ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಕಳೆದ ವಾರವಷ್ಟೇ ಜನಪ್ರಿಯ ಓಮ್ನಿ ವಾಹನ ಉತ್ಪಾದನೆ ಮತ್ತು ಮಾರಾಟವನ್ನು ಮುಂದಿನ ಕೆಲವೇ ದಿನಗಳಲ್ಲಿ ಬಂದ್ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದ ಮಾರುತಿ ಸುಜುಕಿ ಸಂಸ್ಥೆಯು ಇದೀಗ ಮತ್ತೊಂದು ಆಪ್ ರೋಡ್ ಖ್ಯಾತಿಯ ಜಿಪ್ಸಿ ಕಾರುಗಳಿಗೂ ಗುಡ್ ಬೈ ಹೇಳುತ್ತಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಸಂಸ್ಥೆಯು ಇದೇ ವರ್ಷ 2018ರ ಡಿಸೆಂಬರ್‌ನಿಂದ ಜಿಪ್ಸಿ ಕಾರುಗಳ ಬುಕ್ಕಿಂಗ್ ಪ್ರಕ್ರಿಯೆಯನ್ನು ಬಂದ್ ಮಾಡಲು ನಿರ್ಧರಿಸಲಾಗಿದ್ದು, 2019ರ ಮಾರ್ಚ್ ಅಂತ್ಯಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ಪಾದನಾ ಚಟುವಟಿಕೆಯನ್ನು ನಿಲ್ಲಿಸುವುದಾಗಿ ಖಚಿತಪಡಿಸಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ದೇಶಿಯ ಮಾರುಕಟ್ಟೆಯಲ್ಲಿ ಈ ಹಿಂದೆ 1985ರಲ್ಲಿ ಬಿಡುಗಡೆಗೊಂಡಿದ್ದ ಜಿಪ್ಸಿ ಕಾರುಗಳು ಭಾರೀ ಜನಪ್ರಿಯತೆಯೊಂದಿಗೆ ಆಟೋ ಉದ್ಯಮದಲ್ಲಿ ಇಂದಿಗೂ ಬೇಡಿಕೆಯ ವಾಹನವಾಗಿ ಮಾರಾಟಗೊಳ್ಳುತ್ತಿದ್ದು, ಇತ್ತೀಚೆಗೆ ಆಟೋ ಉದ್ಯಮದಲ್ಲಿ ಬದಲಾಗುತ್ತಿರುವ ಪ್ರಮುಖ ಬೆಳವಣಿಗೆಯಿಂದಾಗಿ ಜಿಪ್ಸಿ ಹಾಗೂ ಓಮ್ನಿ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಕುತ್ತು ಬಂದಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ದೇಶದಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ ಆಟೋ ಉದ್ಯಮದಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗುತ್ತಿದ್ದು, ಮಾರುತಿ ಸುಜುಕಿ ನಿರ್ಮಾಣದ ಪ್ರಮುಖ ಕಾರುಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷಾ ಸೌಲಭ್ಯಗಳಿಲ್ಲದಿರುವುದು ಆತಂಕಕ್ಕೆ ಕಾರಣವಾಗಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಕಾರು ಉತ್ಪಾದನೆ ಮತ್ತು ಮಾರಾಟದಲ್ಲಿ ನಂ.1 ಸ್ಥಾನದಲ್ಲಿದ್ದು, ಮಾರಾಟಕ್ಕೆ ಲಭ್ಯವಿರುವ 15ಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಬಹುತೇಕ ಮಾದರಿಗಳು ಜನಪ್ರಿಯತೆ ಸಾಧಿಸಿವೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಆದ್ರೆ ಕಾರುಗಳಲ್ಲಿನ ಸುರಕ್ಷಾ ವಿಚಾರಕ್ಕೆ ಸಂಬಂಧಿಸಿದಂತೆ ಮಾರುತಿ ಸುಜುಕಿ ಸಂಸ್ಥೆಗೆ ಇದೀಗ ಹಿನ್ನೆಡೆಯಾಗಿದ್ದು, ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಜನಪ್ರಿಯ ಕಾರುಗಳೇ ರೇಟಿಂಗ್‌ನಲ್ಲಿ ಸೊನ್ನೆ ಸುತ್ತಿವೆ ಎಂದ್ರೆ ನೀವು ನಂಬಲೇಬೇಕು.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಕೇಂದ್ರ ಸರ್ಕಾರವು ಮುಂಬರುವ 2019ರಿಂದ ಪ್ರತಿ ಕಾರು ಮಾದರಿಯಲ್ಲೂ ನಿರ್ದಿಷ್ಟ ಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿದ್ದರೇ ಮಾತ್ರವೇ ಕಾರು ಮಾರಾಟಕ್ಕೆ ಅವಕಾಶ ನೀಡುವ ಉದ್ದೇಶದಿಂದ ಇಂಡಿಯನ್ ಕ್ರ್ಯಾಶ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ಆರಂಭಿಸಿದ್ದು, ಮಾರುತಿ ಸುಜುಕಿಗೆ ಈಗಲೇ ತಳಮಳ ಶುರುವಾಗಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಕಳೆದ ತಿಂಗಳು ಹಿಂದಷ್ಟೆ ನಡೆದಿದ್ದ ಮಾರುತಿ ಸುಜುಕಿ ನಿರ್ಮಾಣದ 15 ಪ್ರಮುಖ ಕಾರುಗಳು ಈ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಹತ್ತಕ್ಕೂ ಹೆಚ್ಚು ಕಾರು ಉತ್ಪನ್ನಗಳಲ್ಲಿ ಕನಿಷ್ಠ ಮಟ್ಟದ ಸುರಕ್ಷತೆ ಇಲ್ಲದಿರುವುದು ಖರೀದಿಗೆ ಯೋಗ್ಯವಲ್ಲದ ಎಂಬುವುದು ಸಾಬೀತಾಗಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಕಾರುಗಳು ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 4, 3, 2, 1, 0 ಸ್ಟಾರ್ ರೇಟಿಂಗ್ ಬಂದಲ್ಲಿ ಅನುಕ್ರಮವಾಗಿ ಉತ್ತಮ, ಖರೀದಿಗೆ ಯೋಗ್ಯ, ಸಾಧರಣ, ಅಸುರಕ್ಷಿತ ಕಾರು ಮಾದರಿ ಎಂದು ಕರೆಯಲಾಗುತ್ತದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಇದರಲ್ಲಿ ಮಾರುತಿ ಸುಜುಕಿ ನಿರ್ಮಾಣದ ಸೆಲೆರಿಯೊ, ಇಗ್ನಿಸ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಬಲೆನೊ, ವಿಟಾರಾ ಬ್ರೆಝಾ, ಸಿಯಾಜ್ ಮತ್ತು ಎಸ್-ಕ್ರಾಸ್ ಕಾರುಗಳು ಮಾತ್ರವೇ ಉತ್ತಮವಾದ ಸುರಕ್ಷಾ ರೇಟಿಂಗ್ ಪಡೆದುಕೊಂಡಿದ್ದು, ಇನ್ನುಳಿದ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ, ಜಿಪ್ಸಿ ಮತ್ತು ರಫ್ತು ಮಾದರಿಯಾದ ಜಿಮ್ನಿ ಕಾರು ರೇಟಿಂಗ್ ಪಾಯಿಂಟ್‌ನಲ್ಲಿ ಸೊನ್ನೆ ಪಡೆದಿರುವುದು ಭಾರೀ ಚರ್ಚೆಗೆ ಕಾರಣವಾಗಿವೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ವಾಸ್ತಾವವಾಗಿ ಸೊನ್ನೆ ರೇಟಿಂಗ್ ಹೊಂದಿರುವ ಕಾರುಗಳನ್ನು ಮಾರಾಟ ಮಾಡಲು ವಿದೇಶಿ ಮಾರುಕಟ್ಟೆಗಳಲ್ಲಿ ಅನುಮತಿಯೇ ಇಲ್ಲದಿರುವ ಸಂದರ್ಭದಲ್ಲಿ ಮಾರುತಿ ಸುಜುಕಿ ಸಂಸ್ಥೆಯು ಮಾತ್ರ ಭಾರತೀಯ ಮಾರುಕಟ್ಟೆಯಲ್ಲಿ ಆಲ್ಟೊ, ವ್ಯಾಗನ್ ಆರ್, ಓಮ್ನಿ ಮತ್ತು ಜಿಪ್ಸಿ ಕಾರುಗಳನ್ನ ಹಾಟ್ ಚಿಪ್ಸ್‌ನಂತೆ ಮಾರಾಟ ಮಾಡುತ್ತಿರುವುದು ಕಳವಳಕಾರಿ ಸಂಗತಿ ಅಂದ್ರೆ ತಪ್ಪಾಗುದಿಲ್ಲ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಕನಿಷ್ಠ ಮಟ್ಟದ ಸುರಕ್ಷೆತೆಯನ್ನು ನೀಡಲು ಹಿಂದೆ ಮುಂದೆ ನೋಡುವ ಮಾರುತಿ ಸುಜುಕಿಗೆ ಇದೀಗ ಸಂಕಷ್ಟ ಎದುರಾಗಿದ್ದು, 2019ರಿಂದ ಜಾರಿಗೆ ಬರಲಿರುವ ಹೊಸ ಕಾಯ್ದೆಯಿಂದ ಸೊನ್ನೆ ರೇಟಿಂಗ್ ಪಡೆದಿರುವ ಕಾರುಗಳು ಮೂಲೆಗುಂಪಾಬೇಕಾದ ಅನಿವಾರ್ಯತೆಗಳಿವೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಇಲ್ಲವಾದ್ರೆ, ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿದ ನಂತರವೇ ಮಾರಾಟ ಮಾಡಬಹುದಾದ ಅವಕಾಶವಿದ್ದು, ಇದುವರೆಗೆ ಆಲ್ಟೊ, ವ್ಯಾಗನ್ ಆರ್, ಒಮ್ನಿ, ಇಕೊ ಖರೀದಿ ಮಾಡಿರುವ ಗ್ರಾಹಕರ ಪರಿಸ್ಥಿತಿ ಉಹಿಸಲು ಅಸಾಧ್ಯ.

MOST READ: ಮದುವೆ ಮನೆಯಲ್ಲಿ ಗೆಳೆಯರ ಸ್ಪೆಷಲ್ ಗಿಫ್ಟ್ ನೋಡಿ ನವದಂಪತಿ ಫುಲ್ ಶಾಕ್.!?

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಯಾಕೆಂದ್ರೆ ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ಕನಿಷ್ಠ ಮಟ್ಟದ ಸುರಕ್ಷೆ ಇಲ್ಲದಿರುವ ಕಾರುಗಳಿಂದ ಅಪಘಾತದ ತೀವ್ರತೆ ಮತ್ತಷ್ಟು ಏರಿಕೆಯಾಗಲಿದ್ದು, ಇದೇ ಕಾರಣಕ್ಕೆ ಕಠಿಣ ನಿರ್ಧಾರ ಕೈಗೊಂಡಿರುವ ಕೇಂದ್ರ ಸರ್ಕಾರವು ಕನಿಷ್ಠ ಸುರಕ್ಷಾ ಸೌಲಭ್ಯಗಳನ್ನು ಅಳವಡಿಸಿ ಮಾರಾಟ ಮಾಡಿ ಇಲ್ಲವೇ ಕಳಪೆ ಗುಣಮಟ್ಟದ ಕಾರುಗಳನ್ನು ವಾಪಸ್ ಪಡೆಯಿರಿ ಎಂದು ಕಾರು ಉತ್ಪಾದನಾ ಸಂಸ್ಥೆಗಳಿಗೆ ಖಡಕ್ ವಾರ್ನ್ ಮಾಡಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಹೀಗಾಗಿಯೇ ಜಿಪ್ಸಿ ವಾಹನಗಳಿಗೆ ಗುಡ್‌ಬೈ ಹೇಳಲು ನಿರ್ಧರಿಸುವ ಮಾರುತಿ ಸುಜುಕಿ ಸಂಸ್ಥೆಯು ಇನ್ನುಳಿದ ಕಾರು ಮಾದರಿಗಳಲ್ಲಿ ಹೆಚ್ಚಿನ ಗುಟ್ಟಮಟ್ಟ ಒದಗಿಸುವತ್ತ ಚಿಂತನೆ ನಡೆಸಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಜಿಪ್ಸಿ ಕಾರುಗಳು ಇತಿಹಾಸದ ಪುಟ ಸೇರಲಿದೆ.

