ಅಚ್ಛೇ ದಿನ್ ಬಂತು - ನೀವು ಊಹಿಸಲಾಗದಷ್ಟು ಕಡಿಮೆಯಾಗಲಿವೆ ಇಂಧನ ಬೆಲೆಗಳು..
ಜನಸಾಮಾನ್ಯರಿಗೆ ಬಹುತೇಕ ದಿನಗಳಿಂದ ಇರುವ ಒಂದು ದೊಡ್ಡ ತಲೆನೋವು ಎಂದರೆ ಅದು ಸರಾಸರಿಯಾಗಿ ಹೆಚ್ಚುತ್ತಿರುವ ಇಂಧನ ಬೆಲೆಗಳ ಏರಿಕೆ. ಕೆಲದಿನಗಳ ಹಿಂದೆ ಪೆಟ್ರೋಲ್‍ನ ಬೆಲೆಯು ಸುಮಾರು ರೂ.90 ದಾಟಿದಲ್ಲಿ ಇನ್ನು ಪ್ರೀಮಿಯಂ ಪೆಟ್ರೋಲ್ ಬೆಲೆಗಳು ರೂ.100 ದಾಟಿತ್ತು.

ಈ ನಿಟ್ಟಿನಲ್ಲಿ ಬಂಕ್‍ಗಳಲ್ಲಿ ಇಂಧನ ಬೆಲೆಗಳನ್ನು ತೋರಿಸುವ ಮಷೀನ್‍ಗಳನ್ನು ಸಹ ಬದಲಿಸಬೇಕಾದ ಪರಿಸ್ಥಿತಿ ಬಂತು. ಏಕೆಂದರೆ ಅವುಗಳು ರೂ.99 ಮಾತ್ರ ಬೆಲೆಯನ್ನು ತೋರಿಸುವ ಹಾಗೆ ವಿನ್ಯಾಸ ಮಾಡಲಾಗಿತ್ತು. ಇಂಧನ ಬೆಲೆಯಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂಬ ಕಾರಣಕ್ಕೆ ಹಲವಾರು ರಾಜ್ಯ ಸರ್ಕಾರಗಳು ತಮ್ಮ ಜನರಿಗೆ ಸಾಧ್ಯವಾದಷ್ಟು ತೆರಿಗೆಯನ್ನು ಕಡಿಮೆ ಮಾಡಿ ಮಾರಾಟ ಮಾಡುತ್ತಿದ್ದರು.

ಆದರೆ ಈ ದಸರಾ ನಂತರ ಇಂಧನ ಬೆಲೆಗಳು ಕಡಿಮೆಯಾಗುತ್ತಾ ಬಂದಿದೆ. ಕೇಂದ್ರ ಸರ್ಕಾರವು ಇಂಧನ ಬೆಲೆಗಳ ಏರಿಕೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಭವಿಷ್ಯದಲ್ಲಿ ದಿನನಿತ್ಯದ ಬದುಕಿಗೆ ತೊಂದರೆಯಾಗುವುದಂತು ಪಕ್ಕಾ.

ಇಂಧನ ಬೆಲೆಯಲ್ಲಿ ಹೀಗೆ ಏರಿಕೆಯಾಗುತ್ತಾ ಹೋದರೆ 2019ರಲ್ಲಿ ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ತಮ್ಮ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಹರ ಸಾಹಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ತರ ನಿರ್ಣಯವನ್ನು ತೆಗೆದುಕೊಳ್ಳುವ ಆಲೋಚನೆಯಲ್ಲಿದೆ.

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಜಿಎಸ್‍ಟಿ ವ್ಯಾಪ್ತಿಯಲ್ಲಿ ತರುವ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳುತ್ತಿದ್ದು, ಇಂಧನ ಬೆಲೆ ರೂ. 20 ರಿಂದ ರೂ. 30ಕ್ಕೆ ಇಳಿಕೆಯಾಗುವ ಸಾಧ್ಯತೆಗಳಿವೆ. ಇದರಿಂದ ರಾಷ್ಟ್ರದಲ್ಲಿರುವ ಮಧ್ಯಮ ವರ್ಗದ ಜನರಿಗೆ ಮತ್ತು ಜನಸಾಮಾನ್ಯರಿಗೆ ಬಹಳ ಸೌಕರ್ಯವಾಗುತ್ತದೆ ಎಂದು ಮಾಹಾರಾಷ್ಟ್ರ ರಾಜ್ಯ ಸಭೆಯ ಸದಸ್ಯ ರಾಮ್‍ದಾಸ್ ಬಂದು ಅಥವಾಲೆ ಹೇಳಿಕೊಂಡಿದ್ದಾರೆ.

ಇಷ್ಟೇ ಅಲ್ಲದೆ ಇಂಧನ ಬೆಲೆಗಳನ್ನು ಕಡಿಮೆ ಮಾಡಲು ಕೆಂದ್ರ ಸರ್ಕಾರದ ಕೈವಾಡ ಹೇಗಿರುತ್ತದೆಯೋ ಹಾಗೆಯೆ ರಾಜ್ಯ ಸರ್ಕಾರವು ಇಂಧನ ಬೆಲೆಯಲ್ಲಿ ಅಳವಡಿಸಲಾಗಿರುವ ತೆರಿಗೆಯನ್ನು ಕಡಿಮೆ ಮಾಡಿದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಹಲವಾರು ಪ್ರಯತ್ನಗಳ ನಂತರ ಕೆಲ ದಿನಗಳಿಂದ ಪೆಟ್ರೋಲ್ ಹಾಗು ಡೀಸೆಲ್‍ನ ಬೆಲೆಯು ಕಡಿಮೆ ಆಗಿದ್ದು, ಪೆಟ್ರೋಲ್ ಮತ್ತು ಡೀಸೆಲ್‍ನ ಮಾರಾಟದಲ್ಲಿ ಕೇಂದ್ರ ಸರ್ಕಾರವು ಜಿಎಸ್‍ಟಿಯನ್ನು ಅಳವಡಿಸಿದ್ದೇ ಆದಲ್ಲಿ ಇನ್ನೂ ಅನುಕೂಲಕರ ಆಗಲಿದೆ.

ಇದು ಅಥವಾಲೆ ಮತ್ತು ಇನ್ನುಳಿದ ರಾಜಕಾರಣಿಗಳ ಇಂಧನ ಬೆಲೆಯ ಕಡಿತ ಬಗ್ಗೆ ಮಾತುಗಳಾದ್ರೆ ಇನ್ನು ಯೋಗ ಗುರು ರಾಮ್‍ದೇವ್ ಬಾಬಾ ಅವರು ಕೂಡಾ ತಮಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದೆ ಆದಲ್ಲಿ ಕಡಿಮೆ ಬೆಲೆಯಲ್ಲಿ ಇಂಧನವನ್ನು ಮಾರಾಟ ಮಾಡುವುದಾಗಿ ಹೇಳಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಕೇವಲ 40 ರೂಪಾಯಿಗೆ ಪೆಟ್ರೋಲ್ ಮಾರಲು ಮುಂದಾಗಿರುವ ಬಾಬಾ!
ಯೋಗಗುರು ಬಾಬಾ ರಾಮ್ದೇವ್ ಅವರು ಕೇಂದ್ರ ಸರ್ಕಾರವು ನಮಗೆ ಸಹಕರಿಸುವ ಮೂಲಕ ತೆರಿಗೆಯಲ್ಲಿ ಕೆಲವು ವಿನಾಯ್ತಿ ನೀಡಿದ್ದೆ ಆದಲ್ಲಿ ನಾನು ಒಂದು ಲೀಟರ್ ಪೆಟ್ರೋಲ್ ಅನ್ನು ಕೇವಲ ರೂ.35 ರಿಂದ 40ಕ್ಕೆ ಮಾರಲು ಸಿದ್ಧವಿರುದಾಗಿ ಎನ್‍ಡಿಟಿವಿ ಯೂತ್ ಕಾಂಕ್ಲೇವ್ ಟುಡೆ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ.

ಬಾಬಾ ರಾಮ್ದೇವ್ ಅವರು ತೆಗೆದುಕೊಂಡ ಈ ಸಂಚಲನಾತ್ಮಕ ಹೇಳಿಕೆಯು ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಜೊತೆಗೆ ಮೋದಿಯವರು ಜನಸಾಮಾನ್ಯರಿಗೆ ಉಪಯುಕ್ತವಾದ ಎಷ್ಟೋ ಯೋಜನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಆದ್ರೆ ಮೂರು ತಿಂಗಳಿನಿಂದ ಏರಿಕೆಯಾಗುತ್ತಿರುವ ಇಂಧನದ ಬೆಲೆಯಿಂದಾಗಿ ಜನರು ಗೊಂದಲದಲ್ಲಿದ್ದರೂ ಯಾವುದೇ ನಿರ್ಣಯವನ್ನು ತೆಗೆದುಕೊಳ್ಳದಿರುವುದು ಆಶ್ಚರ್ಯಕರವಾಗಿದೆ ಎಂದಿದ್ದರು.

ಇಷ್ಟೇ ಅಲ್ಲದೆ ಇಂಧನಗಳ ಮೇಲೆ ಈಗಿರುವ ತೆರಿಗೆಯನ್ನು ತೊಲಗಿಸಿ ಜಿಎಸ್‍ಟಿ ಅಡಿ ಇಂಧನಗಳನ್ನು ಮಾರಾಟ ಮಾಡುವ ಅವಶ್ಯವಿರುದಾಗಿ 'ಎನ್‍ಡಿಟಿವಿ' ನಡೆಸಿದ ಯೂತ್ ಕಾಂಕ್ಲೇವ್ ಟುಡೆ ಕಾರ್ಯಕ್ರಮದಲ್ಲಿ ಬಾಬಾ ರಾಮ್‍ದೇವ್ ಈ ರೀತಿಯಾಗಿ ಹೇಳಿಕೊಂಡಿದ್ದಾರೆ.

ದೇಶದಲ್ಲಿರುವ ಬಹುತೇಕ ಮಂದಿ ಪ್ರಧಾನಿ ಮೋದಿಯವರ ಕಾರ್ಯವನ್ನು ಮೆಚ್ಚುತ್ತಲೇ ಇದ್ದಾರೆ. ಆದ್ರೆ ಅವರ ಕಾರ್ಯನಿರ್ವಹಣೆಯಲ್ಲಿ ಕೆಲ ಬದಲಾವಣೆ ಅವಶ್ಯಕತೆ ಇದೆ ಎಂದಿರುವ ಬಾಬಾ ರಾಮ್ದೇವ್ ಅವರು, ಕಳೆದ 2-3 ತಿಂಗಳಿನಿಂದ ಇಂಧನಗಳ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಕಷ್ಟ ಪಡುತ್ತಿದ್ದಾರೆ. ಈಗಲಾದ್ರು ಪ್ರಧಾನಿಯವರು ಎಚ್ಚೆತ್ತುಕೊಳ್ಳದಿದ್ದರೆ 2019ರ ಲೋಕಸಭಾ ಚುನಾವಣೆಯಲ್ಲಿ ತೊಂದರೆಯಾಗಬಹುದು ಎಂದಿದ್ದಾರೆ.

2014ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರದ ವೇಳೆ ರಾಮ್‌ದೇವ್ ಮತ್ತು ಇನ್ನಿತರೆ ನಾಯಕರು ಕೇಂದ್ರದಲ್ಲಿದ್ದ ಮನಮೋಹನ್ ಸಿಂಗ್ ಅವರ ಸರ್ಕಾರದ ಮೇಲೆ ಆರೋಪ ಮಾಡಿದ್ದನ್ನು ನೆನೆದಿರುವ ಅವರು, ಮೋದಿಯವರು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ರೂ.35-40 ಕ್ಕೆ ಇಳಿಯಲಿದೆ ಎಂದು ಜನರಿಗೆ ಭರವಸೆ ನೀಡಿದ್ದರು. ಆದ್ರೆ ಇದೀಗ ರಾಷ್ಟ್ರದಲ್ಲಿನ ಪ್ರಮುಖ ನಗರಗಳಲ್ಲಿ ಪೆಟ್ರೋಲ್‍ನ ಬೆಲೆಯು ರೂ.90ಕ್ಕೆ ಹೆಚ್ಚಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
MOST READ:ಚೀನಾದಲ್ಲಿನ ಬುಲೆಟ್ ಟ್ರೈನ್‍ಗೆ ಪೋಟಿ ನೀಡಲಿರುವ ಮೇಕ್ ಇನ್ ಇಂಡಿಯಾ ಟ್ರೈನ್ ವಿಶೇಷತೆ ಏನು.?

ಆದ್ರೆ ಅಗ್ಗದ ಬೆಲೆಯಲ್ಲಿ ಪೆಟ್ರೋಲ್ ನೀಡುವ ಮಾರ್ಗದ ಬಗ್ಗೆ ಯಾವುದೇ ಸ್ಪಷ್ಟನೆ ನೀಡದ ಬಾಬಾ ರಾಮ್‌ದೇವ್ ಹೇಳಿಕೆ ಸಾಕಷ್ಟು ಪರ-ವಿರೋಧ ಕಮೆಂಟ್‌ಗಳು ಕೇಳಿಬರುತ್ತಿದ್ದು, ಒಂದು ವೇಳೆ ರಾಮ್‌ದೇವ್ ಅವರು ರೂ.40ಕ್ಕೆ ಪೆಟ್ರೋಲ್ ಮಾರಿದ್ದೆ ಆದಲ್ಲಿ ಅದೊಂದು ಅದ್ಭುತ ಎಂದೇ ಹೇಳಬೇಕಾಗುತ್ತೆ.


Click it and Unblock the Notifications








