ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇಂದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ದೇಶದ ಜನಪ್ರಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿ ಸಂಸ್ಥೆಯು ಕಳೆದ ತಿಂಗಳ ಹಿಂದಷ್ಟೇ ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಬಿಡುಗಡೆಗೊಳಿಸಿದ್ದು, ಇದೀಗ ಎರ್ಟಿಗಾ ಫೇಸ್‍‍ಲಿಫ್ಟ್ ಕಾರನ್ನು ಬಿಡುಗಡೆಗೊಳಿಸಲು ಸಿದ್ದವಾಗಿದೆ. ಮಾಹಿತಿಗಳ ಪ್ರಕಾರ, ಎರ್ಟಿಗಾ ಹೊಸ ಕಾರು ನವೆಂಬರ್ 21ಕ್ಕೆ ಬಿಡುಗಡೆಯಾಗುವುದು ಖಚಿತವಾಗಿದ್ದು, ವಿನೂತನ ವಿನ್ಯಾಸಗಳನ್ನು ಹೊತ್ತು ಬರುತ್ತಿರುವ ಹೊಸ ಕಾರು ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಸುಜಕಿ ಎರ್ಟಿಗಾ ಫೇಸ್‌ಲಿಫ್ಟ್ ಕಾರು ಈಗಾಗಲೇ ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಂಡು ಭರ್ಜರಿಯಾಗಿ ಮಾರಾಟಗೊಳ್ಳುತ್ತಿದ್ದು, ಇದೀಗ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗಿದೆ. ಇದೇ ತಿಂಗಳು ಬಿಡುಗಡೆಯಾಗಲಿರುವ ಹೊಸ ಕಾರು ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಮಾಡಬಹುದಾಗಿದೆ. ಹಾಗಾದ್ರೆ ಹಳೆಯ ಎರ್ಟಿಗಾಗಿಂತ ಹೊಸ ಎರ್ಟಿಗಾ ಹೇಗೆ ವಿಭಿನ್ನವಾಗಿದೆ ಎಂಬುವುದನ್ನು ಇಲ್ಲಿ ತಿಳಿಯಿರಿ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಪ್ರೀಯಿಯಂ ವಿನ್ಯಾಸದ ಎರ್ಟಿಗಾ ಕಾರು ಈ ಬಾರಿ ಹಲವು ಹೊಸ ವಿನ್ಯಾಸವನ್ನು ಪಡೆದುಕೊಂಡಿದ್ದು, ಕಾರಿನ ಮುಂಭಾಗದಲ್ಲಿ ಕ್ರೋಮ್ ಸ್ಟ್ರಿಪ್‍‍ನೊಂದಿಗೆ ಜೋಡಿಸಲಾದ ಹೊಸ ಗ್ರಿಲ್ ಮತ್ತು ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿರಲಿದೆ.l

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಕಾರಿನ ಸೈಡ್‍ ಪ್ರೋಫೈಲ್‌ನಲ್ಲಿ ಫ್ಲೋಟಿಂಗ್ ರೂಫ್ ವಿನ್ಯಾಸ ಮತ್ತು 15 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದೆ. ಇನ್ನು ಕಾರಿನ ಹಿಂಭಾಗದಲ್ಲಿ 'ಎಲ್' ಆಕಾರದ ಟೈಲ್ ಲೈಟ್ ಅನ್ನು ಪಡೆದಿದ್ದು, ಒಟ್ಟಾರೆಯಾಗಿ ಈ ಕಾರು ಎಂಪಿವಿ ಕಾರಿಗಿಂತಲೂ ಇದು ಎಸ್‍‍ಯುವಿ ಮಾದರಿಯ ವಿನ್ಯಾಸವನ್ನು ಪಡೆದಿರಲಿದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ವಿಶಾಲವಾದ ಆಕಾರ

ಹಳೆಯ ಮಾದರಿಯ ಎರ್ಟಿಗಾ ಕಾರಿಗೆ ಹೋಲಿಕೆ ಮಾಡಿದ್ದಲ್ಲಿ ಬಿಡುಗಡೆಗೊಳ್ಳಲಿರುವ ಹೊಸ ಎರ್ಟಿಗಾ ಕಾರು 110-ಎಂಎಂ ಉದ್ದ, 50-ಎಂಎಂ ಅಗಲ ಮತ್ತು 5-ಎಂಎಂ ಎತ್ತರವನ್ನು ಅಧಿಕ ಸುತ್ತಳತೆಯನ್ನು ಪಡೆದುಕೊಂಡಿದ್ದು, ಈ ಬದಲಾವಣೆಯು ಮೂರನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲಕರವಾಗಲಿದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಹೊಸ ಇಂಟೀರಿಯರ್

ಎರ್ಟಿಗಾ ಕಾರಿನಲ್ಲಿ ಈ ಬಾರಿ ಮರುವಿನ್ಯಾಸಗೊಳಿಸಲಾದ ಡ್ಯಾಶ್‍‍ಬೋರ್ಡ್ ಅನ್ನು ಅಳವಡಿಸಲಾಗಿದ್ದು, ಹೊಸ ಸಿಯಾಜ್ ಕಾರಿನಲ್ಲಿ ಒದಗಿಸಲಾಗಿರುವ ಡ್ಯುಯಲ್ ಟೋನ್ ಡ್ಯಾಶ್‍ಬೋರ್ಡ್ ಮತ್ತು ವುಡನ್ ಟ್ರಿಮ್ ಅನ್ನು ನೀಡಲಾಗಿದೆ. ಇನ್ನು ಕಾರಿನ ಟಾಪ್ ಎಂಡ್ ಟ್ರಿಮ್‍‍ನಲ್ಲಿ ಲೆದರ್ ಸೀಟ್‍‍ಗಳನ್ನು ನೀಡುವ ಭರವಸೆ ಇದೆ ಎನ್ನಲಾಗಿದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಕಾರಿನ ಉಪಕರಣಗಳು

