ಚೀನಾದಲ್ಲಿನ ಬುಲೆಟ್ ಟ್ರೈನ್‍‍ಗೆ ಪೋಟಿ ನೀಡಲಿರುವ ಮೇಕ್ ಇನ್ ಇಂಡಿಯಾ ಟ್ರೈನ್ ವಿಶೇಷತೆ ಏನು.?

ಭಾರತೀಯ ರೈಲ್ವೆ ನೆಟ್ವರ್ಕ್ ಜಗತ್ತಿನಾದ್ಯಂತ ಜನಪ್ರಿಯ ಎಂಬುದು ಗೊತ್ತಿರುವ ವಿಷಯ. ಏಕೆಂದರೆ ದಿನಕ್ಕೆ ಲಕ್ಷಾಂತರ ಮಂದಿ ಮತ್ತು ಎಲ್ಲಾ ವರ್ಗದ ಜನರು ಇದರಲ್ಲಿ ಪ್ರಯಾಣಿಸುತ್ತಾರೆ. ಭಾರತೀಯ ರೈಲ್ವೇ ಇಲಾಖೆಯು ಪ್ರಯಾಣಿಕರ ಪ್ರಯಾಣದ ಗಡುವನ್ನು ಕಡಿಮೆ ಮಾಡಲು ಒಂದು ಹೊಸ ಯೋಜನೆಯನ್ನು ಕೈಗೊಂಡಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ದೂರದ ಪ್ರಯಾಣಕ್ಕಾಗಿ ದಿನಗಟ್ಟಲೆ ರೈಲು ಮಾರ್ಗದಲ್ಲಿ ಪ್ರಯಾಣಿಸುವುದು ಕೆಲವರಿಗೆ ಇಷ್ಟವಾದರೂ ಇನ್ನು ಕೆಲವರಿಗೆ ಕಷ್ಟಕರವಾದ ಸಂಗತಿ. ಈ ನಿಟ್ಟಿನಲ್ಲಿ ರೈಲ್ವೇ ಇಲಾಖೆಯು ಚೆನ್ನೈ ನಗರದಲ್ಲಿನ ಪೆರಂಬೂರ್ ರೈಲ್ವೇ ಕಾರ್ಖಾನೆಯಲ್ಲಿ ಸೆಮಿ ಬುಲೆಟ್ ಟ್ರೈನ್ ಅನ್ನು ಪ್ರದರ್ಶಿಸಲಾಗಿದ್ದು, ಈ ಟ್ರೈನ್‍‍ನ ಬಗೆಗಿನ 18 ಮುಖ್ಯ ಅಂಶಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಮೇಡ್ ಇನ್ ಇಂಡಿಯಾ

ಪ್ರದರ್ಶನಗೊಂಡ ಈ ಸೆಮಿ ಬುಲೆಟ್ ಟ್ರೈನ್‍ಗೆ 'ಟ್ರೈನ್18' ಎಂದು ಹೆಸರಿಡಲಾಗಿದ್ದು, ಪ್ರಧಾನಿಯವರ 'ಮೇಕ್ ಇನ್ ಇಂಡಿಯಾ' ಯೋಜನೆಯ ಅಡಿಯಲ್ಲಿ ಸುಮಾರು 18 ತಿಂಗಳುಗಳ ಸಮಯದಲ್ಲಿ ಚೆನ್ನೈ ನಗರದಲ್ಲಿರುವ ಪೆರಂಬೂರ್ ರೈಲ್ ಬಾಕ್ಸ್ ಕಾರ್ಖಾನೆಯಲ್ಲಿ ನಿರ್ಮಿಸಲಾಗಿದೆ. ಮತ್ತು ಇದರಲ್ಲಿ ಶೇಕಡ 85ರಷ್ಟು ದೇಶಿಯ ವಸ್ಥುಗಳನ್ನು ಬಳಸಿರುವುದು ವಿಶೇಷ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಆಕರ್ಷಕ ಬಣ್ಣ

'ಟ್ರೈನ್ 18' ಸೆಮಿ ಬುಲೆಟ್ ಟ್ರೈನ್ ಬಿಳಿ ಮತ್ತು ಡಾರ್ಕ್ ಬ್ಲೂ ಬಣ್ಣಗಳಿಂದ ಸಜ್ಜುಗೊಂಡಿದ್ದು, ರೈಲಿನ ಹೊರಗಡೆ ನೀಡಲಾದ ಎಲೆಕ್ಟ್ರಾನಿಕ್ ಕಮ್ಯುನಿಕೇಷನ್ ಬೋರ್ಡ್‍ನ ಮುಖಾಂತರ ಗ್ರಾಹಕರು ಮಾಹಿತಿಗಳನ್ನು ತಿಳಿಯಬಹುದಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಟ್ರೈನ್ 18ರ ಅನುಕರಣ

