10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

Written By:

ಕಾರುಗಳ ಖರೀದಿಗೂ ಮುಂಚೆ ಬಹುತೇಕ ಗ್ರಾಹಕರು ಕಾರಿನ ಬೆಲೆ, ಮೈಲೇಜ್ ಮತ್ತು ಕಾರಿನಲ್ಲಿ ಎಷ್ಟು ಜನ ಸವಾರಿ ಮಾಡಬಹುದು ಎಂದೆಲ್ಲಾ ಕೂಲಂಕುಶವಾಗಿ ವಿಚಾರಿಸುತ್ತಾರೆ. ಆದ್ರೆ ಕಾರಿನಲ್ಲಿರುವ ಸುರಕ್ಷಾ ಸೌಲಭ್ಯಗಳ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಇದಕ್ಕೆ ಕಾರಣ, ಕಡಿಮೆ ಬಜೆಟ್‌ನಲ್ಲಿ ಉತ್ತಮ ಸುರಕ್ಷತೆ ಹೊಂದಿರುವ ಕಾರುಗಳು ಇರುವುದಿಲ್ಲ ಎಂಬ ಭಾವನೆಯು ಬಹುತೇಕ ಗ್ರಾಹಕರಲ್ಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಇದೇ ಕಾರಣಕ್ಕೆ ನಿಮ್ಮ ಡ್ರೈವ್‌ಸ್ಪಾರ್ಕ್ ತಂಡವು ಕೈಗೆಟುವ ಬೆಲೆಯಲ್ಲಿ ಖರೀದಿಸಬಹುದು 6 ಏರ್‌ಬ್ಯಾಗ್ ಸೌಲಭ್ಯವುಳ್ಳ ಕಾರುಗಳ ಮಾಹಿತಿಯನ್ನು ನೀಡುತ್ತಿದ್ದು, ಕೆಳಗೆ ನೀಡಲಾಗಿರುವ ಪ್ರಮುಖ ಕಾರುಗಳು ಈಗಾಗಲೇ ಭಾರತೀಯ ಮಾರುಕಟ್ಟೆ ಅತಿಹೆಚ್ಚು ಜನಪ್ರಿಯತೆ ಪಡೆದಿದೆ ಎಂಬುವುದು ಪ್ರಮುಖ ವಿಚಾರ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಫೋರ್ಡ್ ಆಸ್ಪೈರ್

ಅಮೆರಿಕದ ಪ್ರಸಿದ್ದ ವಾಹನ ತಯಾರಕ ಸಂಸ್ಥೆಯಾದ ಫೋರ್ಡ್ ತನ್ನ ಹೊಸ ಆಸ್ಪೈರ್ ಕಾಂಪ್ಯಾಕ್ಟ್ ಸೆಡಾನ್ ಕಾರುಗಳಲ್ಲಿ ಅತ್ಯುತ್ತಮ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿದೆ ಎನ್ನಬಹುದು. ಈ ಕಾರಿನಲ್ಲಿ ಒಟ್ಟು 6 ಏರ್‌ಬ್ಯಾಗ್ ಸೌಲಭ್ಯಗಳಿದ್ದು, ಅಪಘಾತಗಳ ಸಂದರ್ಭದಲ್ಲಿ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ನೀಡುವುದಲ್ಲಿ ಯಾವುದೇ ಅನುಮಾನವಿಲ್ಲ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.7.39 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 7.94 ಲಕ್ಷಕ್ಕೆ ಖರೀದಿಸಬಹುದಾಗಿದ್ದು, 1.2-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಹೊಂದಿರಲಿವೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಫೋರ್ಡ್ ಇಕೋಸ್ಪೋರ್ಟ್ ಫೇಸ್‌ಲಿಫ್ಟ್

