60 ಸಾವಿರ ಬೆಲೆಯ ಹೆಲ್ಮೆಟ್ ಹಾಕಿದ್ರು ಆ ಯುವಕನ ಜೀವ ಉಳಿಲಿಲ್ಲ...

ಕವಾಸಕಿ ನಿಂಜಾ ಝೆಡ್‌ಎಕ್ಸ್ 10ಆರ್ ನಲ್ಲಿ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದು, ಈ ವೇಳೆ ಬೈಕ್ ಸವಾರ ಧರಿಸಿದ್ದ ಸುಧಾರಿತ ತಂತ್ರಜ್ಞಾನ ಪ್ರೇರಿತ ಹೆಲ್ಮೆಟ್ ಆತನ ಪ್ರಾಣಕ್ಕೆ ಕುತ್ತು ತಂದಿರುವ ಘಟನೆ ನಡೆದಿದೆ.

By Praveen

30 ವರ್ಷದ ಸೂಪರ್ ಬೈಕ್ ಸವಾರನೊಬ್ಬ ತನ್ನ ಕವಾಸಕಿ ನಿಂಜಾ ಝೆಡ್‌ಎಕ್ಸ್ 10ಆರ್ ನಲ್ಲಿ ಚಾಲನೆ ಮಾಡುತ್ತಿದ್ದಾಗ ಅಪಘಾತಕ್ಕೀಡಾಗಿದ್ದು, ಈ ವೇಳೆ ಬೈಕ್ ಸವಾರ ಧರಿಸಿದ್ದ ಸುಧಾರಿತ ತಂತ್ರಜ್ಞಾನ ಪ್ರೇರಿತ ಹೆಲ್ಮೆಟ್ ಆತನ ಪ್ರಾಣಕ್ಕೆ ಕುತ್ತು ತಂದಿರುವ ಘಟನೆ ನಡೆದಿದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಅಂದಹಾಗೆ ಈ ಘಟೆನೆ ನಡೆದಿರುವ ರಾಜಸ್ಥಾನದ ಜೈಪುರ್‌ನಲ್ಲಿ. ಬೈಕರ್ ರೋಹಿತ್ ಸಿಂಗ್ ಶೆಖಾವತ್ ಬುಧವಾರ ರಾತ್ರಿ ತನ್ನ ಸೂಪರ್ ಬೈಕ್ ಕವಾಸಾಕಿ ನಿಂಜಾ ಝೆಡ್‍ಎಕ್ಸ್ 10ಆರ್ ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಈ ದುರಂತ ಸಂಭವಿಸಿದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಅಪಘಾತದ ಬಳಿಕ ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲಾಗದ ಕಾರಣ ಬ್ರೇನ್ ಹ್ಯಾಮರೇಜ್ (ಮೆದುಳಿನ ರಕ್ತಸ್ರಾವ) ಉಂಟಾಗಿದ್ದು, ಇದೇ ಕಾರಣಕ್ಕೆ ಬೈಕರ್ ಸಾವನ್ನಪ್ಪಿದ್ದಾರೆಂದು ಹೇಳಲಾಗುತ್ತಿದೆ.

