ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

2018ರ ದಟ್ಸನ್ ರೆಡಿ ಗೊ ಫೇಸ್‌ಲಿಫ್ಟ್ ಕಾರು ಆವೃತ್ತಿಯು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೆ ಸಜ್ಜುಗೊಳ್ಳುತ್ತಿದ್ದು, ಇದಕ್ಕೂ ಮುನ್ನ ಹೊಸ ಕಾರಿನ ಕುರಿತಾದ ಟೀಸರ್ ಒಂದನ್ನು ಬಿಡುಗಡೆಗೊಳಿಸಿರುವುದು ಕಾರು ಪ್ರಿಯರ ಆಕರ್ಷಣೆಗೆ ಕಾರಣವಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ದಟ್ಸನ್ ತಮ್ಮ ಜನಪ್ರಿಯ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳ ಫೇಸ್‍‍ಲಿಫ್ಟ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸುವ ಯೋಜನೆಯಲಿದ್ದು, ಮಾಹಿತಿಗಳ ಪ್ರಕಾರ ಇದೇ ಅಕ್ಟೋಬರ್ ಅಂತ್ಯಕ್ಕೆ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಇನ್ನು ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳು ಈಗಾಗಲೇ ಇಂಡೋನೇಷ್ಯಾದಲ್ಲಿ ಬಿಡುಗಡೆಗೊಂಡು ಯಶಸ್ವಿಯಾಗಿ ಮಾರಾಟಗೊಳ್ಳುತ್ತಿದ್ದು, ದಟ್ಸನ್ ಗೊ ಮತ್ತು ಗೊ ಪ್ಲಸ ಫೇಸ್‍‍ಲಿಫ್ಟ್ ಕಾರುಗಳು ಹೊಸ ವಿನ್ಯಾಸವನ್ನು ಪಡೆದಿದ್ದು, ದೇಶಿಯ ಮಾರುಕಟ್ಟೆಯಲ್ಲಿ ಯಾವ ರೂಪವನ್ನು ಹೊತ್ತು ಬರಲಿದೆ ಎಂಬ ಮಾಹಿತಿಯು ಇನ್ನು ಲಭ್ಯವಾಗಲಿಲ್ಲ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಟೀಸರ್ ಪ್ರಕಾರ, ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳು ಹೊರಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್‍‍ನೊಂದಿಗೆ ಬಂಪರ್ಸ್, ಹೊಸ ಮೆಶ್ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಹೆಕ್ಸಾಗೊನಲ್ ಗ್ರಿಲ್ ಮತ್ತು ಈ ಕಾರುಗಳ ಹೈ ಎಂಡ್ ಮಾದರಿಯು 14 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಇನ್ನು ಈ ಕಾರುಗಳ ಒಳಭಾಗದಲ್ಲಿ ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದ್ದು, ಹೊಸ ಡ್ಯಾಶ್‍‍ಬೋರ್ಡ್, ಎಸಿ ವೆಂಟ್ಸ್ ಮತ್ತು 6.5 ಇಂಚಿನ ಟಚ್‍‍ಸ್ಕ್ರೀನ್ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ದಟ್ಸನ್ ಗೊ ಮತ್ತು ಗೊ ಪ್ಲಸ್ ಫೇಸ್‍‍ಲಿಫ್ಟ್ ಕಾರುಗಳಲ್ಲಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಈ ಬಾರಿ ಟಾಚೊಮೀಟರ್ ಅನ್ನು ಕೂಡಾ ಪಡೆದಿದ್ದು, ಮುಂಭಾಗದಲ್ಲಿ ವಿಭಜಿತ ಸೀಟ್‍‍ಗಳು ಮತ್ತು ಗ್ಲೋವ್‍‍ ಬಾಕ್ಸ್ ಅನ್ನು ಪಡೆದುಕೊಂಡಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಇದಲ್ಲದೆ ಈ ಕಾರುಗಳಲ್ಲಿ ಎಲೆಕ್ಟ್ರಾನಿಕ್ ಅಡ್ಜಸ್ಟ್ ಮಿರರ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್, ಪವರ್ ವಿಂಡೋ, ರಿಯರ್ ವೈಪರ್ಸ್ ವೈಶಿಷ್ಟ್ಯತೆಗಳ ಜೊತೆಗೆ ಪ್ರಯಾಣಿಕರ ಸುರಕ್ಷತೆಗಾಗಿ ಎಬಿಎಸ್ ಮತ್ತು ಏರ್‍‍ಬ್ಯಾಗ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ದಟ್ಸನ್ ಗೊ ಮತ್ತು ಗೋ ಪ್ಲಸ್ ಹ್ಯಾಚ್‍‍ಬ್ಯಾಕ್ ಹಾಗೂ ಎಮ್‍‍ಪಿವಿ ಕಾರುಗಳು 1.2 ಲೀಟರ್, 3 ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಪಡೆದಿದ್ದು, 68 ಬಿಹೆಚ್‍‍ಪಿ ಮತ್ತು 104 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ. ಹಾಗು ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಇಂಡೋನೇಷ್ಯಾದಲ್ಲಿ ಮಾರಾಟಗೊಳ್ಳುತ್ತಿರುವ ಈ ಕಾರುಗಳು ಸಿವಿಟಿ ಗೇರ್‍‍ಬಾಕ್ಸ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳು ಕೇವಲ ಮ್ಯಾನುವಲ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ಮಾತ್ರ ಲಭ್ಯವಿರಲಿದೆ ಎನ್ನಲಾಗಿದೆ.

ಬಿಡುಗಡೆಗೆ ಸಜ್ಜಾದ ದಟ್ಸನ್ ಗೊ ಮತ್ತು ದಟ್ಸನ್ ಗೋ ಪ್ಲಸ್ ಕಾರುಗಳು

ಹೀಗಾಗಿ ಹೊಸದಾಗಿ ಬಿಡುಗಡೆಗೊಳ್ಳಲಿರುವ ದಟ್ಸನ್ ಗೊ ಮತ್ತು ಗೊ+ ಕಾರುಗಳು ಪ್ರೀಮಿಯಂ ಕಾರುಗಳ ಬೆಲೆಯನ್ನು ಹೊಂದಿರಲಿದೆ ಎನ್ನಲಾಗಿದ್ದು, ಪ್ರಸ್ತುತ ದೊರೆಯುತ್ತಿರುವ ಸಾಧಾರಣ ದಟ್ಸನ್ ಗೊ ಮತ್ತು ಗೊ ಪ್ಲಸ್ ಕಾರುಗಳಿಗಿಂತ ರೂ. 30 ಸಾವಿರದಿಂದ 45 ಸಾವಿರ ಹೆಚ್ಚಿರಲಿವೆ.

More from DriveSpark

Article Published On: Sunday, September 30, 2018, 11:00 [IST]
English summary
New Datsun Go And Go+ Facelift Teased Ahead Of Launch.
Read more on datsun ದಟ್ಸನ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+