ದುಬಾರಿ ಬೆಲೆಯ ಪೋರ್ಷೆ 911 ಜಿಟಿ3 ಖರೀದಿಸಿದ ಫೆ1 ಖ್ಯಾತಿಯ ನರೇನ್ ಕಾರ್ತಿಕೇಯನ್..
ಜರ್ಮನ್ ಐಷಾರಾಮಿ ವಾಹನ ತಯಾರಕ ಪೋರ್ಷೆ ಸಂಸ್ಥೆಯು ಕಳೆದ ಅಕ್ಟೋಬರ್‌ನಲ್ಲಿ ತನ್ನ ಹೊಚ್ಚ ಹೊಸ ಸೂಪರ್ ಕಾರು ಮಾದರಿಯಾದ 911 ಜಿಟಿ3 ಭಾರತದಲ್ಲಿ ಬಿಡುಗಡೆ ಮಾಡಿದ್ದು, ಫೆ1 ರೇಸ್ ಸ್ಪರ್ಧಿ ನರೇನ್ ಕಾರ್ತಿಕೇಯನ್ ಕೂಡಾ 911 ಜಿಟಿ3 ಖರೀದಿಸಿದ್ದಾರೆ.
ಜರ್ಮನ್ ಐಷಾರಾಮಿ ವಾಹನ ತಯಾರಕ ಪೋರ್ಷೆ ಸಂಸ್ಥೆಯು ಕಳೆದ ಅಕ್ಟೋಬರ್‌ನಲ್ಲಿ ತನ್ನ ಹೊಚ್ಚ ಹೊಸ ಸೂಪರ್ ಕಾರು ಮಾದರಿಯಾದ 911 ಜಿಟಿ3 ಭಾರತದಲ್ಲಿ ಬಿಡುಗಡೆ ಮಾಡಿದ್ದು, ಫೆ1 ರೇಸ್ ಸ್ಪರ್ಧಿ ನರೇನ್ ಕಾರ್ತಿಕೇಯನ್ ಕೂಡಾ 911 ಜಿಟಿ3 ಖರೀದಿಸಿದ್ದಾರೆ.

ಬರೋಬ್ಬರಿ 2.77 ಕೋಟಿ ಬೆಲೆ ಹೊಂದಿರುವ ಪೋರ್ಷೆ 911 ಜಿಟಿ3 ಕಾರುಗಳು ಭಾರತದಲ್ಲಿ ಉತ್ತಮ ಮಾರಾಟ ಪ್ರಕ್ರಿಯೆ ಕಾಣುತ್ತಿದ್ದು, ಕಳೆದ ತಿಂಗಳ ಹಿಂದಷ್ಟೇ ಮಂಗಳೂರು ಮೂಲದ ಉದ್ಯಮಿ ಪೈ ಕೂಡಾ 911 ಜಿಟಿ3 ಮ್ಯಾನುವಲ್ ಆವೃತ್ತಿಯನ್ನು ಖರೀದಿಸಿದ್ದರು.

ಇನ್ನು ಈ ಹಿಂದೆ 911 ಜಿಟಿ3 ಬಿಡುಗಡೆಯ ಸಂದರ್ಭದಲ್ಲಿ ಕೇವಲ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯವುಳ್ಳ ಕಾರು ಮಾದರಿಯನ್ನು ಪರಿಚಯಿಸಿದ್ದ ಪೋರ್ಷೆ ಸಂಸ್ಥೆಯು ಇದೀಗ ಎರಡನೇ ಮಾದರಿಯಾಗಿ ಮ್ಯಾನುವಲ್ ಗೇರ್‌ಬಾಕ್ಸ್ ವ್ಯವಸ್ಥಿತ 911 ಜಿಟಿ3 ಬಿಡುಗಡೆ ಮಾಡಲಾಗಿದೆ.

ಫೆ1 ರೇಸರ್ ಕಾರ್ತಿಕೇಯನ್ ಅವರು ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆವೃತ್ತಿಯನ್ನೇ ಮಾಡಿದ್ದು, ಹೊಸ ಕಾರಿನಲ್ಲಿ ಕಬ್ ಸ್ಪೋರ್ಟ್ ಮತ್ತು ಸ್ಪೋರ್ಟ್ ಚೋರ್ನೋ ಪಾರ್ಕ್ ಎಂಬ ಚಾಲನಾ ಆಯ್ಕೆಗಳನ್ನು ನೀಡಲಾಗಿದೆ.