ಜನಪ್ರಿಯ ಫೋರ್ಡ್ ಸಂಸ್ಥೆಯ ಮತ್ತೊಂದು ಕಾರು ಮಾದರಿಯಾದ ಇಕೋ ಸ್ಪೋರ್ಟ್ ಫೇಸ್‌ಲಿಫ್ಟ್ ಕಾರುಗಳಲ್ಲೂ ಸಹ 6 ಏರ್‌ಬ್ಯಾಗ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಒಟ್ಟು 10 ವಿವಿಧ ಮಾದರಿಗಳಲ್ಲಿ ಖರೀದಿಗೆ ಲಭ್ಯವಿವೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಹೊಸ ಕಾರಿನ ಆರಂಭಿಕ ಬೆಲೆಯನ್ನು ರೂ. 7.31 ಲಕ್ಷಕ್ಕೆ ಹಾಗೂ ಟಾಪ್ ವೆರಿಯಂಟ್ ಮಾದರಿಯನ್ನು ರೂ. 10.67 ಲಕ್ಷಕ್ಕೆ ನಿಗದಿ ಮಾಡಿದ್ದು, 1.5 ಲೀಟರ್ ತ್ರಿ ಸಿಲಿಂಡರ್ ಡಿಸೇಲ್ ಎಂಜಿನ್ ಮತ್ತು 1.5 ಲೀಟರ್ ತ್ರಿ ಸಿಲಿಂಡರ್ ಡ್ರ್ಯಾಗನ್ ಪೆಟ್ರೋಲ್ ಎಂಜಿನ್ ಹೊಂದಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಹೋಂಡಾ ಸಿಟಿ

ಸೆಡಾನ್ ಆವೃತ್ತಿಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಸಾಧಿಸಿರುವ ಹೋಂಡಾ ಸಿಟಿ ಕಾರುಗಳು ಕಳೆದ 20 ವರ್ಷಗಳಿಂದ ಹತ್ತಾರು ಬದಲಾವಣೆಗಳೊಂದಿಗೆ ಇದುವರೆಗೂ ಎಲ್ಲಾ ವರ್ಗದ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಕಾರಣ ಉತ್ತಮ ಎಂಜಿನ್ ಆಯ್ಕೆ ಮತ್ತು ಗುಣಮಟ್ಟದ ಸುರಕ್ಷಾ ಸೌಲಭ್ಯಗಳು.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಹೋಂಡಾ ಸಿಟಿ ಕಾರುಗಳು ಗ್ರಾಹಕರಲ್ಲಿ ಹೊಸ ಭರವಸೆ ಹುಟ್ಟುಹಾಕಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.10 ಲಕ್ಷದಿಂದ ಟಾಪ್ ಎಂಡ್ ಮಾದರಿಗಳಿಗೆ ರೂ.11.84 ಲಕ್ಷ ಬೆಲೆ ಹೊಂದಿರಲಿವೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಫೋರ್ಡ್ ಫ್ರೀ ಸ್ಟೈಲ್

ಭಾರತೀಯ ಮಾರುಕಟ್ಟೆಗಾಗಿ ಹೊಸ ನಮೂನೆಯ ಕಂಪ್ಯಾಕ್ಟ್ ಯುಟಿಲಿಟಿ ಕಾರು ಮಾದರಿಯೊಂದನ್ನು ಅಭಿವೃದ್ಧಿಗೊಳಿಸಿರುವ ಫೋರ್ಡ್ ಇಂಡಿಯಾ ಸಂಸ್ಥೆಯು, ಫಿಗೊ ಹ್ಯಾಚ್‌ಬ್ಯಾಕ್ ಫ್ಯಾಟ್ ಫಾರ್ಮ್ ಅಡಿಯಲ್ಲಿ ಹೊಸ ಕಾರನ್ನು ಅಭಿವೃದ್ಧಿಗೊಳಿಸುವ ಮೂಲಕ ಹೊಸ ಸಂಚಲಯ ಸೃಷ್ಠಿಸಲು ಸಜ್ಜುಗೊಳ್ಳುತ್ತಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಬಿಡುಗಡೆ ಮುನ್ನವೇ ಫ್ರೀ ಸ್ಟೈಲ್ ಕಾರುಗಳಲ್ಲಿ ನೀಡಲಾಗಿರುವ ಸುರಕ್ಷಾ ಸೌಲಭ್ಯಗಳು ಹ್ಯಾಚ್‌ಬ್ಯಾಕ್ ಪ್ರಿಯರನ್ನು ಸೆಳೆಯುತ್ತಿದ್ದು, ಟಾಪ್ ಎಂಡ್ ಫ್ರೀ ಸ್ಟೈಲ್ ಕಾರುಗಳಲ್ಲಿ 6 ಏರ್‌ಬ್ಯಾಗ್ ಮತ್ತು ಆರಂಭಿಕ ಕಾರುಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಒದಗಿಸಲಾಗಿದೆ. ಇನ್ನು ಈ ಹೊಸ ಕಾರು ಮೇ ಮೊದಲ ವಾರ ಇಲ್ಲವೇ ಕೊನೆಯ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿವೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

