ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

By Praveen Sannamani

ಸುಜುಕಿ ಮೋಟಾರ್‌ಸೈಕಲ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಬ್ಯಾಂಡಿಟ್ 150 ಕಮ್ಯೂಟರ್ ಬೈಕ್ ಮಾದರಿಯನ್ನ ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಳಿಸಿದ್ದು, ಹೊಸ ಬೈಕ್ ಮಾದರಿಯು ಇಂಡೋನೇಷ್ಯಾದಲ್ಲಿ ಅಷ್ಟೇ ಅಲ್ಲದೇ ಭಾರತ ಸೇರಿದಂತೆ ವಿಶ್ವದ ಪ್ರಮುಖ ರಾಷ್ಟ್ರಗಳಲ್ಲಿ ಬಿಡುಗಡೆಯ ಸುಳಿವು ನೀಡಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಸುಜುಕಿ ನಿರ್ಮಾಣದ ಜನಪ್ರಿಯ ಜಿಎಸ್ಎಕ್ಸ್- ಎಸ್150 ನಕೆಡ್ ಸ್ಟ್ರೀಟ್ ಫೈಟರ್ ಬೈಕಿನ ವಿನ್ಯಾಸಗಳನ್ನೇ ಹೊತ್ತು ಬಂದಿರುವ ಬ್ಯಾಂಡಿಟ್ 150 ಬೈಕ್‌ಗಳು ಕಮ್ಯೂಟರ್ ವಿಭಾಗದಲ್ಲಿ ಭಾರೀ ನೀರಿಕ್ಷೆ ಹುಟ್ಟುಹಾಕಿದ್ದು, ಇಂಡೋನೇಷ್ಯಾದಲ್ಲಿ ಇದೇ ತಿಂಗಳು ಈ ಹೊಸ ಬೈಕ್ ಬಿಡುಗಡೆಯಾಗುತ್ತಿದೆ. ಹೀಗಾಗಿ ಹೊಸ ಬೈಕ್ ಮಾದರಿಯು ವರ್ಷದ ಕೊನೆಯಲ್ಲಿ ಭಾರತದಲ್ಲೂ ಅನಾವರಣಗೊಳ್ಳುವ ಸಾಧ್ಯತೆಗಳಿದ್ದು, ಈ ಭಾರತಕ್ಕೆ ಬಂದಿದ್ದೇ ಆದಲ್ಲಿ ಪಲ್ಸರ್ 160 ಸೇರಿದಂತೆ ಹಲವು ಬೈಕ್ ಮಾದರಿಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಸ್ಪೋರ್ಟಿ ಲುಕ್‌ನೊಂದಿಗೆ ಅಭಿವೃದ್ಧಿ ಹೊಂದಿರುವ ಸುಜುಕಿ ಬ್ಯಾಂಡಿಟ್ 150 ಬೈಕ್‌ಗಳು ಟೈಪೆಜೊಡಿಲ್ ಎಲ್ಇಡಿ ಹೆಡ್‌ಲ್ಯಾಂಪ್, ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್, ಮಸ್ಕಲ್ಯೂರ್ ಫ್ಯೂಲ್ ಟ್ಯಾಂಕ್ ವಿನ್ಯಾಸವು ಬೈಕಿನ ಖದರ್ ಹೆಚ್ಚಿಸಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಜೊತೆಗೆ ಸಿಂಗಲ್ ಪೀಸ್ ಸೀಟ್, ಸೇಂಟರ್ ಸೆಟ್ ಫುಟ್ ಪೆಗ್ಸ್, ಫ್ಲ್ಯಾಟ್ ಹ್ಯಾಂಡಲ್‌ಬಾರ್, ಕಮ್ಯೂಟರಿಷ್ ಬೈಕ್ ಡಿಸೈನ್‌ಗಳು ಬೈಕಿನ ಪ್ರಮುಖ ತಾಂತ್ರಿಕ ಅಂಶಗಳಾಗಿದ್ದು, ಬೈಕಿನ ಸ್ಪೋರ್ಟಿ ಲುಕ್ ಹೆಚ್ಚಿಸಲು ಎಂಜಿನ್ ಕೌಲ್ ಬಳಕೆ ಮಾಡಿರುವುದನ್ನ ಇಲ್ಲಿ ನೋಡಬಹುದಾಗಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಎಂಜಿನ್ ವೈಶಿಷ್ಟ್ಯತೆ

