ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

By Praveen Sannamani

ಭಾರತೀಯ ಸೇನೆಯು ಈ ಹಿಂದೆಂಗಿಂತಲೂ ತಾಂತ್ರಿಕವಾಗಿ ಸಾಕಷ್ಟು ಬಲಿಷ್ಠವಾಗುತ್ತಿದ್ದು, ಸೇನಾ ಬತ್ತಳಿಕೆಯಲ್ಲಿ ಹಲವಾರು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನ ಒದಗಿಸಲಾಗುತ್ತಿದೆ. ಸೇನಾ ಸೌಲಭ್ಯಗಳನ್ನು ನವೀಕರಣಗೊಳಿಸಲು ಕೇಂದ್ರ ಸರ್ಕಾರವು ಭಾರೀ ಪ್ರಮಾಣದಲ್ಲಿ ಹಣ ಖರ್ಚು ಮಾಡುತ್ತಿದ್ದು, ಇದರ ಪರಿಣಾಮವೇ ಸೇನಾ ಪಡೆ ಇಂದು ಹತ್ತು ಹಲವು ವಿಶ್ವದರ್ಜೆ ಸವಲತ್ತುಗಳನ್ನು ಅಳವಡಿಸಿಕೊಳ್ಳುತ್ತಿದೆ.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಕಳೆದ ತಿಂಗಳ ಹಿಂದಷ್ಟೇ ಕೇಂದ್ರ ಸರ್ಕಾರವು ಸೇವಾ ವಾಹನಗಳ ವಿಭಾಗದಲ್ಲಿ ಸಾಕಷ್ಟು ಬದಲಾವಣೆ ತರುತ್ತಿದ್ದು, ಸುಜುಕಿ ಜಿಪ್ಸಿ ಕಾರುಗಳ ಬದಲಾಗಿ ಉತ್ತಮ ಎಂಜಿನ್ ಸಾಮರ್ಥ್ಯದ 3 ಸಾವಿರ ಟಾಟಾ ಸ್ಟ್ರೋಮ್ ಕಾರುಗಳನ್ನು ಸೇನೆಗೆ ಹಸ್ತಾಂತರ ಮಾಡಲಾಗಿದ್ದು, ಈ ಇದರ ಬೆನ್ನೆಲ್ಲೇ ರೆನಾಲ್ಟ್ ಸಂಸ್ಥೆಯ ಬಲಿಷ್ಠ ಎಂಜಿನ್ ಸಾಮರ್ಥ್ಯದ ಶೆರ್ಪಾ ಲೈಟ್ ಹೊಸ ವಾಹನಗಳನ್ನು ಸಹ ಖರೀದಿ ಮಾಡಲಾಗಿದೆ.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಹೌದು, ಇಷ್ಟು ದಿನಗಳ ಕಾಲ ಎನ್ಎಸ್‌ಜಿ ಕಮಾಂಡೊ ಪಡೆಗಳಲ್ಲಿ ಮಾತ್ರವೇ ಬಳಕೆಯಾಗುತ್ತಿದ್ದ ರೆನಾಲ್ಟ್ ಶೆರ್ಪಾ ಲೈಟ್ ವಾಹನಗಳು ಇದೀಗ ಸಿಐಎಸ್ಎಫ್ ಪಡೆಯಲ್ಲೂ ಸ್ಥಾನ ಪಡೆದಿದ್ದು, ಮುಂಬೈ ರಸ್ತೆಗಳಲ್ಲಿ ರೆನಾಲ್ಟ್ ಶೆರ್ಪಾ ವಾಹನಗಳನ್ನ ಕಂಡ ಸಾರ್ವಜನಿಕರು ಅಚ್ಚರಿ ವ್ಯಕ್ತಪಡಿಸಿದ್ದು ಮಾತ್ರ ಸುಳ್ಳಲ್ಲ.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ನೋಡಲು ಟ್ರಕ್‌ಗಳಂತೆ ಕಂಡರೂ ಕಾರು ಮಾದರಿಯಾಗಳಲ್ಲಿ ಒಂದಾಗಿರುವ ರೆನಾಲ್ಟ್ ಶೆರ್ಪಾ ವಾಹನಗಳು ಸುಧಾರಿತ ತಂತ್ರಜ್ಞಾನ ಪ್ರೇರಿತ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಬರೋಬ್ಬರಿ 2.2 ಟನ್ ತೂಕವನ್ನು ಹೊಂದಿರುವ ಈ ವಾಹನವು 11 ಟನ್ ಭಾರವನ್ನು ಹೊತ್ತು ಸಾಗಬಲ್ಲ ಸಾಮರ್ಥ್ಯ ಹೊಂದಿದೆ ಅಂದ್ರೆ ನೀವು ನಂಬಲೇಬೇಕು.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಸದ್ಯ ವಿಶ್ವದ ಪ್ರಮುಖ ರಾಷ್ಟ್ರಗಳ ಸೇನಾಪಡೆಯಲ್ಲಿ ಮಾತ್ರವೇ ಸ್ಥಾನ ಪಡೆದಿರುವ ರೆನಾಲ್ಟ್ ಶೆರ್ಪಾ ವಾಹನಗಳು ಇದೇ ಮೊದಲು ಸಿಐಎಸ್ಎಫ್ ಪಡೆಗೆ ಸೇರಿಕೊಂಡಿದ್ದು, ವಿಮಾನ ನಿಲ್ದಾಣಗಳಲ್ಲಿ ನಿಯೋಜಿಸಲಾಗುವ ಭದ್ರತಾ ಪಡೆಗಳಿಗೆ ಇದು ಮತ್ತಷ್ಟು ಬಲತುಂಬಲಿದೆ ಎನ್ನಬಹುದು.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಶೆರ್ಪಾ ವಾಹನದ ಪ್ರತಿ ತಾಂತ್ರಿಕ ಅಂಶಗಳು ಗುಣಮಟ್ಟದಿಂದ ಕೂಡಿದ್ದು, ಬಲಿಷ್ಠ ಬಾಡಿ ಕಿಟ್, ಅತ್ಯುತ್ತಮ ಗ್ರೌಂಡ್ ಕ್ಲಿಯೆರೆನ್ಸ್, ಬುಲೆಟ್ ಪ್ರೊಫ್ ಗ್ಲಾಸ್‌ಗಳು, ಪಿಕ್ ಅಪ್ ಟ್ರಕ್ ಮಾದರಿಯಲ್ಲಿ ಹಿಂಭಾಗ ವಿನ್ಯಾಸವು ಈ ವಾಹನದ ಪ್ರಮುಖ ಆಕರ್ಷಣೆ ಎನ್ನಬಹುದು.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಎಂಜಿನ್ ಸಾಮರ್ಥ್ಯ

