12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಮೊನ್ನೆಯಷ್ಟೆ ನಮ್ಮ ಬೆಂಗಳೂರು ನಗರದಲ್ಲಿ ಕಾರಿನ ಎಸಿ ಮತ್ತು ಇನ್ನಿತರೆ ಸುರಕ್ಷಾ ಉಪಕರಣಗಳ ಕಳ್ಳತನ ಮಾಡುತ್ತಿರುವ ಖದೀಮರ ಗ್ಯಾಂಗ್ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಇದೀಗ ಬೆಂಗಳೂರಿನ ಪೊಲೀಸರು ಬಹಳ ದಿನಗಳಿಂದ ನಗರದಲ್ಲಿ ಐಷಾರಾಮಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಖದೀಮನನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಹೌದು, ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಹಲವಾರು ದಿನಗಳಿಂದ ಬೆಂಗಳೂರು ನಗರದಲ್ಲಿನ ಐಷಾರಾಮಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ 20 ವರ್ಷದ ಮಂಜುನಾಥ್ ಹೆಗಡೆ ಎಂಬಾತನನ್ನು ಬಂಧಿಸಿದ್ದು, ಸುಮಾರು 12 ಲಕ್ಷ ಬೆಲೆ ಬಾಳುವ ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ. ಆದ್ರೆ ಐಷಾರಾಮಿ ಬೈಕ್‍ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಈ ಬೈಕ್ ಖದೀಮ ಬಂದ ಹಣದಿಂದ ಏನು ಮಾಡ್ತಿದ್ದ ಗೊತ್ತಾ.?

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಕದ್ದ ಹಣದಲ್ಲಿ ಮಜಾ ಮಾಡುತ್ತಿದ್ದ ಈತನಿಗೆ ಗೋವಾ ಅಂದ್ರೆ ಎಲ್ಲಿಲ್ಲದ ಕ್ರೇಜ್. ಅಲ್ಲಿ ಕ್ಯಾಸಿನೊ ಸೇರಿದಂತೆ ಹಲವು ಗ್ಯಾಂಬ್ಲಿಂಗ್‌ಗಳಿಗೆ ಭೇಟಿ ನೀಡುತ್ತಿದ್ದ ಈತ ಬಿಟ್ಟಿದುಡ್ಡಲ್ಲಿ ಸಿಕ್ಕಷ್ಟು ಮಾಜಾ ಮಾಡುತ್ತಿದ್ದನಂತೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಹೀಗಾಗಿ ಗ್ಯಾಂಬ್ಲಿಂಗ್‌ಗೆ ಹಣವಿಲ್ಲದಾಗ ಬೈಕ್‍ ಕಳ್ಳತನವನ್ನೇ ಫುಲ್ ಟೈಮ್ ಬಿಸಿನೆಸ್ ಮಾಡಿಕೊಂಡಿದ್ದ ಇತ, ಕದ್ದ ಬೈಕ್‍ಗಳನ್ನು ಕೈಗೆ ಸಿಕ್ಕಷ್ಟು ದುಡ್ಡಿಗೆ ಮಾರಾಟ ಮಾಡಿ ಅದರಿಂದ ಬಂದ ಹಣವನ್ನು ಗೋವಾದಲ್ಲಿ ಕ್ಯಾಸಿನೋ ಆಡಲು ಬಳಕೆ ಮಾಡುತ್ತಿದ್ದ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಐಷಾರಾಮಿ ಬೈಕ್‍ಗಳನ್ನು ಮಾರಾಟ ಮಾಡುವ ಮತ್ತು ಅನ್‍ಲೈನ್‍ನಲ್ಲಿ ಬೈಕ್‍ಗಳನ್ನು ಮಾರಾಟ ಮಾಡುವವರನ್ನೇ ಟಾರ್ಗೆಟ್‍ ಮಾಡುತ್ತಿದ್ದ ಇತ, ಟೆಸ್ಟ್ ರೈಡ್ ನೆಪದಲ್ಲಿ ಬೈಕ್ ಎಗರಿಸುವುದನ್ನು ಕರಗತ ಮಾಡಿಕೊಂಡಿದ್ದ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ, ಟಿವಿಯಲ್ಲಿ ಬರುತ್ತಿದ್ದ ಕ್ರೈಮ್ ಟಿವಿ ಕಾರ್ಯಕ್ರಮಗಳಿಂದ ಪ್ರೇರಿತನಾಗಿದ್ದ ಮಂಜುನಾಥ್, ಅಗಾಗ ತನ್ನ ಮೊಬೈಲ್ ಮತ್ತು ಸಿಮ್‍ಗಳನ್ನು ಬದಲಾಯಿಸುತ್ತಿದ್ದನಂತೆ. ಹೀಗಾಗಿಯೇ ಸ್ವಲ್ಪ ತಡವಾಗಿ ಪೊಲೀಸರ ಕೈಗೆ ಸಿಕ್ಕಿದ್ದಾನೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಇದಲ್ಲದೇ ಇವನು ಸುಮಾರು 40 ರಿಂದ 50 ಸಿಮ್ ಕಾರ್ಡ್‍ಗಳನ್ನು ಡಿಸ್‍ಕಾರ್ಡ್ ಮಾಡಿದ್ದಾನೆ ಎಂದು ಕೂಡಾ ಮಾಹಿತಿಗಳಿಂದ ತಿಳಿದು ಬಂದಿದ್ದು, ಅವನು ಬಳಸುತ್ತಿದ್ದ ಫೋನ್‍ಗಳಲ್ಲಿನ IMEI ಸಂಖ್ಯೆಯ ಮೂಲಕ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಮಂಜುನಾಥ್ ಹೆಗಡೆ 6 ತಿಂಗಳಿನಲ್ಲಿ ಸುಮಾರು 7 ಐಷಾರಾಮಿ ಬೈಕ್‍ಗಳನ್ನು ಕಳ್ಳತನ ಮಾಡಿದ್ದು, ಈತನ ವಿರುದ್ಧ ಈಗಾಗಲೇ ಎಲೆಕ್ಟ್ರಾನಿಕ್ ಸಿಟಿ, ಪರಪ್ಪನ ಅಗ್ರಹಾರ ಮತ್ತು ಬನ್ನೇರುಘಟ್ಟ ಏರಿಯಾದಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ.

