Just In
- 40 min ago Tata: ಒಬ್ಬರೇ ಬಂದು 2 ಸಾವಿರ ಟಾಟಾ ಎಲೆಕ್ಟ್ರಿಕ್ ಕಾರುಗಳನ್ನು ಖರೀದಿಸಿ ಹೋಗಿಬಿಟ್ಟರು!
- 2 hrs ago ಪ್ರಸಿದ್ಧ ಪುಣ್ಯಕ್ಷೇತ್ರ ಶೃಂಗೇರಿ ಶಾರದಾಂಬಾ ದರ್ಶನಕ್ಕೆ ತೆರಳಬೇಕೇ.. ಹಾಗಾದರೆ ಈ ಸ್ಟೋರಿ ನೋಡಿ
- 3 hrs ago ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- 3 hrs ago Maruti: ಜಪಾನ್ನಲ್ಲಿ ಗರಿಷ್ಟ ಗುಣಮಟ್ಟದ ಸ್ವಿಫ್ಟ್ ಕಾರು! ಭಾರತಕ್ಕೆ ಮಾತ್ರ ಕಳಪೆ ಗುಣಮಟ್ಟ ಏಕೆ?
Don't Miss!
- News ಹಾಸನದಲ್ಲಿ ಬಿಜೆಪಿಯ ಸಹಕಾರವಿಲ್ಲ, ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ: ಮತ್ತೆ ಸಂಕಷ್ಟದಲ್ಲಿ ದಳಪತಿ
- Lifestyle ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
- Movies Lok Sabha Election 2024: ಕನ್ನಡ ತಾರೆಯರು ನಾಳೆಏಪ್ರಿಲ್ 26 ಎಲ್ಲೆಲ್ಲಿ ತಮ್ಮ ಹಕ್ಕು ಚಲಾಯಿಸುತ್ತಾರೆ?
- Technology ಮೇ 1 ರಂದು ವಿವೋ T3x 5G ಮೊಬೈಲ್ ಮತ್ತೆ ಖರೀದಿಗೆ ಲಭ್ಯ!..ಅಗ್ಗದ ಬೆಲೆ ಇದೆ!
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Sports IPL 2024: ಎಸ್ಆರ್ಹೆಚ್ ಸಂಘಟಿತ ಆಟಕ್ಕೆ ಬ್ರೇಕ್ ಹಾಕಲು ಆರ್ಸಿಬಿ ಏನು ಮಾಡಬೇಕು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೊಸ ಕಾರು ಉತ್ಪಾದನೆಗೆ ಚಾಲನೆ ನೀಡಿದ ನಿಸ್ಸಾನ್ - ಮುಂಬರುವ ಜನವರಿಯಲ್ಲಿ ಕಿಕ್ಸ್ ಬಿಡುಗಡೆ ಪಕ್ಕಾ..!
ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ಭಾರತದಲ್ಲಿ ತನ್ನ ಹೊಸ ಉತ್ಪನ್ನಗಳ ಬಿಡುಗಡೆಯಾಗಿ ಬೃಹತ್ ಯೋಜನೆ ರೂಪಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಸಬ್ ಕಂಪ್ಯಾಕ್ಟ್ ಎಸ್ಯುವಿ ಮಾದರಿಯಾದ ಕಿಕ್ಸ್ ಕಾರನ್ನು ಅನಾವರಣಗೊಳಿಸುವ ಮೂಲಕ ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡುವ ಸುಳಿವು ನೀಡಿದೆ.
2016ರಲ್ಲಿ ಬ್ರೆಜಿಲ್ ಮಾರುಕಟ್ಟೆಯಲ್ಲಿ ಕಿಕ್ಸ್ ಕಾರು ಮಾದರಿಯನ್ನು ಬಿಡುಗೆಡೆಗೊಳಿಸಿದ್ದ ನಿಸ್ಸಾನ್ ಸಂಸ್ಥೆಯು ಈ ಬಾರಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಜನಪ್ರಿಯ ಕಿಕ್ಸ್ ಕಾರುಗಳನ್ನು ಬಿಡುಗಡೆಗಾಗಿ ಸಜ್ಜಾಗುತ್ತಿದ್ದು, ಕಿಕ್ಸ್ ಹೊಸ ಕಾರುಗಳನ್ನು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್ಫಾರ್ಮ್ ಅನ್ನು ಆಧರಿಸಿ ಅಭಿವೃದ್ಧಿಗೊಳ್ಳುವುದು ಖಚಿತವಾಗಿದೆ.
