ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ವಾಹನಗಳಲ್ಲಿ ಜೋಡಿಸಲಾಗುವ ಲೋಗೊ ವಾಹನದ ಮುಖ್ಯ ಆಕರ್ಷಣೆ ಅಂದ್ರೆ ತಪ್ಪಾಗುದಿಲ್ಲ. ಲೋಗೊ ನಿರ್ಮಾಣದ ಹಿಂದೆ ಒಂದೊಂದು ಹಿನ್ನೆಲೆಗಳಿದ್ದು, ಅದರಲ್ಲೂ ಕೆಲವು ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆಗಳ ಲೋಗೊ ಹಿಂದೆ ದೊಡ್ಡ ಇತಿಹಾಸವೇ ಇದೆ. ಹೀಗಿರುವಾಗ ಆಡಿ ಸಂಸ್ಥೆಯು ತನ್ನ ಸಾಂಪ್ರಾದಾಯಿಕ ಲೋಗೊ ಮಾದರಿಯಲ್ಲಿ ಮಹತ್ವದ ಬದಲಾವಣೆಗೆ ಮುಂದಾಗಿದೆ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಜರ್ಮನ್ ಬ್ರಾಂಡ್‌ಗಳಲ್ಲಿ ಒಂದಾಗಿರುವ ಐಷಾರಾಮಿ ಕಾರು ಉತ್ಪಾದನಾ ಸಂಸ್ಥೆ ಆಡಿ ಸದ್ಯಕ್ಕೆ ನಾಲ್ಕು ವೃತ್ತಗಳನ್ನು ಹೊಂದಿರುವ ಲೋಗೊ ಪಡೆದುಕೊಂಡಿದ್ದು, ಮಾಹಿತಿಗಳ ಪ್ರಕಾರ ಮುಂದಿನ ಕೆಲವೇ ದಿನಗಳಲ್ಲಿ ಆಡಿ ಲೋಗೊ ಮಾದರಿಯಲ್ಲಿ ಮಹತ್ವದ ಬದಲಾವಣೆ ತರಲಾಗುತ್ತಿದೆ ಎನ್ನಲಾಗಿದೆ. ಹಾಗಾದ್ರೆ ಲೋಗೊ ಬದಲಾವಣೆ ಹಿಂದಿನ ಗುಟ್ಟು ಏನು? ಅನ್ನುವುದು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ವೃತ್ತಕ್ಕೊಂದು ಇತಿಹಾಸ..!

ಪ್ರಖ್ಯಾತ ಕಾರು ಬ್ರಾಂಡ್ ಆಡಿಯಲ್ಲಿ ಅಳವಡಿಸಲಾಗುವ ನಾಲ್ಕು ವೃತ್ತಗಳಿಗೂ ಒಂದಕ್ಕೊಂದು ಅಂಟಿಕೊಂಡಿರುವ ಲೋಗೊ ಹೊಂದಿದೆ. ಇದು ಆಡಿ ಕಾರಿಗೆ ಪ್ರತಿಷ್ಠಿತ ಲುಕ್‌ ಕೊಡುವಲ್ಲಿ ಈ ಲೋಗೊದ ಪಾತ್ರವೂ ಮಹತ್ವದ್ದು.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಜೊತೆಗೆ ಇದರ ಹಿಂದಿನ ಕತೆ ಸ್ಫೂರ್ತಿದಾಯಕವಾಗಿದ್ದು, ಆಗಸ್ಟ್‌ ಹೋರ್ಚ್ ಎಂಬಾತ ತಾನೇ ಕಟ್ಟಿದ ಹೋರ್ಚ್‌ ಕಾರು ತಯಾರಿಕಾ ಸಂಸ್ಥೆಯಿಂದ 1932ರಲ್ಲಿ ಹೊರದಬ್ಬಿಸಿಕೊಂಡ ಮೇಲೆ ಅದಕ್ಕೆ ಪೈಪೋಟಿಯಾಗಿ ಕಟ್ಟಿದ ಸಂಸ್ಥೆಯೇ 'ಆಡಿ' ಎನ್ನುವುದು ಬಹುತೇಕರಿಗೆ ಗೊತ್ತಿಲ್ಲದ ವಿಚಾರ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಆಡಿ ಸಂಸ್ಥೆಯು ಆರಂಭಗೊಂಡ ಮೊದಮೊದಲು ಯಾವುದೇ ಲೋಗೊ ಇರಲಿಲ್ಲ. ತದನಂತರ ಹೋರ್ಚ್‌ ಸೇರಿದಂತೆ ಇತರೆ ಮೂರು ಕಾರು ಉತ್ಪಾದನಾ ಸಂಸ್ಥೆಗಳನ್ನು ಖರೀದಿಸಿ ಒಂದಕ್ಕೆ ಒಂದು ಚಕ್ರದಂತೆ ಒಟ್ಟು ನಾಲ್ಕು ಚಕ್ರದ ಲೋಗೊ ರಚಿಸಿದರು.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಹೀಗೆ ಒಂದು ಸಂಸ್ಥೆಯಿಂದ ಹೊರದಬ್ಬಿಸಿಕೊಂಡು ಬಂದು ಅದನ್ನೇ ಸ್ಪೋರ್ತಿಯಾಗಿ ತೆಗೆದುಕೊಂಡ ಹೋರ್ಚ್, ಇಡಿ ವಿಶ್ವವೇ ಮನಮೆಚ್ಚುವಂತ ಕಾರು ಸಂಸ್ಥೆಯೊಂದು ಕಟ್ಟಿಬೆಳೆಸಿದ. ಹೀಗೆ ಇತಿಹಾಸ ಪುಟಗಳಲ್ಲಿ ಅಚ್ಚುಮೂಡಿಸಿರುವ ಆಡಿ ಸಂಸ್ಥೆಯ ಲೋಗೊ ಇದೀಗ ಬದಲಾಗುತ್ತಿದೆ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಅಷ್ಟಕ್ಕೂ ಆಡಿ ಲೋಗೊ ಮಾದರಿಯು ಸೊನ್ನೆ ಆಕಾರದಲ್ಲಿದ್ದರೂ, ನಿಜವಾಗಿಯೂ ಅವುಗಳು ಸೂಚಿಸುವುದು ಕಾರಿನ ಚಕ್ರಗಳನ್ನು. ಅಂದ್ರೆ ಹೋರ್ಚ್ ಕನಸಿಗೆ ಸಹಕಾರ ನೀಡಿದ ಆ ಮೂರು ಸಂಸ್ಥೆಗಳು ಸಹ ಆಡಿ ಸಂಸ್ಥೆಯ ಏಳಿಗೆಗೆ ಸಹಕರಿದ ರೀತಿಯನ್ನ ಸೂಚಿಸುತ್ತೆ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಆದ್ರೆ ಇಷ್ಟೆಲ್ಲಾ ಇತಿಹಾಸ ಹೊಂದಿರುವ ಇಂತಹ ಲೋಗೊ ಬದಲಾಣೆಗೆ ಆಡಿ ಇದೀಗ ಮುಂದಾಗಿದ್ದು, ಹೊಸದಾಗಿ ಎರಡು ಮಾದರಿಯ ಲೋಗೊ ಮೇಲೆ ಪೇಟೆಂಟ್(ಹಕ್ಕುಸ್ವಾಮ್ಯ) ದಾಖಲಿಸಿದೆ. ಹೀಗಾಗಿ ಮುಂದಿನ ಕೆಲವೇ ದಿನಗಳಲ್ಲಿ ಲೋಗೊ ಬದಲಾವಣೆಗೊಳ್ಳುವುದು ಖಚಿತವಾಗಿದೆ.

MOST READ: ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಹೊಸ ಲೋಗೊದಲ್ಲಿನ ವಿನ್ಯಾಸಗಳ ಪ್ರಕಾರ, ಈ ಹಿಂದಿನ ಮಾದರಿಯಲ್ಲೇ ನಾಲ್ಕು ವೃತ್ತಗಳನ್ನು ಹೊಂದಿದ್ದರೂ ಒಳಭಾಗದಲ್ಲಿ ಅವುಗಳೆಲ್ಲೂ ಒಂದೇ ಆಗಿರುತ್ತದೆ. ಇನ್ನೊಂದು ಮಾದರಿಯ ಪೇಟೆಂಟ್ ಲೋಗೊದಲ್ಲಿ ನಾಲ್ಕು ವೃತ್ತಗಳು ಒಂದೇ ಇದ್ರು ಎರಡೇರಡು ವೃತ್ತಗಳು ಪ್ರತ್ಯೇಕವಾಗಿದ್ದರೂ ಒಂದೇ ರಿಂಗ್‌ನಲ್ಲಿವೆ.

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಹೊಸ ಲೋಗೊ ಮಾದರಿಯನ್ನು ಈಗಾಗಲೇ ಬಳಕೆ ಮಾಡಲು ಮುಂದಾಗಿರುವ ಆಡಿ ಸಂಸ್ಥೆಯು ಬಿಡುಗಡೆಯ ಸನಿಹದಲ್ಲಿರುವ ಇ-ಟ್ರೋನ್ ಎನ್ನುವ ಎಲೆಕ್ಟ್ರಿಕ್ ಕಾರಿನಲ್ಲಿ ಹೊಸ ಲೋಗೊ ಬಳಕೆ ಮಾಡುವುದು ಖಚಿತ ಎನ್ನಲಾಗಿದ್ದು, ಸದ್ಯ ಬಳಕೆ ಮಾಡುತ್ತಿರುವ ಲೋಗೊ ಮಾದರಿಗಿಂತಲೂ ಹೊಸ ಲೋಗೊ ದೊಡ್ಡದು ಇರಲಿದೆಯೆಂತೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಲೋಗೊ ಬದಲಾವಣೆಗೆ ಮುಂದಾಗಿರುವ ಆಡಿ ಸಂಸ್ಥೆಯ ಉದ್ದೇಶ ಏನು?

ಇನ್ನು ಕಾರು ಉತ್ಪಾದನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಆಡಿ ಸಂಸ್ಥೆಯು ಫೋಕ್ಸ್‌ವ್ಯಾಗನ್ ಸಂಸ್ಥೆಯ ಜೊತೆಗೂಡಿ ಎಂಜಿನ್ ಉತ್ಪಾದನೆಯಲ್ಲಿ ಪರಸ್ಪರ ಸಹಕರಿಸುವ ಬೃಹತ್ ಯೋಜನೆಯೊಂದಕ್ಕೆ ಒಪ್ಪಂದ ಮಾಡಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಲೋಗೊದಲ್ಲಿ ಬದಲಾವಣೆ ತರಲಾಗಿದೆ ಎನ್ನುವ ಮಾತುಗಳು ಸಹ ವಿಶ್ವ ಆಟೋ ಉದ್ಯಮದಲ್ಲಿ ಕೇಳಿಬರುತ್ತಿವೆ.

More from DriveSpark

Article Published On: Tuesday, October 23, 2018, 10:43 [IST]
English summary
Audi Might Introduce A New Logo Soon — ‘Almost’ The Same Four Rings.
Read more on audi luxury cars
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+