ಸೆಮಿ ಬುಲೆಟ್ ಟ್ರೈನ್ ಹಲವಾರು ವಿವಿಧ ತಂತ್ರಜ್ಞಾನಗಳಿಂದ ಸಜ್ಜುಗೊಂಡಿದ್ದು, ಇದು ಬೇರೆ ದೇಶಗಳಲ್ಲಿ ಈಗಾಗಲೆ ಪ್ರಯಾಣಿಸುತ್ತಿರುವ ಬುಲೆಟ್ ಟ್ರೈನ್‍‍ಗಳಿಗಿಂತಾ ಕಡಿಮೆ ಇಲ್ಲವೆಂದೇ ಹೇಳಬಹುದು. ಈ ಟ್ರೈನ್ ಲೋಕೊಮೋಟಿವ್‍ನ ಸಹಾಯದಿಂದ ಪ್ರತೀ ಸ್ಟೇಷನ್‍‍ನಲ್ಲಿ ನಿಲ್ಲಲಿದ್ದು, ಇದರಲ್ಲಿ ಯಾವುದೇ ಪ್ರತ್ಯೇಕವಾದ ಎಂಜಿನ್ ಅನ್ನು ಬಳಸಿರುವುದಿಲ್ಲ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ವಸತಿ

ಟ್ರೈನ್ 18 ಬುಲೆಟ್ ರೈಲು 16 ಬೋಗಿಗಳಿಂದ ಜೋಡಿಸಲ್ಪಟಿದ್ದು, ರೈಲಿನ ಮುಂಭಾಗದಲ್ಲಿ ಚಾಲಕನಿಗಾಗಿ ಸಣ್ಣ ಕೊಠಡಿಯನ್ನು ಹೊರತು ಪಡಿಸಿ ಇನ್ನುಳಿದ ಬೋಗಿಗಳಲ್ಲಿ ಪ್ರಯಾಣಿಕರು ಹರಾಮದಾಯಕವಾಗಿ ಒಂದು ಬೋಗಿಯೊಂದ ಮತ್ತೊಂದು ಬೋಗಿಗೆ ನಡೆದುಕೊಂಡು ಹೋಗಬಹುದಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಪ್ರತ್ಯೇಕವಾದ ಎಂಜಿನ್ ಇಲ್ಲ

ವಿದ್ಯುತ್ ರೈಲುಗಳು ಮತ್ತು ಮೆಟ್ರೋ ರೈಲುಗಳಲ್ಲಿ ಚಾಲನೆಯಲ್ಲಿರುವ ಒಂದೇ ರೈಲು ಇಂಜಿನ್ ಅನ್ನು ನೀಡಲಾಗಿದೆ ಮತ್ತು ರೈಲಿನ ಎರಡೂ ಬದಿಗಳಲ್ಲಿ ಚಾಲಕರಿಗೆ ಕ್ಯಾಬಿನೆಟ್ ನೀಡುವ ಅಗತ್ಯವಿಲ್ಲ. ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸುವುದರೊಂದಿಗೆ, ಈ ರೈಲುಗಳನ್ನು ಸುಲಭ ಮತ್ತು ಸುರಕ್ಷಿತಗೊಳಿಸಲು ಕಂಪ್ಯೂಟರ್‍‍‍ಗಳನ್ನು ಬಳಸಲಾಗುತ್ತದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಆಟೋಮ್ಯಾಟಿಕ್ ಬಾಗಿಲುಗಳು

ಮೆಟ್ರೋ ರೈಲುಗಳಲ್ಲಿ ಕಾಣಬಹುದಾದ ಹಾಗೆಯೆ ಟ್ರೈನ್ 18ನಲ್ಲಿಯು ಸಹ ಬಾಗಿಲುಗಳನ್ನು ವಿನ್ಯಾಸ ಮಾಡಲಾಗಿದ್ದು, ಸ್ವಯಂಚಾಲಿತವಾಗಿ ಇವುಗಳು ತಮ್ಮ ಕಾರ್ಯವನ್ನು ನಿರ್ವಹಿಸುತ್ತವೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಆಟೋಮ್ಯಾಟಿಕ್ ಮೆಟ್ಟಿಲುಗಳು