ಜೊತೆಗೆ ರೆನಾಲ್ಟ್ ಕ್ಯಾಪ್ಚರ್ಗಿಂತಲೂ ಹೆಚ್ಚಿನ ಗುಣಮಟ್ಟದ ವಿನ್ಯಾಸಗಳನ್ನು ಪಡೆದುಕೊಂಡಿದ್ದು, ಡಸ್ಟರ್ ಮತ್ತು ಲೊಡ್ಜಿ ಮಾದರಿಗಳಿಂತ ಹೆಚ್ಚು ಆಕರ್ಷಣೆ ಪಡೆದಿದೆ. ಹೀಗಾಗಿ ಭಾರೀ ಪ್ರಮಾಣದ ಮಾರಾಟ ನೀರಿಕ್ಷೆಯಿದೆ.
ಇನ್ನು GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್ಗೆ ಮೆರಗು ತಂದಿದ್ದು, ಮಲ್ಟಿ ಲೇಯರ್ ಡ್ಯುಯಲ್ ಟೋನ್ ಡ್ಯಾಶ್ಬೋರ್ಡ್ ವ್ಯವಸ್ಥೆ ಹೊಂದಿದೆ. ಜೊತೆಗೆ ಲೆದರ್ ಕೊಟಿಂಗ್ ಸೀಟುಗಳ ವ್ಯವಸ್ಥೆಯಿದ್ದು, ಪುಶ್ ಡೋರ್ ಟ್ರಿಮ್ ಅನುಕೂಲತೆಯಿದೆ.
ವಿನೂತನ ಕಾರಿನಲ್ಲಿ 7-ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ ವಿವ್ಯೂ ಮಾನಿಟರ್ ವ್ಯವಸ್ಥೆಯಿದೆ. ಅಲ್ಲದೇ ಪ್ರಸ್ತುತ ಮಾದರಿಯ ಹಲವು ವಿಶೇಷತೆಗಳು ಈ ಕಾರಿನಲ್ಲಿವೆ.
ಜೊತೆಗೆ ಪ್ರೀಮಿಯಂ ಕಾರುಗಳಲ್ಲಿ ಕಂಡುಬರುವ ವಿ ಮೊಷನ್ ಗ್ರೀಲ್, ಸ್ವೆಪ್ಟ್ ಬ್ಯಾಕ್ ಹೆಡ್ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್, ಎಲ್ಇಡಿ ಫಾಗ್ ಲ್ಯಾಂಪ್, ಸ್ಪೋರ್ಟಿ ಲುಕ್ ನೀಡುವ 17-ಇಂಚಿನ ಫೈವ್ ಸ್ಪೋಕ್ ಅಲಾಯ್ ಚಕ್ರಗಳು ಮತ್ತು ಪ್ಲಾಸ್ಟಿಕ್ ಬಾಡಿ ಕ್ಲ್ಯಾಡಿಂಗ್ ಸೇರಿದಂತೆ ಹಲವು ವಿಶೇಷತೆಗಳನ್ನು ಹೊಂದಿದೆ.
ಸಬ್ ಕಂಪ್ಯಾಕ್ಟ್ ಎಸ್ಯುವಿ ವೈಶಿಷ್ಟ್ಯತೆಯ ಕಿಕ್ಸ್ ಕಾರುಗಳು ಉತ್ತಮ ಉದ್ದಳತೆ ಹೊಂದಿದ್ದು, 4,384ಎಂಎಂ ಉದ್ದ, 1,813ಎಂಎಂ ಅಗಲವಾಗಿದೆ. ಜೊತೆಗೆ 2,673 ಎಂಎಂ ಎತ್ತರವಾಗಿದ್ದು, ಐದು ಜನ ಆರಾಮದಾಯಕವಾಗಿ ಪ್ರಯಾಣ ಮಾಡಬಹುದಾಗಿದೆ.
ಆದ್ರೆ ಕಾರುಗಳ ಒಳಭಾಗದ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಬಿಟ್ಟುಕೊಡದ ನಿಸ್ಸಾನ್ ಸಂಸ್ಥೆಯು ಕೇವಲ ಹೊರಭಾಗದ ವೈಶಿಷ್ಟ್ಯತೆಗಳನ್ನು ಮಾತ್ರವೇ ಪ್ರದರ್ಶನ ಮಾಡಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಮತ್ತಷ್ಟು ಮಾಹಿತಿಗಳನ್ನು ಹಂಚಿಕೊಳ್ಳಲಿದೆ.
MOST READ: ವಾಹನ ಮಾಲೀಕರೇ ಇತ್ತ ಕಡೆ ಗಮನಹರಿಸಿ- ಇಲ್ಲವಾದ್ರೆ ನಿಮ್ಮ ವಾಹನವೂ ಸೀಜ್ ಆಗಬಹುದು..!
ಎಂಜಿನ್ ಸಾಮರ್ಥ್ಯ
ಹೊಸ ಕಿಕ್ಸ್ ಮಾದರಿಯು 1.5-ಲೀಟರ್ ಹಾಗೂ 1.6-ಲೀಟರ್ ಮಾದರಿಯ ಎರಡು ಡಿಸೇಲ್ ಎಂಜಿನ್ ಆಯ್ಕೆ ಹೊಂದುವ ಸಾಧ್ಯತೆಗಳಿದ್ದು, ಹಾಗೆಯೇ 1.5-ಲೀಟರ್ ಪೆಟ್ರೋಲ್ ಎಂಜಿನ್ ಕೂಡಾ ಲಭ್ಯವಿರಲಿದೆ. ಪ್ರತಿ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಜೊತೆ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಆಯ್ಕೆ ದೊರೆಯಲಿದೆ.
ಕಾರಿನ ಬೆಲೆ ಮತ್ತು ಬಿಡುಗಡೆಯ ಅವಧಿ(ಅಂದಾಜು)
ನಿಸ್ಸಾನ್ ಕಿಕ್ಸ್ ಕಾರುಗಳು 2019ರ ಜನವರಿಯಲ್ಲಿ ಖರೀದಿಗೆ ಲಭ್ಯವಾಗುವುದು ಬಹುತೇಕ ಖಚಿತವಾಗಿದ್ದು, ಕಾರಿನ ಬೆಲೆಗಳು ಎಕ್ಸ್ಶೋರೂಂ ಪ್ರಕಾರ ಆರಂಭಿಕವಾಗಿ ರೂ.11 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.15 ಲಕ್ಷ ಬೆಲೆ ಅಂದಾಜಿಸಲಾಗಿದೆ.
MOST READ: ಜಾವಾ ನಂತರ ಯಜ್ಡಿ ಬೈಕ್ಗಳ ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದ ಮಹೀಂದ್ರಾ..!
ಹೀಗಾಗಿ ಹೊಸ ಕಾರು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬ್ರೆಝಾ, ಹ್ಯುಂಡೈ ಕ್ರೇಟಾ ಮತ್ತು ಮಹೀಂದ್ರಾ ಎಕ್ಸ್ಯುವಿ 500 ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಗುಣಲಕ್ಷಣಗಳನ್ನು ಹೊಂದಿದ್ದು, ಗುಣಮಟ್ಟದಲ್ಲಿ ಇತರೆ ಸಬ್ ಕಂಪ್ಯಾಕ್ಟ್ ಎಸ್ಯುವಿಗಳಿಂತಲೂ ವಿಶೇಷ ಎನ್ನಿಸಲಿವೆ.