ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2018ರ ಫೋರ್ಡ್ ಇಕೋಸ್ಪೋರ್ಟ್ ಪಡೆದ ರೇಟಿಂಗ್ ಎಷ್ಟು?
ಕಾರಿನ ಸುರಕ್ಷಾ ವಿಚಾರವಾಗಿ ನಡೆಸಲಾಗುವ ಗ್ಲೋಬಲ್ ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 2018ರ ಫೋರ್ಡ್ ಇಕೋಸ್ಪೋರ್ಟ್ ಎಸ್‌ಯುವಿ ಆವೃತ್ತಿಯು ಸಾಧಾರಣ ಕಾರು ಮಾದರಿಯಾಗಿ ಹೊರಹೊಮ್ಮಿದ್ದು, ಹೊಸ ಕಾರಿನಲ್ಲಿರುವ ಹೊಸ ಸುರಕ್ಷಾ ತಂತ್ರಜ್ಞಾನಗಳು ಎಸ್‍ಯುವಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿವೆ.

ಸದ್ಯ ಭಾರತೀಯ ಮಾರುಕಟ್ಟೆ ಸೇರಿದಂತೆ ಯುರೋಪ್ ಮತ್ತು ಯುಎಸ್ಎ ಮಾರುಕಟ್ಟೆಗಳಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಮಾರಾಟವಾಗುತ್ತಿದ್ದು, ಹೊಸ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳ ಬಗೆಗೆ ಯುಎಸ್ಎ ಮಾರುಕಟ್ಟೆ ನಡೆಸಲಾಗುವ ಎನ್‌ಹೆಚ್‌ಟಿಎಸ್ಎ(ನ್ಯಾಷನಲ್ ಹೈವೇ ಟ್ರಾಫಿಕ್ ಸೆಫ್ಟಿ ಅಡ್ಮಿನಿಸ್ಟೇಷನ್) ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು 4 ಸ್ಟಾರ್ ಸೆಫ್ಟಿ ರೇಟಿಂಗ್ ಪಡೆದುಕೊಂಡಿವೆ.

ಇದರ ಜೊತೆಗೆ ಮುಂಭಾಗದ ಕ್ರ್ಯಾಶ್ ಪರೀಕ್ಷೆಗಳಲ್ಲಿ 5-ಸ್ಟಾರ್ ರೇಟಿಂಗ್ ಗಳಿಸಿದ್ದರೂ ರೋಲ್ಓವರ್ ಪರೀಕ್ಷೆಯಲ್ಲಿ ಮುಗ್ಗರಿಸಿರುವ ಇಕೋಸ್ಪೋರ್ಟ್ ಕಾಂಪ್ಯಾಕ್ಟ್ ಎಸ್‌ಯುವಿ ಕಾರುಗಳು ಕೇವಲ 3-ಸ್ಟಾರ್ ಗಳಿಸಲು ಮಾತ್ರ ಶಕ್ತವಾಗಿವೆ. ಹೀಗಾಗಿ NHSA ಪ್ರಕಾರ 4 ಸ್ಟಾರ್ ರೇಟಿಂಗ್‌ಗಿಂತ ಕಡಿಮೆ ರೇಟಿಂಗ್ ಹೊಂದಿರುವ ಕಾರುಗಳಿಂದ ಪ್ರಯಾಣಿಕರಿಗೆ ಗುಣಮಟ್ಟದ ಸುರಕ್ಷತೆ ಒದಗಿಸಲು ಅಸಾಧ್ಯ ಎನ್ನಲಾಗಿದೆ.

ಇದಲ್ಲದೇ ಇಕೋಸ್ಪೋರ್ಟ್ ಕಾರುಗಳು ಪಡೆದಿರುವ ಸೆಫ್ಟಿ ರೇಟಿಂಗ್‌ಗಳು ಹೋಂಡಾ ಹೆಚ್ಆರ್-ವಿ, ಮಜ್ದಾ ಸಿಎಕ್ಸ್3 ಮತ್ತು ಷೆವರ್ಲೆ ಟ್ರ್ಯಾಕ್ಸ್ ಕಾರುಗಳ ರೇಟಿಂಗ್‌ಗಿಂತಲೂ ಕಡಿಮೆ ಎನ್ನಲಾಗಿದ್ದು, ಫ್ರಂಟ್ ವೀಲ್ಹ್ ಡ್ರೈವ್ ಟೆಕ್ನಾಲಜಿ ಹೊಂದಿರುವ 4x4 ವೆರಿಯೆಂಟ್ ಮಾದರಿಯನ್ನು ಕ್ರ್ಯಾಶ್ ಟೆಸ್ಟಿಂಗ್‌ಗಾಗಿ ಬಳಕೆ ಮಾಡಲಾಗಿತ್ತು.

ಇನ್ನೊಂದು ಪ್ರಮುಖ ವಿಚಾರ ಅಂದ್ರೆ ಫೋರ್ಡ್ ಸಂಸ್ಥೆಯು ಇದುವರೆಗೆ ನಿರ್ಮಾಣ ಮಾಡಿರುವ ಕಾರುಗಳಲ್ಲಿ ಇಕೋಸ್ಪೋರ್ಟ್ ಕಾರುಗಳು ಸೆಫ್ಟಿ ರೇಟಿಂಗ್‌ನಲ್ಲಿ ಅತಿ ಕಡಿಮೆ ಅಂಕ ಗಳಿಸಿದ ಎಸ್‌ಯುವಿ ಮಾದರಿಯಾಗಿದ್ದು, ಇದು ಭಾರತದಲ್ಲಿ ಮಾರಾಟವಾಗುತ್ತಿರುವ ಇಕೋಸ್ಪೋರ್ಟ್ ಕಾರುಗಳು ಇನ್ನು ಕಡಿಮೆ ಗುಣಮಟ್ಟದ ಸುರಕ್ಷಾ ಸೌಲಭ್ಯಗಳನ್ನು ಹೊಂದಿರಬಹುದು ಎಂದು ಹೇಳಲಾಗಿದೆ.

