ಮತ್ತಷ್ಟು ಹೊಸ ಸುರಕ್ಷಾ ಸೌಲಭ್ಯಗಳನ್ನು ಪಡೆದುಕೊಳ್ಳಲಿದೆ 2018ರ ವಿಟಾರಾ ಬ್ರೆಝಾ
ವಿಟಾರಾ ಬ್ರೇಝಾ ಕಾರುಗಳು ಸದ್ಯದಲ್ಲೇ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಮತ್ತಷ್ಟು ಸುಧಾರಣೆ ತಂದಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ತವಕದಲ್ಲಿದೆ.
ಮಾರುತಿ ಸುಜುಕಿ ನಿರ್ಮಾಣದ ಕಾರುಗಳಲ್ಲಿ ಅತಿ ಹೆಚ್ಚು ಮಾರಾಟ ಪ್ರಮಾಣವನ್ನು ಹೊಂದಿರುವ ವಿಟಾರಾ ಬ್ರೇಝಾ ಕಾರುಗಳು ಸದ್ಯದಲ್ಲೇ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯಲಿದ್ದು, ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಮತ್ತಷ್ಟು ಸುಧಾರಣೆ ತಂದಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ತವಕದಲ್ಲಿದೆ.

ಬೆಸ್ಟ್ ಸೆಲ್ಲಿಂಗ್ ಎಸ್‌ಯುವಿ ವಿಭಾಗದಲ್ಲಿ ಸದ್ಯ ಟಾಪ್‌ನಲ್ಲಿರುವ ವಿಟಾರಾ ಬ್ರೆಝಾ ಕಾರುಗಳು ವರ್ಷದಿಂದ ವರ್ಷಕ್ಕೆ ಅತ್ಯಧಿಕ ಪ್ರಮಾಣದಲ್ಲಿ ಮಾರಾಟಗೊಳ್ಳುತ್ತಿದ್ದು, ಇದೀಗ 2018ರ ಆವೃತ್ತಿಯು ಮತ್ತಷ್ಟು ಎಸ್‌ಯುವಿ ಪ್ರಿಯರನ್ನು ಸೆಳೆಯಲಿವೆ ಭರವಸೆಯಲ್ಲಿವೆ. ಕಾರಣ, ಹಳೆಯ ಆವೃತ್ತಿಗಿಂತ ಹೆಚ್ಚಿನ ಮಟ್ಟದ ಸುರಕ್ಷಾ ಸೌಲಭ್ಯವನ್ನು ಹೊಂದಿರುವ ಹೊಸ ಮಾದರಿಯು ಡ್ಯುಯಲ್ ಏರ್‌ಬ್ಯಾಗ್ ಸೇರಿದಂತೆ ಪ್ರಮುಖ ಬದಲಾವಣೆಗಳನ್ನು ಪಡೆದುಕೊಂಡಿದೆ.

ಹೊಸ ಕಾರಿನ ಸ್ಪಾಟ್ ಟೆಸ್ಟಿಂಗ್ ವೇಳೆ ತಾಂತ್ರಿಕ ಅಂಶಗಳು ಬಹಿರಂಗವಾಗಿದ್ದು, ವಿಟಾರಾ ಬ್ರೆಝಾ 2018ರ ಎಲ್ಲಾ ಮಾದರಿಯಲ್ಲೂ ಎಬಿಎಸ್ ಒದಗಿಸುತ್ತಿದೆ. ಹೀಗಾಗಿ ಬ್ರೇಝಾದಲ್ಲಿನ ಎಲ್‌ಡಿಐ(ಒ) ಮತ್ತು ವಿಡಿಐ(ಒ) ವೆರಿಯೆಂಟ್‌ಗಳನ್ನು ತೆಗೆದುಹಾಕಲಾಗಿದೆ.

