ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

Written By:

ವಾಹನ ಉದ್ಯಮದಲ್ಲಿ ದಿನಕ್ಕೊಂದು ಹೊಸ ಬಗೆಯ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಲೇ ಇರುತ್ತವೆ. ಬಿಡುಗಡೆಯಾಗುವ ಕಾರುಗಳಲ್ಲಿ ಬಹುತೇಕ ಮಾದರಿಗಳು ಎಕ್ಸ್‌ಲೆಂಟ್ ಪೇಂಟಿಂಗ್ ಡಿಸೈನ್ ಹೊಂದಿರುವುದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೆ ಬಿಡುಗಡೆಯಾಗುವ ಕೆಲವು ಕಾರಿನ ಬಣ್ಣಗಳು ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಗಿವೆ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಸಾಮಾನ್ಯವಾಗಿ ಬಹುತೇಕ ಕಾರು ಖರೀದಿದಾರರು ತಮ್ಮ ರಾಶಿಗೆ ಅನುಗುಣವಾಗಿ ಕಾರಿನ ಬಣ್ಣಗಳನ್ನು ಆಯ್ದುಕೊಳ್ಳುವುದು ಸಾಮಾನ್ಯವಾಗಿದೆ. ಇದರಲ್ಲಿ ಬಿಳಿ, ಸಿಲ್ವರ್ ಮತ್ತು ಕೆಲವರು ಆಯ್ಕೆಗೆ ಅನುಗುಣವಾಗಿ ಕಪ್ಪು ಕಾರುಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇದರ ಹೊರತಾಗಿ ಇನ್ನುಳಿದ ಕಾರಿನ ಬಣ್ಣಗಳು ಗ್ರಾಹಕರನ್ನು ಸೆಳೆಯುವುದೇ ಇಲ್ಲಾ.

Recommended Video - Watch Now!
[Kannada] Maruti Swift 2018 - Full Specifications, Features, Price, Mileage, Colours - DriveSpark
ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಇತ್ತೀಚೆಗೆ ಬಿಡುಗಡೆಯಾಗುತ್ತಿರುವ ಹೊಸ ಕಾರುಗಳಲ್ಲಿ 9ರಿಂದ 12 ವಿವಿಧ ಬಣ್ಣಗಳ ಆಯ್ಕೆ ನೀಡಲಾಗುತ್ತಿದ್ದರೂ ಗ್ರಾಹಕರು ಮಾತ್ರ 3 ರಿಂದ 4 ಮಾದರಿಯ ಬಣ್ಣಗಳನ್ನು ಹೊರತುಪಡಿಸಿ ಇತರೆ ಬಣ್ಣಗಳ ಬಗ್ಗೆ ಅಷ್ಟಾಗಿ ಇಷ್ಟಪಡುವುದಿಲ್ಲ. ಅಂತಹ ಕಾರುಗಳ ಪಟ್ಟಿ ಇಲ್ಲಿದೆ ನೋಡಿ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಸದ್ಯದ ಮಾರುಕಟ್ಟೆಯಲ್ಲಿ ಕಾರು ಖರೀದಿದಾದರಲ್ಲಿ ಶೇ.48ರಷ್ಟು ಜನ ಬಿಳಿ ಬಣ್ಣದ ಕಾರುಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ತದನಂತರ ಸಿಲ್ವರ್ ಮತ್ತು ಬ್ಲ್ಯಾಕ್ ಬಣ್ಣಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು, ಇನ್ನುಳಿದ ಕಾರಿನ ಬಣ್ಣಗಳ ಆಯ್ಕೆ ಅಷ್ಟಕಷ್ಟೇ ಎನ್ನಬಹುದು.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಹೀಗಾಗಿಯೇ ಭಾರತೀಯ ಗ್ರಾಹಕರು ರೆಡ್, ಬ್ಲೂ, ಗ್ರೀನ್, ಯೆಲ್ಲೊ, ಆರೇಂಜ್ ಕಾರುಗಳನ್ನು ಖರೀದಿ ಮಾಡುವುದು ತುಂಬಾ ವಿರಳ ಎನ್ನಬಹುದು. ಹಾಗಂತ ಈ ಕಾರುಗಳು ಚೆನ್ನಾಗಿಲ್ಲ ಅಂತಾ ಅಲ್ಲಾ. ಆದರೂ ಭಾರತೀಯ ಗ್ರಾಹಕರ ಆಯ್ಕೆಯಲ್ಲಿ ಬಿಳಿ ಮತ್ತು ಸಿಲ್ವರ್ ಬಣ್ಣಗಳಿಗೆ ಹೆಚ್ಚಿನ ಆದ್ಯತೆ ಇದೆ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಕೆಲವು ಬ್ರ್ಯಾಂಡ್ ಕಾರು ಪ್ರತ್ಯೇಕ ಬಣ್ಣಗಳಲ್ಲೇ ಉತ್ತಮ ವಿನ್ಯಾಸವನ್ನು ಹೊಂದಿದ್ದು, ಗ್ರಾಹಕರಿಗೂ ಕೂಡಾ ಅದೇ ಮಾದರಿಯ ಬಣ್ಣಗಳೇ ಇಷ್ಟವಾಗುತ್ತವೆ. ಉದಾಹರಣೆಗೆ ಬ್ರೈಟ್ ಯೆಲ್ಲೊ ಬಣ್ಣದಲ್ಲಿ ಲಂಬೋರ್ಗಿನಿ ಮಿಂಚಿದ್ರೆ, ಅದು ಇತರೆ ಹೋಂಡಾ ಸಿಟಿ ಕಾರುಗಳಲ್ಲಿ ಊಹೆ ಮಾಡಲು ಸಾಧ್ಯವಿಲ್ಲ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಇನ್ನು ಗೋಲ್ಡ್, ಬ್ರೌನ್, ಪಿಂಕ್ ಮತ್ತು ಬ್ಯೂ ಗ್ರಿನ್ ಕಾರುಗಳು ಕೂಡಾ ಕೆಲವೇ ಗ್ರಾಹಕರ ಆಯ್ಕೆಯಲ್ಲಿ ಸ್ಥಾನ ಪಡೆದಿದ್ದು, ಇತ್ತೀಚೆಗೆ ಮ್ಯಾಟೆ ಪೇಂಟ್ ಫಿನಿಸಿಂಗ್, ಮೆಟಾಲಿಕ್ ಮತ್ತು ಸಾಲಿಡ್ ಮಾದರಿಯಲ್ಲೂ ಹೆಚ್ಚು ಜನಪ್ರಿಯತೆ ಹೊಂದುತ್ತಿವೆ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಬಿಳಿ ಬಣ್ಣದ ಕಾರುಗಳಿಗೆ ಏಕೆ ಹೆಚ್ಚು ಬೇಡಿಕೆ?