1.2-ಲೀಟರ್ 3 ಸಿಲಿಂಡರಿನ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ 4 ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಿರುವ ಫ್ರೀ ಸ್ಟೈಲ್ ಕಾರುಗಳು ಆರಂಭಿಕವಾಗಿ ರೂ. 6.50 ಲಕ್ಷಕ್ಕೆ ಮತ್ತು ಟಾಪ್ ವೇರಿಯೆಂಟ್‌ಗಳು ರೂ.850 ಲಕ್ಷ ಬೆಲೆ ಹೊಂದಿರಲಿವೆ ಎನ್ನಲಾಗಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಹ್ಯುಂಡೈ ಎಲೈಟ್ ಐ20 ಫೇಸ್‌ಲಿಫ್ಟ್

ದಕ್ಷಿಣ ಕೊರಿಯಾ ಮೂಲದ ವಾಹನ ತಯಾರಕ ಸಂಸ್ಥೆಯಾದ ಹ್ಯುಂಡೈ ತಮ್ಮ ಎಲೈಟ್ ಐ20 ಫೇಸ್‍ಲಿಫ್ಟ್ ಕಾರನ್ನು ಕಳೆದ ಫೆಬ್ರವರಿಯಲ್ಲಿ ನಡೆದ 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಬಿಡುಗಡೆಗೊಳಿಸಿದ್ದು, ಹೊಸ ಕಾರಿನ ಬೆಲೆಗಳು ರೂ. 5.35 ಲಕ್ಷದಿಂದ ಆರಂಭವಾಗಿ ಟಾಪ್ ವೆರಿಯಂಟ್‌ಗಳು ರೂ. 9.15 ಲಕ್ಷ ಬೆಲೆ ಹೊಂದಿವೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಆರಂಭಿಕ ಕಾರು ಮಾದರಿಗಳಲ್ಲಿ ಫ್ರಂಟ್ ಡ್ಯುಯಲ್ ಏರ್‌ಬ್ಯಾಗ್ ಮತ್ತು ಟಾಪ್ ಮಾದರಿಗಳಲ್ಲಿ 6 ಏರ್‌ಬ್ಯಾಗ್ ಸೌಲಭ್ಯಗಳನ್ನು ನೀಡಲಾಗಿದ್ದು, 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.4 ಲೀಟರ್ ಡೀಸೆಲ್ ಎಂಜಿನ್ ನೀಡಲಾಗಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಹ್ಯುಂಡೈ ವೆರ್ನಾ

