ನೀವು ಇದುವರೆಗೂ ನೋಡಿರದ ಅದ್ಭುತ ಮಾಡಿಫೈ ಆರ್‌ಇ ಬೈಕ್..!
ಈಗಿನ ಯುವಕರಿಗೆ ಮಾಡಿಫೈ ಇಲ್ಲದ ಬೈಕ್‌ಗಳನ್ನು ಚಾಲನೆ ಮಾಡುವುದು ಒಂದು ಥರಾ ಅಲರ್ಜಿ ಇದ್ದಂತೆ. ಇದೇ ಕಾರಣಕ್ಕೆ ಇರೋ ಬರೋ ಬೈಕ್ ಮಾದರಿಗಳಲ್ಲೇ ಒಂದೊಳ್ಳೆ ಡಿಸೈನ್ ಮಾಡಿಸಿಕೊಂಡು ಪೋಸ್ ಕೊಡೊದು ಅಂದ್ರೆ ಅವರಿಗೆ ಎಲ್ಲಿಲ್ಲದ ಹೆಮ್ಮೆ ಅಂದ್ರೆ ತಪ್ಪಾಗುವುದಿಲ್ಲ.

ಆಟೋ ಮಾಡಿಫೈ ಎನ್ನುವುದು ಇವತ್ತಿನ ಯುವಜನತೆಯ ಒಂದು ಲೈಫ್ ಸ್ಟೈಲ್ ಆಗಿ ಮಾರ್ಪಡುತ್ತಿದೆ. ಇದೇ ಕಾರಣಕ್ಕೆ ಹಲವಾರು ಆಟೋ ಮಾಡಿಫೈ ಸಂಸ್ಥೆಗಳು ಅಗ್ಗದ ಬೆಲೆಯಲ್ಲಿ ಲಭ್ಯವಿರುವ ಬೈಕ್ ಮತ್ತು ಕಾರುಗಳನ್ನೇ ಬಳಕೆ ಮಾಡಿಕೊಂಡು ದುಬಾರಿ ಬೆಲೆಯ ವಾಹನ ಮಾದರಿಗಳನ್ನೇ ಹೋಲುವಂತೆ ಮಾಡಿಫೈ ವಿನ್ಯಾಸ ಮಾಡುತ್ತಿರುವುದು ಭಾರೀ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.

ಅದರಲ್ಲೂ ಮಾಡಿಫೈ ಮಾರುಕಟ್ಟೆಯ ಪ್ರಮುಖ ಭಾಗವಾಗಿರುವ ರಾಯಲ್ ಎನ್‌ಫೀಲ್ಡ್ ಬೈಕ್‌ಗಳು ಭಾರತೀಯ ಮೋಟಾರ್ ಸೈಕಲ್ ಇತಿಹಾಸದ ಒಂದು ಪ್ರಮುಖ ಭಾಗವೇ ಆಗಿದೆ. ಯಾಕೆಂದ್ರೆ ಕಳೆದ 4 ದಶಕಗಳ ಅವಧಿಯಲ್ಲಿ ಲಕ್ಷಾಂತರ ಗ್ರಾಹಕರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ಇವತ್ತಿನ ತನಕವೂ ತನ್ನ ಜನಪ್ರಿಯತೆಯಲ್ಲಿ ಹಿಂದೆ ಬಿದ್ದಿಲ್ಲ.

ದೇಶಿಯವಾಗಿ ಕ್ಲಾಸಿಕ್ ಬೈಕ್‌ಗಳ ಉತ್ಪಾದನೆಯಲ್ಲಿ ತನ್ನದೆ ಆದ ಪ್ರಾಬಲ್ಯ ಹೊಂದಿರುವ ರಾಯಲ್ ಎನ್‌ಫೀಲ್ಡ್ ಸಂಸ್ಥೆಯು ತನ್ನ ಉತ್ಪನ್ನಗಳ ಗುಣಮಟ್ಟ ಹಾಗೂ ಬಲಿಷ್ಠತೆಯ ಮೂಲಕವೇ ಇತರೆ ಬೈಕ್ ಉತ್ಪನ್ನಗಳಿಂತ ಭಿನ್ನವಾಗಿದ್ದು, ಮಾಡಿಫೈಡ್ ಬೈಕ್‌ಗಳ ಲೋಕದಲ್ಲೂ ತನ್ನದೇ ಆದ ಇತಿಹಾಸವನ್ನೇ ಹೊಂದಿದೆ.

ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ ಎಂಬಂತೆ ಮಾಡಿಫೈ ಸಂಸ್ಥೆಯೊಂದು ಪ್ರೋಜೆಕ್ಟ್ ಎಸ್‌ಜಿ411 ಎನ್ನುವ ವಿನೂತನ ಮಾಡಿಫೈ ಡಿಸೈನ್‌ವುಳ್ಳ ಬೈಕ್ ಸಿದ್ದಪಡಿಸಿದ್ದು, ಆರ್‌ಇ ಆಫ್ ರೋಡ್ ಕಿಂಗ್ ಎಂದೇ ಜನಪ್ರಿಯವಾಗಿರುವ ಹಿಮಾಲಯನ್ ಬೈಕ್‌ನಿಂದಲೇ ಈ ಮಾಡಿಫೈ ಬೈಕ್ ಸಿದ್ದಗೊಳಿಸಲಾಗಿದೆ.

