ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಬಿಡುಗಡೆಯಾಗುತ್ತಿರುವ ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್ ವರ್ಷನ್‌ಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದೆ.

By Praveen Sannamani

ಬಿಡುಗಡೆಯಾಗುತ್ತಿರುವ ಸೆಡಾನ್ ಕಾರುಗಳಲ್ಲಿ ಮಾರುತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್ ವರ್ಷನ್‌ಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿದ್ದು, ಬಿಡುಗಡೆಗೂ ಮುನ್ನವೇ ಹೊಸ ಕಾರಿನ ತಾಂತ್ರಿಕ ಅಂಶಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಮಾರುತಿ ಸುಜುಕಿ ಸಂಸ್ಥೆಯು ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಕಾರನ್ನು ಮುಂದಿನ ತಿಂಗಳು ಆಗಸ್ಟ್ ಆರಂಭದಲ್ಲಿ ಬಿಡುಗಡೆಗೊಳಿಸಲಿದ್ದು, ಇದರ ಮಧ್ಯೆ ನೆಕ್ಸಾ ಡೀಲರ್‍‍ಗಳು ಸಹ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಪ್ರಾರಂಭಿಸಿದ್ದಾರೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಬಿಡುಗಡೆಗೊಳ್ಳಲಿರುವ ಸಿಯಾಜ್ ಫೇ‍‍ಸ್‍‍ಲಿಫ್ಟ್ ಕಾರು ಖರೀದಿಗಾಗಿ ಗ್ರಾಹಕರು ಹತ್ತಿರದ ನೆಕ್ಸಾ ಶೋರಂ‍‍ನಲ್ಲಿ ರೂ. 21,000 ಸಾವಿರದ ಮೊತ್ತವನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದ್ದು, ಅಷ್ಟೆ ಅಲ್ಲದೇ ಸಂಸ್ಥೆಯು ತಮ್ಮ ಹಿಂದಿನ ತಲೆಮಾರಿನ ಸಿಯಾಜ್ ಕಾರುಗಳ ಮೇಲೆ ಸುಮಾರು ರೂ. 1 ಲಕ್ಷದ ವರೆಗಿನ ರಿಯಾಯಿತಿ ಕೂಡಾ ನೀಡುತ್ತಿದೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಲಾಗಿದೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಇನ್ನು ಟ್ರಾನ್ಸ್ ಮಿಷನ್ ಬಗ್ಗೆ ಹೇಳುವುದಾದರೇ, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಸದ್ಯ ಖರೀದಿಗಿರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಭರ್ತಿ ಮಾಡಲಿದೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್‍ ಮಾರ್ಕೆಟ್ ಡ್ಯಾಶ್‍‍ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್‍ರೂಫ್, ಅಡಿಷನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.

ಸೆಡಾನ್ ಪ್ರಿಯರಲ್ಲಿ ಕುತೂಹಲ ಹುಟ್ಟುಹಾಕಿದ ಸಿಯಾಜ್ ಫೇಸ್‌ಲಿಫ್ಟ್

ಇನ್ನು ಕಾರಿನ ಬೆಲೆಯ ಬಗ್ಗೆ ಯಾವುದೆ ಖಚಿತ ಮಾಹಿತಿಯು ಲಭ್ಯವಾಗಿಲ್ಲವಾದರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ರಿಂದ 12 ಲಕ್ಷದ ವರೆಗು ಇರಬಹುದೆಂದು ಎಂದಾಜಿಸಲಾಗಿದ್ದು, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರ್‍ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ.

Spy image source:autoportal

More from DriveSpark

Article Published On: Saturday, July 28, 2018, 17:27 [IST]
English summary
2018 Maruti Suzuki Ciaz Facelift Spied Ahead Of Launch.
Read more on maruti suzuki sedan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+