Recommended Video

TVS Apache RR 310 Launched In India
ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಇನ್ನು ಮೃತ ರೋಹಿತ್ ಅವರು ಆಟೋಮೋಟಿವ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದರು. ಅವರ ಓಡಿಸುತ್ತಿದ್ದ ಬೈಕ್ ಕವಾಸಕಿ ನಿಂಜಾ ಝೆಡ್ಎಕ್ಸ್ 10 ಆರ್ ಸುಮಾರು ರೂ. 22 ಲಕ್ಷ ಮೌಲ್ಯದ್ದಾಗಿದ್ದು, ಗಂಟೆಗೆ 300 ಕಿ.ಮೀ ನಷ್ಟು ವೇಗವನ್ನ ತಲುಪುವ ಸಾಮರ್ಥ್ಯ ಹೊಂದಿದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಇದಲ್ಲದೇ ಕೆಲವು ವರದಿಗಳ ಪ್ರಕಾರ ರೋಹಿತ್ 50 ಸಾವಿರ ರೂ. ಮೌಲ್ಯದ ಇಂಪೋರ್ಟೆಡ್ ಹೆಲ್ಮೆಟ್ ಧರಿಸಿದ್ದರು ಎನ್ನಲಾಗಿದ್ದು, ಇದು ಅತೀ ವೇಗದಲ್ಲಿ ಚಾಲನೆ ಮಾಡುವಾಗಲೂ ಅಲುಗಾಡದಂತೆ ಈ ಹೆಲ್ಮೆಟ್ ವಿನ್ಯಾಸ ಮಾಡಲಾಗಿರುತ್ತದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಆದ್ರೆ ರೋಹಿತ್ ಅವರು ಇಲ್ಲಿನ ಜೆಎಲ್‍ಎನ್ ಮಾರ್ಗ್‍ನಲ್ಲಿ ಹೋಗುವಾಗ ರಸ್ತೆ ದಾಟುತ್ತಿದ್ದ ಇಬ್ಬರಿಗೆ ಡಿಕ್ಕಿ ಹೊಡೆಯೋದು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ಕಳೆದುಕೊಂಡಿದ್ದಾರೆ. ಈ ವೇಳೆ ರಸ್ತೆ ದಾಟುತ್ತಿದ್ದವರಿಗೆ ಗುದ್ದಿದ್ದು, ಬೈಕ್ ಸ್ಕಿಡ್ ಆಗಿ ಸುಮಾರು 50 ಅಡಿಗಳಷ್ಟು ದೂರ ರೋಹಿತ್‍ರನ್ನ ಎಳೆದುಕೊಂಡು ಹೋಗಿದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಈ ವೇಳೆ ರಸ್ತೆ ಮೇಲೆ ಬಿದ್ದಿದ್ದ ರೋಹಿತ್‍ಗೆ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲಿದ್ದವರು ರೋಹಿತ್ ಧರಿಸಿದ್ದ ಹೆಲ್ಮೆಟ್ ತೆಗೆಯಲು ಪ್ರಯತ್ನಿಸಿದ್ದಾರೆ. ಆದ್ರೆ ಹೆಲ್ಮೆಟ್ ತೆಗೆಯಲು ಆಗಿರಲಿಲ್ಲ. ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯಲಾಗಿದ್ದು, ವೈದ್ಯರು ಹೆಲ್ಮೆಟ್ ಕಟ್ ಮಾಡಿ ತೆಗೆದಿದ್ದಾರೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಹೀಗಾಗಿ ಹೆಲ್ಮೆಟ್ ಕಟ್ ಮಾಡಿ ತೆಗೆಯುವಷ್ಟರಲ್ಲಿ ರೋಹಿತ್ ಸ್ಥಿತಿ ಗಂಭೀರವಾಗಿದ್ದಲ್ಲದೇ ಉಸಿರಾಟದ ತೊಂದರೆ ಮತ್ತು ತೀವ್ರ ರಕ್ತಸಾವ್ರದಿಂದಾಗಿ ಉಸಿರು ಚೆಲ್ಲಿರುವುದು ದೃಡವಾಗಿದೆ.

ಅಪಘಾತಕ್ಕಿಡಾದ ಸೂಪರ್ ಬೈಕ್- ಹೆಲ್ಮೆಟ್ ತೆಗೆಯಲಾಗದೆ ಸವಾರ ಸಾವು

ಅತ್ತ ರೋಹಿತ್ ಅವರ ಬೈಕ್ ಗುದ್ದಿದ ವ್ಯಕ್ತಿಗೂ ಗಂಭೀರ ಗಾಯಗಳಾಗಿವೆ. ರೋಹಿತ್ ಅವರ ಬೈಕ್ ನಜ್ಜುಗುಜ್ಜಾಗಿದೆ. ಈ ಬಗ್ಗೆ ಜೈಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಡ್ರೈವ್ ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟ್ರೆಂಡಿಂಗ್ ವಿಡಿಯೋ ಇಲ್ಲಿದೆ ನೋಡಿ....

Most Read Articles

Kannada
Read more on accident ಅಪಘಾತ
English summary
Read in Kannada about Biker Fails To Remove His Helmet Post Accident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X