ಪ್ರಯಾಣಿಕರು ರೈಲು ಹೊರಗೆ ಮತ್ತು ಒಳಗೆ ಹೋಗಲು ಇದರಲ್ಲಿ ಸ್ವಯಂಚಾಲಿತ ಮೆಟ್ಟಿಲುಗಳನ್ನು ಸಹ ಆಳವಡಿಸಲಾಗಿದ್ದು, ಇದು ವೃದ್ಧರಿಗೆ ಸಹಾಯಕಾರಿ ಎಂದೇ ಹೇಳಬಹುದು. ಮತ್ತು ಇವು ಬಾಗಿಲುಗಳು ತೆರೆದ ತಕ್ಷಣವೇ ಇದರ ಕಾರ್ಯ ಆರಂಭಿಸುತ್ತದೆ ಹಾಗು ರೈಲಿನಿಂದ ಕೇಳಗಿಳಿಯುವ ಗಡಿಬಿಡಿಯಲ್ಲಿ ಲಗೇಜ್ ರೈಲು ಹಲಿಗಳ ಮೇಲೆ ಬೀಳದಿರುವ ಹಾಗೆ ಇದು ಕಾಪಾಡುತ್ತದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಆಸನಗಳು

ಈ ರೈಲಿನಲ್ಲಿ ಎರಡು ವಿಭಜಿತ ಸೆಟ್‍ಗಳನ್ನು ಹೊಂದಿರಲಿದ್ದು, ಮೊದಲ ಸೆಟ್ ಎಕ್ಸ್ ಕ್ಲೂಸಿವ್ ಹಾಗು ಇನ್ನುಳಿದ 14 ಸೆಟ್‍ಗಳು ಸೆಕೆಂಡ್ ಕ್ಲಾಸ್‍ಗಾಗಿ ಪ್ರತಿಯೊಂದು ಸೀಟ್ 180 ಡಿಗ್ರಿ ಕೋನಾಕಾರದಲ್ಲಿ ಅಡ್ಜಸ್ಟ್ ಮಾಡಿಕೊಳ್ಳಬಹುದು ಮತ್ತು ಇದನ್ನು ಕೇವಲ ಒಂದು ಬಟನ್‍ನಿಂದ ನಿಯಂತ್ರಿಸಬಹುದು. ಬಹಳ ಅಚ್ಚುಕಟ್ಟಾಗಿ ಇದರಲ್ಲಿರುವ ಆಸನಗಳನ್ನು ಅಳವಡಿಸಿರುವುದರಿಂದ ಸೌಕರ್ಯವಂತವಾಗಿ ಕೂತು ಪ್ರಯಾಣಿಸಬಹುದಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ವೈಶಿಷ್ಟ್ಯತೆಗಳು

ಈ ರೈಲಿನಲ್ಲಿನ ಎಲ್ಲಾ ಬೋಗಿಗಳಲ್ಲಿ ಪ್ರತ್ಯೇಕವಾದ ಫುಡ್-ಸ್ಟಫ್ (ಸಣ್ಣ ಕ್ಯಾಂಟೀನ್) ಸೌಲಭ್ಯವನ್ನು ನೀಡಲಾಗುತ್ತದೆ ಮತ್ತು ಸ್ಪೆಷಲ್ ಹ್ಯಾಂಡಲ್‍ಗಳನ್ನು ಸೀಟ್‍‍ಗಳಿಗೆ ಅಳವಡಿಸಲಾಗಿದೆ. ಇದಲ್ಲದೆ ವಿಶೇಷವಾಗಿ ಜಿಪಿಎಸ್ ಸ್ಟೇಷನ್‍ಗಳು ಹಾಗು ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಇದರಲ್ಲಿ ನೀಡಲಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಸ್ಪೆಷಲ್ ಲೈಟ್‍ಗಳು

ಟ್ರೈನ್ 18ರಲ್ಲಿ ಏಂಬಿಯಂಟ್ ಲೈಟ್‍‍ಗಳನ್ನು ನೀಡಲಾಗಿದ್ದು, ಹೊರಗಡೆ ಇರುವ ಬೆಳಕಿಗೆ ತಕ್ಕ ಹಾಗೆ ರೈಲಿನ ಒಳಗೆ ಬೇಕಾದಷ್ಟು ಬೆಳಕನ್ನು ನೀವು ನಿಯಂತ್ರಿಸಬಹುದಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ನಿಶಬ್ದವಾದ ಪ್ರಯಾಣ