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರನ್ನು ಭಾರತದಲ್ಲಿ ಬಿಡುಗಡೆಯಾಗಿದ್ದು, ಈ ಕಾರು ಹೋಂಡಾ ಕಂಪನಿಯ ಸಿಟಿ, ಮಾರುತಿ ಸುಜುಕಿ ಸಿಯಾಜ್ ಎಸ್ ಕಾರುಗಳಿಗೆ ತೀವ್ರ ಸ್ಪರ್ಧೆಯಾಗುತ್ತಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಮೂರನೆಯ ತಲೆಮಾರಿನ ನೂತನ ಹ್ಯುಂಡೈ ಎಕ್ಸಿಕ್ಯೂಟಿವ್ ಸೆಡಾನ್ ವೆರ್ನಾ ಕಾರುಗಳು 1.6-ಲೀಟರ್ ಪೆಟ್ರೋಲ್ ಮತ್ತು 1.6-ಲೀಟರ್ ಡೀಸೆಲ್ ಎಂಬ ಎರಡು ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ 6 ಏರ್‌ಬ್ಯಾಗ್ ಸೌಲಭ್ಯ ನೀಡಲಾಗಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಈ ಕಾರು ಕೂಡಾ ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ.7.99 ಲಕ್ಷಕ್ಕೆ ಮತ್ತು ಟಾಪ್ ಮಾದರಿಯು ರೂ.12.39 ಲಕ್ಷ ಬೆಲೆ ಹೊಂದಿದ್ದು, ಪೆಟ್ರೋಲ್ ಆವೃತಿಯು ಪ್ರತಿ ಲೀಟರ್‌ಗೆ 17.7 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಡೀಸೆಲ್ ಆವೃತ್ತಿಯು ಪ್ರತಿ ಲೀಟರ್‌ಗೆ 24.76 ಕಿ.ಮೀ ಮೈಲೇಜ್ ನೀಡಲಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಟೊಯೊಟಾ ಯಾರಿಸ್

ಪ್ರಸಕ್ತ ವರ್ಷದಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದ್ದ ಯಾರಿಸ್ ಕಾರುಗಳು ಮುಂದಿನ ತಿಂಗಳು 18ಕ್ಕೆ ಬಿಡುಗಡೆಗೊಳ್ಳಲಿದ್ದು, ಟೊಯೋಟಾ ತನ್ನ ತತ್ವವಾದ ಕ್ಯೂಡಿಆರ್ (ಗುಣಮಟ್ಟ, ದೀರ್ಘಬಾಳಿಕೆ ಮತ್ತು ನಂಬಿಕಾರ್ಹತೆ) ಗಳನ್ನು ಆಧರಿಸಿ ನಿರ್ಮಿಸಲಾದ ಈ ಕಾರು ಐಷಾರಾಮಿತನಕ್ಕೆ ಹೇಳಿ ಮಾಡಿಸಿದಂತಿದೆ.

10 ಲಕ್ಷದೊಳಗೆ ಖರೀದಿಸಬಹುದಾದ 6 ಏರ್‌ಬ್ಯಾಗ್ ಸೌಲಭ್ಯ ಹೊಂದಿರುವ ಕಾರುಗಳಿವು...

ಸುಂದರ ವಿನ್ಯಾಸ, ಸ್ಥಳಾನುಕೂಲ, ಗುಣಮಟ್ಟ ಮತ್ತು ಸಾಕಷ್ಟು ನವೀನ ಅನುಕೂಲಗಳು ಇದರಲ್ಲಿದ್ದು, ಪವರ್ ಡ್ರೈವರ್ ಸೀಟ್, 7 ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ರೂಫ್ ಮೌಂಟೆಡ್ ಏರ್ ವೆಂಟ್‌ಗಳು, ಟಿಪಿಎಂಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸರ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಹೀಗಾಗಿ ಕಾರಿನ ಬೆಲೆಯು ಆರಂಭಿಕವಾಗಿ ರೂ. 8 ಲಕ್ಷ ಬೆಲೆ ಹೊಂದಿರಲಿವೆ ಎಂದು ಅಂದಾಜಿಸಲಾಗಿದೆ.

Read more on airbag top 5
English summary
Top Cars Under Rs 10 Lakhs Offering 6 Airbags.
Story first published: Thursday, April 5, 2018, 13:59 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark