ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮಾರುತಿ ಸುಜುಕಿ ಸಂಸ್ಥೆಯು ಈ ಹಿಂದೆ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆ ಮಾಡುವ ಸುಳಿವು ನೀಡಿದ್ದಾದರೂ ಭಾರತದಲ್ಲಿ ದುಬಾರಿ ಬೆಲೆಯ ಕಾರುಗಳಿಗೆ ಉತ್ತಮ ಮಾರುಕಟ್ಟೆ ಸಿಗದಿರುವ ಹಿನ್ನೆಲೆ ಸ್ವಿಫ್ಟ್ ಸ್ಪೋರ್ಟ್ ಬಿಡುಗಡೆಯನ್ನು ತಡೆಹಿಡಿತ್ತು. ಆದ್ರೆ ಇದೀಗ ಸ್ವಿಫ್ಟ್ ಸ್ಪೋರ್ಟ್ ಬದಲಾಗಿ ಸ್ವಿಫ್ಟ್ ಆರ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸುವ ಮುಂದಾಗಿದ್ದು, ಹಲವು ವಿಶೇಷತೆಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಬಲೆನೊ ಆರ್‌ಎಸ್ ಕಾರುಗಳ ಮಾದರಿಯಲ್ಲೇ ಸ್ವಿಫ್ಟ್ ಆರ್‌ಎಸ್ ಕೂಡಾ ಸ್ಪೋರ್ಟಿ ವರ್ಷನ್ ವೈಶಿಷ್ಟ್ಯತೆಗಳನ್ನು ಹೊತ್ತುಬರಲಿದ್ದು, ಸಾಮಾನ್ಯ ಮಾದರಿಯ ಸ್ವಿಫ್ಟ್ ಪೆಟ್ರೋಲ್ ಹೈ ಎಂಡ್ ಮತ್ತು ಬಲನೊ ಆರ್‌ಎಸ್ ಗಿಂತಲೂ ಕಡಿಮೆ ದರ್ಜೆಯ ಕಾರು ಆವೃತ್ತಿಯಾಗಿ ಸ್ವಿಫ್ಟ್ ಆರ್‌ಎಸ್ ಕಾರುಗಳು ಮಾರಾಟವಾಗಲಿವೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಎಂಜಿನ್ ಸಾಮರ್ಥ್ಯ

ಸ್ವಿಫ್ಟ್ ಆರ್‌ಎಸ್ ಕಾರುಗಳು 998ಸಿಸಿ ಬೂಸ್ಟರ್‌ಜೆಟ್ ತ್ರಿ ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 101-ಬಿಎಚ್‌ಪಿ ಮತ್ತು 150-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಇದರ ಹೊರತಾಗಿ ಸ್ಪೋರ್ಟಿ ವಿನ್ಯಾಸಗಳನ್ನು ಹೊಂದಿರುವ ಸ್ವಿಫ್ಟ್ ಆರ್‌ಎಸ್ ಕಾರುಗಳು ಸಾಮಾನ್ಯ ಸ್ವಿಫ್ಟ್ ಮಾದರಿಯಲ್ಲೇ ಇನ್ನುಳಿದ ಸೌಲಭ್ಯಗಳನ್ನು ಪಡೆದಿದ್ದು, 16-ಇಂಚಿನ ಅಲಾಯ್ ಚಕ್ರಗಳು ಮತ್ತು ಸ್ಪೋರ್ಟಿ ರೂಫ್ ಮೌಂಟೆಡ್ ಸ್ಪಾಯ್ಲರ್ ಪಡೆದುಕೊಂಡಿರಲಿದೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಜೊತೆಗೆ ಸ್ವಿಫ್ಟ್ ಬ್ಯಾಡ್ಜ್‌ನೊಂದಿಗೆ ಆರ್‌ಎಸ್ ಬ್ಯಾಡ್ಜ್ ಕೂಡಾ ಇರಲಿದ್ದು, ಅತ್ಯಾರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಸ್ವಿಫ್ಟ್ ಟಾಪ್ ವೆರಿಯೆಂಟ್‌ಗಳಾದ ಜೆಡ್‍ಎಕ್ಸ್ಐ+ ಮತ್ತು ಜೆಡ್‍‍ಡಿಐ+ ಕಾರು ಮಾದರಿಗಳಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್‍‍ಗಳನ್ನು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ಆಯ್ಕೆ ಹೊಂದಿರುವ ಆರ್‌ಎಸ್ ಕಾರುಗಳು ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿವೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಕಾರಿನ ಬೆಲೆಗಳು

ಸ್ಪೋರ್ಟಿ ಲುಕ್ ಹೊಂದಿರುವ ಸ್ವಿಫ್ಟ್ ಆರ್‌ಎಸ್ ಕಾರುಗಳು ಸದ್ಯಕ್ಕೆ ಪೆಟ್ರೋಲ್ ವರ್ಷನ್‌ಗಳಲ್ಲಿ ಮಾತ್ರವೇ ಲಭ್ಯವಾಗಲಿದ್ದು, ಕಾರಿನ ಬೆಲೆಯು ಸಾಮಾನ್ಯ ಮಾದರಿಯ ಸ್ವಿಫ್ಟ್ ಪೆಟ್ರೋಲ್ ಮಾದರಿಯ ಬೆಲೆಗಿಂತ ಹೆಚ್ಚಿರಲಿದೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಮೂಲಗಳ ಪ್ರಕಾರ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.80 ಲಕ್ಷ ಇಲ್ಲವೇ ರೂ.8 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದ್ದು, ಇದು ಬಲೆನೊ ಆರ್‌ಎಸ್ ಮಾದರಿಗಿಂತಲೂ ಕಡಿಮೆ ದರ್ಜೆಯ ಕಾರು ಮಾದರಿಯಾಗಿ ಮಾರಾಟವಾಗಲಿದೆ.

ಸ್ಪೋರ್ಟಿ ವರ್ಷನ್ ಸ್ವಿಫ್ಟ್ ಆರ್‌ಎಸ್ ಬಿಡುಗಡೆ ಮಾಡಲಿದೆ ಮಾರುತಿ ಸುಜುಕಿ

ಒಟ್ಟಿನಲ್ಲಿ ಸ್ಪೋರ್ಟಿ ಸ್ವಿಫ್ಟ್ ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಸ್ವಿಫ್ಟ್ ಆರ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿರುವುದು ಸ್ಪೋರ್ಟಿ ಕಾರು ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಇದು ಉತ್ತಮ ಬೇಡಿಕೆ ದಾಖಲಿಸುವ ನೀರಿಕ್ಷೆಯಲ್ಲಿದೆ.

Most Read Articles

Kannada
Read more on maruti suzuki
English summary
Maruti Suzuki Considering The New Swift RS For India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X