ಮಾಮೂಲು ರೈಲುಗಳಲ್ಲಿ ಬರುವ ಶಬ್ದಕ್ಕಿಂತಾ ಈ ರೈಲಿನಲ್ಲಿ ಶಬ್ದವು ತುಂಬಾ ಕಡಿಮೆ ಬರುತ್ತದೆ ಮತ್ತು ಹೆಚ್ಚು ವೈಬ್ರೇಟ್ ಕೂಡಾ ಆಗುವುದಿಲ್ಲ. ಹಾಗು ಇದರಲ್ಲಿ ಬಳಸಲಾಗಿರುವ ಆಟೋಮ್ಯಾಟಿಕ್ ಬಾಗಿಲುಗಳ ಸಹಾಯದಿಂದ ರೈಲಿನ ಒಳಗೆ ದೂಳು ಕೂಡಾ ಹೆಚ್ಚು ಸೇರುವ ಸಾಧ್ಯತೆಗಳಿಲ್ಲ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಅಗಲವಾದ ಕಿಟಕಿಗಳು

ಟ್ರೈನ್ 18ರಲ್ಲಿ ಅಗಲವಾದ ಗ್ಲಾಸ್ ಕಿಟಕಿಗಳನ್ನು ನೀಡಲಾಗಿದೆ. ಪ್ರಯಾಣಿಕರು ತಮ್ಮ ಪ್ರಯಾಣದ ವೇಳೆ ಪ್ರಕೃತಿಯ ಸೌದರ್ಯವನ್ನು ಸವಿಯಲು ಯಾವುದೇ ಅಡ್ಡು ಹಾಕದ ಹಾಗೆ ಕಿಟಕಿಯನ್ನು ವಿನ್ಯಾಸ ಮಾಡಲಾಗಿದ್ದು, ಉತ್ತಮ ಪ್ರಯಾಣದ ಅನುಭವವನ್ನು ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಅತ್ಯುತ್ತಮ ಸಂರಚನೆ

ವಿದೇಶಗಳಲ್ಲಿ ಕಾಣಬಹುದಾದ ಬುಲೆಟ್ ಟ್ರೈನ್‍‍ಗಳಂತೆಯೆ ಇದರಲ್ಲಿಯು ಸಹ ಉಪಕರಣಗನ್ನು ಅಚ್ಚುಕಟ್ಟಾಗಿ ಅಳವಾಡಿಸಲಾಗಿದ್ದು, ಪ್ರಯಾಣಿಕರು ರೈಲು ಏರುತ್ತಿರುವಂತೆಯೆ ಹೆಚ್ಚು ವಿಶಾಲವಾದ ಸ್ಥಳವನ್ನು ಅನುಭವಿಸುವ ಹಾಗೆ ಇದನ್ನು ವಿನ್ಯಾಸಿಸಲಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಮನರಂಜನೆ ಸೌಲಭ್ಯಗಳು

ಟ್ರೈನ್ 18ರಲ್ಲಿ ಐಷರಾಮಿ ಮತ್ತು ಸೌಕರ್ಯವಂತವಾದ ಸೀಟ್‍‍ಗಳನ್ನು ನೀಡುವುದು ಮಾತ್ರವಲ್ಲದೇ ಪ್ರಯಾಣಿಕರಿಗಾಗಿ ವೈ-ಫೈ ಸೌಲಭ್ಯಗಳನ್ನು ನೀಡುವುದರಿಂದ ಲ್ಯಾಪ್‍ಟಾಪ್ ಅಥವಾ ಮೊಬೈಲ್‍‍ನೊಂದಿಗೆ ತಮ್ಮ ಪ್ರಯಾಣದ ಕಾಲವನ್ನು ಸಾಗಿಸಬಹುದು.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಬಯೊ ಟಾಯ್ಲೆಟ್

ಪ್ರಯಾಣಿಕರಿಗಾಗಿ ಬಯೊ ಟಾಯ್ಲೆಟ್‍ಗಳನ್ನು ಅಳವಡಿಸಲಾಗಿದ್ದು, ಇವುಗಳು ಸ್ವಯಂಚಾಲಿತ ವಾಟರ್ ಪಂಪ್‍ಗಳನ್ನು ಕನೆಕ್ಟ್ ಮಾಡಲಾಗಿರುತ್ತದೆ. ಮತ್ತು ಇವುಗಳನ್ನು ಉತ್ತಮ ಗುಣಮಟ್ಟದ ವಾಟರ್ ಪೈಪ್‍ಗಳೊಂದಿಗೆ ಜೋಡಿಸಲಾಗಿರುತ್ತದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಪ್ರತ್ಯೇಕವಾದ ಎಂಜಿನ್ ಇಲ್ಲ