ಸದ್ಯ ಕ್ರ್ಯಾಶ್ ಟೆಸ್ಟಿಂಗ್ ನಡೆಸಿರುವ ಕಾರು ಮಾದರಿಗಳು ಯುಎಸ್ಎ ಮಾರುಕಟ್ಟೆಯಲ್ಲಿ ಮಾತ್ರ ಮಾರಾಟವಾಗುತ್ತಿದ್ದು, ಭಾರತದಲ್ಲಿ ಇದಕ್ಕಿಂತಲೂ ಕಡಿಮೆ ಗುಣಮಟ್ಟದ ಇಕೋಸ್ಪೋರ್ಟ್ ಕಾರುಗಳು ಮಾರಾಟವಾಗುತ್ತಿರುವುದು ಎಸ್‌ಯುವಿ ಪ್ರಿಯರ ಅಸಮಾಧಾನಕ್ಕೆ ಕಾರಣವಾಗಿದೆ.

ಒಂದು ವೇಳೆ ಭಾರತದಲ್ಲೂ ನಡೆಸಲಾಗುವ ಎನ್‌ಸಿಪಿ ಕ್ರ್ಯಾಶ್ ಟೆಸ್ಟಿಂಗ್‌ನಲ್ಲೂ ಮಗ್ಗರಿಸಿದ್ದೇ ಆದಲ್ಲಿ ಇಕೋಸ್ಪೋರ್ಟ್ ಕಾರುಗಳು ಖರೀದಿ ಯೊಗ್ಯವಲ್ಲದ ಎಸ್‌ಯುವಿ ಪಟ್ಟಿಗೆ ಸೇರುವ ಸಾಧ್ಯತೆಗಳಿದ್ದು, ಸದ್ಯದಲ್ಲೇ ಇಕೋಸ್ಪೋರ್ಟ್ ಕಾರಿನ ಎನ್‌ಸಿಪಿ ಕ್ರ್ಯಾಶ್ ಟೆಸ್ಟಿಂಗ್ ಅಂಕಗಳು ಬಹಿರಂಗವಾಗಲಿವೆ.

ಏನಿದು ಕ್ರ್ಯಾಶ್ ಟೆಸ್ಟಿಂಗ್?
ಹೊಸ ಕಾರು ಮಾದರಿಗಳ ಸುರಕ್ಷತೆ ಕುರಿತಂತೆ ಪರೀಕ್ಷೆ ನಡೆಸುವ ಗ್ಲೋಬಲ್ ಎನ್‌ಸಿಎಪಿ ಮತ್ತು ಎನ್‌ಹೆಚ್‌ಟಿಎಸ್ಎ(ನ್ಯಾಷನಲ್ ಹೈವೇ ಟ್ರಾಫಿಕ್ ಸೆಫ್ಟಿ ಅಡ್ಮಿನಿಸ್ಟೇಷನ್) ಸಂಸ್ಥೆಗಳು ಕಾರುಗಳಲ್ಲಿನ ಸುರಕ್ಷಾ ವೈಶಿಷ್ಟ್ಯತೆಗಳ ಕುರಿತಂತೆ ಸೆಫ್ಟಿ ರೇಟಿಂಗ್ ನೀಡುತ್ತವೆ.

ಕ್ರ್ಯಾಶ್ ಟೆಸ್ಟಿಂಗ್‌ನಲ್ಲಿ 5 ಸ್ಟಾರ್ ಪಡೆದರೆ ಅದು ಹೆಚ್ಚು ಸುರಕ್ಷಿತ ಕಾರು ಎಂದರ್ಥ. ಜೊತೆಗೆ 0 ಸ್ಟಾರ್ ರೇಟಿಂಗ್ ಬಂದಲ್ಲಿ ಅದು ಅಸುರಕ್ಷಿತ ಕಾರು ಎಂದು ಕರೆಯಲಾಗುತ್ತದೆ.

ಇದೀಗ ಫೋರ್ಡ್ ಇಕೋಸ್ಪೋರ್ಟ್ ಕಾರುಗಳು ಸಹ ಒಟ್ಟಾರೆ 4 ಸ್ಟಾರ್ ರೇಟಿಂಗ್ ಪಡೆದಿದ್ದು, ಅಪಘಾತ ಸಂದರ್ಭಗಳಲ್ಲಿ ಕಾರು ಪ್ರಯಾಣಿಕರಿಗೆ ಸಾಧಾರಣ ಮಟ್ಟದ ಸುರಕ್ಷತೆ ನೀಡುವಲ್ಲಿ ಮಾತ್ರ ಶಕ್ತವಾಗಿವೆ ಎನ್ನಬಹುದು.
ಇಕೋಸ್ಪೋರ್ಟ್ ಕಾರಿನಲ್ಲಿರುವ ಸುರಕ್ಷತೆ ಬಗ್ಗೆ ನಡೆಸಲಾದ ಕ್ರ್ಯಾಶ್ ಟೆಸ್ಟಿಂಗ್ ವಿಡಿಯೋ ಇಲ್ಲಿದೆ ವೀಕ್ಷಿಸಿ..


Click it and Unblock the Notifications