ಇಂಡೋನೇಷ್ಯಾ ಮೂಲದ ಬೈಕ್ ಎಕ್ಸ್‌ಕ್ಲಿಫ್ ಎನ್ನುವ ಮಾಡಿಫೈ ಸಂಸ್ಥೆಯು ಈ ವಿನೂತನ ಮಾದರಿಯ ಬೈಕ್ ಅನ್ನು ಸಿದ್ದಗೊಳಿಸಿದ್ದು, ಇದುವರೆಗೂ ಮಾಡಿಫೈ ಮಾರುಕಟ್ಟೆಯಲ್ಲಿ ಸಿದ್ದಗೊಂಡಿರುವ ವಿವಿಧ ವಿನ್ಯಾಸಗಳ ಬೈಕ್ ಮಾದರಿಗಿಂತಲೂ ಇದು ಭಿನ್ನವಾಗಿ ಕಾಣುತ್ತಿದೆ.

ಮಾಡಿಫೈ ಬೈಕಿಗೆ ಮೇಲೆ ಹೇಳಿದಂತೆ ಪ್ರೋಜೆಕ್ಟ್ ಎಸ್‌ಜಿ411 ಎಂದು ನಾಮಕರಣ ಮಾಡಲಾಗಿದ್ದು, ಮಿಲಟರಿ ವರ್ಷನ್ ಬೈಕ್ ಮಾದರಿಗಳಂತೆ ಬಣ್ಣದ ಆಯ್ಕೆಯನ್ನು ಹೊಂದಿದ್ದರೂ ಸಹ ವಾಸ್ತವವಾಗಿ ಈ ಬೈಕ್ ಹಸ್ಕ್ವಾರ್ನಾ ಬೈಕ್ ಡಿಸೈನ್‌ನಂತೆ ಕಾಣುತ್ತಿದೆ.

ಇನ್ನುಳಿದಂತೆ ಮಸ್ಕಕ್ಯೂಲರ್ ಫ್ಯೂಲ್ ಟ್ಯಾಂಕ್, ಚಪ್ಪಟೆಯಾಕಾರದ ಎಲ್ಇಡಿ ಹೆಡ್‌ಲ್ಯಾಂಪ್, ಆಕರ್ಷಕ ಚಕ್ರಗಳು, ಕಸ್ಟಮ್ ಬಿಲ್ಟ್ ಸ್ವಿಂಗ್ ಆರ್ಮ್, ಗಮನಸೆಳೆಯುವ ಎಕ್ಸಾಸ್ಟ್, ಒಂದೇ ಪ್ಯಾನೆಲ್‌ನಲ್ಲಿ ಫ್ಯೂಲ್ ಟ್ಯಾಂಕ್‌ಗೆ ಹೊಂದಿಕೊಂಡಿರುವ ರೈಡರ್ ಸೀಟು ಈ ಬೈಕಿನ ಹೈಲೆಟ್ಸ್.
MOST READ: ಇದು ಆರ್‌ಇ ಬುಲೆಟ್ ಅಲ್ಲಾ ಕಣ್ರೀ 100ಸಿಸಿ ರಾಯಲ್ ಇಂಡಿಯನ್ ಬೈಕ್..!

ಇನ್ನು ಫ್ಯೂಲ್ ಟ್ಯಾಂಕ್ ಮೇಲೆ ಮೂಲ ಬೈಕಿನ ಹೆಸರನ್ನು ಹಾಗೆಯೇ ಉಳಿಸಲಾಗಿದ್ದು, ಪ್ರೋಜೆಕ್ಟ್ ಎಸ್‌ಜಿ411ನೊಂದಿಗೆ ಹಿಮಾಲಯನ್ ಎಂದು ಮುದ್ರಿಸಲಾಗಿದೆ. ಇನ್ನುಳಿದಂತೆ ಬೈಕಿನ ತಾಂತ್ರಿಕ ಅಂಶಗಳನ್ನು ಮೂಲ ಬೈಕಿನಂತೆಯೇ ಇಲ್ಲಿ ಮುಂದುವರಿಸಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹಿಮಾಲಯನ್ ಬೈಕ್‌ಗಳು 411ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್, 4 ಸ್ಟೋಕ್ ಎಂಜಿನ್ ಹೊಂದಿದ್ದು, 5-ಸ್ಪೀಡ್ ಗೇರ್‌ಬಾಕ್ಸ್ ಸಹಾಯದೊಂದಿಗೆ 24.5ಬಿಎಚ್‌ಪಿ ಮತ್ತು 32ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.
MOST READ: ಅತಿ ಕಡಿಮೆ ಬೆಲೆಯಲ್ಲಿ ಸಿದ್ದವಾದ ಹ್ಯಾಂಡ್ ಮೆಡ್ 1000 ಸಿಸಿ ಬೈಕ್ ಇದು..!

ಇನ್ನು ಮಾಡಿಫೈ ಬೈಕ್ ಮಾದರಿಯು ಸಹ ಮೂಲ ಬೈಕಿನಂತಯೇ ಎಂಜಿನ್ ಪರ್ಫಾಮೆನ್ಸ್ ಹೊಂದಿರಲಿದ್ದು, ಸುಮಾರು 15 ದಿನಗಳ ಕಾಲ ಸಿದ್ದಗೊಂಡಿರುವ ಈ ಬೈಕಿಗೆ ಎಷ್ಟು ಖರ್ಚು ಮಾಡಲಾಗಿದೆ ಎನ್ನುವ ನಿಖರ ಮಾಹಿತಿಗಳಿಲ್ಲ. ಈ ಡಿಸೈನ್ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ಹಂಚಿಕೊಳ್ಳಿ..
Source: Bikeexif


Click it and Unblock the Notifications