ಟ್ರೈನ್ 18ರಲ್ಲಿರುವ ಎಲ್ಲಾ ಬೋಗಿಗಳು ವಿದ್ಯುತ್ಅನ್ನು ಕೂಡಿರಲಿದ್ದು, ಇವುಗಳನ್ನು ನಿಯಂತ್ರಿಸಲು ಮತ್ತು ವೇಗನೆಯ ಪ್ರಯಾಣವನ್ನು ಸಾಗಿಸಲು ಯಾವುದೇ ಪ್ರತ್ಯೇಕವಾದ ಎಂಜಿನ್ ಅನ್ನು ನೀಡಲಾಗಿರುವುದಿಲ್ಲ ಎಂದು ಹೇಳಲಾಗಿದೆ.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಕ್ವಿಕ್ ಟ್ರಿಪ್

ಉಳಿದ ರೈಲುಗಳಲ್ಲಿ ಪ್ರಾಯಾಣ ಮಾಡುವ ಸಮಯಕ್ಕಿಂತಾ ಟ್ರೈನ್ 18 ಸೆಮಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸುವುದರಿಂದ ಶೇಕಡ 15ರಷ್ಟು ನಿಮ್ಮ ಸಮಯವು ಉಳಿಯುತ್ತದೆ. ಈ ಟ್ರೈನ್ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಚಲಿಸಲಿದ್ದು ಮತ್ತು ರೀಜೆನರೇಟಿವ್ ಬ್ರೇಕಿಂಗ್ ಸಿಸ್ಟಂ ಅನ್ನು ಕೂಡಾ ಪಡೆದುಕೊಂಡಿರಲಿದೆ.

ಹೈ ಸ್ಪೀಡ್ ಟ್ರೈನ್

ಹೊಸ ಟ್ರೈನ್ 18 ರೈಲ್ವೇ ಇಲಾಖೆಯಲ್ಲಿರುವ ಶತಾಬ್ದಿಯನ್ನು ಸ್ಥಳಾಂತರಿಸಲಿದ್ದು, 2019ರಲ್ಲಿ ಮೊದಲ ಬಾರಿಗೆ ದೆಹಲಿಯಿಂದ ಭೋಪಾಲ್ ನಗರದ ಚಾಲನೆಗೆ ಇದು ಅವಕಾಶ ಕಲ್ಪಿಸುತ್ತದೆ ಎಂದು ರೈಲ್ವೆ ಅಡಳಿತವು ಹೇಳಿಕೊಂಡಿದೆ. ಒಟ್ಟಿನಲ್ಲಿ ಈ ರೈಲು ಶುರುವಾದರೆ ಭಾರತದಲ್ಲಿಯು ಒಂದು ಎತಿ ವೇಗದ ಸೆಮಿ ಬುಲೆಟ್ ರೈಲು ಇದೆ ಎಂದು ಹೆಮ್ಮೆ ಇಂದ ಹೇಳಿಕೊಳ್ಳಬಹುದು.

ಗಂಟೆಗೆ 160ಕಿ.ಮೀ ವೇಗದಲ್ಲಿ ಚಲಿಸುತ್ತೆ ಈ ಮೇಡ್ ಇನ್ ಇಂಡಿಯಾ ಬುಲೆಟ್ ಟ್ರೈನ್

ಕಡಿಮೆ ಬೆಲೆಯಲ್ಲಿ ತಯಾರಿ

ಕೇವಲ 18 ತಿಂಗಳ ಸಮಯದಲ್ಲಿ ಚೆನ್ನೈ ನಗರದಲ್ಲಿನ ರೈಲ್ ಪೆಟ್ಟಿ ಕಾರ್ಖಾನೆಯಲ್ಲಿ ಇದನ್ನು ನಿರ್ಮಿಸಲಾಗಿದೆ. ಕೇಂದ್ರ ಸರ್ಕಾರವು ಈ ರೈಲಿನ ನಿರ್ಮಾಣಕಾಗಿ ಸುಮಾರು 100 ಕೋಟಿಯ ಮೊತ್ತವನ್ನು ನೀಡಿದರೆ, ಇದರಲ್ಲಿ ಬಳಸಲಾದ ಸ್ಥಳೀಯ ಉಪಕರಣಗಳಿಂದ ಇದರ ನಿರ್ಮಾಣದ ಬೆಲೆಯು ಕಡಿಮೆ ಆಗಿದೆ. ಇದಲ್ಲದೇ 2018-ರಲ್ಲಿ ಒಂದು 'ಟ್ರೈನ್ 18' ರೈಲು ಹಾಗು 2019-20ರಲ್ಲಿ ನಾಲ್ಕು 'ಟ್ರೈನ್ 18' ರೈಲುಗಳನ್ನು ಓಡಾಡುವ ಸಾಧ್ಯತೆಗಳಿವೆ.

Kannada
Read more on auto facts train auto news
English summary
India's first 'Semi' bullet train to reach 160 km.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more