ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಜಪಾನ್ ಮೂಲದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ತನ್ನ ಹೊಸ ಲೆಫ್ಟ್-ಹ್ಯಾಂಡ್-ಡ್ರೈವ್ ಟೆರ್ರಾ ಆವೃತ್ತಿಯನ್ನು ಚೀನಾ ಮಾರಾಟಕ್ಕೆ ಪರಿಚಯಿಸುತ್ತಿದೆ.

By Rahul Ts

ಜಪಾನ್ ಮೂಲದ ಅತಿದೊಡ್ಡ ಕಾರು ಉತ್ಪಾದನಾ ಸಂಸ್ಥೆಯಾದ ನಿಸ್ಸಾನ್ ತನ್ನ ಹೊಸ ಲೆಫ್ಟ್-ಹ್ಯಾಂಡ್-ಡ್ರೈವ್ ಟೆರ್ರಾ ಆವೃತ್ತಿಯನ್ನು ಚೀನಾ ಮಾರಾಟಕ್ಕೆ ಪರಿಚಯಿಸುತ್ತಿದ್ದು, ಹೊಸ ಟೆರ್ರಾ ಎಸ್ ಯುವಿ ಕಾರ್‌ ಅನ್ನು ಮುಂಬರುವ ಬೀಜಿಂಗ್ ಮೋಟಾರ್ ಶೋನಲ್ಲಿ ಅನಾವರಣಗೊಳಿಸಲಿದೆ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಟೆರ್ರಾ ಕಾರು ಜಪಾನ್ ನಲ್ಲಿ ದೊರೆಯುವ ಸಣ್ಣ ಎಸ್ ಯುವಿ ಕಾರುಗಳಂತೆಯೇ ವಿನ್ಯಾಸಗಳನ್ನು ಒಳಗೊಂಡ ಫುಲ್ ಸೈಜ್ ಎಸ್ ಯುವಿ ಕಾರಾಗಿದ್ದು, ಬಾಡಿ ಆನ್ ಫ್ರೇಮ್ ಆನ್ನು ಆಧರಿಸಿರುವುದು ಪಿಕಪ್ ಮತ್ತು ಮರ್ಸಿಡಿಸ್ ಎಕ್ಸ್-ಕ್ಲಾಸ್ ಹೋಲಿಕೆ ಪಡೆದಿದೆ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಒಟ್ಟಾರೆ ಟೆರ್ರಾ ಕಾರು ಒರಟಾದ ವಿನ್ಯಾಸವನ್ನು ಹೊಂದಿದ್ದು, 4x4 ಡ್ರೈವ್ ಟೆಕ್ನಾಲಜಿ ಹೊಂದುವ ಮೂಲಕ ಜನಪ್ರಿಯ ಎಸ್‌ಯುವಿಗಳಾದ ಫೋರ್ಡ್ ಎಂಡೀವರ್ ಮತ್ತು ಟೊಯೊಟಾ ಫಾರ್ಚುೂನರ್ ಕಾರುಗಳನ್ನು ಹಿಂದಿಕ್ಕಲಿದೆ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಇನ್ನು ನಿಸ್ಸಾನ್ ನ ಸಿಗ್ನೇಚರ್ V-ಗ್ರಿಲ್, ಹೊಸದಾಗಿ ವಿನ್ಯಾಸಗೊಂಡ ಬಂಪರ್, ಎಲ್ಎಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಪ್ರೊಜೆಕ್ಟರ್ ಲೈಟ್ ಗಳನ್ನು ಹೊಂದಿದ್ದು, ಕ್ರೋಮ್ ಸ್ಟ್ರಿಪ್ ಹೊಂದಿರುವ ಟೈಲ್ ಲ್ಯಾಂಪ್ ಟೈಲ್ ಗೇಟ್‌ ಅನ್ನು ಆವರಿಸಿದೆ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಒಳವಿನ್ಯಾಸದಲ್ಲೂ ಸಾಕಷ್ಟು ಸುಧಾರಿತ ಅಂಶಗಳನ್ನು ಪಡೆದಿದ್ದು, 3 ಸೀಟಿಂಗ್ ಸಾಲುಗಳನ್ನು ಹೊಂದಿದೆ. ಹೀಗಾಗಿ 7 ಮಂದಿ ಅರಾಮದಾಯಕವಾಗಿ ಕಾರು ಪ್ರಯಾಣ ಮಾಡಬಹುದಾಗಿದ್ದು, ಡ್ಯಾಶ್ ಬೋರ್ಡ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಸ್ಟೀರಿಂಗ್ ವೀಲ್ಹ್‌ಗೆ ಸಿಲ್ವರ್ ಅಸ್ಸೆಂಟ್ಸ್ ಅನ್ನು ಪಡೆದಿದೆ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಎಂಜಿನ್ ಸಾಮರ್ಥ್ಯ

ಟೆರ್ರಾ ಕಾರುಗಳು 2.3-ಲೀಟರ್ 4 ಸಿಲಿಂಡರ್ ಡೀಸೆಲ್ ಎಂಜಿನ್ ಹೊಂದಿರಲಿದೆ ಎನ್ನಲಾಗಿದ್ದು, ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಇಷ್ಟು ಮಾಹಿತಿ ಹೊರತುಪಡಿಸಿ ಬೇರಾವ ಮಾಹಿತಿಯನ್ನು ನಿಸ್ಸಾನ್ ಸಂಸ್ಥೆಯು ಬಹಿರಂಗಗೊಳಿಸಲಿಲ್ಲ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಒಟ್ಟಿನಲ್ಲಿ ನಿಸ್ಸಾನ್ ಟೆರ್ರಾ ಫುಲ್ ಸೈಜ್ ಎಸ್‍ಯುವಿಯಾಗಿದ್ದು, ಭಾರತದ ಮಾರುಕಟ್ಟೆಗೂ ಟೆರ್ರಾ ಕಾರುಗಳನ್ನು ಪರಿಚಯಿಸುವ ಬಗ್ಗೆ ನಿಸ್ಸಾನ್ ಸಂಸ್ಥೆಯು ಯಾವುದೇ ಮಾಹಿತಿಯನ್ನು ಬಹಿರಂಗಗೊಳಿಸಲಿಲ್ಲ.

ಭಾರತಕ್ಕೂ ಬರುತ್ತಾ ನಿಸ್ಸಾನ್ ಹೊಸ ಟೆರ್ರಾ ಎಸ್‍ಯುವಿ?

ಆದ್ರೆ ಎಸ್‍ಯುವಿ ವಿಭಾಗದಲ್ಲಿ ಕಾಲಿಡಲಿಡಲಿರುವ ನಿಸ್ಸಾನ್ ಟೆರ್ರಾ ಭಾರತಕ್ಕೆ ಬಂದಲ್ಲಿ ಟೆಯೊಟಾ ಫಾರ್ಚುೂನರ್, ಫೋರ್ಡ್ ಎಂಡೀವರ್, ಮಿಟ್ಸುಬಿಸಿ ಪಜೆರೊ ಸ್ಪೋರ್ಟ್ ಮತ್ತು ಇಸುಝು ಎಂಯು-ಎಕ್ಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
Read more on nissan suv
English summary
Nissan Terra SUV Revealed — Specifications, Features And Images.
Story first published: Monday, February 26, 2018, 17:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X