ಭಾರತದಲ್ಲಿ ಬಿಡುಗಡೆಗೊಂಡ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಗ್ರ್ಯಾಂಡ್ ಎಡಿಷನ್..
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಜ್ ಭಾರತದ ಮಾರುಕಟ್ಟೆಗೆ ತಮ್ಮ ಹೊಸ ಜಿಎಲ್ಎಸ್ ಕಾರಿನ ಗ್ರ್ಯಾಂಡ್ ಎಡಿಶನ್ ಅನ್ನು ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ.
ಜರ್ಮನ್ ಮೂಲದ ಐಷಾರಾಮಿ ಕಾರು ತಯಾರಕ ಸಂಸ್ಥೆಯಾದ ಮರ್ಸಿಡಿಸ್ ಬೆಂಝ್ ಭಾರತದ ಮಾರುಕಟ್ಟೆಗೆ ತಮ್ಮ ಹೊಸ ಜಿಎಲ್ಎಸ್ ಕಾರಿನ ಗ್ರ್ಯಾಂಡ್ ಎಡಿಷನ್ ಅನ್ನು ಬಿಡುಗಡೆಗೊಳಿಸಿದ್ದು, ಹೊಸ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದೆ.

ಹೊಸದಾಗಿ ಬಿಡುಗಡೆಗೊಂಡ ಮರ್ಸಿಡಿಸ್ ಬೆಂಝ್ ಜಿಎಲ್ಎಸ್ ಗ್ರ್ಯಾಂಡ್ ಎಡಿಷನ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 86.90 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ರೆಗ್ಯುಲರ್ ಆವೃತ್ತಿಗಿಂತ ವಿನ್ಯಾಸದಲ್ಲಿ ಮಾತ್ರ ಬದಲಾವಣೆಗಳನ್ನು ಕಾಣಬಹುದಾಗಿದೆ.

ಜಿಎಲ್ಎಸ್ ಗ್ರ್ಯಾಂಡ್ ಎಡಿಷನ್ ಕಾರಿನ ಹೊರ ವಿನ್ಯಾಸವು ಇಂಟಿಗ್ರೇಟೆಡ್ ಬ್ಲಾಕ್ ರಿಂಗ್ಸ್ ಹೊಂದಿರುವ ಇಂಟೆಲಿಜೆಂಟ್ಸ್ ಎಲ್ಇಡಿ ಹೆಡ್‍ಲ್ಯಾಂಪ್ಸ್, ಬೊನೆಟ್‍ನ ಮೇಲೆ ಸ್ಕ್ರೋಮ್ ಫಿನ್ಸ್, 20 ಇಂಚು, 10 ಇಂಚಿನ ಅಲಾಯ್ ಚಕ್ರಗಳು ಹಾಗು ಎಸ್‍ಯುವಿ ಕಾರಿನ ಸುತ್ತಲು ಗ್ರ್ಯಾಂಡ್ ಎಡಿಷನ್ ಎಂಬ ಬ್ಯಾಡ್ಜಿಂಗ್ ಅನ್ನು ಪಡೆದಿರಲಿದೆ.

ಇನ್ನು ಕಾರಿನ ಒಳಭಾಗವು ಮೂರು ಸ್ಪೋಕ್ ಉಳ್ಳ ವಿವಿದ ಕ್ರಿಯಾತ್ಮಕ ಸ್ಟೀರಿಂಗ್ ವೀಲ್ ನಪ್ಪಾ ಲೆದರ್‍ನಿಂದ ಸಜ್ಜುಗೊಂಡಿದ್ದು, ಪ್ಯಾಡಲ್ ಶಿಫ್ಟ್‌ರ್ಸ್, 12 ಫಂಕ್ಷನ್ ಕೀಗಳು, ನಪ್ಪಾ ಲೆದರ್‍ನಿಂದ ಸಜ್ಜುಗೊಂಡಂತಹ ಏರ್‍ಬ್ಯಾಗ್‍ಗಳನ್ನು ಪಡೆದಿರುತ್ತದೆ.

ಜೊತೆಗೆ ಮರು ವಿನ್ಯಾಸ ಪಡಿಸಲಾಗಿರುವ ಸಿಮಿ ಇಂಟಿಗ್ರೇಟೆಡ್ ಹೊಂದಿರುವಂತಹ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಕಲರ್ ಮೀಡಿಯಾ ಡಿಸ್ಪ್ಲೇ, ರೀರ್ ಸೀಟ್ ಇನ್ಫೋಟೈನ್ಮೆಂಟ್ ಸಿಸ್ಟಂ, 7 ಇಂಚಿನ ಹೆಚ್‍ಡಿ ಸ್ಕ್ರೀನ್‍ಗಳು ಅಂಡ್ರಾಯ್ಡ್ ಆಟೋ ಹಾಗು ಆಪಲ್ ಕಾರ್ ಪ್ಲೇಯೊಂದಿಗೆ ಸೇರಿಸಲಾಗಿದೆ.

ಎಂಜಿನ್ ಸಾಮರ್ಥ್ಯ
ತಾಂತ್ರಿಕತೆಯಲ್ಲಿ ಮರ್ಸಿಡಿಸ್ ಬೆಂಜ್ ಜಿಎಲ್ಎಸ್ ಗ್ರ್ಯಾಂಡ್ ಎಡಿಷನ್ ಎಸ್‍ಯುವಿ ಕಾರುಗಳು ರೆಗ್ಯೂಲರ್ ಮಾದರಿಯ ಏಂಜಿನ್ ಅನ್ನು ಪಡೆದಿದ್ದು, 3.0 ಲೀಟರ್ ವಿ6 ಪೆಟ್ರೋಲ್ ಎಂಜಿನ್ ಹೊಂದಿದೆ. ಈ ಮೂಲಕ 333ಬಿಹೆಚ್‍ಪಿ ಹಾಗು 480ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

ಹಾಗೆಯೇ ಜಿಎಲ್ಎಸ್ ಗ್ರ್ಯಾಂಡ್ ಎಡಿಷನ್ ಎಸ್‍ಯುವಿ ಕಾರು ಡೀಸೆಲ್ ಮಾದರಿಯಲ್ಲಿಯೂ ಕೂಡ ಲಭ್ಯವಿದ್ದು, 3.0 ಲೀಟರ್ ವಿ6 ಡೀಸೆಲ್ ಎಂಜಿನ್ ಸಹಾಯದಿಂದ 258ಬಿಹೆಚ್‍ಪಿ ಹಾಗು 620ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ..
2. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..
3. ಹೊಸ ಸ್ಕೂಟರ್‌ಗಳಲ್ಲಿ ತಾಂತ್ರಿಕ ದೋಷ- ಗ್ರಾಜಿಯಾ, ಆಕ್ಟಿವಾ 125 ಹಿಂಪಡೆದ ಹೋಂಡಾ
4. ಮಂಗಳೂರಿಗೆ ಬಂದ ಭಾರತದ ಮೊದಲ ಕವಾಸಕಿ ಜೆಡ್900ಆರ್‍ಎಸ್ ಬೈಕ್..
5. ಉಡುಪಿಯಲ್ಲಿ ಭೀಕರ ಅಪಘಾತ- ಇನೋವಾ ಗುದ್ದಿದ ರಭಸಕ್ಕೆ ಗಾಳಿಯಲ್ಲಿ ತೂರಿ ಹೋದ ಪಲ್ಸರ್ ಬೈಕ್...


Click it and Unblock the Notifications