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಪ್ಸಿ ಕಾರುಗಳು 1.0-ಲೀಟರ್ ಮತ್ತು 1.3-ಲೀಟರ್ ಎಂಜಿನ್ ಮಾದರಿಯಲ್ಲಿ ಮಾರಾಟವಾಗುತ್ತಿದ್ದು, ಆನ್ ರೋಡ್ ಬೆಲೆಗಳ ಪ್ರಕಾರ 8.02 ಲಕ್ಷಕ್ಕೆ ಲಭ್ಯವಿದೆ. ಆದ್ರೆ ಹೊಸ ಕಾರುಗಳಲ್ಲಿ ಬಿಎಸ್ 4 ಎಂಜಿನ್ ಹೊರತುಪಡಿಸಿ ಏರ್‌ಬ್ಯಾಗ್, ಎಬಿಎಸ್ ಇಲ್ಲದಿರುವುದು ಹೊಸ ಸುರಕ್ಷಾ ನಿಯಮಗಳಿಗೆ ವಿರುದ್ದವಾಗಿದೆ.

MOST READ: ಮಾರುತಿ ಸುಜುಕಿಗೆ ಟಕ್ಕರ್ ನೀಡಲು 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ಆಪ್ ರೋಡ್ ಕಿಂಗ್ ಖ್ಯಾತಿಯ ಜಿಪ್ಸಿಗೆ ಗುಡ್ ಬೈ ಹೇಳಿದ ಮಾರುತಿ ಸುಜುಕಿ

ಇನ್ನು ಜಿಪ್ಸಿ ಕಾರುಗಳನ್ನ ಹೆಚ್ಚಾಗಿ ಬಳಕೆ ಮಾಡುತ್ತಿದ್ದ ಭಾರತೀಯ ಸೇನೆ ಕೂಡಾ ಜಿಪ್ಸಿಗೆ ಗುಡ್ ಬೈ ಹೇಳಿ ಟಾಟಾ ಸಫಾರಿ ಖರೀದಿ ಮಾಡುತ್ತಿದ್ದು, ಇದು ಕೂಡಾ ಜಿಪ್ಸಿಗೆ ಮತ್ತೊಂದು ಹೊಡೆತ ಕೊಟ್ಟಂತಾಗಿದೆ. ಇದರಿಂದ ಜಿಪ್ಸಿ ಉತ್ಪಾದನೆ ಮತ್ತು ಮಾರಾಟವನ್ನು ನಿಲ್ಲಿಸುವ ಮಹತ್ವದ ನಿರ್ಧಾರಕ್ಕೆ ಬರಲಾಗಿದ್ದು, ಮುಂದಿನ ಒಂದು ತಿಂಗಳ ಅವಧಿಗೆ ಮಾತ್ರವೇ ಜಿಪ್ಸಿ ಖರೀದಿಗೆ ಲಭ್ಯವಿರಲಿವೆ.

Article Published On: Wednesday, November 14, 2018, 12:50 [IST]
English summary
Maruti Suzuki Gypsy To Be Discontinued By March 2020: Bookings To Stop From December 2018.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+