ಈ ಹಿಂದೆ ಬಿಡುಗಡೆಗೊಂಡಿದ್ದ ಡಿಜೈರ್ ಕಾರಿನಲ್ಲಿ ಬಳಸಲಾದ 6.8-ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಹೊಸ ಎರ್ಟಿಗಾ ಕೂಡಾ ಪಡೆದಿದ್ದು, ಅಂಡ್ರಾಯ್ಡ್ ಆಟೋ, ಆ್ಯಪಲ್ ಕಾರ್ ಪ್ಲೇ ಮತ್ತು ಬ್ಲೂಟೂಥ್ ಕನೆಕ್ಟಿವಿಟಿಯನ್ನು ಸಪೋರ್ಟ್ ಮಾಡುತ್ತದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಇದಲ್ಲದೇ ಕಪ್ ಹೋಲ್ಡರ್ಸ್ ಅನ್ನೂ ಕೂಡಾ ನೀಡಲಾಗುತ್ತಿದ್ದು, ಇನ್ಫೋಟೈನ್ಮೆಂಟ್ ಸಿಸ್ಟಮ್‍‍‍ಗೆ ಸಹಾಯವಾಗುವ ಹಲವಾರು ಬಟನ್‍‍ಗಳುಳ್ಳ ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಅನ್ನು ಜೋಡಿಸಲಾಗಿದೆ.

MOST READ: ಮಾರುತಿ ಸುಜುಕಿಗೆ ಟಕ್ಕರ್ ನೀಡಲು 7 ಸಾವಿರ ಕೋಟಿ ವೆಚ್ಚದಲ್ಲಿ ತಲೆಎತ್ತಿದ ಕಿಯಾ ಮೋಟಾರ್ಸ್ ಮೊದಲ ಕಾರು ಉತ್ಪಾದನಾ ಘಟಕ

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಸುರಕ್ಷಾ ವೈಶಿಷ್ಟ್ಯತೆಗಳು

ಹೊಸ ಎರ್ಟಿಗಾ ಎಂಪಿವಿ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಈ ಬಾರಿ ಡ್ಯುಯಲ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಐಎಸ್‍ಓಫಿಕ್ಸ್ ಚೈಲ್ಡ್ ಸೀಟ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಸೇಫ್ಟಿ ಸೀಟ್ ಬೆಲ್ಟ್ ರಿಮೈಂಡರ್, ಸ್ಪೀಡ್ ವಾರ್ನಿಂಗ್ ಮತ್ತು ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಅನ್ನು ಒದಗಿಸಲಾಗಿದೆ.

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಎಂಜಿನ್ ಸಾಮರ್ಥ್ಯ

ಮಾಹಿತಿಗಳ ಪ್ರಕಾರ ಹೊಸ ಎರ್ಟಿಗಾ ಕಾರುಗಳಲ್ಲಿ ಈ ಹಿಂದಿನ 1.3-ಲೀಟರ್ ಡೀಸೆಲ್ ಎಂಜಿನ್ ಬದಲಾಗಿ 1.5-ಲೀಟರ್ ಡೀಸೆಲ್ ಎಂಜಿನ್ ಅನ್ನು ನೀಡಲಿದೆ ಎಂಬ ಸುದ್ದಿ ಕೇಳಿಬರುತ್ತಿದ್ದು, ಹಾಗೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಖರೀದಿಗೆ ಲಭ್ಯವಿರಲಿದೆ. ವಿಶೇಷ ಅಂದ್ರೆ, ಎರಡು ಮಾದರಿಯ ಎಂಜಿನ್‍ಗಳನ್ನು ಸಹ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಎಸ್‍‍ಹೆಚ್‍‍ವಿಎಸ್ ಹೈಬ್ರಿಡ್ ಸಿಸ್ಟಮ್ ಅನ್ನು ಒದಗಿಸುವುದು ಖಚಿತವಾಗಿದೆ.

MOST READ: ಚಾಲಕರೇ ಎಚ್ಚರ - ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ನಡೆಯುತ್ತಿದೆ ಮಹಾಮೋಸ..!!

ನ.21ಕ್ಕೆ ಹೊಸ ಎರ್ಟಿಗಾ ಬಿಡುಗಡೆ- ಇದಿನಿಂದ ಅಧಿಕೃತ ಬುಕ್ಕಿಂಗ್ ಆರಂಭ..!

ಗೇರ್ ಬಾಕ್ಸ್

ಸ್ಪೈ ಚಿತ್ರಗಳಲ್ಲಿ ಗಮಸಿದ್ದಲ್ಲಿ ಹೊಸ ಕಾರು 5-ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದ್ದು, ಇದು ಕೇವಲ ಡಿಸೆಲ್ ಮಾದರಿಯ ಕಾರಿನಲ್ಲಿ ಮಾತ್ರ ಈ ಆಯ್ಕೆಯು ಲಭ್ಯವಿರಲಿದೆ ಎನ್ನಲಾಗಿದೆ. ಆದರೆ ಪೆಟ್ರೋಲ್ ಎಂಜಿನ್ ಅನ್ನು 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಪಡೆದುಕೊಳ್ಳಲಿದೆ.

Most Read Articles

Kannada
English summary
New Maruti Ertiga Booking Details Out — Booking Open At Rs 11,000.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X