾವು ಗಮನಿಸಬಹುದು.

Recommended Video

Full Moon Causes Motorcycle Accidents, States New Study
ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಹೊಸ ಆದೇಶಕ್ಕೆ ಕಾರಣವೇನು?

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದರ ಹಿಂದೆ ಹಲವು ವೈಜ್ಞಾನಿಕ ಕಾರಣಗಳಿದ್ದು, ದೇಶದಲ್ಲಿ ಸಂಭವಿಸಿದ್ದ ಹಲವು ಅಪಘಾತಗಳಲ್ಲಿ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ತಾಗಿ ಹಲವರು ಮೃತಪಟ್ಟಿರುವುದೇ ಇದಕ್ಕೆ ಪ್ರಮುಖ ಕಾರಣ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಇನ್ನು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌‌ಗಳಿಂದಲೇ ಹಲವರು ಗಾಯಗೊಂಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವಾಲಯವು ಈ ಸುತ್ತೋಲೆ ಹೊರಡಿಸಿದ್ದು, ಅದರಲ್ಲಿರುವ ಅಂಶಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಎಲ್ಲ ರಾಜ್ಯಗಳ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಸುತ್ತೋಲೆಯಲ್ಲಿ ಏನಿದೆ?

ಮೋಟಾರ್ ವೆಹಿಕಲ್ ಆ್ಯಕ್ಟ್ 1988ರ ಸೆಕ್ಷನ್‌ 52ರ ಪ್ರಕಾರ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ಗಳನ್ನು ತೆರವು ಮಾಡುವಂತೆ ವಾಹನಗಳ ಮಾಲೀಕರಿಗೆ ಸೂಚನೆ ನೀಡಬೇಕು ಎಂದಿದೆ.

ತಪ್ಪದೇ ಓದಿ-60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಜೊತೆಗೆ ಹೊಸ ನಿಯಮವನ್ನು ಯಾರೂ ಉಲ್ಲಂಘಿಸುತ್ತಾರೋ ಅವರ ವಿರುದ್ಧ ಸೆಕ್ಷನ್‌ 190 ಹಾಗೂ 191 ಅಡಿ ಕ್ರಮ ಜರುಗಿಸಿ ದಂಡ ವಿಧಿಸಬೇಕು ಎಂದಿರುವ ಕೇಂದ್ರ ಸಾರಿಗೆ ಸಚಿವಾಲಯದ ನಿರ್ದೇಶಕರಾದ ಪ್ರಿಯಾಂಕಾ ಭಾರತಿ ಸುತ್ತೋಲೆ ಹೊರಡಿಸಿದ್ದಾರೆ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಆದ್ರೆ ಕೇಂದ್ರ ಹೊರಡಿಸಿರುವ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ನಿಷೇಧದ ಬಗ್ಗೆ ಯಾವುದೇ ಸುತ್ತೋಲೆ ಬಂದಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಮಾತ್ರ ಸುತ್ತೋಲೆ ಹರಿದಾಡುತ್ತಿರುವುದು ಗಮನಕ್ಕೆ ಬಂದಿದೆ ಎಂದು ರಾಜ್ಯ ಸಾರಿಗೆ ಇಲಾಖೆಯ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಹೀಗಾಗಿ ಸುತ್ತೋಲೆ ಬಗ್ಗೆ ನಿಖರ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ತದನಂತರವಷ್ಟೇ ಕೇಂದ್ರ ಸಾರಿಗೆ ಸಚಿವಾಲಯದ ಸುತ್ತೋಲೆ ಅಧಿಕೃತವಾಗಿ ಕೈ ಸೇರಿದ ಬಳಿಕ ರಾಜ್ಯದಲ್ಲಿ ಅದರ ಜಾರಿಗೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದಿದ್ದಾರೆ.

ಕೇಂದ್ರ ಸರ್ಕಾರವು ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌ ಬ್ಯಾನ್ ಮಾಡಿದ್ದೇಕೆ ಗೊತ್ತಾ?

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಕೇಂದ್ರ ಸರ್ಕಾರವು ಕಟ್ಟುನಿಟ್ಟಾಗಿ ಜಾರಿ ತರಲು ಹೊರಡಿಸಿರುವ ಸುತ್ತೋಲೆ ಮಹತ್ವದದಾಗಿದ್ದು, ಬ್ಯಾನ್ ಮಾಡಲಾಗಿರುವ ಬುಲ್‌ ಬಾರ್ ಹಾಗೂ ಕ್ರ್ಯಾಶ್‌ ಗಾರ್ಡ್‌‌ಗಳು ಅಪಘಾತಗಳ ತೀವ್ರತೆಗೆ ಕಾರಣವಷ್ಟೇ ಅಲ್ಲದೇ ಕಾರಿನ ಮೈಲೇಜ್ ಹೆಚ್ಚಿನ ಪರಿಣಾಮ ಬೀರುತ್ತದೆ ಎಂಬುವುದು ಕೂಡಾ ಅಷ್ಟೇ ಮುಖ್ಯ.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ.

Most Read Articles

Kannada
English summary
Read in Kannada about Indian Government Bans Car & SUV Crash Guard.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X