MOST READ: ವಾಹನ ಚಾಲನೆ ವೇಳೆ ಈ ತಪ್ಪುಗಳನ್ನು ಮಾಡಿದ್ರೆ ನಿಮ್ಮ ಡ್ರೈವಿಂಗ್ ಲೈಸೆನ್ಸ್ ರದ್ದಾಗುತ್ತೆ..!

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಈತ ಪ್ರತಿಯೊಂದು ಬೈಕ್ ಕಳ್ಳತನಕ್ಕಾಗಿ ವಿವಿಧ ಸಿಮ್‍ಕಾರ್ಡ್‍ಗಳನ್ನು ಬಳಸಿ ಕೊನೆಗೆ ಅದನ್ನು ದ್ವಂಸ ಮಾಡುತ್ತಿದ್ದ. ಆತನು ಈ ಕಾರ್ಯಗಳನ್ನು ಮಾಡಲು ಎರಡು ಮೊಬೈಲ್‍ಗಳನ್ನು ಬಳಸಲಾಗುತ್ತಿದ್ದು, ಅದರಲ್ಲಿನ ಒಂದು ಮೊಬೈಲ್‍ನ IMEI ಸಂಖ್ಯೆಯು ಈತನನ್ನು ಪತ್ತೆ ಹಚ್ಚಲು ಸಹಾಯಕಾರಿಯಾಗಿದೆ ಎಂದು ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಐಷಾರಾಮಿ ಜೀವನವನ್ನು ಸಾಗಿಸಲು ಕಳ್ಳತನಕ್ಕೆ ಇಳಿದಿದ್ದ ಈತ, ಕದ್ದ ಬೈಕ್‍ಗಳನ್ನು ಮಾರಾಟ ಮಾಡಿದ ಹಣದಿಂದ ಗೋವಾಕ್ಕೆ ಹೋಗಿ ಅಲ್ಲಿನ ಕ್ಯಾಸಿನೋಗಳಲ್ಲಿ ಗ್ಯಾಂಬ್ಲಿಂಗ್ ಆಡಿ ನಂತರ ಅಲ್ಲಿಯೇ ಕೆಲ ದಿನಗಳ ಕಾಲ ಸ್ಟಾರ್ ಹೋಟೆಲ್‍ನಲ್ಲಿ ಇದ್ದುಕೊಂಡು ಮಜಾ ಮಾಡುತ್ತಿದ್ದನಂತೆ.

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಈತನ ಬಗ್ಗೆ ಇನ್ನೊಂದು ವಿಚಾರ ಹೇಳಬೇಕೆಂದ್ರೆ ಈತ ಬೈಕ್ ಮಾರುವವರೊಂದಿಗೆ ಮುಗ್ದನಂತೆ ಪರಿಚಯ ಮಾಡಿಕೊಂಡು ನಂತರ ಬೈಕ್‍ಗಳ ಪೇಪರ್‍‍ಗಳನ್ನು ಹಾಗು ಫೋಟೊ ಕಾಫಿಗಳನ್ನು ಪರಿಶೀಲಿಸುವ ನೆಪದಲ್ಲಿ ಜೆರಾಕ್ಸ್ ಪ್ರತಿ ತೆಗೆದುಕೊಳ್ಳುತ್ತಿದ್ದ. ನಂತರ ಬೈಕ್ ಅನ್ನು ಟೆಸ್ಟ್ ಡ್ರೈವ್‍ಗಾಗಿ ತೆಗೆದುಕೊಂಡು ಹೋಗಿ ಅಲ್ಲಿಂದ ವಾಪಸ್ ಬರುತ್ತಲೇ ಇರಲಿಲ್ಲ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

12 ಲಕ್ಷ ಮೌಲ್ಯದ ಬೈಕ್‍ಗಳನ್ನು ಕದ್ದ ಈತ ಮಾಡಿದ್ದೇನು ಗೊತ್ತಾ.?

ಈ ಹಿಂದೆಯೂ ಬೈಕ್ ಕಳ್ಳತನ ಪ್ರಕರಣವೊಂದರಲ್ಲಿ ಕೆಜಿ ಹಳ್ಳಿಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಈತ ಬೇಲ್ ಸಿಕ್ಕಿ ಹೊರಬಂದಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಮಂಜುನಾಥ್, ಪ್ಲ್ಯಾನ್ ಮಾಡಿಕೊಂಡು ಬೈಕ್ ಕಳ್ಳತಕ್ಕೆ ಇಳಿದಿದ್ದ. ಆದ್ರೆ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎನ್ನುವ ಗಾದೆ ಮಾತಿನಂತೆ, ಇದೀಗ ಖದೀಮ ಮಂಜ ಪೊಲೀಸರ ಹೆಣೆದ ಚಕ್ರವ್ಯೂಹದಲ್ಲಿ ಸಿಕ್ಕಿಬಿದ್ದಿದ್ದಾನೆ.

Source: bangaloremirror

Most Read Articles

Kannada
Read more on auto news police bangalore
English summary
Casino-loving motorcycle thief’s luck finally runs out.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X