ಇವು ಲೈಫ್ ಸ್ಟೈಲ್ ಜೊತೆಗೆ ಮೋಟಾರ್ ಸ್ಪೋರ್ಟ್‌ಗೂ ಸಹಕಾರಿಯಾಗುವುದಲ್ಲದೇ ಸುರಕ್ಷಾ ತಂತ್ರಜ್ಞಾನಗಳಿಗೆ ಹೆಚ್ಚಿನ ಗಮನಹರಿಸಿರುವ ಹಿನ್ನೆಲೆ 911 ಜಿಟಿ3 ಆಯ್ಕೆಯೂ ಸೂಕ್ತವೆನಿಸಿದೆ.
ತಪ್ಪದೇ ಓದಿ- ಭಾರತದ ಮೊಟ್ಟಮೊದಲ ಪೋರ್ಷೆ 911 ಜಿಟಿ3 (991.2) ಖರೀದಿಸಿದ ಮಂಗಳೂರು ಉದ್ಯಮಿ..

ಎಂಜಿನ್ ಸಾಮರ್ಥ್ಯ
4.0-ಲೀಟರ್ ಫ್ಲ್ಯಾಟ್ ಸಿಕ್ಸ್ ಪೆಟ್ರೋಲ್ ಎಂಜಿನ್ ಒದಗಿಸಲಾಗಿದ್ದು, 493-ಬಿಎಚ್‌ಪಿ ಮತ್ತು 460 ಎನ್ಎಂ ಉತ್ಪಾದನೆಯೊಂದಿಗೆ 7-ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್, 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದೆ.

ಇದರೊಂದಿಗೆ ಈ ಹಿಂದಿನ ಮಾದರಿಗಳಿಂತ 15 ಕೆ.ಜಿ ತೂಕವನ್ನು ಕಡಿತ ಮಾಡಲಾಗಿದ್ದು, ಕೇವಲ 3.9 ಸೇಕೆಂಡುಗಳಲ್ಲಿ ಸೊನ್ನೆಯಿಂದ ನೂರು ಕಿಮಿ ವೇಗದಲ್ಲಿ ಚಾಲನೆ ಮಾಡಬಹುದಾದ ಸಾಮರ್ಥ್ಯದೊಂದಿಗೆ ಗರಿಷ್ಠ ಮಟ್ಟದ 320 ಕಿಮಿ ಪ್ರತಿ ಗಂಟೆಗೆ ಚಲಿಸಬಲ್ಲವು.

ಈ ಹಿನ್ನೆಲೆ ವೇಗದ ಕಾರು ಪ್ರಯಾಣವನ್ನು ಅತ್ಯಂತ ಸೂಕ್ಷ್ಮವಾಗಿ ನಿಯಂತ್ರಣ ಮಾಡಬಲ್ಲ ಡ್ಯಾಂಪರ್ ಮತ್ತು ಡೈನಾಮಿಕ್ ಎಂಜಿನ್ ಮೌಂಟ್ ಅನ್ನು ಅಳವಡಿಸಲಾಗಿದ್ದು, ಇವು ವೇಗದ ಚಾಲನೆಯಲ್ಲೂ ತ್ವರಿತಗತಿಯಲ್ಲಿ ಎಂಜಿನ್ ನಿಯಂತ್ರಣ ಸಾಧಿಸಬಹುದಾಗಿದೆ.

ಹಲವು ವಿಶೇಷತೆಗಳಿಂದ ಕೂಡಿರುವ ಪೋರ್ಷೆ 911 ಜಿಟಿ3 ಸೂಪರ್ ಕಾರು ಆಯ್ಕೆದಾರರಿಗೆ ಅತ್ಯುತ್ತಮ ಮಾದರಿಯಾಗಿದ್ದು, ಬೆಂಗಳೂರಿನಲ್ಲಿ 911 ಜಿಟಿ3 ಕಾರುಗಳು 2.77 ಕೋಟಿ ಎಕ್ಸ್‌ಶೋರಂ ಬೆಲೆಗಳನ್ನು ಹೊಂದಿವೆ.
Trending On DriveSpark Kannada:
ರಾಯಲ್ ಎನ್‌ಫೀಲ್ಡ್ ಖರೀದಿ ಮಾಡೋದಕ್ಕೆ ಗ್ರಾಹಕರು ಯಾಕೆ ಹಿಂದೇಟು ಹಾಕ್ತಾರೆ ಗೊತ್ತಾ?
ಸದ್ಯದಲ್ಲೇ ಗುಜುರಿ ಸೇರಲಿವೆ 2.80 ಕೋಟಿ ಹಳೆಯ ಕಾರುಗಳು
ನಟ ದರ್ಶನ್ ದುಬಾರಿ ಬೆಲೆಯ ಸೂಪರ್ ಕಾರಿನ ನಂಬರ್ ಪ್ಲೇಟ್ ಅಸಲಿಯತ್ತು ಏನು?


Click it and Unblock the Notifications