147.3 ಸಿಸಿ ಲಿಕ್ವಿಡ್ ಕೂಲ್ಡ್, ಡಿಒಹೆಚ್‌ಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿರುವ ಸುಜುಕಿ ಬ್ಯಾಂಡಿಟ್ 150 ಬೈಕ್‌ಗಳು 6-ಸ್ಪೀಡ್ ಗೇರ್‌ಬ್ಯಾಕ್‌ನೊಂದಿಗೆ 19.2-ಎನ್ಎಂ ಟಾರ್ಕ್ ಮತ್ತು 14-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಇದರಲ್ಲಿ ಭಾರತೀಯ ಸುಜುಕಿ ಬ್ಯಾಂಡಿಟ್ 150 ಬೈಕ್‌ಗಳು 14.5-ಬಿಎಚ್‌ಪಿ ಮತ್ತು 14-ಎನ್ಎಂ ಟಾರ್ಕ್ ಉತ್ಪಾದಿಸಲಿದ್ದು, ಮುಂಭಾಗದ ಚಕ್ರಗಳಲ್ಲಿ ಟೆಲಿಸ್ಕೊಫಿಕ್ ಮತ್ತು ಹಿಂಭಾಗದ ಚಕ್ರಗಳಲ್ಲಿ ಮೊನೊಶಾರ್ಕ್ ಸಸ್ಪೆಷನ್ ಪಡೆದುಕೊಂಡಿದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಹಾಗೆಯೇ ಬೈಕಿನ ಸುರಕ್ಷಾ ವಿಭಾಗದಲ್ಲೂ ಗುರುತರ ಬದಲಾವಣೆ ತರಲಾಗಿದ್ದು, ಎರಡು ಬದಿ ಚಕ್ರಗಳಲ್ಲೂ ಡಿಸ್ಕ್ ಬ್ರೇಕ್, ಎಬಿಎಸ್, ಡ್ಯುಯಲ್ ಫೋರ್ಟ್ ಎಕ್ಸಾಸ್ಟ್ ಹೊಂದಿರುವ ಜಿಕ್ಸರ್ ನಂತಯೇ ಕಾಣಿಸುತ್ತದೆ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಭಾರತಕ್ಕೂ ಬರುತ್ತಾ ಹೊಸ ಬೈಕ್?

ಜಿಕ್ಸರ್ ಸರಣಿಯೆಂತೆ ಸಿದ್ದಗೊಂಡಿರುವ ಬ್ಯಾಂಡಿಟ್ 150 ಬೈಕ್ ಭಾರತದಲ್ಲಿ ಬಿಡುಗಡೆಗೊಳ್ಳುವುದು ಅನುಮಾನ ಎನ್ನಲಾಗುತ್ತಿದ್ದು, ಒಂದು ವೇಳೆ ಕಮ್ಯೂಟರ್ ಬೈಕ್ ವಿಭಾಗದಲ್ಲಿ ಬದಲಾವಣೆ ತಂದಿದ್ದೇ ಆದರಲ್ಲಿ ಬ್ಯಾಂಡಿಟ್ 150 ಬೈಕ್‌ಗಳು ದೇಶಿ ಮಾರುಕಟ್ಟೆಗೆ ಲಗ್ಗೆಯಿಡುವುದನ್ನ ಅಲ್ಲಗಳೆಯುವಂತಿಲ್ಲ.

ಇಂಡೋನೇಷ್ಯಾ ಆಟೋ ಎಕ್ಸ್‌ಪೋದಲ್ಲಿ ಅನಾವರಣಗೊಂಡ ಸುಜುಕಿ ಬ್ಯಾಂಡಿಟ್ 150

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸುಜುಕಿ ಸಂಸ್ಥೆಯು ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಪ್ರಿಮಿಯಂ ಮಾದರಿಗಳನ್ನು ಸೇರ್ಪಡೆ ಮಾಡುತ್ತಿದ್ದು, ಇದೀಗ ಬ್ಯಾಂಡಿಟ್ ಮಾದರಿಗಳು ಗ್ರಾಹಕರ ಆಕರ್ಷಣೆ ಕಾರಣವಾಗಿವೆ. ಹೀಗಾಗಿ ಸುಜುಕಿ ಸಂಸ್ಥೆಯು ಬ್ಯಾಂಡಿಟ್ ಬೈಕ್‌ಗಳನ್ನು ಭಾರತದಲ್ಲಿ ಬಿಡುಗೊಳಿಸಿದ್ದಲ್ಲಿ ಹೊಸ ಸಂಚಲಕಕ್ಕೆ ಕಾರಣವಾಗಬಹುದು.

Image Courtesy: OTO

Article Published On: Saturday, August 4, 2018, 16:02 [IST]
English summary
2018 Suzuki Bandit 150 Revealed At Indonesia International Auto Show.
Read more on suzuki motorcycle
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+