ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಕಳೆದ ಒಂದು ದಶಕದ ಅವಧಿಯಲ್ಲಿ ಪ್ರಯಾಣಿಕ ಕಾರುಗಳಲ್ಲಿ ಸುರಕ್ಷಾ ಮಾನದಂಡಗಳು ಸಾಕಷ್ಟು ಸುಧಾರಣೆಗೊಂಡಿದ್ದು, ಕೇಂದ್ರ ಸರ್ಕಾರವು ಶೀಘ್ರದಲ್ಲೇ ಮತ್ತೊಂದು ಹೊಸ ನಿಯಮವನ್ನು ಕಡ್ಡಾಯವಾಗಿ ಜಾರಿಗೆ ತರಲು ಸಿದ್ದವಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೊಸ ವಾಹನ ಉತ್ಪಾದನೆ ಮತ್ತು ಸುರಕ್ಷಾ ಫೀಚರ್ಸ್‌ಗಳ ಅಳವಡಿಕೆಯು ನಿರಂತರವಾಗಿ ಬದಲಾಗುತ್ತಿದ್ದು, ಕಡ್ಡಾಯಗೊಂಡಿರುವ ಹಲವು ಸುರಕ್ಷಾ ಮಾನದಂಡಗಳು ಹೊಸ ಬದಲಾವಣೆಗಳಿಗೆ ಕಾರಣವಾಗಿವೆ. ಹೊಸ ವಾಹನಗಳಲ್ಲಿ ಸುರಕ್ಷತೆಗಾಗಿ ಅಂತರ್‌ರಾಷ್ಟ್ರೀಯ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗುತ್ತಿದ್ದು, ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆ ಖಚಿತಪಡಿಸಲು 6 ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಕ್ಕೆ ಸಿದ್ದತೆ ನಡೆಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿ ಬೆಲೆ ಆಧಾರದ ಮೇಲೆ ಅತ್ಯುತ್ತಮ ಸುರಕ್ಷಾ ಫೀಚರ್ಸ್ ಹೊಂದಿರುವ ಹಲವಾರು ಪ್ರಯಾಣಿಕ ಬಳಕೆಯ ವಾಹನಗಳು ಖರೀದಿ ಲಭ್ಯವಿದ್ದರೂ ಎಂಟ್ರಿ ಲೆವಲ್ ಮತ್ತು ಮಧ್ಯಮ ಗಾತ್ರದ ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಸುರಕ್ಷಾ ಫೀಚರ್ಸ್‌ಗಳಿಗೆ ಗ್ರಾಹಕರು ಒತ್ತು ನೀಡುತ್ತಿದ್ದರೂ ಕೂಡಾ ವಾಹನ ಉತ್ಪಾದನಾ ಕಂಪನಿಗಳು ಬಜೆಟ್ ಬೆಲೆಯ ಹೆಸರಿನಲ್ಲಿ ಕಳೆಪೆ ಗುಣಮಟ್ಟದ ವಾಹನಗಳ ಮಾರಾಟ ಮಾಡುತ್ತಿರುವುದು ಅಪಘಾತಗಳಲ್ಲಿ ಹೆಚ್ಚಿನ ಮಟ್ಟದ ಪ್ರಾಣಹಾನಿಗೆ ಕಾರಣವಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಕಳೆಪೆ ಗುಣಮಟ್ಟಕ್ಕೆ ಬ್ರೇಕ್ ಹಾಕಿ ಪ್ರಯಾಣಿಕರಿಗೆ ಗರಿಷ್ಠ ಪ್ರಮಾಣದ ಸುರಕ್ಷತೆ ಒದಗಿಸುವ ಕುರಿತಂತೆ ಹೊಸ ನಿಯಮ ಜಾರಿಗೆ ತಂದಿರುವ ಕೇಂದ್ರ ಸಾರಿಗೆ ಇಲಾಖೆಯು 2021 ಏಪ್ರಿಲ್ 1ರಿಂದಲೇ ಹೊಸದಾಗಿ ಉತ್ಪಾದನೆಗೊಳ್ಳುವ ಪ್ರತಿ ಕಾರಿನಲ್ಲೂ ಕನಿಷ್ಠ ಎರಡು ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಮಧ್ಯಮ ಕ್ರಮಾಂಕದ ಬಹುತೇಕ ಕಾರುಗಳಲ್ಲಿ ಈಗಾಗಲೇ ಕಡ್ಡಾಯವಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಕೇಂದ್ರ ಸರ್ಕಾರವು ಇದೀಗ ಮತ್ತೊಂದು ಮಹತ್ವದ ನಿಯಮವೊಂದನ್ನು ಜಾರಿಗಾಗಿ ಆಟೋ ಉತ್ಪಾದನಾ ಕಂಪನಿಗಳ ಜೊತೆ ಮಾತುಕತೆ ನಡೆಸಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ವ್ಯಯಕ್ತಿಕ ಬಳಕೆಯ ಕಾರುಗಳಿಗೆ ಕನಿಷ್ಠ 6 ಏರ್‌ಬ್ಯಾಗ್ ಜೋಡಣೆ ಮಾಡುವ ಕುರಿತಂತೆ ಮಾತುಕತೆ ನಡೆಸಲಾಗುತ್ತಿದ್ದು, ಹೊಸ ಸೌಲಭ್ಯ ಕಡ್ಡಾಯದೊಂದಿಗೆ ಬೆಲೆ ನಿಗದಿ ಕುರಿತಂತೆ ಪ್ರಮುಖ ಆಟೋ ಉತ್ಪದನಾ ಕಂಪನಿಗಳ ಜೊತೆಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಪ್ರತಿ ವರ್ಷ ರಸ್ತೆಗಳಿಯುವ ಲಕ್ಷಾಂತರ ವಾಹನಗಳಿಂದ ಅಪಘಾತಗಳು ಸಂಭವಿಸುತ್ತಲೇ ಇರುತ್ತವೆ. ಆದರೆ ಅಪಘಾತದಲ್ಲಿ ಪ್ರಯಾಣಿಕರ ಸಾವಿನ ಸಂಖ್ಯೆ ತಗ್ಗಿಸುವ ನಿಟ್ಟಿನಲ್ಲಿ ಹೊಸ ವಾಹನಗಳಲ್ಲಿ ವಿವಿಧ ಸುರಕ್ಷಾ ಕ್ರಮಗಳನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಏರ್‌ಬ್ಯಾಗ್ ಸೌಲಭ್ಯವು ಅಪಘಾತದ ಭೀಕರತೆಯನ್ನು ತಡೆಯುವಲ್ಲಿ ಮಹತ್ವದ ಪಾತ್ರವಹಿಸುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೀಗಾಗಿ ಪ್ರತಿ ಕಾರುಗಳಲ್ಲೂ ಡ್ಯುಯಲ್ ಏರ್‌ಬ್ಯಾಗ್ ಅಳವಡಿಕೆಯನ್ನು ಕಡ್ಡಾಯವಾಗಿ ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಇದೀಗ ಮೊದಲ ಹಂತವಾಗಿ ವ್ಯಯಕ್ತಿಕ ಬಳಕೆಯ ಹೊಸ ಕಾರುಗಳಲ್ಲಿ 6 ಏರ್‌ಬ್ಯಾಗ್ ಅಳವಡಿಕೆ ಕುರಿತಂತೆ ಶೀಘ್ರದಲ್ಲೇ ಆಟೋ ಕಂಪನಿಗಳಿಗೆ ಡೆಡ್‌ಲೈನ್ ಹೊರಡಿಸಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಹೊಸದಾಗಿ ಬಿಡುಗಡೆಯಾಗುತ್ತಿರುವ ಬಹುತೇಕ ಐಷಾರಾಮಿ ಕಾರುಗಳಲ್ಲಿ 6 ಏರ್‌ಬ್ಯಾಗ್‌ಗಳನ್ನು ಸ್ಟ್ಯಾಂಡರ್ಡ್ ನೀಡಲಾಗುತ್ತಿದ್ದು, ಮಧ್ಯಮ ಕ್ರಮಾಂಕದಲ್ಲಿ ಮಾರಾಟಗೊಳ್ಳುತ್ತಿರುವ ಕೆಲವು ಕಾರುಗಳ ಹೈ ಎಂಡ್ ಮಾದರಿಯಲ್ಲಿ ಮಾತ್ರ ಗರಿಷ್ಠ ಏರ್‌ಬ್ಯಾಗ್ ಅಳವಡಿಸಲಾಗುತ್ತಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಎಂಟ್ರಿ ಲೆವಲ್ ಮತ್ತು ಮಧ್ಯಮ ಕ್ರಮಾಂಕದ ಕಾರುಗಳಲ್ಲಿ ಬೆಲೆಗೆ ಅನುಗುಣವಾಗಿ 2 ಏರ್‌ಬ್ಯಾಗ್ ಇಲ್ಲವೇ 4 ಏರ್‌ಬ್ಯಾಗ್ ನೀಡಲಾಗುತ್ತಿದ್ದು, 6 ಏರ್‌ಬ್ಯಾಗ್ ಕಡ್ಡಾಯ ಜಾರಿಗೆ ಬಂದಲ್ಲಿ ಸುರಕ್ಷಾ ಮಾನದಂಡಕ್ಕಾಗಿ ಬೆಲೆ ಏರಿಕೆ ಸಹಜವಾಗಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಏರ್‌ಬ್ಯಾಗ್ ಗುಣಮಟ್ಟವನ್ನು ಬಿಎಸ್ಐ(ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್) ಮಾನದಂಡಗಳಿಗೆ ಅನುಗುಣವಾಗಿ ಪ್ರಮಾಣೀಕರಿಸಲಾಗಿದ್ದು, 6 ಏರ್‌ಬ್ಯಾಗ್ ಹೊಂದಿರುವ ಕಾರುಗಳಲ್ಲಿ ಮುಂಭಾಗ ಪ್ರಯಾಣಿಕರಿಗೆ ಮಾತ್ರ ಹಿಂಬದಿಯ ಪ್ರಯಾಣಿಕರಿಗೂ ಸುರಕ್ಷತೆ ನೀಡಲಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಇನ್ನು ಭಾರತದಲ್ಲಿ ಪ್ರತಿ ವರ್ಷ ಸುಮಾರು 80 ಸಾವಿರದಿಂದ 1 ಲಕ್ಷ ಜನ ರಸ್ತೆ ಅಪಘಾತಗಳಲ್ಲಿ ಪ್ರಾಣಕಳೆದುಕೊಳ್ಳುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಅಪಘಾತದಲ್ಲಿ ಜೀವಕಳೆದುಕೊಳ್ಳುವವರ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸಲಾಗಿದೆ.

ಪ್ರಯಾಣಿಕರ ಸುರಕ್ಷತೆಗಾಗಿ ಶೀಘ್ರದಲ್ಲೇ ಕಡ್ಡಾಯವಾಗಿ ಜಾರಿಗೆ ಬರಲಿದೆ ಮತ್ತೊಂದು ಸೇಫ್ಟಿ ಫೀಚರ್ಸ್

ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ನಿಯಮಗಳ ಕಡ್ಡಾಯದೊಂದಿಗೆ ಪ್ರಯಾಣಿಕರಿಗೆ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಾಗುತ್ತಿದ್ದು, ಕ್ರ್ಯಾಶ್ ಟೆಸ್ಟಿಂಗ್ ಮೂಲಕ ಹೊಸ ವಾಹನಗಳ ಗುಣಮಟ್ಟವನ್ನು ಸಾಕಷ್ಟು ಸುಧಾರಣೆಗೊಳಿಸುವಲ್ಲಿ ಸಹಕಾರಿಯಾಗಿದೆ.

Most Read Articles

Kannada
English summary
6 Airbags In Cars Being Offered As Standard In India As Proposed By Nitin Gadkari.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X