ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

Written By: Rahul TS

ದೇಶಿಯ ಮಾರುಕಟ್ಟೆಯಲ್ಲಿ ತನ್ನ ವಾಹನಗಳಿಂದ ಜನಪ್ರಿಯತೆಯನ್ನು ಪಡೆದ ಹ್ಯುಂಡೈ ಸಂಸ್ಥೆಯು ತಮ್ಮ ಕ್ರೆಟಾ ಫೆಸ್‍‍ಲಿಫ್ಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದ್ದು, ಈಗಾಗಲೆ ಡೀಲರ್‍‍ಗಳ ಯಾರ್ಡ್ ಅನ್ನು ಸೇರಿವೆ. ಈ ಹಿಂದೆಯೆ ನಾವು ಕಾರಿನ ವೇರಿಯಂಟ್‍‍ಗಳ ಬಗ್ಗೆ ಮಾಹಿತಿ ನೀಡಿದ್ದು, ಇದೀಗ ಕಾರು ಮತೊಮ್ಮೆ ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಮಾಹಿತಿಗಳ ಪ್ರಕಾರ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಇ, ಇ+, ಎಸ್, ಎಸ್ಎಕ್ಸ್, ಎಸ್ಎಕ್ಸ್ ಡ್ಯುಯಲ್ ಟೋನ್ ಮತ್ತು ಎಸ್ಎಕ್ಸ್ (ಓ) ಎಂಬ ಆರು ವೇರಿಯಂಟ್‍‍ಗಳಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿವೆ ಎನ್ನಲಾಗಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಕೇಸ್‍‍ಕೇಡಿಂಗ್ ಗ್ರಿಲ್, ಸ್ಕಿಡ್ ಪ್ಲೇಟ್ಸ್, ಡ್ಯುಯಲ್ ಟೋನ್ ಬಂಪರ್ ಮತ್ತು ಸ್ಪ್ಲಿಟ್ ಟೈಲ್ ಲೈಟ್ ಕ್ಲಸ್ಟರ್ ಅನ್ನು ಅಳವಡಿಸಲಾಗಿದ್ದು, ಜೊತೆಗೆ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡಿಆರ್‍ಎಲ್ ಮತ್ತು 17 ಇಂಚಿನ ಅಲಾಯ್ ಚಕ್ರಗಳನ್ನು ಪಡೆದುಕೊಂಡಿರಲಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಸ್ಮಾರ್ಟ್ ಕೀ ಬ್ಯಾಂಡ್, 6 ವಿದಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರವರ್ ಸೀಟ್ಸ್, ಎಲೆಕ್ಟ್ರಾನಿಕ್ ಸನ್‍‍ರೂಫ್, ವೈರ್‍‍ಲೆಸ್ ಚಾರ್ಜಿಂಗ್ ಮತ್ತು ಕ್ರೂಸ್ ಕಂಟ್ರೋಲ್‍‍ನಂತಹ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಎಲೆಕ್ಟ್ರಿಕ್ ಸನ್ ರೂಫ್ ವೈಶಿಷ್ಟ್ಯತೆಯು ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಎಸ್ಎಕ್ಸ್ ಆಟೊಮ್ಯಾಟಿಕ್ ಟ್ರಿಮ್ ವೇರಿಯಂಟ್‍‍ನಲ್ಲಿ ದೊರೆಯುತ್ತವೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಇನ್ನು ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಪ್ಯಾಶನ್ ಆರೆಂಜ್ ಮತ್ತು ಮೆರಿನಾ ಬ್ಲೂ ಎಂಬ ಎರಡು ಹೊಸ ಬಣ್ಣಗಳಲ್ಲಿ ಬರಲಿದ್ದು, ಪ್ಯಾಶನ್ ಆರೆಂಜ್ ಬಣ್ಣವು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬ್ಲಾಕ್ ರೂಫ್‍‍ನೊಂದಿಗೆ ಬರಲಿದೆ. ಇದಲ್ಲದೆ ಎರಡನೆಯದಾಗಿ ಪೋಲಾರ್ ವೈಟ್ ಬಣ್ಣದೊಂದಿಗೆ ಪ್ಯಾಂಥಮ್ ಬ್ಲಾಕ್ ರೂಫ್ ಎಂಬ ಮತ್ತೊಂದು ಡ್ಯುಯಲ್ ಟೋನ್ ಆಯ್ಕೆಯೊಂದಿಗೆ ಬರಲಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಪ್ರಯಾಣಿಕರ ಸುರಕ್ಷತೆಗಾಗಿ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಡ್ಯುಯಲ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿ ನೀಡಲಾಗುತಿದ್ದು, ಕಾರಿನ ಟಾಪ್ ಸ್ಪೆಕ್ ಮಾಡಲ್‍‍ಗಳು ಆರ್ ಏರ್‍‍ಬ್ಯಾಗ್ಸ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಹಿಲ್ ಅಸ್ಸಿಸ್ಟ್, ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಕ್ಯಾಮೆರಾ ಹಾಗೆಯೆ ಐಎಸ್ಒಫಿಕ್ಸ್ ವೈಲ್ಡ್ ಸೀಟ್ ಮೌಂಟ್‍ ಅನ್ನು ಅಳವಡಿಸಲಾಗಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಎಂಜಿನ್ ವೈಶಿಷ್ಟ್ಯತೆ

ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು 1.4 ಲೀಟರ್ ಡೀಸೆಲ್, 1.6 ಲೀಟರ್ ಡೀಸೆಲ್ ಮತ್ತು 1.6 ಲೀಟರ್ ಪೆಟ್ರೋಲ್ ಎಂಜಿನ್ ಮಾದರಿಗಳಲ್ಲಿ ಬರಲಿದ್ದು, 1.6 ಲೀಟರ್ ಎಂಜಿನ್‍‍ಗಳು 6 ಸ್ಪೀಡ್ ಮ್ಯಾನುವಲ್ ಅಥವ 6 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಮತ್ತು 1.4 ಲೀಟರ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಹೊಸ ಕ್ರೆಟಾ ಫೇಸ್‍‍ಲಿಫ್ಟ್ ಕಾರುಗಳು ಪ್ರಸ್ಥುತ ತಲೆಮಾರಿನ ಕ್ರೆಟಾ ಕಾರುಗಳಿಗಿಂತ ವಿಭಿನ್ನವಾದ ವೈಶಿಷ್ಟ್ಯತೆಗಳನ್ನು ಹೊತ್ತು ಮಾರುಕಟ್ಟೆಗೆ ಲಗ್ಗೆಯಿಡಲಿದ್ದು, ಜೊತೆಗೆ ಸಂಸ್ಥೆಯು ಕಾರಿನ ಒಳಭಾಗದಲ್ಲಿಯೂ ಕೂಡ ಗುರುತರ ಬದಲಾವಣೆಗಳನ್ನು ಮಾಡಿವೆ.

ಬಿಡುಗಡೆಗು ಮುನ್ನವೆ ಮುಸುಕಿಲ್ಲದೆ ಕಾಣಿಸಿಕೊಂಡ ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರು.. ಬಿಡುಗಡೆ ಯಾವಾಗ..??

ಇನ್ನು ಹ್ಯುಂಡೈ ಕ್ರೆಟಾ ಫೇಸ್‍‍ಲಿಫ್ಟ್ ಕಾರಿನ ಬಿಡುಗಡೆಯ ಸರಿಯಾದ ದಿನಾಂಕದ ಬಗ್ಗೆ ಮಾಹಿತಿ ದೊರೆತಿಲ್ಲವಾದರು, ಇದೇ ತಿಂಗಳಿನ ಕೊನೆಯಲ್ಲಿ ಬಿಡುಗಡೆಗೊಳ್ಳಬಹುದೆಂಬ ನಿರೀಕ್ಷೇಯಿದೆ. ಅಲ್ಲದೆ ಕಾರಿನ ಬೆಲೆಯ ಬಗ್ಗೆ ಮಾಹಿತಿ ದೊರೆತಿಲ್ಲವಾದರು ಪ್ರಸ್ಥುತ ತಲೆಮಾರಿಗಿಂತ ಹೆಚ್ಚಿನ ಬೆಲೆಯಲ್ಲಿಯೆ ಬರಲಿದೆ ಎನ್ನಲಾಗಿದೆ.

Source : Cartoq

Read more on hyundai suv
English summary
New Hyundai Creta facelift spied ahead of launch.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark