ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ನಮ್ಮ ದಿನ ನಿತ್ಯ ಜೀವನದಲ್ಲಿ ಒಂದು ಸ್ಥಳದಿಂದ ಮತ್ತೊಂದು ಸ್ಥಳವನ್ನು ತಲುಪಲು ಸಾರಿಗೆ ಸಹಾಯವು ಬೇಕೆ ಬೇಕು. ಕೆಲವರು ಕೇವಲ ಕಾಫಿ ಕುಡಿಯಲು ಬೆಂಗಳೂರಿನಿಂದ ರಾಮನಗರದ ವರೆಗು ಪ್ರಯಾಣಿಸುತ್ತಾರೆ. ಆದರೆ ಅದೇ ಒಂದು ಪ್ರಾಣವನ್ನು ಕಾಪಾಡಬೇಕಾದರೆ ಎಷ್ಟು ದೂರ ಬೇಕಾದರೂ ಹೋಗಬೇಕಾಗುತ್ತದೆ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ದೇಶದಲ್ಲಿ ನಾವು ಹಲವಾರು ಬಾರಿ ಯಾವೊಬ್ಬ ಜೀವಿಗೆ ಒಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ಸರಿಯಾದ ಉಪಕರಣಗಳು ಇಲ್ಲದಿದ್ದರೆ ಕೂಡಲೇ ಬೇರೊಂದು ದೂರದ ಆಸ್ಪತ್ರೆಗೆ ತಲುಪಿಸುವ ಸುದ್ಧಿಗಳನ್ನು ನಾವು ಓದುತ್ತಲೇ ಇರುತ್ತೇವೆ. ಅದುವೇ ಬೆಂಗಳೂರಿನಂತಹ ನಗರದಲ್ಲಿ ಇದು ಸಾಮಾನ್ಯವಾಗಿ ಹೋಗಿದೆ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಆದರೆ ಒಂದು ಜೀವ ಬದುಕುವುದು ಕಷ್ಟಕರವಾದ ಪರಿಸ್ಥಿತಿಯಲ್ಲಿದ್ದರೆ, ಆ ಜೀವವನ್ನು ಸುಮಾರು ದೂರದ ವರೆಗೆ ತಲುಪಿಸುವು ಮಾಮೂಲು ಕೆಲಸವೇನಲ್ಲ. ಇಂತಹ ಘಟನೆಯೆ ತಿರುಚ್ಚಿಯಲ್ಲಿ ಸಹ ನಡೆದಿದ್ದು, ಅಲ್ಲಿನ ಒಂದು ಮಗುವನ್ನು ನೂರಾರು ಕಿಲೋಮೀಟರ್ ಆಂಬ್ಯುಲೆನ್ಸ್ ನಲ್ಲಿ ದೂರವಿರುವ ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ತಿರುಚ್ಚಿ: ಗುಣಶೇಕರ್ ಅವರ ಧರ್ಮಪತ್ನಿಯಾದ ಕೃಷ್ಟವೇಣಿಯವರು ಮುದ್ದಾದ ಗಂಡು ಮಗುವಿಗೆ ಅದೇ ನಗರದಲ್ಲಿರುವ ತುರುಚ್ಚಿ ಅಮೆರಿಕನ್ ಆಸ್ಪತ್ರೆಯಲ್ಲಿ ಸೋಮವಾರ (29ರಂದು) ಬೆಳಿಗ್ಗೆ 11 ಗಂಟೆಗೆ ಜನ್ಮ ನೀಡುತ್ತಾರೆ. ಗರ್ಭದಿಂದ ಹೊರ ಬಂದ ಮಗುವಿನ ಹೃದಯದಲ್ಲಿ ಸಣ್ಣ ರಂದ್ರವಿರುವ ವಿಷಯವನ್ನು ಡಾಕ್ಟರ್‍‍ಗಳು ಹೇಳುತ್ತಾರೆ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಮುದ್ದು ಕಂದಮ್ಮನಿಗೆ ತಕ್ಷಣವೇ ಆಪರೇಷನ್ ಮಾಡದಿದ್ದಲ್ಲಿ ಅದು ಮಗುವಿನ ಪ್ರಾಣಕ್ಕೆ ಹಾನಿಯಾಗಬಲ್ಲದು ಎಂದು ಹೇಳಲಾಗಿದ್ದು, ಕೂಡಲೆ ಚೆನೈ ನಗರದಲ್ಲಿನ ಅಪೋಲೊ ಆಸ್ಪತ್ರೆಗೆ ಕೊಂಡೊಯ್ಯ ಬೇಕೆಂದು ಹೇಳಲಾಗಿತ್ತು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ತಿರುಚ್ಚಿ ಇಂದ ಚೆನ್ನೈ ನಗರಕ್ಕೆ ಸುಮಾರು 325 ಕಿಲೋಮೀಟರ್‍‍‍ನ ದೂರವಿದ್ದು, ಸರಿಯಾದ ಸಮಯದಲ್ಲಿ ಮಗುವನು ಆಸ್ಪತ್ರೆಗೆ ಸೇರಿಸದಿದ್ದರೆ ಅದು ಮಗುವಿನ ಜೀವನಕ್ಕೆ ತೊಂದರೆಯಾಗಬಹುದು. ಈ ಪರಿಸ್ಥಿತಿಯಲ್ಲಿ ಅಲ್ಲಿನ ಡಾಕ್ಟರ್‍‍ಗಳು, ಆಂಬುಲೆನ್ಸ್ ಚಾಲಕರು ಮತ್ತು ಪೊಲೀಸರು ಹೇಗೆ ಗುರಿಯನ್ನು ತಲುಪಿದರು ಎಂದುದನ್ನು ತಿಳಿಯಲು ಮುಂದಕ್ಕೇ ಓದಿರಿ..

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

29, ಅಕ್ಟೋಬರ್ 2018 ಮಗು ಹುಟ್ಟಿದ ನಂತರ ಅದಕ್ಕೆ ಶೀಘ್ರವೇ ಆಪರೇಷನ್ ಮಾಡಬೇಕೆಂದು ತೀರ್ಮಾನ ಮಾಡಿ, ಆ ಆಪರೇಷನ್‍‍ಗೆ ಬೇಕಾದ ಉಪಕರಣಗಳು ಅಲ್ಲಿನ ಆಸ್ಪತ್ರೆಯಲ್ಲಿ ಇಲ್ಲದಿರುವ ಕಾರಣ ಕೂಡಲೆ ಚೆನ್ನೈ ನಗರದಲ್ಲಿನ ಅಪೋಲೊ ಆಸ್ಪತ್ರೆಗೆ ಕರೆ ಮಾಡಿ ಬೇಕಾದ ವ್ಯವಸ್ಥೆಯನ್ನು ಮಾಡಿಕೊಳ್ಳಲು ಹೇಳುತ್ತಾರೆ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಬೇಗನೆ ಮಗುವನ್ನು ಚೆನ್ನೈ ನಗರದಲ್ಲಿರುವ ಅಪೋಲೊ ಆಸ್ಪತ್ರೆಯನ್ನು ತಲುಪಿಸಲು ಏರ್ ಆಂಬ್ಯುಲೆನ್ಸ್ ಸಹಾಯದಿಂಡ ಸಾಗಿಸಬಹುದಾಗಿತ್ತು, ಆದರೆ ಅತಿಯಾದ ಎತ್ತರದಲ್ಲಿ ಪ್ರಯಾಣಿಸುವುದರಿಂದ ಮಗುನಿವ ಉಸಿರಾಟಕ್ಕೆ ತೊಂದರೆಯಾಗಿ ಜೀವಕ್ಕೆ ಆಪತ್ತು ಆಗಬಹುದು ಎಂದು ರಸ್ತೆ ಮಾರ್ಗದಲ್ಲಿ ವರ್ಗಾಯಿಸಲು ತೀರ್ಮಾನಿಸಿದರು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಸುಮಾರು 325 ಕಿ.ಮೀ.ನ ಪ್ರಯಾಣ

ರಸ್ತೆ ಮಾರ್ಗದಲ್ಲಿ ಮಗುವನ್ನು ಚೆನ್ನೈಗೆ ತಲುಪಿಸಲು ಹರಸಾಹಸ ಮಾಡಲೇ ಬೇಕು. ಏಕೆಂದರೆ ತಿರುಚ್ಚಿ ನಗರದಿಂದ ಚೆನ್ನೈ ನಗರವು ಸುಮಾರು 325 ಕಿಲೋಮೀಟರ್‍‍ನ ದೂರವಿದೆ. ಇಷ್ಟು ದೂರ ಟ್ರಾಫಿಕ್ ಭರಿತ ನಗರಗಳಲ್ಲಿ ಸಮಯಕ್ಕೆ ಸರಿಯಾಗಿ ಸಾಗಿಸಬೇಕೆಂದರೆ ನಿಜವಾಗಿಯು ಕಷ್ಟಕರವಾದ ಕೆಲಸ.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಪೊಲೀಸರ ಸಹಾಯ

ಆಸ್ಪತ್ರೆಯಲಲ್ಲಿರುವ ಮಗುವಿನ ಪರಿಸ್ಥಿತಿಯನ್ನು ಹೇಳಿ ಸರಿಯಾದ ಸಮಯದಲ್ಲಿ ತಿರುಚ್ಚಿ ಇಂದ ಚೆನ್ನೈ ನಗರದಲ್ಲಿನ ಅಪೋಲೊ ಆಸ್ಪತ್ರೆಯನ್ನು ತಲುಪಿಸಲು ಸಹಕಾರ ಕೇಳಿದಾಗ ಅಲ್ಲಿನ ಪೊಲೀಸರು ಹೆಜ್ಜೆ ಹಿಂದಿಡದೆ ಬೇಕಾದ ಸಹಾಯವನು ಮಾಡಲು ಮುಂದಾದರು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಆಂಬ್ಯೂಲೆನ್ಸ್ ನಲ್ಲಿ ಮಾತ್ರ ಇದು ಸಾಧ್ಯ

ಮೇಲೆ ಹೇಳಿರುವ ಹಾಗೆ ಇದು ಏರ್ ಆಂಬ್ಯೂಲೆನ್ಸ್ ಮುಖಾಂತರ ಆಗದ ಕೆಲವನ್ನು ಅರಿತಾಗ, ರಸ್ತೆ ಮಾರ್ಗದಲ್ಲಿ ಆಂಬ್ಯುಲೆನ್ಸ್ ಸಹಾಯದಿಂದ ಕೊಂಡೊಯ್ಯಲು ಅಲ್ಲಿನ ಡಾಕ್ಟರ್‍‍ಗಳು, ಪೊಲೀಸರು ಮತ್ತು ಪೋಷಕರು ಸಮ್ಮತಿಸಿದರು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಒಟ್ಟು 25 ಆಂಬ್ಯೂಲೆನ್ಸ್ ಗಳ ಸಹಕಾರ

ಆದಷ್ಟು ಬೇಗನೇ ಮಗುವನ್ನು ಚೆನ್ನೈ ತಲುಪಿಸಲು ಆಂಬ್ಯುಲೆನ್ಸ್ ಚಾಲಕರು ಗಂಟೆಗೆ 100 ಕಿಲೋಮೀಟರ್‍‍ನಷ್ಟು ವೇಗದಲ್ಲಿ ಚಲಿಸಲೇಬೇಕು. ಆದರೆ ಇದು ನಗರ ಪ್ರದೇಶಗಳಲ್ಲಿ ಸಾಧ್ಯವಾಗದ ಕೆಲಸ. ಆದ್ದರಿಂದ ಚೆನ್ನೈ ತಲುಪುವ ಹಾದಿಗಳಲ್ಲಿ ಸುಮಾರು 25 ಅಂಬ್ಯೂಲೆನ್ಸ್ ಗಳನ್ನು ಇರಿಸಿ ಅವುಗಳ ಸಹಾಯದಿಂದ ಗುರಿಯನ್ನು ಬೇಗ ತಲುಪಲು ಸಹಕರಿಸಿದವು ಎಂದರೇ ನಂಬಲೇಬೇಕು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಏಕೆಂದರೆ ಟ್ರಾಫಿಕ್ ಭರಿತ ಪ್ರದೇಶಗಳಲ್ಲಿ ಮಗುವನ್ನು ಸಾಗಿಸುವುದು ಒಂದೇ ಆಂಭ್ಯುಲೆನ್ಸ್ ನಿಂದ ಕಷ್ಟಕರವಾದ ಕೆಲಸ ಆದುದರಿಂದ, ಹೆಚ್ಚು ಟ್ರಾಫಿಕ್ ಇರುವ ಪ್ರದೇಶಗಳಲ್ಲಿ ಮಗು ಇರುವ ಆಂಬ್ಯುಲೆನ್ಸ್ ನ ಜೊತೆಗೆ ಮತ್ತೊಂದು ಆಂಬ್ಯುಲೆನ್ಸ್ ಸದ್ದು ಮಾಡುತ್ತಾ ಹೋದರೆ ಮಾತ್ರ ದಾರಿ ಬಿಡುತ್ತಾರೆ ಎಂದು ತೀರ್ಮಾನಿಸಿ ಈ ಕಾರ್ಯವನ್ನು ಮಾಡಲು ಮುಂದಾದರು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಕೊನೆಗು ಸಾಯಂಕಾಲ 4 ಗಂಟೆಗೆ ತಿರುಚ್ಚಿ ನಗರದಲ್ಲಿನ ತಿರುಚ್ಚೊ ಅಮೆರಿಕನ್ ಆಸ್ಪತ್ರೆಯಿಂದ ಹೊರಟ ಅಂಬ್ಯೂಲೆನ್ಸ್ ರಾತ್ರಿ 8 ಗಂಟೆಯೆ ಹೊತ್ತಿಗೆ ತಲುಪಿತು. ಅಂದರೆ ಪೊಲೀಸ್ ಹಾಗು ಇನ್ನಿತರೆ ಆಂಬ್ಯುಲೆನ್ಸ್ ಗಳ ಸಹಾಯದಿಂದ ಸುಮಾರು 4 ಗಂಟೆಗಳೊಳಗೆ 325 ಕಿಲೋಮೀಟರ್‍‍ನ ದೂರವನ್ನು ಮುಟ್ಟುವ ಹಾಗೆ ಆಯಿತು.

ಮಗುವಿನ ಪ್ರಾಣವನ್ನು ಉಳಿಸಲು 325 ಕಿಲೋಮೀಟರ್‍‍ನ ದೂರವನ್ನು ಕೇವಲ 250 ನಿಮಿಷದಲ್ಲಿ ತಲುಪಿದ ಆಂಬ್ಯುಲೆನ್ಸ್ ಡ್ರೈವರ್.

ಚೆನ್ನೈ ನಗರದಲ್ಲಿನ ಅಪೊಲೋ ಆಸ್ಪತ್ರೆಯನ್ನು ತಲುಪಿದ ತಕ್ಷಣವೇ ಮಗುವನ್ನು ಆಸ್ಪತ್ರೆಯ ಸಿಬ್ಬಂದು ಆಪರೇಷನ್ ಥಿಯೇಟರ್‍‍ಗೆ ಕರೆದುಕೊಂಡು ಹೋದರು. ಅಂಬ್ಯುಲೆನ್ಸ್ ಡ್ರೈವರ್‍‍ಗಳು, ಮೆಡಿಕಲ್ ಸಿಬ್ಬಂದಿ, ಪೊಲೀಸರು ಮತ್ತು ಮಗುವಿನ ಸಂಭಂದಿಕರು ಯಾವುದೇ ಅಡೆತಡೆಗಳಿಲ್ಲದೆ ತಿರುಚ್ಚಿ ಇಂದ ಚೆನ್ನೈ ಅಪೊಲೊ ಆಸ್ಪತ್ರೆಯನ್ನು ತಲುಪಿಸಲು ಸಹಕರಿಸಿದ ಪಬ್ಲಿಕ್ ಅನ್ನು ಶ್ಲಾಘಿಸಿದ್ದಾರೆ.

Most Read Articles

Kannada
English summary
Ambulance staff save infant with heart disease.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X