ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ನಿಸ್ಸಾನ್ ಇಂಡಿಯಾ ಸಂಸ್ಥೆಯು ಮುಂಬರುವ 2019ರ ಜನವರಿ ಆರಂಭದಲ್ಲಿ ಕಿಕ್ಸ್ ಎನ್ನುವ ವಿನೂತನ ಮಾದರಿಯ ಹೊಚ್ಚ ಹೊಸ ಎಸ್‌ಯುವಿ ಮಾದರಿಯೊಂದನ್ನು ಬಿಡುಗಡೆಗೊಳಿಸುತ್ತಿದ್ದು, ಇಂದಿನಿಂದಲೇ ಅಧಿಕೃತವಾಗಿ ರೂ. 25 ಸಾವಿರ ಮುಂಗಡದೊಂದಿಗೆ ಬುಕ್ಕಿಂಗ್ ಆರಂಭಗೊಳಿಸಲಾಗಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಹೀಗಾಗಿ ಬಿಡುಗಡೆಗೊಳ್ಳಲಿರುವ ನಿಸ್ಸಾನ್ ಕಿಕ್ಸ್ ಹೊಸ ಕಾರು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಂಡಿದ್ದು, ಕಾರಿನ ವಿನ್ಯಾಸಗಳು, ತಾಂತ್ರಿಕ ಅಂಶ, ಎಂಜಿನ್ ಪರ್ಫಾಮೆನ್ಸ್ ಮತ್ತು ಬೆಲೆಗಳು ಗ್ರಾಹಕರ ಆಕರ್ಷಣೆಗೆ ಕಾರಣವಾಗಿವೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ರೆನಾಲ್ಟ್ ಕ್ಯಾಪ್ಚರ್‌ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಹಾಗೆಯೇ ಡಸ್ಟರ್ ಮತ್ತು ಟೆರಾನೋ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಹೊಸ ಕಾರು ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದ್ದು, ಎಸ್‌ಯುವಿ ಪ್ರಿಯರಿಗೆ ಇಷ್ಟವಾಗುವ ಬಹುತೇಕ ಅಂಶಗಳು ಇದರಲ್ಲಿವೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ವ್ಯವಸ್ಥೆ ಹೊಂದಿದ್ದು, ಲೆದರ್ ಕೊಟಿಂಗ್ ಸೀಟುಗಳು ಮತ್ತು ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಇನ್ನು ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಮಾದರಿಗಳಲ್ಲೇ ವಿಶೇಷ ಕಾರು ಎನ್ನಬಹುದು.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಹಾಗೆಯೇ ಪ್ರೀಮಿಯಂ ಕಾರುಗಳಲ್ಲಿ ಕಂಡುಬರುವ ವಿ ಮೊಷನ್ ಗ್ರೀಲ್, ಫಾಲೋ ಮಿ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಫಾಗ್ ಲ್ಯಾಂಪ್, ಸ್ಪೋರ್ಟಿ ಲುಕ್ ನೀಡುವ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಪ್ಲಾಸ್ಟಿಕ್ ಬಾಡಿ ಕ್ಲ್ಯಾಡಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಸಬ್ ಕಂಪ್ಯಾಕ್ಟ್ ಎಸ್‌ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಇನ್ನುಳಿದಂತೆ ಆರಾಮದಾಯಕ ಪ್ರಯಾಣಕ್ಕೆ ಸಹಕಾರಿಯಾಗುವ ಅಂಡ್ರಾಯಿಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಯುಎಸ್‌ಬಿ ಪೋರ್ಟ್, ಚಾಲಕ ಮತ್ತು ಮುಂಭಾಗದ ಪ್ರಯಾಣಿಕರಿಗೆ ಆರ್ಮ್ ರೆಸ್ಟ್, ಹಿಂಬದಿಯಲ್ಲಿ ಎಸಿ ವೆಂಟ್ಸ್, ಸ್ಪೀಡ್ ಸೆನ್ಸಾರ್ ಡೋರ್ ಲಾಕ್/ಅನ್‌ಲಾಕ್ ಸೌಲಭ್ಯ, ರಿಯರ್ ಪಾರ್ಕಿಂಗ್ ವ್ಯವಸ್ಥೆಯಿರಲಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಎಂಜಿನ್ ಸಾಮರ್ಥ್ಯ

ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಪೆಟ್ರೋಲ್ ಹಾಗೂ 1.5-ಲೀಟರ್ ಡಿಸೇಲ್ ಎಂಜಿನ್ ಆಯ್ಕೆ ಹೊಂದಿದ್ದು, ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 106-ಬಿಎಚ್‌ಪಿ ಉತ್ಪಾದಿಸಿದ್ದಲ್ಲಿ ಡೀಸೆಲ್ ಕಾರು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 110-ಬಿಎಚ್‌ಪಿ ಉತ್ಪಾದಿಸುತ್ತೆ.

MOST READ: 23 ವರ್ಷಗಳ ಹಿಂದಿನ ದೇವೇಗೌಡರ ಕನಸಿನ ಯೋಜನೆಗೆ ಕೊನೆಗೂ ಮುಕ್ತಿ ಕೊಟ್ಟಿದ್ದು ಪ್ರಧಾನಿ ಮೋದಿ..!

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಇನ್ನು ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ಮೂರು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದೆ.

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)

ನಿಸ್ಸಾನ್ ಕಿಕ್ಸ್ ಕಾರುಗಳು 2019ರ ಜನವರಿಯಲ್ಲಿ ಖರೀದಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದ್ದು, ಕಾರಿನ ಬೆಲೆಗಳು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ನೀವು ಇದುವರೆಗೂ ನೋಡಿರದ ಅದ್ಭುತ ಮಾಡಿಫೈ ಆರ್‌ಇ ಬೈಕ್..!

ನಿಸ್ಸಾನ್ ಕಿಕ್ಸ್ ಖರೀದಿಗಾಗಿ ಇಂದಿನಿಂದ ಅಧಿಕೃತವಾಗಿ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ..!

ಹೀಗಾಗಿ ಹೊಸ ಕಿಕ್ಸ್ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಮತ್ತು ಬಿಡುಗಡೆಯಾಗಲಿರುವ ಟಾಟಾ ಹ್ಯಾರಿಯರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.

Article Published On: Friday, December 14, 2018, 19:46 [IST]
English summary
Nissan India dealerships have started accepting bookings for the Kicks SUV for an amount of Rs 25,000. The booking amount is entirely refundable and the SUV is scheduled for launch in January 2019.Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+