ಸಹಜವಾಗಿಯೇ ಕಾರು ಖರೀದಿಸುವ ಗ್ರಾಹಕರಿಗೆ ಈ ಪ್ರಶ್ನೆ ಮೂಡದೇ ಇರಲಾರದು. ನಿಜ, ಬಿಳಿ ಬಣ್ಣದ ಕಾರುಗಳನ್ನು ಖರೀದಿ ಮಾಡುವುದಿಂದ ಹತ್ತಾರು ಲಾಭಗಳಿವೆ ಎಂದರೇ ನೀವು ನಂಬಲೇಬೇಕು.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಮರು ಮಾರಾಟ ಮೌಲ್ಯದಲ್ಲಿ ಬಿಳಿ ಕಾರುಗಳಿಗೆ ಹೆಚ್ಚಿನ ಬೇಡಿಕೆಯಿದ್ದು, ಇದರ ಜೊತೆಗೆ ಕಾರಿನ ಹೊಳಪು ಯಾವಾಗಲೂ ಹೊಸತರಂತೆ ಕಾಣಲು ಸಹಕಾರಿಯಾಗುವುದಲ್ಲದೇ ನಿಮ್ಮಕಾರಿನ ಔಟ್ ಲುಕ್ ಕೂಡಾ ಇತರೆ ಕಾರುಗಳಿಂತ ಭಿನ್ನವಾಗಿರುತ್ತದೆ.

ಇಂತಹ ಕಾರಿನ ಬಣ್ಣಗಳನ್ನು ಗ್ರಾಹಕರು ಯಾವತ್ತು ಇಷ್ಟಾಪಡೋದಿಲ್ಲ..

ಒಟ್ಟಿನಲ್ಲಿ ಕಾರುಗಳ ಬಣ್ಣವು ಕಾರಿನ ಖರೀದಿ ಪ್ರಕ್ರಿಯೆ ಮಹತ್ವದ ಸ್ಥಾನ ಪಡೆದಿದ್ದು, ಬಿಳಿ ಬಣ್ಣದ ಕಾರುಗಳಿಗೆ ಅಗ್ರಸ್ಥಾನವಿದೆ. ಹಾಗಂತ ಇತರೆ ಕಾರುಗಳ ವಿವಿಧ ಬಣ್ಣಗಳು ಮೌಲ್ಯ ಹೊಂದಿಲ್ಲ ಎನ್ನುವುದಕ್ಕಿಂತ ನೋಡಲು ಅಷ್ಟು ಅಂದವಾಗಿಲ್ಲ ಎನ್ನಬಹುದು.

Trending On DriveSpark Kannada:

ಸುಖಕರ ಕಾರು ಪ್ರಯಾಣಕ್ಕೆ ಕಡ್ಡಾಯವಾಗಿ ಬೇಕು ಈ 9 ಆಕ್ಸೆಸರಿಗಳು..

ಬೆಂಗಳೂರಿನ ಪ್ರತಿಷ್ಠಿತ ಮಾರುತಿ ಸರ್ವಿಸ್ ಸ್ಟೇಷನ್ ಕರ್ಮಕಾಂಡ ಬಯಲು ಮಾಡಿದ ಗ್ರಾಹಕ !! ವಿಡಿಯೋ

ಆದ ಪ್ರಮಾದಕ್ಕೆ ಕ್ಷಮೆಯಾಚಿಸಿ ಹೊಸ ಕಾರು ಒದಗಿಸಿದ ಜೀಪ್...

Read more on off beat tips
English summary
Can You Guess The Most Liked Car Colours In India?
Story first published: Saturday, March 3, 2018, 11:22 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark