ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ವಿನೂತನ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಎಸ್‌‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 12.22 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

By Praveen Sannamani

ನಿಸ್ಸಾನ್ ಇಂಡಿಯಾ ಸಂಸ್ಥೆಯು ಭಾರತೀಯ ಮಾರುಕಟ್ಟೆಯ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿನೂತನ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಎಸ್‌‌ಯುವಿ ಕಾರನ್ನು ಬಿಡುಗಡೆ ಮಾಡಿದ್ದು, ಹೊಸ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 12.22 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ನಿಸ್ಸಾನ್ ಬಿಡುಗಡೆ ಮಾಡಿರುವ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಆವೃತ್ತಿಯು ಸ್ಪೋರ್ಟಿ ಲುಕ್‌ನೊಂದಿಗೆ ಸಿದ್ದವಾಗಿದ್ದು, ಎಕ್ಸ್‌ಟ್ರಿಮ್ ಎಸ್‌ಯುವಿ ಇಷ್ಟಪಡುವ ಗ್ರಾಹಕರನ್ನು ಸೆಳೆಯಲಿದೆ. ಜೊತೆಗೆ ಡೈನಾಮಿಕ್ ಬಾಡಿ ಕಿಟ್ ಪಡೆದಿರುವ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್‌ಗಳು, ಬ್ಲ್ಯಾಕ್ ರೂಫ್ ವ್ಯಾರ್ಪ್ ಪಡೆದುಕೊಂಡಿರುವುದು ಕಾರಿನ ಹೊರ ವಿನ್ಯಾಸಕ್ಕೆ ಮೆರಗು ತಂದಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇದಲ್ಲದೇ ಸ್ಪೆಷಲ್ ಎಡಿಷನ್‌ನಲ್ಲಿ ಬ್ಲ್ಯಾಕ್ ವ್ಯಾರ್ಪ್ ಪಿಲ್ಲರ್, ಆರ್ಚ್ ಮೇಲೆ ನ್ಯೂ ಕ್ಲ್ಯಾಡಿಂಗ್ ಸೌಲಭ್ಯ ಹೊಂದಿದ್ದು, ಕಾರಿನ ಬ್ಯಾನೆಟ್, ಫೆಂಡರ್, ರಿಯರ್ ಬಂಪರ್ ಮತ್ತು ರಿಯರ್ ಡೋರ್‌ಗಳ ಮೇಲೆ ದಪ್ಪನೆಯ ಸ್ಟ್ರಿಪ್ ಬಳಕೆ ಮಾಡಿರುವುದು ಕೂಡಾ ಕಾರಿನ ಅಂದ ಹೆಚ್ಚಿಸಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇನ್ನು ಕಾರಿನ ಒಳ ವಿನ್ಯಾಸದ ಬಗೆಗೆ ಹೇಳುವುದಾರರೇ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ, ಸ್ಟಿರಿಂಗ್ ಮೌಂಟೆಡ್ ಕಂಟ್ರೋಲರ್ ಮತ್ತು ಕ್ರಿಮ್‌ಸನ್ ಸ್ಟಿಚ್ ಪ್ರೇರಿತ ಸೀಟುಗಳು ಹಾಗೂ ಫ್ಲೋರ್ ಮ್ಯಾಟ್‌ಗಳನ್ನು ಬಳಕೆ ಮಾಡಲಾಗಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಸ್ಪೆಷಲ್ ಎಡಿಷನ್ ಕಾರುಗಳಲ್ಲಿ ಮಾಹಿತಿ ತಂತ್ರಜ್ಞಾನ ಅಂಶಗಳಿಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಸ್ಮಾರ್ಟ್ ಫೋನ್ ಮೂಲಕ ನಿಸ್ಸಾನ್ ಕನೆಕ್ಟ್ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದು. ಇದು ಒಂದೇ ಸೂರಿನಡಿ ಎಲ್ಲಾ ಮಾಹಿತಿಗಳನ್ನು ನೀಡುವ ಒಂದು ಪ್ಲ್ಯಾಟ್‌ಫಾರ್ಮ್ ಇದಾಗಿದ್ದು, 50ಕ್ಕೂ ಹೆಚ್ಚು ಸ್ಮಾಟ್ ಫೀಚರ್ಸ್‌ಗಳು ಇದರಲ್ಲಿವೆಯೆಂತೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಈ ಮೂಲಕ ಕಾರಿನ ಸುರಕ್ಷಾ ಸೌಲಭ್ಯಗಳಿಗೂ ಒತ್ತು ನೀಡಿರುವ ನಿಸ್ಸಾನ್ ಸಂಸ್ಥೆಯು ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್‌ಗಳಲ್ಲಿ ಎಬಿಎಸ್, ಡ್ಯುಯಲ್ ಏರ್‌ಬ್ಯಾಗ್, ಟಚ್ ಲೈನ್ ಇಂಡಿಕೇಟರ್, ಡೇ ಟೈಮ್ ರನ್ನಿಂಗ್ ಲೈಟ್ಸ್, ಇಬಿಡಿ ಮತ್ತು ಬ್ರೇಕ್ ಅಸಿಸ್ಟ್ ವ್ಯವಸ್ಥೆ ಜೋಡಿಸಲಾಗಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಎಂಜಿನ್ ಸಾಮರ್ಥ್ಯ

1.6-ಲೀಟರ್ ಪೆಟ್ರೋಲ್ ಎಂಜಿನ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿರುವ ಟೆರಾನೊ ಸ್ಪೋರ್ಟ್ ಸ್ಪೆಷನ್ ಎಡಿಷನ್ ಕಾರುಗಳು, ಪೆಟ್ರೋಲ್ ಆವೃತ್ತಿಯ ಮೂಲಕ 102-ಬಿಎಚ್‌ಪಿ, 145-ಎನ್ಎಂ ಟಾರ್ಕ್ ಉತ್ಪಾದಿಸುವ ಮೂಲಕ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಪಡೆದುಕೊಂಡಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಹಾಗೆಯೇ ಡೀಸೆಲ್ ಕಾರುಗಳಲ್ಲಿ ಲೋವರ್ ಔಟ್‌ಪುಟ್ ಮತ್ತು ಹೈಯರ್ ಔಟ್‌ಪುಟ್ ಉತ್ಪಾದಿಸುವ ಎರಡು ಮಾದರಿಗಳಿದ್ದು, ಆರಂಭಿಕ ಆವೃತ್ತಿಯು 84-ಬಿಎಚ್‌ಪಿ, 200-ಎನ್ಎಂ ಉತ್ಪಾದಿಸಿದಲ್ಲಿ ಹೈಯರ್ ಔಟ್‌ಪುಟ್‌ನಲ್ಲಿ 108-ಬಿಎಚ್‌ಪಿ, 243-ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಇವುಗಳಲ್ಲೂ ಸಹ ಲೋವರ್ ಔಟ್‌ಪುಟ್ ಉತ್ಪಾದಿಸುವ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಹಾಗೂ ಹೈಯರ್ ಔಟ್‌ಪುಟ್‌ ಉತ್ಪಾದಿಸುವ ಕಾರುಗಳಲ್ಲಿ 6-ಸ್ಪೀಡ್ ಆಟೋ ಮ್ಯಾಟಿಕ್ ಗೇರ್‌ಬಾಕ್ಸ್ ಬಳಸಲಾಗಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ವಿವಿಧ ಆವೃತ್ತಿಗಳನ್ನು ಆಯ್ಕೆ ಮಾಡುವ ಅವಕಾಶ ನೀಡಲಾಗಿದೆ.

ವಿನೂತನ ನಿಸ್ಸಾನ್ ಟೆರಾನೊ ಸ್ಪೋರ್ಟ್ ಸ್ಪೆಷಲ್ ಎಡಿಷನ್ ಬಿಡುಗಡೆ

ಒಟ್ಟಿನಲ್ಲಿ ಎಸ್‌ಯುವಿ ಕಾರುಗಳಲ್ಲಿ ವಿಭಿನ್ನವಾಗಿ ಗುರುತಿಸಿಕೊಳ್ಳುತ್ತಿರುವ ನಿಸ್ಸಾನ್ ಟೆರಾನೊ ಕಾರುಗಳು ಇದೀಗ ಸ್ಪೋರ್ಟಿ ಲುಕ್‌ನೊಂದಿಗೆ ಮಾರುಕಟ್ಟೆಗೆ ಎಂಟ್ರಿ ನೀಡಿದ್ದು, ಫೋರ್ಡ್ ಇಕೋ ಸ್ಪೋರ್ಟ್, ಮಾರುತಿ ಸುಜುಕಿ ಬ್ರೆಝಾ, ಟಾಟಾ ನೆಕ್ಸಾನ್ ಕಾರುಗಳಿಂತ ವಿಭಿನ್ನವಾಗಿರುವುದು ಗ್ರಾಹಕರ ಆಯ್ಕೆಯನ್ನು ಹೆಚ್ಚಿಸಲಿದೆ.

Most Read Articles

Kannada
Read more on nissan suv
English summary
Nissan Terrano Sport Special Edition Launched In India; Priced At Rs 12.22 Lakh.
Story first published: Tuesday, May 8, 2018, 16:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X