ಇದರೊಂದಿಗೆ ಜೆಡ್‌ಡಿಐ ಮತ್ತು ಜೆಡ್‌ಡಿಐ(ಒ) ವೆರಿಯೆಂಟ್‌ಗಳನ್ನು ಸ್ಪೋರ್ಟಿ ಲುಕ್‌ನೊಂದಿಗೆ ಅಭಿವೃದ್ಧಿಗೊಳಿಸಲಾಗಿದ್ದು, ಕಪ್ಪು ಬಣ್ಣಗಳೊಂದಿಗೆ ಮಿಶ್ರಣಗೊಂಡ ನ್ಯೂ ಮಲ್ಟಿ ಸ್ಪೋಕ್ ಅಲಾಯ್ ವೀಲ್ಹ್ ಹೊಂದಿರುವುದು ಎಸ್‌ಯುವಿ ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ಎಂಜಿನ್ ಸಾಮರ್ಥ್ಯ
ಹಲವು ಬದಲಾವಣೆಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುತ್ತಿರುವ ವಿಟಾರಾ ಬ್ರೇಝಾ 2018ರ ಆವೃತ್ತಿಯಲ್ಲಿ ಹೊರ ಮತ್ತು ಒಳ ವಿನ್ಯಾಸಗಳನ್ನು ಹೊರತು ಪಡಿಸಿ ತಾಂತ್ರಿಕ ಅಂಶಗಳನ್ನು ಈ ಹಿಂದಿನಂತೆಯೇ ಮುಂದುವರಿಸಲಾಗಿದ್ದು, 1.3-ಲೀಟರ್ ಡಿಡಿಐಎಸ್ ಫೌರ್ ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರಲಿದೆ.

ಈ ಮೂಲಕ 89ಬಿಎಚ್‌ಪಿ ಮತ್ತು 200ಎನ್ಎಂ ಉತ್ಪಾದಿಸುವ ವಿಟಾರಾ ಬ್ರೆಝಾ ಕಾರುಗಳು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹೊಂದಿದ್ದು, ಎಸ್‌ಯುವಿ ಆವೃತ್ತಿಗಳಲ್ಲೇ ವಿಶಿಷ್ಟ ಕಾರು ಮಾದರಿ ಎನ್ನಿಸಲಿದೆ.

ಇನ್ನು ಡೀಸೆಲ್ ಆವೃತ್ತಿಯಲ್ಲಿ ಮಾತ್ರ ಖರೀದಿಗೆ ಲಭ್ಯವಿರುವ ವಿಟಾರಾ ಬ್ರೆಝಾ ಕಾರುಗಳು ಮುಂಬರುವ ದಿನಗಳಲ್ಲಿ ಪೆಟ್ರೋಲ್ ಎಂಜಿನ್ ಸೇರಿದಂತೆ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಸೌಲಭ್ಯ ಪಡೆಯಲಿದ್ದು, ಟಾಟಾ ನೆಕ್ಸಾನ್ ಮತ್ತು ಫೋರ್ಡ್ ಇಕೋ ಸ್ಪೋರ್ಟ್ ಕಾರುಗಳ ಮಾರಾಟಕ್ಕೆ ಮತ್ತಷ್ಟು ಪ್ರತಿಸ್ಪರ್ಧೆ ನೀಡಲಿದೆ.

ಹೊಸ ಕಾರಿನ ಬೆಲೆಗಳು
ಮಾರುತಿ ಸುಜುಕಿ ಸಂಸ್ಥೆಯು ವಿಟಾರಾ ಬ್ರೆಝಾ 2018ರ ಆವೃತ್ತಿಯಲ್ಲಿ ಹೊಸ ಸುರಕ್ಷಾ ಸೌಲಭ್ಯಗಳನ್ನು ಒದಗಿಸಿರುವ ಹಿನ್ನೆಲೆ ಹೊಸ ಕಾರಿನ ಬೆಲೆಗಳನ್ನು ಸದ್ಯ ಮಾರುಕಟ್ಟೆಯಲ್ಲಿರುವ ಕಾರಿನ ಬೆಲೆಗಿಂತ 8 ರಿಂದ 13 ಸಾವಿರ ಹೆಚ್ಚುವರಿ ದರ ನಿಗದಿಪಡಿಸುವ ಸಾಧ್ಯತೆಗಳಿವೆ.

ಡ್ರೈವ್ ಸ್ಪಾರ್ಕ್ ಅಭಿಪ್ರಾಯ
ದೇಶದಲ್ಲಿ ಮಾರಾಟಗೊಳ್ಳುತ್ತಿರುವ ಟಾಪ್ 5 ಕಾರುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವಿಟಾರಾ ಬ್ರೆಝಾ ಕಾರುಗಳು ಪ್ರತಿ ತಿಂಗಳು ಸರಾಸರಿ 15 ಸಾವಿರ ಯುನಿಟ್ ಮಾರಾಟವನ್ನು ಹೊಂದಿದ್ದು, ಇದೀಗ ಹೊಸ ಸುರಕ್ಷಾ ಸೌಲಭ್ಯಗಳನ್ನು ಹೊಂದಿರುವ 2018ರ ಆವೃತ್ತಿಯು ಮತ್ತಷ್ಟು ಬೇಡಿಕೆ ಹೊಂದುವುದರಲ್ಲಿ ಯಾವುದೇ ಅನುಮಾನವಿಲ್ಲ.


Click it and Unblock the Notifications