ಬಹಿರಂಗಗೊಂಡ ಹೋಂಡಾ ಅಮೇಜ್ ಕಾರಿನ ಬಿಡುಗಡೆ ಮಾಹಿತಿ..
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಭಾರತದಲ್ಲಿ ತಮ್ಮ ಹೊಸ ಅಮೇಜ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದು, ಇದೇ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.
ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಹೋಂಡಾ ಭಾರತದಲ್ಲಿ ತಮ್ಮ ಹೊಸ ಅಮೇಜ್ ಕಾರಿನ ಬಿಡುಗಡೆಯ ಬಗ್ಗೆ ಮಾಹಿತಿ ಬಹಿರಂಗಗೊಳಿಸಿದ್ದು, ಇದೇ ವರ್ಷದ ಮೇ ತಿಂಗಳಿನಲ್ಲಿ ಬಿಡುಗಡೆಗೊಳಿಸಲಿದೆ ಎನ್ನಲಾಗಿದೆ.

ಸೆಡಾನ್ ಆವೃತ್ತಿಗಳಲ್ಲಿರುವ ತನ್ನ ಕಾರು ಮಾದರಿಗಳ ಉನ್ನತ್ತೀಕರಣಕ್ಕಾಗಿ ವಿಶೇಷ ಯೋಜನೆ ರೂಪಿಸುತ್ತಿರುವ ಹೋಂಡಾ ಸಂಸ್ಥೆಯು ಅಮೇಜ್ ಸೇರಿದಂತೆ ಎಲ್ಲಾ ಮಾದರಿಗಳಲ್ಲೂ ವಿನೂತನ ತಂತ್ರಜ್ಞಾನ ಪರಿಚಯಿಸುವ ಮೂಲಕ ಸೆಡಾನ್ ಪ್ರಿಯರಿಗೆ ಹೊಸ ಚಾಲನಾ ಅನುಭವ ಒದಗಿಸುತ್ತದೆ.

ಮಾಹಿತಿಗಳ ಪ್ರಕಾರ ದೇಶದಲ್ಲಿನ ಹೋಂಡಾ ಡೀಲರ್‍ಗಳು ಈಗಾಗಲೇ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ. ಗ್ರಾಹಕರು ಅಮೇಜ್ ಕಾರಿನ ಖರೀದಿಗಾಗಿ ಮೊದಲಿಗೆ ರೂ 25,000 ಸಾವಿರದ ಮೊತ್ತವನ್ನು ಪಾವತಿಸಬೇಕಾಗಿದ್ದು, ಮೇ ತಿಂಗಳಿನಲ್ಲಿ ಹೊಸ ಕಾರು ನಿಮ್ಮ ಕೈ ಸೇರಲಿದೆಯಂತೆ.

ಎಂಜಿನ್ ಸಾಮರ್ಥ್ಯ
ಬಿಡುಗಡೆಗೊಳ್ಳುತ್ತಿರುವ ಹೊಸ ಹೋಂಡಾ ಅಮೇಜ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 88ಬಿಹೆಚ್‍ಪಿ ಹಾಗು 108ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಇನ್ನು ಇದರ 1.5 ಲೀಟರ್ ಡೀಸೆಲ್ ಎಂಜಿನ್ 100ಬಿಹೆಚ್‍ಪಿ ಹಾಗು 200ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍ಗಳನ್ನು ಸಿವಿಟಿ ಟ್ರಾನ್ಸ್ ಮಿಷನ್ ಆಯ್ಕೆಯೊಂದಿಗೆ 5 ಸ್ಪೀಡ್ ಗೇರ್‍ಬಾಕ್ಸ್ ಗೆ ಜೋಡಿಸಲಾಗಿದೆ.

ಹೋಂಡಾ ಅಮೇಜ್ ಕಾರು ಹೋಂಡಾ ಸಿಟಿ ಕಾರಿನ ವಿನ್ಯಾಸವನ್ನು ಹೋಲಲಿದ್ದು, ಎರಡನೆ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗು ಆನ್ಗ್ಯೂಲರ್ ಹೆಡ್‍ಲ್ಯಾಂಪ್‍ಗಳನ್ನು ಪಡೆದುಕೊಂಡಿವೆ.

ಕಾಂಪ್ಯಾಕ್ಟ್ ಸಿಡಾನ್ ಆದ ಹೋಂಡಾ ಅಮೇಜ್ ಕಾರು 15 ಇಂಚಿನ ವೀಲ್‍ಗಳನ್ನು ಪಡೆದಿದೆ. ಕಾರಿನ ಹಿಂಭಾಗವು ದಪ್ಪದಾದ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್ ಲೈಟ್ಸ್ ಗಳನ್ನು ಪಡೆದಿದ್ದು, ಇನ್ನಷ್ಟು ಆಕರ್ಷಕವಾದ ವಿನ್ಯಾಸದಿಂದ ಸಜ್ಜುಗೊಂಡಿದೆ.

ಇನ್ನು ಹೋಂಡಾ ಕಾರಿನ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಎಲ್ಇಡಿ ಡಿಎಲ್‍ಆರ್, ಆಪಲ್ ಕಾರ್ ಪ್ಲೇ ಹಾಗು ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡತಹ ಇನ್ಫೋಟೈನ್ಮೆಂಟ್ ಸಿಸ್ಟಂ, ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಹೋಂಡಾ ಸಂಸ್ಥೆಯು ತಮ್ಮ ಸಿಡಾನ್ ಕಾರುಗಳ ಸಣಿಯಲ್ಲಿ ಮಾರಾಟಗಳನ್ನು ಇನ್ನಷ್ಟು ಹೆಚ್ಚಿಸಲು ಅಮೇಜ್ ಕಾರನ್ನು ಬಿಡುಗಡೆಗೊಳಿಸುತಿದ್ದು, ಹೊಸ ಕಾರಿನ ಬೆಲೆ ಹಾಗು ವೇರಿಯಂಟ್‍ಗಳ ಬಗ್ಗೆ ಸಂಸ್ಥೆಯು ಯಾವುದೇ ಮಾಹಿತಿಯನ್ನು ಹೊರಹಾಕಲಿಲ್ಲ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:
1. ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..
2. 10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು..
3. ಇನ್ಮುಂದೆ ಬಜಾಜ್ ಪಲ್ಸರ್ ಎಲ್ಎಸ್135 ಬೈಕ್ ಖರೀದಿಗೆ ಸಿಗೋದಿಲ್ವಂತೆ..!!
4. ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ..
5. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..


Click it and Unblock the Notifications