4.76-ಲೀಟರ್, 4-ಸಿಲಿಂಡರ್ ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಹೊಂದಿರುವ ರೆನಾಲ್ಟ್ ಶೆರ್ಪಾ ವಾಹನವು 215-ಬಿಎಚ್‌ಪಿ ಮತ್ತು 800-ಎನ್ಎಂ ಟಾರ್ಕ್ ಉತ್ಪಾದನೆಯೊಂದಿಗೆ ಗಂಟೆಗೆ 110 ಕಿ.ಮಿ ಗರಿಷ್ಠ ವೇಗದಲ್ಲಿ ಚಲಿಸಬಲ್ಲವು.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಜೊತೆಗೆ ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಫ್ಯೂಲ್ ಟ್ಯಾಂಕ್ ತುಂಬಿದ್ದಲ್ಲಿ 1 ಸಾವಿರ ಕಿ.ಮಿ ಮೈಲೇಜ್ ಹಿಂದಿರುಗಿಸುವ ಗುಣ ಹೊಂದಿದ್ದು, ಬಲಿಷ್ಠ ಎಂಜಿನ್ ಹೊಂದಿರುವ ಹಿನ್ನೆಲೆಯಲ್ಲಿ ಇದರ ವಾಹನವು ಪ್ರತಿ ಲೀಟರ್‌ಗೆ 5ರಿಂದ 6 ಕಿ.ಮೀ ಮಾತ್ರವೇ ಮೈಲೇಜ್ ನೀಡಬಲ್ಲವು.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಇನ್ನೊಂದು ಪ್ರಮುಖ ವಿಚಾರ ಅಂದ್ರೆ, ರೆನಾಲ್ಟ್ ಶೆರ್ಪಾ ವಾಹನಗಳು ನಿಶ್ಶಸ್ತ್ರವಾದ ಮತ್ತು ಶಸ್ತ್ರಸಜ್ಜಿತ ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಬೆಂಗಾವಲು ವಾಹನಗಳಾಗಿ ಇಲ್ಲವೇ ಯುದ್ದಯಂತ್ರದ ಕಾರ್ಯಗಳಿಗಾಗಿ ಬಳಕೆ ಮಾಡಬಹುದಾಗಿದೆ.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ರೆನಾಲ್ಟ್ ಶೆರ್ಪಾ ವಾಹನಗಳು ಈ ಹಿಂದೆ 2006ರಲ್ಲೇ ಮೊದಲ ಬಾರಿಗೆ ಬಿಡುಗಡೆಯಾಗಿದ್ದು, 2012ರಲ್ಲಿ ಇಂಡಿಯನ್ ಡಿಫೆನ್ಸ್ ಎಕ್ಸ್‌ಪೋ ಈ ವಾಹನವನ್ನ ಪ್ರದರ್ಶನ ಮಾಡಲಾಗಿತ್ತು. ಆದಾದ ಬಳಿಕ ಎನ್ಎಸ್‌ಜಿ ಕಮಾಂಡೊ ಬಳಿ ಮಾತ್ರವೇ ಇದ್ದ ರೆನಾಲ್ಟ್ ಶೆರ್ಪಾ ವಾಹನಗಳನ್ನು ಇದೀಗ ಸಿಐಎಸ್ಎಫ್ ಪಡೆಗೂ ನೀಡಿರುವುದು ಭದ್ರತೆಗೆ ಮತ್ತಷ್ಟು ಬಲ ಬಂದಿದೆ.

ಮೊದಲ ಬಾರಿಗೆ ಭಾರತೀಯ ಸೇನೆಗೆ ಲಗ್ಗೆ ಇಟ್ಟ 'ರೆನಾಲ್ಟ್ ಶೆರ್ಪಾ' ವಿಶೇಷತೆ ಏನು?

ಬರೋಬ್ಬರಿ 10 ಜನ ಕುಳಿತುಕೊಳ್ಳಬಹುದಾದ ಈ ವಾಹನದಲ್ಲಿ ಒಂದು ವಾರಕ್ಕೆ ಬೇಕಾಗುವ ಎಲ್ಲಾ ಸರಕು ಸರಂಜಾಮು ಜೊತೆ ತೆರಳುವಂತೆ ಸಿದ್ದಗೊಳಿಸಲಾಗಿದ್ದು, 4x4 ಡ್ರೈವ್ ಸೌಲಭ್ಯದಿಂದಾಗಿ ಎಷ್ಟೇ ಕಠಿಣ ಭೂ ಪ್ರದೇಶಗಳಲ್ಲೂ ಸರಾಗವಾಗಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

More from DriveSpark

Article Published On: Friday, July 27, 2018, 17:22 [IST]
English summary
Renault Sherpa Armoured Military Vehicle Serving NSG Spotted in Mumbai.
Read more on auto facts renault off beat
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+