2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟದಲ್ಲಿ ಭಾರೀ ಬದಲಾವಣೆ ಕಂಡುಬರುತ್ತಿರುತ್ತಿದ್ದು, ಜಗತ್ತಿನ ಪ್ರಮುಖ ಆಟೋ ಉತ್ಪಾದನಾ ಸಂಸ್ಥೆಗಳು ಈಗಾಗಲೇ ಬೃಹತ್ ಬಂಡವಾಳದೊಂದಿಗೆ ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಗೆ ಚಾಲನೆ ನೀಡುವ ಮೂಲಕ ಹೊಸ ಬದಲಾವಣೆಗೆ ನಾಂದಿಹಾಡಿವೆ. ಹೀಗಿರುವಾಗ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಎಂಜಿ ಮೋಟಾರ್ ಕೂಡಾ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡುವ ಸುಳಿವು ನೀಡಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ 2ನೇ ತ್ರೈಮಾಸಿಕ ಅವಧಿಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸಲು ಈಗಾಗಲೇ ಹೊಸ ಯೋಜನೆ ರೂಪಿಸಿದ್ದು, 2020ರ ಆರಂಭದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಬಗ್ಗೆ ಇದೀಗ ಮಹತ್ವದ ಮಾಹಿತಿ ನೀಡಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಭಾರತದಲ್ಲಿ ಮೊದಲ ಬಾರಿಗೆ ತನ್ನ ಕಾರು ಉತ್ಪನ್ನಗಳನ್ನು ಮಾರಾಟಕ್ಕೆ ಸಿದ್ದವಾಗುತ್ತಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ 2ನೇ ತ್ರೈಮಾಸಿಕ ಅವಧಿಗೆ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಈಗಾಗಲೇ ಹೊಸ ಯೋಜನೆ ರೂಪಿಸಿದ್ದು, 2020ರ ಆರಂಭದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವ ಬಗ್ಗೆ ಇದೀಗ ಮಹತ್ವದ ಮಾಹಿತಿ ನೀಡಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ದೇಶದ ಆಟೋಮೊಬೈಲ್ ಕ್ಷೇತ್ರದಲ್ಲಿ ಇತ್ತೀಚೆಗೆ ಭಾರೀ ಬದಲಾವಣೆ ಕಂಡುಬರುತ್ತಿದ್ದು, ಹೊಸ ಕಾರು ಉತ್ಪಾದನಾ ಸಂಸ್ಥೆಗಳು ಭಾರತದಲ್ಲಿ ತಮ್ಮ ಜನಪ್ರಿಯ ಕಾರು ಉತ್ಪನ್ನಗಳನ್ನು ಬಿಡುಗಡೆಗೊಳಿಸುವ ನಿಟ್ಟಿನಲ್ಲಿ ಬೃಹತ್ ಯೋಜನೆಗಳನ್ನು ರೂಪಿಸುತ್ತಿವೆ. ಇವುಗಳಲ್ಲಿ ಎಂಜಿ (ಮೊರಿಸ್ ಗ್ಯಾರೆಜ್) ಮೋಟಾರ್ ಕೂಡಾ ಒಂದು.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

1924ರಿಂದಲೇ ಎಂಜಿ ಮೋಟಾರ್ ಸಂಸ್ಥೆಯು ಆಟೋ ಉದ್ಯಮದಲ್ಲಿ ಕಾರ್ಯಚರಣೆ ನಡೆಸುತ್ತಿದ್ದು, ಇತ್ತೀಚೆಗೆ ಹಣಕಾಸು ಮುಗ್ಗಟ್ಟು ಎದುರಿಸಿತ್ತು. ಈ ಹಿನ್ನೆಲೆ ನಷ್ಟದ ಸುಳಿಯಲ್ಲಿದ್ದ ಸಂಸ್ಥೆಯನ್ನು ಚೀನಾ ಮೂಲದ ಎಸ್‌ಎಐಸಿ( SAIC) ಸಂಸ್ಥೆಯು ಸ್ಪಾಧೀನಪಡಿಸಿಕೊಂಡು ಭಾರತದಲ್ಲಿ ಹೊಸ ಕಾರು ಉತ್ಪನ್ನಗಳನ್ನು ಪರಿಚಯಿಸುತ್ತಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಈ ಸಂಬಂಧ ತನ್ನ ಭವಿಷ್ಯದ ಯೋಜನೆಗಳ ಕುರಿತು ಚರ್ಚಿಸಲು ಭಾರತದಿಂದ ಡ್ರೈವ್‌ಸ್ಪಾರ್ಕ್ ಸೇರಿದಂತೆ ಹಲವು ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿದ್ದ ಎಸ್‌ಎಐಸಿ ಸಂಸ್ಥೆಯು, ಚೀನಾದಲ್ಲಿರುವ ತನ್ನ ಅತಿದೊಡ್ಡ ಕಾರು ಉತ್ಪಾದನಾ ಘಟಕದಲ್ಲಿ ವಿಶೇಷ ಕಾರ್ಯಗಾರ ಹಮ್ಮಿಕೊಂಡಿತ್ತು.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಈ ವೇಳೆ ಭಾರತದಲ್ಲಿ ತನ್ನ ಭವಿಷ್ಯ ಯೋಜನೆಗಳ ಬಗ್ಗೆ ಮಹತ್ವದ ಚರ್ಚೆ ನಡೆಸಿದ ಎಸ್‌ಎಐಸಿ ಸಂಸ್ಥೆಯು, ಸಿ ಸೆಗ್ಮೆಂಟ್ ಎಸ್‌ಯುವಿ ಕಾರುಗಳ ಮಾರಾಟದಲ್ಲಿ ಬಹುದೊಡ್ಡ ಬದಲಾವಣೆ ತರುವುದಲ್ಲದೇ ಎಲೆಕ್ಟ್ರಿಕ್ ಕಾರುಗಳನ್ನು ಸಹ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಹೀಗಾಗಿಯೇ ಎಲೆಕ್ಟ್ರಿಕ್ ಕಾರುಗಳು ಮತ್ತು ಕಾರುಗಳ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಹೆಚ್ಚುವರಿಯಾಗಿ 5 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುತ್ತಿದ್ದು, 2019ರ ಎರಡನೇ ತ್ರೈಮಾಸಿಕ ಅವಧಿಗೆ ತನ್ನ ಹೊಸ ಕಾರುಗಳನ್ನು ಮಾರುಕಟ್ಟೆಗೆ ಪರಿಚಯಿಸುವ ಸುಳಿವು ನೀಡಿದೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗುತ್ತಿರುವ ಹೊಸ ಸ್ಯಾಂಟ್ರೋದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಗೊತ್ತಾ?

