2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

2018ರ ಸ್ವಿಫ್ಟ್ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಕೂಡಾ ಸ್ವಿಕರಿಸಲಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಹೊಸ ಕಾರು ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ

By Praveen

ಥರ್ಡ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣಗೊಂಡಿರುವ 2018ರ ಮಾರುತಿ ಸುಜುಕಿ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ ಶುರುವಾಗಿದ್ದು, ಹೊಸ ಕಾರು ಖರೀದಿಗಾಗಿ ಲಕ್ಷಾಂತರ ಗ್ರಾಹಕರು ತುದಿಗಾಲ ಮೇಲೆ ನಿಂತಿದ್ದಾರೆ. ಈ ಮಧ್ಯೆ ಹೊಸ ಕಾರು ಖರೀದಿಗಾಗಿ ಬುಕ್ಕಿಂಗ್ ಕೂಡಾ ಸ್ವಿಕರಿಸಲಾಗುತ್ತಿದ್ದು, ನಿಗದಿತ ಅವಧಿಯಲ್ಲಿ ಹೊಸ ಕಾರು ಖರೀದಿಗಾಗಿ ಗ್ರಾಹಕರು ಮುಗಿಬಿದ್ದಿದ್ದಾರೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಮುಂದಿನ ತಿಂಗಳು ಫೆಬ್ರುವರಿಯಲ್ಲಿ 2018ರ ಇಂಡಿಯನ್ ಆಟೋ ಎಕ್ಸ್‌ಪೋ ನಡೆಯಲಿದ್ದು, ಆಟೋ ಮೇಳದಲ್ಲಿ ಭಾಗಿಯಾಗಲಿರುವ ಮಾರುತಿ ಸುಜುಕಿ ಹೊಸ ಸ್ವಿಫ್ಟ್ ಕಾರು ಮಾರ್ಚ್ ಮೊದಲ ವಾರ ಗ್ರಾಹಕರ ಕೈ ಸೇರುವ ಸಾಧ್ಯತೆಗಳಿವೆ. ಹೀಗಾಗಿ ಹೊಸ ಕಾರುಗಳ ಖರೀದಿ ತವಕದಲ್ಲಿರುವ ಗ್ರಾಹಕರಿಂದ 11 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಪಡೆಯಲಾಗುತ್ತಿದ್ದು, ಬಿಡುಗಡೆಗೂ ಮುನ್ನವೇ ಸಾಕಷ್ಟು ಟ್ರೆಂಡ್ ಸೃಷ್ಠಿಸಿದೆ.

Recommended Video

Bangalore Bike Accident At Chikkaballapur Near Nandi Upachar - DriveSpark
2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಇದರ ಜೊತೆಗೆ ಹ್ಯಾಚ್‌ಬ್ಯಾಕ್ ಕಾರು ಪ್ರಿಯರ ಹಾಟ್ ಫೇವರಿಟ್ ಎಂದೇ ಬಿಂಬಿತವಾಗಿರುವ ಥರ್ಡ್ ಜನರೇಷನ್ ಸ್ವಿಫ್ಟ್ ಕಾರಿನ ಬೆಲೆಗಳನ್ನು ಕೂಡಾ ರಿವಿಲ್ ಮಾಡಲಾಗಿದ್ದು, ಹೊಸ ಕಾರಿನ ಆರಂಭಿಕ ಬೆಲೆ 4.99 ಲಕ್ಷ ಮತ್ತು ಟಾಪ್ ವೆರಿಯಂಟ್ ಬೆಲೆಯು 7.99 ಲಕ್ಷ ಇರಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಈ ಬಗ್ಗೆ ಖಾಸಗಿ ಸುದ್ದಿವಾಹಿನಿಯ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಮಾರುತಿ ಸುಜುಕಿ ಹಿರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಆರ್.ಎಸ್. ಕೈಲಾಸಿ ಅವರೇ ಹೊಸ ಕಾರಿನ ಬೆಲೆಯನ್ನು ಬಹಿರಂಗಗೊಳಿಸಿದ್ದು, ಬಲೆನೊ ಆರ್‌ಎಸ್ ಮತ್ತು ಡಿಜೈರ್ ಕಾರಿಗಿಂತಲೂ ಕಡಿಮೆ ಬೆಲೆ ಹೊಂದಿರುವ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಈ ಮೂಲಕ ಮಧ್ಯಮ ವರ್ಗದ ಗ್ರಾಹಕರನ್ನು ತನ್ನತ್ತ ಸೆಳೆಯುವ ತಂತ್ರರೂಪಿಸಿರುವ ಮಾರುತಿ ಸುಜುಕಿ, ಹ್ಯುಂಡೈ ಗ್ರ್ಯಾಂಡ್ ಐ10, ಫೋರ್ಕ್ಸ್‌ವ್ಯಾಗನ್ ಪೊಲೊ ಮತ್ತು ಫೋರ್ಡ್ ಫಿಗೊ ಕಾರುಗಳಿಗೆ ತ್ರೀವ ಹೊಡೆತ ನೀಡುವ ಬಗ್ಗೆ ಸುಳಿವು ನೀಡಿದೆ.