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಜೊತೆಗೆ ಎಂಜಿ ಮೋಟಾರ್ ಸಂಸ್ಥೆಯು 2017ರ ಸಪ್ಟೆಂಬರ್‌ನಲ್ಲಿಯೇ 2 ಸಾವಿರ ಕೋಟಿ ವೆಚ್ಚದಲ್ಲಿ ಗುಜರಾತ್ ರಾಜ್ಯದ ಹೊಲಾಲ್‌ನಲ್ಲಿ ತನ್ನ ಮೊದಲ ಕಾರು ಉತ್ಪಾದನಾ ಘಟಕವನ್ನು ಆರಂಭಗೊಳಿಸಿದ್ದು, ಮಧ್ಯಮ ಗಾತ್ರದ ಎಸ್‌ಯುವಿ, ಹ್ಯಾಚ್‌ಬ್ಯಾಕ್ ಮತ್ತು ಸೆಡಾನ್ ಕಾರುಗಳನ್ನು ಪರಿಚಯಿಸುವ ತವಕದಲ್ಲಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಇದಕ್ಕಾಗಿ 170 ಎಕರೆ ಭೂಮಿಯನ್ನು ಕೂಡಾ ಖರೀದಿಸಲಾಗಿದ್ದು, ಪ್ರತಿ ವರ್ಷ 80 ಸಾವಿರ ಕಾರುಗಳ ಉತ್ಪಾದನೆಯ ಗುರಿ ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು 2019ರ ಮೊದಲ ತ್ರೈಮಾಸಿಕ ವೇಳೆಗೆ ತನ್ನ ಹೊಸ ಉತ್ಪನ್ನಗಳನ್ನು ಹೊರತರಲಿದೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಜೊತೆಗೆ ದೇಶಾದ್ಯಂತ ಈಗಾಗಲೇ 45ಕ್ಕೂ ಹೆಚ್ಚು ಅಧಿಕೃತ ಕಾರು ಮಾರಾಟ ಮಳಿಗೆಗಳನ್ನು ಹೊಂದಿರುವ ಎಂಜಿ ಮೋಟಾರ್ ಸಂಸ್ಥೆಯು ಕಾರು ಮಾರಾಟಕ್ಕೆ ಚಾಲನೆ ನೀಡುವ ವೇಳೆಗೆ 100ಕ್ಕೂ ಹೆಚ್ಚು ಡೀಲರ್ಸ್ ಹೊಂದುವ ಸಾಧ್ಯತೆಗಳಿವೆ ಎನ್ನಲಾಗಿದೆ.

MOST READ: 12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಈ ಬಗ್ಗೆ ಮಾತನಾಡಿರುವ ಎಂಜಿ ಮೋಟಾರ್ ಇಂಡಿಯಾ ಎಂಡಿ ರಾಜೀವ್ ಛಾಬ್, ಮಧ್ಯಮ ಗಾತ್ರ ಕಾರುಗಳಿಗೆ ಭಾರತೀಯ ಮಾರುಕಟ್ಟೆ ಉತ್ತಮವಾಗಿದ್ದು, ಈ ಹಿನ್ನೆಲೆ ಬೃಹತ್ ಬಂಡವಾಳದೊಂದಿಗೆ ಸದ್ಯದಲ್ಲೇ ಹೊಸ ಉತ್ಪನ್ನಗಳನ್ನು ಹೊರತರುವುದಲ್ಲೇ ವಿಫುಲ ಉದ್ಯೋಗಾವಕಾಶಗಳನ್ನು ಸೃಷ್ಠಿಸಲಿದ್ದೇವೆ ಎಂದಿದ್ದಾರೆ.

2020ಕ್ಕೆ ರಸ್ತೆಗಿಳಿಯಲಿವೆ ಎಂಜಿ ಮೋಟಾರ್ ಐಷಾರಾಮಿ ಎಲೆಕ್ಟ್ರಿಕ್ ಕಾರುಗಳು

ಒಟ್ಟಿನಲ್ಲಿ ಮಧ್ಯಮ ಗಾತ್ರದ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯನ್ನು ಪರಿಚಯಿಸುತ್ತಿರುವ ಹಲವು ವಿಶೇಷತೆಗಳಿಗೆ ಕಾರಣವಾಗಿದ್ದು, ಚೀನಾದಲ್ಲಿ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾಗಿರುವ ಎಸ್‌ಎಐಸಿ( SAIC) ಸಂಸ್ಧೆಯು ಎಂಜಿ ಮೋಟಾರ್ಸ್ ಕಾರುಗಳ ಉತ್ಪಾದನೆಯ ಉಸ್ತುವಾರಿ ವಹಿಸಿರುವುದು ಮತ್ತೊಂದು ವಿಶೇಷ ಎನ್ನಬಹುದು.

Article Published On: Friday, October 19, 2018, 10:49 [IST]
English summary
MG Motor To Launch Pure-Electric SUV In India By 2020.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+