Trending On DriveSpark Kannada:

ಮುಕೇಶ್ ಅಂಬಾನಿ ಡ್ರೈವರ್ ಸಂಬಳ ಕೇಳಿದ್ರೆ ಬೆಚ್ಚಿ ಬೀಳ್ತೀರಾ !!

ಕಂಬಿ ಹಿಂದೆ ಸರಿದ ರೇಪಿಸ್ಟ್ ಬಾಬಾ ರಾಮ್ ರಹೀಮ್ ಬಳಿ ಇವೆ ವಿಲಕ್ಷಣ ಐಷಾರಾಮಿ ಕಾರ್ ಕಲೆಕ್ಷನ್..!!

ವಿಮಾನ ಕಂಡುಹಿಡಿದವರು 'ರೈಟ್ ಬ್ರದರ್ಸ್' ಎನ್ನುವವರು ಈ ಲೇಖನ ಓದಲೇಬೇಕು

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಇನ್ನು ಬಿಡುಗಡೆಗೊಳ್ಳಲಿರುವ 2018ರ ಸ್ವಿಫ್ಟ್ ಆವೃತ್ತಿಯು ನೆಕ್ಸ್ಟ್ ಜನರೇಷನ್ ವೈಶಿಷ್ಟ್ಯತೆಗಳೊಂದಿಗೆ ನಿರ್ಮಾಣವಾಗಿದ್ದು, ಪ್ರಸಕ್ತ ಮಾರುಕಟ್ಟೆಯಲ್ಲಿರುವ ಸ್ವಿಫ್ಟ್ ಆವೃತ್ತಿಗಿಂತಲೂ ಸಾಕಷ್ಟು ಬದಲಾವಣೆಗಳನ್ನು ಪಡೆದುಕೊಂಡಿರುವುದು ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಬಹಿರಂಗಗೊಂಡಿದೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಹೀಗಾಗಿ ಹಿಂದಿನ ಮಾದರಿಗಿಂತ ಹೊಸ ಆವೃತ್ತಿಯಲ್ಲಿ 50 ಕೆ.ಜಿ ತೂಕವನ್ನು ಕಡಿತಗೊಳಿಸಲಾಗಿದ್ದು, ಡಿಜೈರ್ ಕಂಪ್ಯಾಕ್ಟ್ ಹ್ಯಾಚ್‌ಬ್ಯಾಕ್ ಮಾದರಿಯಲ್ಲೇ ಹೊರ ವಿನ್ಯಾಸಗಳನ್ನು ಜೋಡಿಸುವ ಮೂಲಕ ಮಾರುತಿ ಸುಜುಕಿ ಪ್ರಿಯರಿಗೆ ಡಬಲ್ ಧಮಾಕಾ ನೀಡಲಾಗುತ್ತಿದೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಎಂಜಿನ್ ಸಾಮರ್ಥ್ಯ

1.2-ಲೀಟರ್ ಪೆಟ್ರೋಲ್ ಹಾಗೂ 1.3-ಲೀಟರ್ ಡೀಸೆಲ್ ಎಂಜಿನ್ ಪಡೆದುಕೊಳ್ಳಲಿರುವ ಮಾರುತಿ ಸುಜುಕಿ ಸ್ವಿಫ್ಟ್ ಹೊಸ ಆವೃತ್ತಿಯು, ಡೀಸೆಲ್ ಮಾದರಿಯಲ್ಲಿ 82-ಬಿಎಚ್‌ಪಿ ಹಾಗೂ 75-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿ ಒದಗಿಸಲಾಗಿದೆ.

2018ರ ಸ್ವಿಫ್ಟ್ ಬಿಡುಗಡೆಗೆ ದಿನಗಣನೆ- ಹೊಸ ಕಾರು ಖರೀದಿಗೆ ಬುಕ್ಕಿಂಗ್ ಶುರು

ಜೊತೆಗೆ ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಅತ್ಯುತ್ತಮ ಮಾದರಿಯನ್ನು ಗ್ರಾಹಕರಿಗೆ ಒದಗಿಸುತ್ತಿರುವ ಮಾರುತಿ ಸುಜುಕಿ ಸಂಸ್ಥೆಯು, ಸುಧಾರಿತ ತಂತ್ರಜ್ಞಾನ ವ್ಯವಸ್ಥೆಗಳಾದ ಟ್ವಿನ್ ಪಾಡ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ವಿಸ್ತರಿತ ಬೂಟ್ ಸ್ಪೆಸ್, ಆ್ಯಪಲ್ ಕಾರ್ ಪ್ಲೇ ಮತ್ತು ಡ್ಯುಯಲ್ ಏರ್‌ಬ್ಯಾಗ್‌ಗಳನ್ನು ಕೂಡಾ ನೀಡಲಾಗುತ್ತಿದೆ.

Trending On DriveSpark Kannada:

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

ಸೀಟ್ ಬೆಲ್ಟ್ ಹಾಕಿಲ್ಲವೆಂದು ಬೈಕ್ ಸವಾರನಿಗೆ ದಂಡ ಹಾಕಿದ ಪೊಲೀಸರು..!!

Trending DriveSpark YouTube Videos

Subscribe To DriveSpark Kannada YouTube Channel - Click Here

Article Published On: Friday, January 5, 2018, 18:41 [IST]
English summary
2018 Maruti Swift Unofficial Bookings Begin At Select Dealerships.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+